ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆ ದೂರವಾಗಲು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡುವುದು ಆವಶ್ಯಕ !

(ಸದ್ಗುರು) ಡಾ. ಮುಕುಲ ಗಾಡಗೀಳ

ಮನುಷ್ಯನ ಜೀವನದಲ್ಲಿ ಬರುವ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬಂದಿರುತ್ತವೆ. ಈ ಸಮಸ್ಯೆಗಳಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳೂ ಬರುತ್ತವೆ. ಈ ರೋಗಗಳ ಕಾರಣ ಶೇ. ೮೦ ರಷ್ಟು ಆಧ್ಯಾತ್ಮಿಕವಾಗಿರುವುದರಿಂದ ಈ ರೋಗಗಳು ಮುಖ್ಯವಾಗಿ ಆಧ್ಯಾತ್ಮಿಕ ಸ್ತರದ ಉಪಾಯಗಳಿಂದಲೇ ಗುಣವಾಗಬಹುದಾಗಿರುತ್ತವೆ. ಪ್ರಾಣಶಕ್ತಿವಹನ ಪದ್ಧತಿಯಲ್ಲಿ ಆ ರೋಗಿಗಾಗಿ ಕಂಡು ಹಿಡಿದ ಮುದ್ರೆ, ನ್ಯಾಸ ಮತ್ತು ನಾಮಜಪವೇ ಈ ಆಧ್ಯಾತ್ಮಿಕ ಸ್ತರಗಳಲ್ಲಿನ ಉಪಾಯವಾಗಿವೆ. ರೋಗ ಬರಲು ವಿವಿಧ ಆಧ್ಯಾತ್ಮಿಕ ಕಾರಣಗಳು ಯಾವುವು ? ಮತ್ತು ಅವುಗಳಿಗೆ ಆಧ್ಯಾತ್ಮಿಕ ಸ್ತರಗಳಲ್ಲಿನ ಉಪಾಯಗಳು ಹೇಗೆ ಅನ್ವಯಿಸುತ್ತದೆ ?  ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ.

೧. ರೋಗ ಉಂಟಾಗುವುದರ ಹಿಂದಿನ ಆಧ್ಯಾತ್ಮಿಕ ಕಾರಣಗಳು ಮತ್ತು ಪರಿಹಾರೋಪಾಯಗಳು

ಪ್ರಾಣಶಕ್ತಿವಹನ ಪದ್ಧತಿಗನುಸಾರ ನಾಮಜಪ ಹುಡುಕುತ್ತಿರುವ (ಸದ್ಗುರು) ಡಾ. ಮುಕುಲ ಗಾಡಗೀಳ

೧ ಅ. ಕೆಟ್ಟ ಶಕ್ತಿಗಳು ತೊಂದರೆ ನೀಡುವುದು

೧ ಅ ೧. ಲಕ್ಷಣಗಳು

ಅ. ಶಾರೀರಿಕ : ಕಾರಣವಿಲ್ಲದೇ ನಿಶ್ಯಕ್ತಿ(ನಿತ್ರಾಣ)ಯಾದಂತೆ ಅನಿಸುವುದು (ಪ್ರಾಣಶಕ್ತಿ ಕಡಿಮೆಯಾಗುವುದು), ಶಾರೀರಿಕ ವೇದನೆಯಾಗುವುದು, ತಲೆ ಭಾರವಾಗುವುದು, ತಲೆತಿರುಗುವುದು, ಹೊಟ್ಟೆ ತೊಳೆಸಿದಂತಾಗುವುದು, ಹಸಿವಾಗದಿರುವುದು, ಶರೀರದ ವಿವಿಧ ಭಾಗಗಳಲ್ಲಿ (ಕಣ್ಣುಗಳು, ಹೊಟ್ಟೆ ಇತ್ಯಾದಿಗಳಲ್ಲಿ) ರೋಗವು ಉದ್ಭವಿಸುವುದು; ಕುತ್ತಿಗೆ ಹಿಸುಕಿದಂತೆ ಅನಿಸುವುದು; ಅಥವಾ ಎದೆಯ ಮೇಲೆ ಒತ್ತಡವೆನಿಸುವುದು; ಕುತ್ತಿಗೆ ಅಥವಾ ಸೊಂಟ ಸೆಟೆದುಕೊಳ್ಳುವುದು; ಕೂದಲುಗಳಲ್ಲಿ ಮೇಲಿಂದ ಮೇಲೆ ಹೇನುಗಳಾಗುವುದು; ಅನೇಕ ತಿಂಗಳುಗಳ ಕಾಲ ಔಷಧೋಪಚಾರ ಮತ್ತು ಪಥ್ಯ ಮಾಡಿದರೂ ರೋಗವು ಗುಣಮುಖವಾಗದಿರುವುದು ಇತ್ಯಾದಿ.

ಆ. ಮಾನಸಿಕ : ವಿನಾಕಾರಣ ಯಾರಾದರೊಬ್ಬರ ಮೇಲೆ ಸಿಟ್ಟು ಬರುವುದು ಮತ್ತು ಕಿರಿಕಿರಿಯಾಗುವುದು; ಮನಸ್ಸಿನಲ್ಲಿ ನಕಾರಾತ್ಮಕ ಅಥವಾ ನಿರಾಶೆಯ ವಿಚಾರಗಳು ಬಂದು ಮನಸ್ಸು ಅಸ್ವಸ್ಥವಾಗುವುದು; ಸತತ ಒತ್ತಡದಲ್ಲಿರುವುದು; ಅತಿ ಪುಕ್ಕಲತನ; ನಿರುತ್ಸಾಹವೆನಿಸುವುದು; ಸ್ವತಃದ ಇಚ್ಛೆ ಮತ್ತು ತನಗೆ ಇತರರಿಂದ ಇರುವ ಅಪೇಕ್ಷೆ ಇವುಗಳಲ್ಲಿ ಇದ್ದಕ್ಕಿದ್ದಂತೆಯೇ ಹೆಚ್ಚಳವಾಗುವುದು ಇತ್ಯಾದಿ.

೧ ಅ ೨. ಕಾರಣಗಳು

೧ ಅ ೨ ಅ. ಸಾಧನೆಯನ್ನು ಮಾಡದಿರುವುದು ಮತ್ತು ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಬಹಳವಿರುವುದು : ಸದ್ಯ ಕಲಿಯುಗವಿರುವುದರಿಂದ ಧರ್ಮಾಚರಣೆಯ ಅವನತಿಯಾಗಿದೆ. ಆದುದರಿಂದ ಕೆಟ್ಟ ಶಕ್ತಿಗಳ ಅಟ್ಟಹಾಸ ಹೆಚ್ಚಾಗಿದೆ. ಬಹುತೇಕ ಜನರು ಸಾಧನೆಯನ್ನು ಮಾಡದಿರುವುದು ಮತ್ತು ಅವರಲ್ಲಿ ಹೆಚ್ಚು ಪ್ರಮಾಣದಲ್ಲಿರುವ ಸ್ವಭಾವದೋಷ ಮತ್ತು ಅಹಂಗಳೇ ಧರ್ಮಾಚರಣೆಯ ಅವನತಿಗೆ ಕಾರಣವಾಗಿವೆ. ಇಂತಹ ವ್ಯಕ್ತಿಗಳು ಈಶ್ವರೀ ತತ್ತ್ವದಿಂದ ದೂರ ಹೋಗುತ್ತಾರೆ. ಈಶ್ವರೀ ತತ್ತ್ವದ ಕೊರತೆಯಿಂದಾಗಿ ಇಂತಹ ವ್ಯಕ್ತಿಗಳಿಗೆ ತೊಂದರೆ ನೀಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ. ಇಂತಹ ವ್ಯಕ್ತಿಗಳಲ್ಲಿ ಕೆಟ್ಟ ಶಕ್ತಿಗಳು ತಮ್ಮ ಸ್ಥಾನವನ್ನೂ ನಿರ್ಮಿಸಬಹುದು. ಮನುಷ್ಯನ ಸ್ವಭಾವದೋಷ ಮತ್ತು ಅಹಂನ ಪ್ರಮಾಣವು ಹೆಚ್ಚು ಇದ್ದಷ್ಟು ಅವರಿಗಾಗುವ ಕೆಟ್ಟ ಶಕ್ತಿಗಳ ತೊಂದರೆಯೂ ಹೆಚ್ಚಾಗಿರುತ್ತದೆ.

೧ ಅ ೨ ಆ. ಸಮಷ್ಟಿ ಸಾಧನೆ (ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಯತ್ನಿಸುವುದು) : ಸನಾತನದ ಸಾಧಕರು ‘ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಸಮಾಜವು ಸಾತ್ತ್ವಿಕವಾಗಬೇಕು’, ಎಂಬ ಉದ್ದೇಶದಿಂದ ಸಮಾಜದಿಂದ ಸಾಧನೆಯನ್ನು ಮಾಡಿಸಿಕೊಳ್ಳಲು ಪ್ರಯತ್ನವನ್ನು (ಸಮಷ್ಟಿ ಸಾಧನೆ) ಮಾಡುತ್ತಿದ್ದಾರೆ. ಸಮಾಜವು ಸಾಧನೆಯನ್ನು ಮಾಡತೊಡಗಿದರೆ, ಅದು ಧರ್ಮಾಚರಣಿಯಾಗಿ ಈಶ್ವರೀ ರಾಜ್ಯವು ತಾನಾಗಿಯೇ ಬರುತ್ತದೆ. ಕೆಟ್ಟ ಶಕ್ತಿಗಳಿಗೆ ಇದು ಬೇಡವಾದ ಕಾರಣ ಅವು ಸಮಷ್ಟಿ ಸಾಧನೆಯನ್ನು ಮಾಡುವ ಸನಾತನದ ಸಾಧಕರಿಗೆ ಮೇಲಿಂದ ಮೇಲೆ ತೊಂದರೆ ಕೊಡುತ್ತಿವೆ. ಸನಾತನದ ಸಾಧಕರ ಹೊರತಾಗಿ ಸಮಾಜದಲ್ಲಿ ಸಮಷ್ಟಿ ಸಾಧನೆಯನ್ನು ಮಾಡುವ ಇತರ ಅಲ್ಪಸ್ವಲ್ಪ ಜನರಿಗೂ ಕೆಟ್ಟ ಶಕ್ತಿಗಳು ತೊಂದರೆ ಕೊಡುತ್ತಿವೆ. ಇವರಿಗೆಲ್ಲ ವೈಯಕ್ತಿಕ ಕಾರಣಗಳಿಂದಲ್ಲ; ಅವರು ಸಮಷ್ಟಿ ಸಾಧನೆ ಮಾಡುತ್ತಿರುವುದರಿಂದ ಹೆಚ್ಚಿನ ತೊಂದರೆಯಾಗುತ್ತಿರುತ್ತದೆ.

೧ ಅ ೨ ಇ. ಕೆಟ್ಟ ಶಕ್ತಿಗಳು ಪಂಚತತ್ತ್ವಗಳ ಸ್ತರದಲ್ಲಿ ಮನುಷ್ಯನ ದೇಹದ ಮೇಲೆ ಆಕ್ರಮಣಗಳನ್ನು ಮಾಡಿ ದೇಹದಲ್ಲಿನ ಪಂಚತತ್ತ್ವಗಳ ಸಮತೋಲನವನ್ನು ಹದಗೆಡಿಸುವುದು : ಮನುಷ್ಯನ ದೇಹವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಂದ ತಯಾರಾಗಿದೆ. ಕೆಟ್ಟ ಶಕ್ತಿಗಳು ಪಂಚತತ್ತ್ವಗಳ ಸ್ತರದಲ್ಲಿ ಮನುಷ್ಯನ ದೇಹದ ಮೇಲೆ ಆಕ್ರಮಣಗಳನ್ನು ಮಾಡಿ ದೇಹದಲ್ಲಿನ ಪಂಚತತ್ತ್ವಗಳ ಸಮತೋಲನವನ್ನು ಹದಗೆಡಿಸುತ್ತವೆ.

೧ ಅ ೩. ಉಪಾಯ

೧ ಅ ೩ ಅ. ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಗನುಸಾರ ಉಪಾಯ ಮಾಡುವ ಆವಶ್ಯಕತೆ : ಕೆಟ್ಟ ಶಕ್ತಿಗಳು ಯಾರಾದರೊಬ್ಬ ವ್ಯಕ್ತಿಯಲ್ಲಿ ಬೀಜಸ್ವರೂಪದಲ್ಲಿ ತಮ್ಮ ಸ್ಥಾನವನ್ನು ನಿರ್ಮಿಸುತ್ತವೆ ಮತ್ತು ಆ ಸ್ಥಾನದಲ್ಲಿ ತೊಂದರೆದಾಯಕ ಶಕ್ತಿ (ಕಪ್ಪು ಶಕ್ತಿ) ಯನ್ನು ಪ್ರಕ್ಷೇಪಿಸಿ ಅದನ್ನು ಸಂಗ್ರಹಿಸಿಡುತ್ತವೆ. ಈ ತೊಂದರೆದಾಯಕ ಶಕ್ತಿಯಿಂದ ‘ಪ್ರಾಣಶಕ್ತಿವಹನ ವ್ಯೂಹ’ದಲ್ಲಿ ಅಡಚಣೆ ನಿರ್ಮಾಣವಾಗುತ್ತದೆ. ಮನುಷ್ಯನ ಸ್ಥೂಲದೇಹದಲ್ಲಿ ರಕ್ತಪರಿಚಲನೆ, ಉಸಿರಾಟ, ಜೀರ್ಣಾಂಗ ಇತ್ಯಾದಿ ವಿವಿಧ ವ್ಯೂಹಗಳು ಕಾರ್ಯನಿರತವಾಗಿರುತ್ತವೆ. ಅವುಗಳಿಗೆ ಹಾಗೆಯೇ ಮನಸ್ಸಿಗೆ ಕಾರ್ಯ ಮಾಡಲು ಬೇಕಾದ ಶಕ್ತಿಯನ್ನು, ಈ ‘ಪ್ರಾಣಶಕ್ತಿವಹನ ವ್ಯೂಹ’ವು ಪೂರೈಸುತ್ತದೆ. ಅವುಗಳಲ್ಲಿ ಎಲ್ಲಿಯಾದರೂ ಒಂದು ಕಡೆ ಅಡಚಣೆ ಬಂದರೆ ಸಂಬಂಧಿತ ಇಂದ್ರಿಯದ ಕಾರ್ಯಕ್ಷಮತೆ ಕಡಿಮೆಯಾಗಿ ರೋಗಗಳು ಬರುತ್ತವೆ. ಈ ರೋಗಗಳಿಗೆ ಆಧ್ಯಾತ್ಮಿಕ ಉಪಾಯವೆಂದರೆ ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಕಂಡು ಹಿಡಿಯಲಾದ ಮುದ್ರೆ, ನ್ಯಾಸ ಮತ್ತು ನಾಮಜಪವಾಗಿದೆ.

(‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯ ಸವಿಸ್ತಾರ ಮಾಹಿತಿಯನ್ನು ಸನಾತನದ ಗ್ರಂಥ ‘ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು ?’ ಮತ್ತು ‘ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಇವುಗಳಲ್ಲಿ ಕೊಡಲಾಗಿದೆ. – ಸಂಕಲನಕಾರರು)

೧ ಅ ೩ ಆ. ಮುದ್ರೆ, ನ್ಯಾಸ ಮತ್ತು ನಾಮಜಪಗಳ ಮಹತ್ವ

೧ ಅ ೩ ಆ ೧. ಮುದ್ರೆ ಮಾಡುವ ಮಹತ್ವ : ಕೈಬೆರಳುಗಳು ಪರಸ್ಪರ ಸ್ಪರ್ಶವಾದರೆ ಅಥವಾ ಬೆರಳುಗಳು ವಿಶಿಷ್ಟ ರೀತಿಯಲ್ಲಿ ಜೋಡಿಸಲ್ಪಟ್ಟರೆ ವಿವಿಧ ರೀತಿಯ ಆಕೃತಿಬಂಧಗಳು ತಯಾರಾಗುತ್ತವೆ. ಈ ಆಕೃತಿಬಂಧಗಳಿಗೆ ‘ಮುದ್ರೆ’ ಎಂದು ಹೇಳುತ್ತಾರೆ. ಮನುಷ್ಯನ ದೇಹವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಂದ (ಪಂಚಮಹಾಭೂತಗಳಿಂದ) ತಯಾರಾಗಿದೆ. ವಿಶಿಷ್ಟ ಮುದ್ರೆಗಳು ಪಂಚತತ್ತ್ವಗಳಿಗೆ ಸಂಬಂಧಿಸಿರುತ್ತವೆ.

೧ ಅ ೩ ಆ ೨. ಮುದ್ರೆಯೊಂದಿಗೆ ನಾಮಜಪ ಮಾಡುವುದರ ಮಹತ್ವ : ಕೆಟ್ಟ ಶಕ್ತಿಗಳು ಪಂಚತತ್ತ್ವಗಳ ಸ್ತರದಲ್ಲಿ ಮನುಷ್ಯನ ದೇಹದ ಮೇಲೆ ಆಕ್ರಮಣಗಳನ್ನು ಮಾಡುತ್ತವೆ. ಪ್ರತಿಯೊಂದು ದೇವತೆಗೆ ಯಾವುದಾದರೊಂದು ಮಹಾಭೂತದ ಮೇಲೆ ಅಧಿಪತ್ಯವಿರುತ್ತದೆ. ಆಯಾ ಮಹಾಭೂತಗಳ ಸ್ತರದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಆಯಾ ಮಹಾಭೂತಗಳ ಮೇಲೆ ಅಧಿಪತ್ಯವಿರುವ ದೇವತೆಯ ನಾಮಜಪವನ್ನು ಮತ್ತು ಆಯಾ ಮಹಾಭೂತಗಳೊಂದಿಗೆ ಸಂಬಂಧಿಸಿದ ಮುದ್ರೆಯನ್ನು ಮಾಡುವುದು ಉಪಯುಕ್ತವೆಂದು ಸಿದ್ಧವಾಗುತ್ತದೆ.

೧ ಅ ೩ ಆ ೩. ಮುದ್ರೆಯನ್ನು ಮಾಡಿ ಅದರಿಂದ ಶರೀರದ ಮೇಲೆ ನ್ಯಾಸ ಮಾಡುವುದರ ಮಹತ್ವ : ಕೈ ಬೆರಳುಗಳ ವಿಶಿಷ್ಟ ಮುದ್ರೆಯನ್ನು ಮಾಡಿ ಅದನ್ನು ಶರೀರದ ಕುಂಡಲಿನಿ ಚಕ್ರ ಅಥವಾ ಇತರ ಯಾವುದಾದರೊಂದು ಭಾಗದ ಹತ್ತಿರ ಹಿಡಿಯುವುದು, ಇದಕ್ಕೆ ‘ನ್ಯಾಸ’ವೆನ್ನುತ್ತಾರೆ. ನ್ಯಾಸವನ್ನು ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಮಾಡಬೇಕಾಗಿರುತ್ತದೆ. ಮುದ್ರೆಯ ಮೂಲಕ ಗ್ರಹಿಸಲಾಗುವ ಸಕಾರಾತ್ಮಕ (Positive) ಶಕ್ತಿ ಸಂಪೂರ್ಣ ಶರೀರದಾದ್ಯಂತ ಹರಡುತ್ತದೆ ಮತ್ತು ನ್ಯಾಸದ ಮೂಲಕ ಆ ಸಕಾರಾತ್ಮಕ ಶಕ್ತಿಯನ್ನು ಶರೀರದಲ್ಲಿ ವಿಶಿಷ್ಟ ಸ್ಥಳದಲ್ಲಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ನ್ಯಾಸದಿಂದ ತೊಂದರೆಗೆ ಸಂಬಂಧಿಸಿದ ಸ್ಥಾನದಲ್ಲಿ ಈ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿಸಲು ಸಾಧ್ಯವಾದುದರಿಂದ ತೊಂದರೆಯು ಬೇಗನೆ ದೂರವಾಗಲು ಸಹಾಯವಾಗುತ್ತದೆ.

೧ ಅ ೩ ಆ ೪. ಪ್ರಾಣಶಕ್ತಿಯ ಪ್ರವಾಹದಲ್ಲಿನ ಅಡಚಣೆಗಳನ್ನು ಕಂಡು ಹಿಡಿಯುವುದು, ಅಂದರೆ ನ್ಯಾಸ ಮಾಡುವ ಸ್ಥಾನವನ್ನು (ನ್ಯಾಸ ಸ್ಥಾನ) ಕಂಡು ಹಿಡಿಯುವುದು : ಪ್ರಾಣಶಕ್ತಿವಹನ ವ್ಯೂಹದಲ್ಲಿ ಏನಾದರೊಂದು ಅಡಚಣೆ ಇದ್ದರೆ ಆ ಅಡಚಣೆಯ ಸ್ಥಾನದಲ್ಲಿ ಕೈ ಬೆರಳುಗಳನ್ನು ತಿರುಗಿಸಿದಾಗ ಬೆರಳುಗಳಿಂದ ಪ್ರಕ್ಷೇಪಿಸುವ ಪ್ರಾಣಶಕ್ತಿಯ ಪ್ರವಾಹದಲ್ಲಿ ಆ ಅಡಚಣೆಯಿಂದ ಅಡ್ಡಿ ಉತ್ಪನ್ನವಾಗಿ ಉಸಿರಾಟವು ತಡೆಯಲ್ಪಡುತ್ತದೆ ಮತ್ತು ಅದರಿಂದ ಅಡಚಣೆಯ ಸ್ಥಾನವನ್ನು ಸರಿಯಾಗಿ ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಕಂಡು ಹಿಡಿದ ಅಡಚಣೆಯ ಸ್ಥಾನದಲ್ಲಿ ೧-೨ ಸೆಂ.ಮೀ. ಅಂತರದಲ್ಲಿ ನ್ಯಾಸವನ್ನು ಮಾಡುವುದಿರುತ್ತದೆ. ಈ ಸ್ಥಾನಕ್ಕೆ ‘ನ್ಯಾಸಸ್ಥಾನ’ವೆನ್ನುತ್ತಾರೆ. ಕೆಟ್ಟ ಶಕ್ತಿಗಳು ಮುಖ್ಯವಾಗಿ ಕುಂಡಲಿನಿಚಕ್ರಗಳ ಮೇಲೆ ಆಕ್ರಮಣ ಮಾಡಿ ಅಲ್ಲಿ ತೊಂದರೆದಾಯಕ ಶಕ್ತಿಯನ್ನು ಸಂಗ್ರಹಿಸಿಡುತ್ತವೆ. ಇದರಿಂದ ಕುಂಡಲಿನಿ ಚಕ್ರಗಳಲ್ಲಿ ಅಡಚಣೆಗಳು ನಿರ್ಮಾಣವಾಗುತ್ತವೆ. ಕುಂಡಲಿನಿ ಚಕ್ರಗಳಲ್ಲಿ ಅಡಚಣೆಗಳು ನಿರ್ಮಾಣವಾದರೆ ಅವುಗಳಿಗೆ ಸಂಬಂಧಿಸಿದ ಇಂದ್ರಿಯಗಳಿಗೆ ಪ್ರಾಣಶಕ್ತಿಯು ಕಡಿಮೆ ಪ್ರಮಾಣದಲ್ಲಿ ದೊರಕಿ ಆರೋಗ್ಯವು ಹದಗೆಡುತ್ತದೆ. ಈ ಅಡಚಣೆಯನ್ನು ದೂರ ಮಾಡಲು ಕುಂಡಲಿನಿ ಚಕ್ರಗಳ ಸ್ಥಳದಲ್ಲಿ ಬೆರಳುಗಳನ್ನು ತಿರುಗಿಸಿ ನ್ಯಾಸ ಮಾಡುವಲ್ಲಿನ ಅಡಚಣೆಯಾಗಿರುವ ಸ್ಥಾನವನ್ನು ಕಂಡು ಹಿಡಿಯುವುದು ಆವಶ್ಯಕವಾಗಿರುತ್ತದೆ. ಹಾಗೆಯೇ ಶರೀರದಲ್ಲಿನ ವಿವಿಧ ನಾಡಿಗಳಲ್ಲಿನ ಅಡಚಣೆಗಳನ್ನೂ ಕಂಡು ಹಿಡಿಯಬೇಕಾಗುತ್ತದೆ. ಅದಕ್ಕಾಗಿ ಚಕ್ರಸ್ಥಾನಗಳನ್ನು ಬಿಟ್ಟು ಶರೀರದ ತಲೆ, ಕುತ್ತಿಗೆ, ಎದೆ, ಹೊಟ್ಟೆ, ಕೈಗಳು, ಕಾಲುಗಳು ಇತ್ಯಾದಿ ಎಲ್ಲ ಭಾಗಗಳ ಮೇಲೆ ಎಲ್ಲ ಬದಿಗಳಿಂದ ಬೆರಳುಗಳನ್ನು ತಿರುಗಿಸಿ ‘ಎಲ್ಲಿಯಾದರೂ ಅಡಚಣೆ ಇದೆಯೇ ?’, ಎಂಬುದನ್ನೂ ಕಂಡು ಹಿಡಿಯಬೇಕಾಗುತ್ತದೆ.

೧ ಆ. ಅತೃಪ್ತ ಪೂರ್ವಜರು ತೊಂದರೆ ನೀಡುವುದು

ಸದ್ಯ ಅವಿಭಕ್ತ ಕುಟುಂಬಪದ್ಧತಿ ಇಲ್ಲದ ಕಾರಣ ಹಿರಿಯರನ್ನು ಗೌರವಿಸುವ ಸಂಸ್ಕಾರವು ಲಯವಾಗುತ್ತಿದೆ. ಇಷ್ಟೇ ಅಲ್ಲದೇ, ಬಹಳಷ್ಟು ಜನರು ತಮ್ಮ ತಾಯಿ-ತಂದೆಯರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಇಂತಹ ಹಿರಿಯರ ನಿಧನದ ನಂತರ ಆ ಪೂರ್ವಜರ ಶಾಪವು ಆ ಕುಟುಂಬಕ್ಕೆ ತಟ್ಟುತ್ತದೆ. ಹಾಗೆಯೇ ತಮ್ಮ ಪೂರ್ವಜರ ಬಗ್ಗೆ ಕೃತಜ್ಞರಾಗಿದ್ದು ಶ್ರಾದ್ಧ, ಪಕ್ಷ ಇತ್ಯಾದಿಗಳನ್ನು ಮಾಡುವುದು ಸದ್ಯ ಅನೇಕ ಜನರಿಂದ ಆಗುತ್ತಿಲ್ಲ. ಆದುದರಿಂದ ಇಂತಹ ಕುಟುಂಬಗಳಿಗೆ ಅತೃಪ್ತ ಪೂರ್ವಜರ ತೊಂದರೆಯಾಗುತ್ತದೆ. ಅತೃಪ್ತ ಪೂರ್ವಜರ ತೊಂದರೆಯಿಂದಾಗಿ ಗರ್ಭಧಾರಣೆಯಾಗದಿರುವುದು, ಗರ್ಭಪಾತವಾಗುವುದು, ದಿನಗಳು ಪೂರ್ತಿಯಾಗುವ ಮೊದಲೇ ಮಗು ಜನಿಸುವುದು, ಮತಿ ಮಂದ ಅಥವಾ ಅಂಗವಿಕಲ ಮಕ್ಕಳು ಜನ್ಮಕ್ಕೆ ಬರುವುದು, ಈ ತೊಂದರೆಗಳ ಕೆಲವು ಲಕ್ಷಣಗಳು ಆ ಕುಟುಂಬದಲ್ಲಿ ಕಂಡು ಬರುತ್ತವೆ. ಹಾಗೆಯೇ ಕೆಲವರಿಗೆ ವ್ಯಸನ, ಮಾನಸಿಕ ರೋಗ, ಚರ್ಮರೋಗಗಳಂತಹ ಶಾರೀರಿಕ ಕಾಯಿಲೆ ಇಂತಹ ಲಕ್ಷಣಗಳೂ ಇರಬಹುದು. ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದತ್ತನ ನಾಮಜಪವನ್ನು ಮಾಡುವುದು ಉಪಯುಕ್ತವೆಂದು ಸಿದ್ಧವಾಗುತ್ತದೆ. ಈ ತೊಂದರೆಗಳ ಮೂಲ ಕಾರಣದ ಮೇಲೆ ಉಪಾಯವೆಂದು ದತ್ತನ ನಾಮವನ್ನು ಜಪಿಸುವುದರೊಂದಿಗೆ ಆ ತೊಂದರೆಗಳಿಗೆ ಪ್ರಾಣಶಕ್ತಿವಹನ ಉಪಾಯಪದ್ಧತಿಗನುಸಾರವೂ ಉಪಾಯವನ್ನು ಹೇಳಿದರೆ ಹೆಚ್ಚಿನ ಲಾಭವಾಗುತ್ತದೆ.

೨. ಉಪಾಯವನ್ನು ಮಾಡುವಾಗ ಗಮನಕ್ಕೆ ಬಂದ ವಿವಿಧ ಅಂಶಗಳು

೨ ಅ. ಉಪಾಯವನ್ನು ಮಾಡುವಾಗ ಮೊದಲು ಶರೀರದ ಮೆಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವುದು ಆವಶ್ಯಕವಾಗಿದೆ.

ಕೆಟ್ಟ ಶಕ್ತಿಗಳು ಯಾರಾದರೊಬ್ಬರಿಗೆ ತೊಂದರೆ ನೀಡುವಾಗ ತೊಂದರೆದಾಯಕ ಶಕ್ತಿಯನ್ನು ಪ್ರಕ್ಷೇಪಿಸಿ ವ್ಯಕ್ತಿಯ ಯಾವುದಾದರೊಂದು ಕುಂಡಲಿನಿ ಚಕ್ರದ ಮೇಲೆ ಆವರಣವನ್ನು ತರುತ್ತವೆ. ನಂತರ ಅದನ್ನು ಹೆಚ್ಚಿಸಿ ಅವನ ಶರೀರದ ಮೇಲೆ ಹೊರಗಿನಿಂದಲೂ (ಶರೀರದ ಸುತ್ತಲೂ) ಆವರಣವನ್ನು ತರುತ್ತವೆ. ವ್ಯಕ್ತಿಯ ಮೇಲೆ ಆವರಣ ಬಂದುದರಿಂದ ಅವನಿಗೆ ಮೊದಲೇ ಇದ್ದ ತೊಂದರೆಯು ಇನ್ನೂ ಹೆಚ್ಚಾಗುತ್ತದೆ. ಹಾಗೆಯೇ ವ್ಯಕ್ತಿಯ ಮೇಲೆ ತೊಂದರೆದಾಯಕ ಆವರಣವು ಬಂದಿದ್ದರೆ, ಅದರಿಂದ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಗಳ ನಿರ್ಮೂಲನೆಗಾಗಿ ಎಷ್ಟೇ ಸಮಯ ನಾಮಜಪ ಮುಂತಾದ ಉಪಾಯ ಮಾಡಿದರೂ ಆವರಣದಿಂದ ಆ ಉಪಾಯಗಳ ಸಾತ್ತ್ವಿಕ ಸ್ಪಂದನಗಳು ಅವನವರೆಗೆ ಅಷ್ಟು ಪ್ರಮಾಣದಲ್ಲಿ ತಲುಪುವುದಿಲ್ಲ ಮತ್ತು ಅದರಿಂದ ಅವನ ತೊಂದರೆಗಳು ಬೇಗನೆ ನಿವಾರಣೆ ಆಗುವುದಿಲ್ಲ. ವ್ಯಕ್ತಿಯ ಮೇಲೆ ತೊಂದರೆದಾಯಕ ಆವರಣ ಬಂದಿದ್ದರೆ, ಅವನ ಮೇಲೆ ವೈದ್ಯಕೀಯ ಉಪಚಾರಗಳಿಂದ ಸಹ ವಿಶೇಷ ಪರಿಣಾಮವಾಗುವುದಿಲ್ಲ. ಆದುದರಿಂದ ಈ ಆವರಣವನ್ನು ತೆಗೆಯುವುದು ಆವಶ್ಯಕವಾಗಿರುತ್ತದೆ.

೨ ಆ. ತೊಂದರೆ ಸಂಪೂರ್ಣವಾಗಿ ದೂರವಾಗುವವರೆಗೆ ಪ್ರಾಣಶಕ್ತಿವಹನದಲ್ಲಿನ ಅಡಚಣೆಗಳ ಸ್ಥಾನವನ್ನು ಪುನಃ ಪುನಃ ಕಂಡು ಹಿಡಿದು ಅಲ್ಲಿ ಉಪಾಯ ಮಾಡುವುದು ಆವಶ್ಯಕವಾಗಿದೆ

ನ್ಯಾಸಸ್ಥಾನವನ್ನು ಕಂಡು ಹಿಡಿದು ಅಲ್ಲಿ ಉಪಾಯ ಮಾಡಿದರೆ ಆ ಸ್ಥಾನದಲ್ಲಿನ ಅಡಚಣೆಗಳು (ತೊಂದರೆ) ದೂರವಾಗಿರುವುದು ಅರಿವಾಗುತ್ತದೆ. ಅನಂತರ ‘ಪ್ರಾಣಶಕ್ತಿವಹನದಲ್ಲಿ ಅಡಚಣೆಗಳಿರುವ ಬೇರೆ ಯಾವುದಾದರೂ ಸ್ಥಾನವಿದೆಯೇ ?’, ಎಂದು ಪುನಃ ಕಂಡು ಹಿಡಿಯಬೇಕಾಗುತ್ತದೆ ಮತ್ತು ಅದು ಸಿಕ್ಕರೆ ಆ ಸ್ಥಾನದ ಮೇಲೆ ಪುನಃ ಉಪಾಯ ಮಾಡಬೇಕಾಗುತ್ತದೆ. ಆಗ ಆ ಸ್ಥಾನಕ್ಕಾಗಿ ಮುದ್ರೆ ಮತ್ತು ನಾಮಜಪವನ್ನು ಪುನಃ ಕಂಡು ಹಿಡಿಯಬೇಕಾಗುತ್ತದೆ. ಈ ರೀತಿ ಪುನಃ ಪುನಃ ಈ ಪ್ರಕ್ರಿಯೆಯನ್ನು ಮಾಡಿ ‘ಪ್ರಾಣಶಕ್ತಿವಹನದಲ್ಲಿ ಇನ್ನೂ ಎಲ್ಲಿಯಾದರೂ ಅಡಚಣೆ ಇಲ್ಲವಲ್ಲ ?’, ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ, ಅಂದರೆ ಮಾತ್ರ ತೊಂದರೆ ಸಂಪೂರ್ಣವಾಗಿ ದೂರವಾಗುತ್ತದೆ. ಕೆಟ್ಟ ಶಕ್ತಿಗಳು ಒಂದಕ್ಕಿಂತ ಹೆಚ್ಚು ಚಕ್ರಸ್ಥಾನಗಳಲ್ಲಿ ಆಕ್ರಮಣ ಮಾಡಿ ಅಲ್ಲಿ ತೊಂದರೆದಾಯಕ ಶಕ್ತಿಯನ್ನು ಸಂಗ್ರಹಿಸಿರುತ್ತವೆ. ಆದುದರಿಂದ ಆ ಎಲ್ಲ ಸ್ಥಾನಗಳನ್ನು ಕಂಡು ಹಿಡಿದು ಮತ್ತು ಅವುಗಳ ಮೇಲೆ ಉಪಾಯ ಮಾಡಿ ಅಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡಬೇಕಾಗುತ್ತದೆ. ನಾವು ಯಾವುದಾದರೊಂದು ಸ್ಥಾನದಲ್ಲಿ ಉಪಾಯ ಮಾಡತೊಡಗಿದರೆ, ನಮಗೆ, ‘ಅಲ್ಲಿನ ತೊಂದರೆ ದೂರವಾಗಿದೆ’, ಎಂದೆನಿಸುತ್ತದೆ; ಆದರೆ ಆಗ ನಿಜವಾಗಿಯೂ ಕೆಟ್ಟ ಶಕ್ತಿಗಳು ನಮ್ಮನ್ನು ಮೋಸಗೊಳಿಸಲು ತಮ್ಮ ಸ್ಥಾನವನ್ನು ಬದಲಾಯಿಸಿರುತ್ತವೆ. ಆದ್ದರಿಂದಲೂ ಅಡಚಣೆಗಳ ಸ್ಥಾನವನ್ನು ಮೇಲಿಂದ ಮೇಲೆ ಕಂಡು ಹಿಡಿಯಬೇಕಾಗುತ್ತದೆ.

೨ ಇ. ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳ ಆಕ್ರಮಣದ ಚಲನವಲನವನ್ನು ತಿಳಿದುಕೊಂಡು ಅದಕ್ಕನುಸಾರ ಉಪಾಯ ಮಾಡುವುದು ಆವಶ್ಯಕವಾಗಿದೆ

ಒಂದು ಸಲ ಓರ್ವ ಸಾಧಕನು ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಕಂಡು ಹಿಡಿದು ತನಗಾಗಿ ಉಪಾಯವನ್ನು ಮಾಡುತ್ತಿದ್ದನು. ಎರಡು ಗಂಟೆಗಳಾದರೂ, ಅವನಿಗೆ ‘ತನ್ನ ತೊಂದರೆ ಕಡಿಮೆ ಆಗಿದೆ’ ಎಂದು ಅರಿವಾಗಲಿಲ್ಲ. ಆದುದರಿಂದ ಅವನು ನನಗೆ ಆ ಬಗ್ಗೆ ತಿಳಿಸಿದನು. ನಾನು ಉಪಾಯವನ್ನು ಕಂಡು ಹಿಡಿಯುವಾಗ ನನಗೆ, ‘ಕೆಟ್ಟ ಶಕ್ತಿ ಅವನ ತಲೆಯ ಮೇಲಿನಿಂದ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಸತತವಾಗಿ ಬಿಡುತ್ತಿದೆ. ಆದುದರಿಂದ ಆ ಸಾಧಕನಿಗೆ ಬಹಳ ಸಮಯ ಉಪಾಯ ಮಾಡಿದರೂ ಅವನಲ್ಲಿ ತೊಂದರೆದಾಯಕ ಶಕ್ತಿಯು ಕಡಿಮೆಯಾಗುತ್ತಿರಲಿಲ್ಲ’, ಎಂದು ನನಗೆ ಅರಿವಾಯಿತು.

ಒಂದು ಸಲ ಓರ್ವ ಸಾಧಕನು ತನಗಾಗಿ ಉಪಾಯ ಮಾಡುತ್ತಿರುವಾಗ ಅವನೆದುರು ಕೆಟ್ಟ ಶಕ್ತಿಗಳು ಕಪ್ಪು ಶಕ್ತಿಯ ಪರದೆಯನ್ನು ನಿರ್ಮಿಸಿದ್ದವು. ಆದುದರಿಂದ ಅವನ ತೊಂದರೆ ಕಡಿಮೆಯಾಗುತ್ತಿರಲಿಲ್ಲ. ಇನ್ನೋರ್ವ ಸಾಧಕನು ತನಗಾಗಿ ಉಪಾಯ ಮಾಡುತ್ತಿರುವಾಗ ಅವನ ಮೇಲೆ ಭೂಮಿಯ ಕಡೆಯಿಂದ ಪಾತಾಳದಿಂದ ತೊಂದರೆದಾಯಕ ಶಕ್ತಿ ಬರುತ್ತಿತ್ತು. ಆದುದರಿಂದ ಅವನ ತೊಂದರೆ ಸಹ ಕಡಿಮೆಯಾಗುತ್ತಿರಲಿಲ್ಲ. ಉಪಾಯವನ್ನು ಮಾಡುವಾಗ ತೊಂದರೆ ದೂರವಾಗುವುದಕ್ಕಾಗಿ ಈ ರೀತಿ ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳ ಆಕ್ರಮಣದ ದಿಕ್ಕನ್ನು ಅರಿತುಕೊಂಡು ಅದಕ್ಕನುಸಾರ ಉಪಾಯ ಮಾಡುವುದು ಆವಶ್ಯಕವಾಗಿರುತ್ತದೆ.

೨ ಈ. ಉಪಾಯಗಳ ಕೊನೆಗೆ ನಮ್ಮ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡುವುದು ಅತ್ಯಂತ ಆವಶ್ಯಕ

ಉಪಾಯವನ್ನು ಮಾಡುವಾಗ ನಮ್ಮೆಲ್ಲ ಚಕ್ರಗಳ ಮೇಲಿನ ತೊಂದರೆದಾಯಕ (ಕಪ್ಪು) ಶಕ್ತಿಯು ಸಂಪೂರ್ಣವಾಗಿ ದೂರವಾದರೂ ಕೊನೆಗೆ ನಮ್ಮ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡುವುದು ಆವಶ್ಯಕವಾಗಿರುತ್ತದೆ, ಇಲ್ಲದಿದ್ದರೆ ಕೆಟ್ಟ ಶಕ್ತಿಗಳಿಗೆ ನಮ್ಮ ಮೇಲೆ ಆಕ್ರಮಣ ಮಾಡಲು ಆ ಸ್ಥಾನವು ಅನಾಯಾಸವಾಗಿ ಸಿಗುತ್ತದೆ. ನಾವು ನಮ್ಮ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡತೊಡಗಿದರೆ, ನಮ್ಮ ಶರೀರದಲ್ಲಿ ಉಳಿದ ಅಲ್ಪಸ್ವಲ್ಪ ತೊಂದರೆದಾಯಕ ಶಕ್ತಿಯೂ ಆ ಸ್ಥಾನದಿಂದ ಎಳೆದು ಹಾಕಿದ ಹಾಗೆ ಹೊರಗೆ ಬೀಳುತ್ತದೆ. ಅದರಿಂದ ನಮಗೆ ಇನ್ನೂ ಹಗುರವೆನಿಸುತ್ತದೆ. ಕೆಲವೊಮ್ಮೆ ಕಣ್ಣುಗಳಿಂದ ತೊಂದರೆದಾಯಕ ಶಕ್ತಿಯನ್ನು ಹೊರಗೆ ತೆಗೆಯುವಾಗ ನಮಗೆ ನಮ್ಮ ಯಾವುದಾದರೊಂದು ಚಕ್ರದ ಮೇಲೆ ಒತ್ತಡವೆನಿಸಿ ತೊಂದರೆ ಹೆಚ್ಚಾಗಿರುವುದು ಅರಿವಾಗುತ್ತದೆ. ಆಗ ಕೆಟ್ಟ ಶಕ್ತಿಗಳು ತಮ್ಮ ಆ ಸ್ಥಾನದಲ್ಲಿ ಬಚ್ಚಿಟ್ಟ (ನಿರ್ಗುಣ ಸ್ತರದಲ್ಲಿಟ್ಟ) ತೊಂದರೆದಾಯಕ ಶಕ್ತಿಯು ಪ್ರಕಟವಾಗುತ್ತದೆ. ಆದುದರಿಂದ ಆ ಸ್ಥಾನದ ಮೇಲೆ ನಮಗೆ ಉಪಾಯ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಕಣ್ಣುಗಳಿಂದ ತೊಂದರೆದಾಯಕ ಶಕ್ತಿಯು ದೂರವಾದಾಗ ನಮ್ಮ ಕಣ್ಣುಗಳಿಗೆ ಹಗುರವೆನಿಸುತ್ತದೆ ಮತ್ತು ನಮಗೆ ಸ್ಪಷ್ಟವಾಗಿ ಕಾಣಿಸತೊಡಗುತ್ತದೆ. ಹೀಗಾದಾಗ ನಾವು ಉಪಾಯವು ಪೂರ್ಣವಾಗಿದೆಯೆಂದು ತಿಳಿಯಬಹುದು. ಇದು ಕಣ್ಣುಗಳ ಮೇಲೆ ಉಪಾಯ ಮಾಡುವುದರ ಒಂದು ಲಾಭವಾಗಿದೆ.

೩. ಸಾರಾಂಶ

ಈ ರೀತಿ ನಿಖರವಾಗಿ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡುವುದರಿಂದ ನಮಗಾಗುವ ತೊಂದರೆಯನ್ನು ದೂರ ಮಾಡಲು ಸಾಧ್ಯವಾಗುತ್ತದೆ. ತೊಂದರೆಯ ತೀವ್ರತೆಗನುಸಾರ ತೊಂದರೆ ದೂರವಾಗುವ ಕಾಲಾವಧಿಯು ಕಡಿಮೆ-ಹೆಚ್ಚು ಇರಬಹುದು. ಆಧ್ಯಾತ್ಮಿಕ ಸ್ತರದ ಉಪಾಯ ಮಾಡಿದಾಗ ಚಾಲ್ತಿಯಲ್ಲಿರುವ ಔಷಧೋಪಚಾರ, ಮಾನಸೋಪಚಾರ ಇತ್ಯಾದಿಗಳಿಂದ ಯಾವುದೇ ಉಪಚಾರದ ಸಂಪೂರ್ಣ ಮತ್ತು ಕಡಿಮೆ ಕಾಲಾವಧಿಯಲ್ಲಿ ಲಾಭವಾಗುತ್ತದೆ. ನಮ್ಮ ತೊಂದರೆಯು ನಾಮಜಪ ಮುಂತಾದ ಉಪಾಯಗಳಿಂದ ಗುಣವಾದುದರಿಂದ ನಮಗೆ ದೇವರ ಬಗೆಗಿನ ಶ್ರದ್ಧೆಯು ಇನ್ನೂ ಹೆಚ್ಚಾಗಲು ಸಹಾಯ ಸಿಗುತ್ತದೆ. ಹಾಗೆಯೇ ಜೀವನದಲ್ಲಿ ಸಾಧನೆಯನ್ನು ಮಾಡುವುದರ ಮಹತ್ವವು ಆಧ್ಯಾತ್ಮಿಕ ಸ್ತರದ ಉಪಾಯಗಳಿಂದಾದ ಲಾಭದಿಂದ ದೃಢವಾಗುತ್ತದೆ. ‘ಈ ರೀತಿ ಇರುವ ಆಧ್ಯಾತ್ಮಿಕ ಉಪಾಯಗಳ ಮಹತ್ವ ಎಲ್ಲರ ಗಮನಕ್ಕೆ ಬರಲಿ’, ಎಂದು ನಾನು ಶ್ರೀಗುರುಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೨.೧.೨೦೨೨)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.