ಭಾರತದಲ್ಲಿನ ಭಯೋತ್ಪಾದನೆಯ ಘಟನೆಗಳು ಮತ್ತು ಅದಕ್ಕಿರುವ ಏಕೈಕ ಉಪಾಯ !

೧. ರಾಜಧಾನಿ ದೆಹಲಿಯ ಮಾರುಕಟ್ಟೆಯಲ್ಲಿ ಸ್ಫೋಟಕಗಳು ದೊರಕುವುದು ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಕಳುಹಿಸಿದ ೨೪ ಬಾಂಬ್‌ಗಳ ಪೈಕಿ ಅದು ಒಂದು ಬಾಂಬ್ ಆಗಿದ್ದು ದೇಶದಲ್ಲಿ ಆತಂಕವನ್ನು ಸೃಷ್ಟಿಸುವ ಉದ್ದೇಶವಿರುವುದು

‘೧೫ ಜನವರಿ ೨೦೨೨ ಈ ದಿನದಂದು ಗಣರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ವರ್ತಮಾನಪತ್ರಿಕೆಯಲ್ಲಿ ಒಂದು ವಾರ್ತೆ ಪ್ರಕಟವಾಗಿತ್ತು. ಅದರಲ್ಲಿ, ‘ರಾಜಧಾನಿ ದೆಹಲಿಯಲ್ಲಿನ ಗಾಝಿಪೂರದ ಹೂವುಗಳ ಮಾರುಕಟ್ಟೆಯಲ್ಲಿ ‘ಐಈಡಿ’ ಸ್ಫೋಟಕಗಳಿಂದ ತುಂಬಿದ ಒಂದು ಬ್ಯಾಗ್ ದೊರಕಿತು’ ಎಂದಿತ್ತು. ಈ ಮಾಹಿತಿ ಸಿಕ್ಕಿದ ನಂತರ ವಿಶೇಷ ಪೊಲೀಸ್ ಪಡೆ, ಭಯೋತ್ಪಾದನಾ  ನಿಗ್ರಹ ದಳ ಮತ್ತು ಬಾಂಬ್ ನಿಷ್ಕ್ರಿಯದಳ ಇವುಗಳೊಂದಿಗೆ ಇತರ ಭದ್ರತೆಯ ಪಡೆಗಳು ಘಟನಾಸ್ಥಳಕ್ಕೆ ತಲುಪಿದವು. ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಲಾಯಿತು. ಪೊಲೀಸರು ‘ಈ ಸ್ಫೋಟಕಗಳು ಗಾಝೀಪೂರ ಮಾರುಕಟ್ಟೆಗೆ ಹೇಗೆ ಬಂದವು ?’, ಎಂದು ಪತ್ತೆ ಹಚ್ಚಲು ಪ್ರಯತ್ನಿಸಿದರು. ಅರ್ಥಾತ ಸ್ವಾತಂತ್ರ್ಯದ ದಿನ ಮತ್ತು ಗಣರಾಜ್ಯೋತ್ಸವದ ಕಾಲಾವಧಿಯಲ್ಲಿ ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಈ ಸ್ಫೋಟಕಗಳ ಬಗ್ಗೆ ೧೪ ಜನವರಿ ೨೦೨೨ ರಂದು ಬೆಳಗ್ಗೆ ಪೊಲೀಸರಿಗೆ ದೂರವಾಣಿ ಕರೆಯಿಂದ ಮಾಹಿತಿ ದೊರಕಿತ್ತು. ಅನಂತರ ಭದ್ರತಾ ಪಡೆಗಳು ತನಿಖೆಯನ್ನು ಆರಂಭಿಸಿದ್ದವು. ಒಂದು ವೇಳೆ ದೂರವಾಣಿ ಕರೆ ಬರದಿದ್ದರೆ, ಈ ಸ್ಫೋಟಕಗಳು ಸ್ಫೋಟಗೊಂಡು ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿ ಮತ್ತು ಆರ್ಥಿಕಹಾನಿ ಆಗಬಹುದಿತ್ತು. ೧೮ ಜನವರಿ ೨೦೨೨ ರಂದು ದೆಹಲಿ ಪೊಲೀಸರು, ಈ ಬಾಂಬ್‌ಅನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳಹಿಸಲಾದ ೨೪ ಬಾಂಬ್‌ಗಳ ಪೈಕಿ ಒಂದಾಗಿತ್ತು ಮತ್ತು ಈ ಬಾಂಬನ್ನು ಭಾರತದಲ್ಲಿ ವಿಧ್ವಂಸ ಕೃತಿಗಳನ್ನು ಮಾಡಲು ಕಳುಹಿಸಲಾಗಿತ್ತು’, ಎಂದು ಹೇಳಿದರು. ಇದಕ್ಕೂ ಮೊದಲು ಪಂಜಾಬ ಮತ್ತು ಜಮ್ಮು-ಕಾಶ್ಮೀರದಲ್ಲಿಯೂ ಸ್ಫೋಟಕಗಳು ಸಿಕ್ಕಿದ್ದವು. ಸ್ಫೋಟಕಗಳಿಗೆ ಸಂಬಂಧಿಸಿದ ಉಪಕರಣಗಳನ್ನು ಜಪ್ತಿ ಮಾಡಲಾಗಿತ್ತು.

೨. ಗಾಝೀಪುರದಲ್ಲಿ ಸ್ಫೋಟಕಗಳನ್ನಿಡುವುದರ ಹಿಂದೆ ಅಪರಾಧಿಗಳ ಗುಂಪು ಮತ್ತು‘ಸ್ಲೀಪರ್ ಸೆಲ್’ಗಳ ಕೈವಾಡವಿರುವುದರ ಸಂಶಯ

ಒಂದು ವಾರ್ತೆಗನುಸಾರ ‘ಸ್ಫೋಟಕಗಳು ಮತ್ತು ಕೆಲವು ಉಪಕರಣಗಳು ಭಾರತದಲ್ಲಿ ಕಳ್ಳಸಾಗಾಣಿಕೆಯ ಮಾಧ್ಯಮದಿಂದ ಬಂದಿರಬಹುದು’, ಎಂಬ ತರ್ಕವನ್ನು ತನಿಖಾ ವಿಭಾಗ ಮಾಡಿದೆ. ಗಾಝಿಪೂರನಲ್ಲಿ ೩ ಕಿಲೋ. ಆರ್.ಡಿ.ಎಕ್ಸ್. ನ್ಯೂಕ್ಲಿಯರ್ ಚಾರ್ಜ್ ಮತ್ತು ಸೆಕಂಡರಿ ಚಾರ್ಜ್ ಎಂದು ಅಮೋನಿಯಮ ನೈಟ್ರೇಟ್ ಇದ್ದವು. ಪೊಲೀಸರು ಮತ್ತು ತನಿಖಾ ವಿಭಾಗವು ಗಣರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ದೆಹಲಿ ಅಥವಾ ದೇಶದ ಇತರ ಸ್ಥಳಗಳಲ್ಲಿ ಎಲ್ಲಿಯಾದರೂ ಸ್ಫೋಟಕಗಳಿವೆಯೇ ? ಎಂಬುದನ್ನು ಶೋಧಿಸಿದರು.

ಗಾಝಿಪೂರದಲ್ಲಿನ ಸ್ಫೋಟಕಗಳಲ್ಲಿ ಟೈಮರ್ ಮತ್ತು ‘ಎಬಿಸಿಡಿ ಸ್ವಿಚ್’ನ್ನು (ಭಯೋತ್ಪಾದಕರಿಂದ ಬಾಂಬ್‌ಗಾಗಿ ಉಪಯೋಗಿಸಲಾಗುವ ಉಪಕರಣಗಳು) ಅಂಟಿಸಲಾಗಿತ್ತು. ವಿಶೇಷವೆಂದರೆ ಪಾಕಿಸ್ತಾನ ಈ ‘ಎಬಿಸಿಡಿ ಸ್ವಿಚ್’ಗಳನ್ನು ನಿರ್ಮಿಸುತ್ತದೆ. ಕಾಶ್ಮೀರ ಮತ್ತು ಅಫಗಾನಿಸ್ತಾನದಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಗಳಿಗಾಗಿ ಮುಖ್ಯವಾಗಿ ಈ ‘ಎಬಿಸಿಡಿ ಸ್ವೀಚ್’ನ್ನು ಉಪಯೋಗಿಸುತ್ತಾರೆ. ‘ಎಬಿಸಿಡಿ ಸ್ವಿಚ್’ ಮತ್ತು ‘ಟೈಮರ್’ನ ಬಳಕೆ ಮಾಡಿ ಸ್ಫೋಟವಾಗುವ ಸಮಯವನ್ನು ಕೆಲವು ನಿಮಿಷಗಳಿಂದ ೬ ತಿಂಗಳುಗಳ ವರೆಗೆ ನಿಶ್ಚಿತಪಡಿಸಬಹುದು.

೧೪ ಜನವರಿಯಂದು ಗಾಝಿಪುರದೊಂದಿಗೆ ಶ್ರೀನಗರ ಮತ್ತು ಅಟಾರಿಯಲ್ಲಿಯೂ ಸ್ಫೋಟಕಗಳು ಸಿಕ್ಕಿದವು. ದೆಹಲಿಯಲ್ಲಿ ಸಿಕ್ಕಿದ ಸ್ಫೋಟಕಗಳು ಮತ್ತು ಕಳೆದ ಕೆಲವು ಸಮಯದಿಂದ  ಪಂಜಾಬನಲ್ಲಿ ದೊರಕುತ್ತಿರುವ ಸ್ಫೋಟಕಗಳಲ್ಲಿ ಸಾಮ್ಯತೆ ಕಂಡು ಬಂದಿದೆ. ಆದುದರಿಂದ ಈ ಸ್ಫೋಟಕಗಳು ಪಂಜಾಬಮಾರ್ಗದಿಂದ ಬಂದಿರುವ ಬಗ್ಗೆ ತನಿಖಾ ವಿಭಾಗವು ತನಿಖೆಯನ್ನು ಮಾಡುತ್ತಿದೆ. ೨೦೨೧ ರಲ್ಲಿ ಕೇವಲ ಪಂಜಾಬನಲ್ಲಿ ಇಂತಹ ಸ್ಫೋಟಕಗಳು ಕಂಡು ಬಂದಿದ್ದವು. ಇದರೊಂದಿಗೆ ಕಾಶ್ಮೀರಕ್ಕೂ ಡ್ರೊನ್‌ಗಳ ಮಾಧ್ಯಮದಿಂದ ಶಸ್ತ್ರಾಸ್ತ್ರ ಮತ್ತು ಅಮಲು ಪದಾರ್ಥಗಳನ್ನು ಕಳುಹಿಸಿರುವುದು ಆಗಾಗ ಸಿದ್ಧವಾಗಿದೆ. ಗಾಝಿಪೂರನಲ್ಲಿ ಸ್ಫೋಟಕಗಳನ್ನಿಡುವುದರ ಹಿಂದೆ ಉತ್ತರಪ್ರದೇಶದ ಅಪರಾಧಿಗಳ ಗುಂಪು ಮತ್ತು ‘ಸ್ಲೀಪರ್ ಸೆಲ್’ಗಳ ಕೈವಾಡವಿರಬಹುದು ಎಂದು ಸಂಶಯವಿದೆ.

೩. ವಿದೇಶಗಳಲ್ಲಿಯೂ ಭಾರತೀಯ ವಂಶದ ಜನರ ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡ !

ಜನವರಿ ೨೦೨೨ ರಲ್ಲಿ ಭಯೋತ್ಪಾದಕರು ಅಬುಧಾಬಿಯ ವಿಮಾನ ನಿಲ್ದಾಣದ ಸಮೀಪ ೩ ಬಾಂಬ್ ಸ್ಫೋಟಗಳನ್ನು ಮಾಡಿದರು ಮತ್ತು ೩ ತೈಲಟ್ಯಾಂಕರ್‌ಗಳ ಮೇಲೆ ಬಾಂಬ್ ಎಸೆದರು. ಇದರಲ್ಲಿ ಭಾರತೀಯ ವಂಶದ ಇಬ್ಬರ ಮೃತ್ಯುವಾಯಿತು. ಕಳೆದ ಅನೇಕ ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಪಾಕಿಸ್ತಾನದಲ್ಲಿ ತಯಾರಿಸಿದ ಸ್ಫೋಟಕಗಳನ್ನು ಕಳುಹಿಸಲಾಗುತ್ತದೆ ಮತ್ತು ಸ್ಫೋಟಿಸುವ ಪ್ರಯತ್ನವನ್ನೂ ಮಾಡಲಾಗುತ್ತದೆ. ಬಂಧನದಲ್ಲಿರುವ ಭಯೋತ್ಪಾದಕರೂ ತಮಗೆ ಪಾಕಿಸ್ತಾನದಲ್ಲಿ ಪ್ರಶಿಕ್ಷಣವನ್ನು ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

೪. ಭಾರತದಲ್ಲಿ ಚುನಾವಣೆಯ ಸಮಯದಲ್ಲಿ ಖಲಿಸ್ತಾನವಾದಿಗಳಿಂದ ಭಯೋತ್ಪಾದನೆಯ ಕೃತ್ಯಗಳಾಗುವ ಸಾಧ್ಯತೆ

೨೬ ಜನವರಿ ೨೦೨೧ ರಂದು ಕೃಷಿ ಆಂದೋಲನದ ನಿಮಿತ್ತ ಖಲಿಸ್ತಾನಿ ಸಮರ್ಥಕರು ದೆಹಲಿಯಲ್ಲಿ ಬಹಳ ಕೋಲಾಹಲವೆಬ್ಬಿಸಿದ್ದರು. ಅನಂತರ ಮತಾಂಧರು ದೆಹಲಿಯಲ್ಲಿ ಗಲಭೆಯನ್ನೂ ಮಾಡಿದ್ದರು. ಇತ್ತೀಚೆಗಷ್ಟೇ ಬಂದ ಒಂದು ವಾರ್ತೆಯಲ್ಲಿ, ಪಂಜಾಬದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಾಂಬ್ ಸ್ಫೋಟಿಸುವ ಒಳಸಂಚನ್ನು ಪಾಕ್ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ವು ರಚಿಸಿದೆ ಎಂದಿದೆ. ಭಾರತದಲ್ಲಿ ಚುನಾವಣೆಯ ಸಮಯದಲ್ಲಿ ಖಲಿಸ್ತಾನಿಗಳಿಂದ ಭಯೋತ್ಪಾನೆಯ ಕೃತ್ಯಗಳಾಗುವ ಸಾಧ್ಯತೆ ಇದೆ.

೫. ಭಯೋತ್ಪಾದಕರನ್ನು ಪೋಷಿಸುವ ಭಾರತ !

ಮಾಧ್ಯಮಗಳಿಗನುಸಾರ, ಪಾಕಿಸ್ತಾನಿ ಮತ್ತು ಖಲಿಸ್ತಾನಿ ಭಯೋತ್ಪಾದಕರು ಪ್ರತಿಸಲ ಯಾವುದಾದರೊಂದು ನಿಮಿತ್ತದಿಂದ ಭಾರತದಲ್ಲಿ ಆಶಾಂತಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಾರೆ. ಇದರಿಂದ ಭಾರತೀಯ ಭದ್ರತಾ ಪಡೆಯು ಬಬ್ಬರ್ ಖಾಲಸಾ, ಇಂಟರ್ ನ್ಯಾಶನಲ್ ಖಲಿಸ್ತಾನಿ ಕಮಾಂಡೋ ಫೋರ್ಸ್, ಯುಥ್ ಫೆಡರೆಶನ್ ಇಂತಹ ಅನೇಕ ಭಯೋತ್ಪಾದಕ ಸಂಘಟನೆಗಳ ಚಲನವಲನಗಳ ಮೇಲೆ ನಿಗಾ ಇಡುತ್ತದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಚುನಾವಣೆಯಾಗಲಿವೆ. ಉತ್ತರಪ್ರದೇಶದಲ್ಲಿ ಚುನಾವಣೆ ನಡೆಸುವುದು ಅಷ್ಟು ಸುಲಭವಿಲ್ಲ.

ಪ್ರತಿಯೊಂದು ಭಯೋತ್ಪಾದಕ ಕೃತ್ಯವು ಪಾಕಿಸ್ತಾನದ ಅನುಮತಿಯಿಂದಲೇ ನಡೆಯುತ್ತದೆ. ಅನಂತರ ಭಯೋತ್ಪಾದಕರನ್ನು ಹಿಡಿದು ಅವರ ಮೇಲೆ ಅಲ್ಪಸ್ವಲ್ಪ ಕಾರ್ಯಾಚರಣೆಯನ್ನು ಮಾಡಲಾಗುತ್ತದೆ, ಅವರ ವಿರುದ್ಧ ಖಟ್ಲೆಯನ್ನು ದಾಖಲಿಸಲಾಗುತ್ತದೆ ಮತ್ತು ಅವರನ್ನು ಅನೇಕ ವರ್ಷಗಳ ವರೆಗೆ ಸೆರೆಮನೆಯಲ್ಲಿ ಪೋಷಿಸಲಾಗುತ್ತದೆ. ಹಾಗೆಯೇ ನ್ಯಾಯಾಲಯದ ಹೋರಾಟಕ್ಕಾಗಿ ತೆರಿಗೆದಾರರ ಹಣದಿಂದಲೇ ಅವರಿಗೆ ದೊಡ್ಡ ದೊಡ್ಡ ನ್ಯಾಯವಾದಿಗಳನ್ನು ನೀಡಲಾಗುತ್ತದೆ. ಅನೇಕ ದಶಕಗಳ ನಂತರ ಅವರನ್ನು ಗಲ್ಲಿಗೆ ಏರಿಸಲಾಗುತ್ತದೆ, ಇದೆಲ್ಲವನ್ನು ನಾವು ನೋಡುತ್ತಲೆ ಬಂದಿದ್ದೇವೆ.

೬. ಭಾರತವು ಪಾಕಿಸ್ತಾನದ ವಿರುದ್ಧ ಇಸ್ರೇಲ್‌ನಂತಹ ನಿಲುವನ್ನು ತಾಳಿ ಕಠಿಣ ಕಾರ್ಯಾಚರಣೆಯನ್ನು ಮಾಡಬೇಕು !

‘ಅಣ್ವಸ್ತ್ರಗಳನ್ನು ಬಳಸಿ ಪಾಕಿಸ್ತಾನವನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕಬೇಕು. ಇದರಿಂದ ಭಾರತದ ನಿತ್ಯದ ತಲೆನೋವು ದೂರವಾಗುವುದು’ ಎಂಬ ವಿಚಾರ ಪ್ರತಿಯೊಬ್ಬ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ನಾಗರಿಕರ ಮನಸ್ಸಿನಲ್ಲಿ ಬರುತ್ತದೆ. ವಿಭಜನೆಯ ಸಮಯದಲ್ಲಿ ಮತಾಂಧರಿಗೆ ಸ್ವತಂತ್ರ ರಾಷ್ಟ್ರವನ್ನು ನೀಡಿದರೂ ಅವರ ಹಿಂದೂದ್ವೇಷ ನಿಂತಿಲ್ಲ. ಅವರ ಒಂದು ಕಾಲದಲ್ಲಿನ ಮಾತೃಭೂಮಿಯ ಬಗೆಗಿನ ದ್ವೇಷವು ಮುಗಿದಿಲ್ಲ ಅಥವಾ ಹಿಂದೂಗಳ ಬಗೆಗಿರುವ ದ್ವೇಷವೂ ಮುಗಿದಿಲ್ಲ. ಆದುದರಿಂದ ಭಾರತವು ಇಸ್ರೇಲ್‌ನಂತಹ ನಿಲುವನ್ನು ತಳೆದು ಪಾಕಿಸ್ತಾನದ ವಿರುದ್ಧ ಅತ್ಯಂತ ಕಠಿಣ ಕಾರ್ಯಾಚರಣೆಯನ್ನು ಮಾಡಬೇಕು.

೭. ಒಬ್ಬೊಬ್ಬ ಭಯೋತ್ಪಾದಕನನ್ನು ಸಾಯಿಸುವುದಕ್ಕಿಂತ ಅವರನ್ನು ನಿರ್ಮಿಸುವ ಪಾಕಿಸ್ತಾನವನ್ನೇ ಶಾಶ್ವತವಾಗಿ ಮುಗಿಸಬೇಕು !

ಭಾರತದ ವಿರುದ್ಧ ಪ್ರಚಾರ ಮಾಡಿದ ಬಗ್ಗೆ ಪಾಕಿಸ್ತಾನದಿಂದ ನಡೆಸಲಾಗುವ ೩೫ ‘ಯು ಟ್ಯೂಬ್’ ವಾಹಿನಿಗಳು, ೨ ಇನ್ಸ್ಟಾಗ್ರಾಮ್ ಖಾತೆಗಳು, ೨ ಟ್ವಿಟರ್ ಖಾತೆಗಳು, ೨ ಫೆಸ್‌ಬುಕ್ ಖಾತೆಗಳು ಮತ್ತು ೨ ಜಾಲತಾಣಗಳ ಮೇಲೆ ನಿರ್ಬಂಧ ಹೇರಲಾಯಿತು. ಈ ನಿರ್ಬಂಧವನ್ನು ಹಾಕುವ ಮೊದಲು ‘ಅವುಗಳ ಮೇಲಿನ ವಾರ್ತೆಗಳನ್ನು ಮತ್ತು ಧ್ವನಿಸುರುಳಿಗಳನ್ನು ನೋಡುವವರ ಸಂಖ್ಯೆ ೧೩೦ ಕೋಟಿಗಳಿಗಿಂತ ಹೆಚ್ಚಿತ್ತು’, ಎಂದು ತಿಳಿದಿದೆ. ಮಾಹಿತಿ ಮತ್ತು ಪ್ರಸಾರಣ ಖಾತೆಯ ಸಚಿವರಾದ ವಿಕ್ರಮ ಇವರು, “ಈ ಎಲ್ಲ ಖಾತೆಗಳು ಮತ್ತು ವಾಹಿನಿಗಳಲ್ಲಿ ಭಾರತೀಯ ಸೈನ್ಯ ಮತ್ತು ಜಮ್ಮು-ಕಾಶ್ಮೀರದಲ್ಲಿನ ತಥಾಕಥಿತ ಅತ್ಯಾಚಾರಗಳ ಬಗ್ಗೆ ತಪ್ಪು ಅಪಪ್ರಚಾರವನ್ನು ಮಾಡಲಾಗುತ್ತಿತ್ತು, ಹಾಗೆಯೇ ಪ್ರತ್ಯೇಕತಾವಾದಿ ವಿಚಾರಸರಣಿಗಳಿಗೆ ನೀರುಗೊಬ್ಬರವನ್ನು ಹಾಕಿ ಕಾನೂನು-ಸುವ್ಯವಸ್ಥೆಯನ್ನು ಸಂಕಟಕ್ಕೀಡು ಮಾಡುವ ಕೆಲಸವನ್ನೂ ಮಾಡಲಾಗುತ್ತಿತ್ತು” ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ಪಾಕಿಸ್ತಾನವು ಭಾರತದೊಂದಿಗೆ ಮುಂದಿನ ೧೦೦ ವರ್ಷಗಳ ಕಾಲ ಯುದ್ಧವನ್ನು ಮಾಡದಿರುವ ನಿಲುವನ್ನು ತಳೆದಿದೆ ಎಂಬ ಒಂದು ವಾರ್ತೆಯು ಪ್ರಕಟವಾಗಿತ್ತು; ಆದರೆ ಇಲ್ಲಿಯವರೆಗೆ ನಡೆದ ಎಲ್ಲ ಯುದ್ಧಗಳಲ್ಲಿ ಪಾಕ್ ಭಾರತದಿಂದ ಸರಿಯಾಗಿ ಏಟು ತಿಂದುದರಿಂದ ಅದರಿಂದ ಒಳ್ಳೆಯ ಪಾಠವನ್ನೇ ಕಲಿತಿದೆ ಎಂದು ಹೇಳಬಹುದು. ಅದಕ್ಕೆ ಭಾರತದೊಂದಿಗೆ ಪ್ರತ್ಯಕ್ಷ ಯುದ್ಧವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಿದ್ದರೂ ಭಾರತದೊಂದಿಗೆ ಭಯೋತ್ಪಾದಕ ಕೃತ್ಯಗಳು ಮತ್ತು ಗಲಭೆಗಳ ಮಾಧ್ಯಮಗಳಿಂದ ಪಾಕಿಸ್ತಾನವು ಸತತವಾಗಿ ಅಘೋಷಿತ ಯುದ್ಧವನ್ನು ಮಾಡುತ್ತಲೇ ಇರುವುದು. ಆದುದರಿಂದ ಜಗತ್ತಿನ ಇತಿಹಾಸದಿಂದ, ಹಾಗೆಯೇ ಭೂಪಟದಿಂದ ಪಾಕಿಸ್ತಾನದ ಹೆಸರನ್ನೇ ಅಳಿಸಿಹಾಕಬೇಕು. ಇದರಲ್ಲಿಯೇ ಭಾರತದ ಒಳಿತು ಅಡಗಿದೆ. ಸದ್ಯದ ರಾಷ್ಟ್ರಪ್ರೇಮಿ ಸರಕಾರವು ಈ ಕೃತಿಯನ್ನು ನಿಶ್ಚಿತವಾಗಿಯೂ ಮಾಡಬಹುದು. ಈ ಬಗ್ಗೆ ಬೆಂಬತ್ತುವಿಕೆಯ ಕೆಲಸವನ್ನು ನಾವು ನಾಗರಿಕರು ಅವಶ್ಯ ಮಾಡಬೇಕು.

ಪಾಕಿಸ್ತಾನವು ದಾವುದ್ ಇಬ್ರಾಹಿಮ್, ಮತಾಂಧರು ಮತ್ತು ರಾಷ್ಟ್ರವಿರೋಧಿ ಜನರನ್ನು ಜೊತೆಗಿಟ್ಟುಕೊಂಡು ಭಾರತದಲ್ಲಿ ೧೯೯೩ ರಲ್ಲಿ ಮತ್ತು ಅನಂತರ ಅನೇಕ ಸ್ಥಳಗಳಲ್ಲಿ ಬಾಂಬ್‌ಸ್ಫೋಟ್ ಮಾಡಿದೆ. ಅದರಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಾರು ನಾಗರಿಕರು ಗಾಯಗೊಂಡರು. ಈ ಆಕ್ರಮಣಗಳ ಗಾಯಗಳು ಆ ಗಾಯಾಳುಗಳಿಗೆ ಇಂದಿಗೂ ಆ ಭೀಕರತೆಯ ನೆನಪನ್ನು ಮಾಡಿಕೊಡುತ್ತವೆ. ಭಾರತೀಯ ನ್ಯಾಯವ್ಯವಸ್ಥೆಯು ಮಾರಣಾಂತಿಕ ಭಯೋತ್ಪಾದನೆಯ ಆಕ್ರಮಣಗಳನ್ನು ಮಾಡುವವರಿಗೂ ೫ ರಿಂದ ೨೦ ವರ್ಷಗಳ ಕಾಲ ಜೀವದಾನವನ್ನು ನೀಡುತ್ತದೆ.

ಪಾಕಿಸ್ತಾನವು ಪೋಷಿಸಿದ ಓರ್ವ ಭಯೋತ್ಪಾದಕನು ಮುದ್ರಿತ ಸಂದೇಶದ ಮಾಧ್ಯಮದಿಂದ ಸರ್ವೋಚ್ಚ ನ್ಯಾಯಾಲಯದ ಓರ್ವ ನ್ಯಾಯವಾದಿಗೆ ಬೆದರಿಕೆಯನ್ನು ನೀಡಿದ್ದನು. ಆದುದರಿಂದ ಭಯೋತ್ಪಾದಕರನ್ನು ಒಬ್ಬೊಬ್ಬರನ್ನಾಗಿ ಸಾಯಿಸುವುದಕ್ಕಿಂತ ಇಡೀ ಪಾಕಿಸ್ತಾನವನ್ನೇ ನಾಶ ಮಾಡಿದರೆ, ಕಳೆದ ೭೫ ವರ್ಷಗಳಿಂದ ಭಾರತವು ಅನುಭವಿಸುವ ತಲೆನೋವು ಸಂಪೂರ್ಣ ಇಲ್ಲವಾಗುವುದು.

ಶ್ರೀಕೃಷ್ಣಾರ್ಪಣಮಸ್ತು |

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷದ ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (೨.೨.೨೦೨೨)