ಕೋಣೆಯ ಕಿಟಕಿಗಳ ಗಾಜು ಹಗಲಿನಲ್ಲಿ ಪಾರದರ್ಶಕವಾಗಿ ಮತ್ತು ರಾತ್ರಿಯಲ್ಲಿ ಕನ್ನಡಿಯಂತೆ ಕಾಣುವುದರ ಹಿಂದಿನ ಶಾಸ್ತ್ರ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಮನೆಯಲ್ಲಿನ ಕಿಟಕಿಗಳಿಗೆ ಪಾರದರ್ಶಕ ಗಾಜು ಇದ್ದರೆ, ಹಗಲಿನಲ್ಲಿ ಆ ಗಾಜಿನಿಂದ ಸಹಜ ಹಾಗೂ ಸುಲಭವಾಗಿ ನೋಡುವುದು ಸಾಧ್ಯವಾಗುತ್ತದೆ. ಹಗಲಿನಲ್ಲಿ ಕೋಣೆಯ ಬೆಳಕಿನಿಂದ ಗಾಜಿನ ಮೇಲೆ ನಮ್ಮ ಪ್ರತಿಬಿಂಬವು ಪ್ರತಿಫಲಿಸುತ್ತದೆ ಆದರೆ ಹೊರಗಿನ ಬೆಳಕಿನ ತೀವ್ರತೆಯಿಂದಾಗಿ ಅದು ಗೋಚರಿಸುವುದಿಲ್ಲ. ತದ್ವಿರುದ್ಧವಾಗಿ ರಾತ್ರಿಯಲ್ಲಿ ಕೋಣೆಯ ಹೊರಗೆ ಕತ್ತಲೆಯಿರುವುದರಿಂದ, ಕಿಟಕಿಯ ಗಾಜು ಕನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ. ಕೋಣೆಯಲ್ಲಿರುವ ದೀಪದ ಬೆಳಕಿನಿಂದ ನಮ್ಮ ಪ್ರತಿಬಿಂಬವು ಗಾಜಿನ ಮೇಲೆ ಎದ್ದು ಕಾಣಿಸುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೨೮.೧೨.೨೦೨೧)

ಗೋಪಿಯರ ಪ್ರೀತಿ !

‘ಗೋಪಿಯರ ಕೃಷ್ಣನ ಮೇಲಿನ ಪ್ರೇಮ’ವು ಅವನ ದೇಹದ ಮೇಲೆ  (ಶಾರೀರಿಕ ಮಟ್ಟದಲ್ಲಿ) ಇರಲಿಲ್ಲ. ಆದರೆ ಅವನ ಮನಸ್ಸಿನ ಮೇಲೆ (ಆಧ್ಯಾತ್ಮಿಕ ಮಟ್ಟದಲ್ಲಿ) ಇತ್ತು. ಆದ್ದರಿಂದ ಅವರು ಪರಸ್ಪರ ಜಗಳವಾಡುತ್ತಿರಲಿಲ್ಲ. ಅವರಲ್ಲಿ ಪರಸ್ಪರರ ಬಗ್ಗೆ ಪ್ರೇಮವೇ ಇತ್ತು.

– (ಪರಾತ್ಪರ ಗುರು) ಡಾ. ಆಠವಲೆ (೧೮.೧.೨೦೨೨)

ದೇವರ ಸ್ಥಳವಿರುವ ಸ್ಥಾನಕ್ಕೆ ಆಕಸ್ಮಿಕವಾಗಿ ಕಾಲು ತಾಗಿದರೂ ಲಾಭವೇ ಆಗುವುದು !

ಸಾತ್ತ್ವಿಕ ಸ್ಥಳ, ಉದಾ. ದೇವರ ಸ್ಥಳಕ್ಕೆ ಆಕಸ್ಮಿಕವಾಗಿ ಕಾಲು ತಾಗಿದರೆ, ಆ ಚೈತನ್ಯದಾಯಕ ಸ್ಥಳಕ್ಕೆ ಕಾಲು ತಾಗಿತೆಂದು ನಮಗೆ ಕೆಡಕು ಎನಿಸುತ್ತದೆ; ಹೀಗಿದ್ದರೂ, ಆ ಚೈತನ್ಯದಾಯಕ ಸ್ಥಳದ ಸ್ಪರ್ಶದಿಂದ ಅಲ್ಲಿನ ದೇವತೆಯ ತತ್ತ್ವವು ನಮ್ಮ ದೇಹದಲ್ಲಿ ಸಂಕ್ರಮಿತವಾಗುತ್ತದೆ. ಇದು ಸಹ ಅದರ ಲಾಭವೇ ಆಗಿದೆ. ಹೀಗಿದ್ದರೂ ಬೇಕೆಂದಲೇ ಕಾಲು ತಾಗಿಸಬಾರದು. ಅದರಿಂದ ಹೆಚ್ಚು ಹಾನಿಯಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೨೬.೧.೨೦೨೨)