#KashmirFiles #TheKashmirFiles #Kashmir #Exodus #Genocide #VivekAgnihotri
ಮಾರ್ಚ್ ೧೧ ರಂದು ಜಗತ್ತಿನಾದ್ಯಂತ ‘ದ ಕಶ್ಮೀರ್ ಫೈಲ್ಸ್’ ಈ ಚಲನಚಿತ್ರ ಬಿಡುಗಡೆಯಾಗಲಿದೆ. ಈ ನಿಮಿತ್ತ…
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ‘ಸನಾತನ ಪ್ರಭಾತ’ನ ಪ್ರತಿನಿಧಿಗಳು ಸಂವಾದ ನಡೆಸಿದರು !
ಇಂದು ಇಷ್ಟು ದೀರ್ಘ ಸಮಯದ ನಂತರ ‘ದ ಕಾಶ್ಮಿರ ಫೈಲ್ಸ್’ ಎಂಬ ಚಲನಚಿತ್ರದ ಮೂಲಕ ಈ ಅತ್ಯಾಚಾರಗಳನ್ನು ಜಾಗತಿಕ ತೆರೆಯ ಮೇಲಿಡುವ ಸ್ತುತ್ಯರ್ಹ ಹಾಗೂ ಸಾಹಸಿ ಪ್ರಯತ್ನವನ್ನು ಪ್ರಸಿದ್ಧ ನಿರ್ದೆಶಕರಾದ ವಿವೇಕ ರಂಜನ ಅಗ್ನಿಹೋತ್ರಿಯವರು ಮಾಡಿದ್ದಾರೆ. ಈ ಚಲನಚಿತ್ರವನ್ನು ನಿರ್ಮಿಸುವಾಗ ಜಿಹಾದಿ ಹಾಗೂ ಅದೇ ವಿಚಾರಸರಣಿಯ ಜನರಿಂದ ಅವರ ವಿರುದ್ಧ ಅನೇಕ ಸಂಚುಗಳನ್ನು ರೂಪಿಸಲಾಯಿತು. ಅಗ್ನಿಹೋತ್ರಿಯವರ ಈ ಪ್ರಯತ್ನದ ಬಗ್ಗೆ ಅಥವಾ ಚಲನಚಿತ್ರದ ಬಗ್ಗೆ ಮುಖ್ಯವಾಹಿನಿಯ ಪ್ರಸಾರಮಾಧ್ಯಮಗಳಿಂದ ಹೇಳುವಷ್ಟು ಪ್ರಸಿದ್ಧಿ ಸಿಗಲಿಲ್ಲ, ಇದು ಹಿಂದೂಗಳ ಭಾರತದಲ್ಲಿನ ದುರದೃಷ್ಟಕರ ಸಂಗತಿ ಎಂದೇ ಹೇಳಬೇಕಾಗುತ್ತದೆ. ‘ಸನಾತನ ಪ್ರಭಾತ’ ನಿಯತಕಾಲಿಕೆಯು ಯಾವಾಗಲೂ ‘ಹಿಂದೂ ರಾಷ್ಟ್ರ’ ಹಾಗೂ ‘ಹಿಂದುತ್ವ’ಕ್ಕಾಗಿ ಕಾರ್ಯನಿರತವಾಗಿರುವವರ ಪ್ರಯತ್ನಗಳಿಗೆ ಪ್ರಖರವಾಗಿ ಪ್ರಸಿದ್ಧಿ ನೀಡಿದೆ. ಇದರದ್ದೇ ಒಂದು ಭಾಗವೆಂದು ಕಾಶ್ಮೀರಿ ಹಿಂದೂಗಳ ವ್ಯಥೆ ಹಾಗೂ ಆ ನಿಮಿತ್ತದಿಂದ ಈ ಚಲನಚಿತ್ರದ ಉದ್ದೇಶದ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರತವಾಗಿರುವ ಹಿಂದುತ್ವನಿಷ್ಠರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
ಜಾತ್ಯತೀತ ಭಾರತದಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರಿ ಹಿಂದೂಗಳ ನರಮೇಧ ಮಾಡಿ ಲಕ್ಷಾಂತರ ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರವನ್ನು ಬಿಟ್ಟು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗುವಂತೆ ಮಾಡಿದರು. ೩೦ ವರ್ಷಗಳ ಹಿಂದೆ ನಡೆದ ಈ ಹಿಂಸಾಚಾರದ ಬಗ್ಗೆ ಎಡ ಅಥವಾ ಬಲ ಪಂಥಿಯ ವಿಚಾರಸರಣಿಯ ಯಾವುದೇ ರಾಜಕೀಯ ಪಕ್ಷವು ಧ್ವನಿ ಎತ್ತಿ ‘ಪ್ರಜಾಪ್ರಭುತ್ವದ ಹತ್ಯೆಯಾಯಿತು’, ಎಂದು ಹೇಳಲಿಲ್ಲ ಹಾಗೂ ‘ಪ್ರಶಸ್ತಿಯನ್ನು ಹಿಂತಿರುಗಿಸುವ’ ನಾಟಕವನ್ನೂ ಮಾಡಲಿಲ್ಲ. ಭಾರತವು ಜಾತ್ಯತೀತವಾಗಿದ್ದರೂ ಅದರ ಈ ಜಾತ್ಯತೀತೆಯನ್ನು ಮೂಲೆಗುಂಪು ಮಾಡಲಾಯಿತು. ಜಗತ್ತಿನ ಸ್ಮಶಾನ ಮೌನವು ಕಾಶ್ಮೀರಿ ಹಿಂದೂಗಳಿಗೆ ಇಂದು ೩ ದಶಕಗಳು ಕಳೆದರೂ ಚುಚ್ಚುತ್ತಿದೆ !
(ಸೌಜನ್ಯ : Zee Studios)
ಮುಸಲ್ಮಾನರಿಗಾಗಿ ೫೭ ದೇಶಗಳಿವೆ; ಭಾರತವು ಹಿಂದೂಗಳಿಗಾಗಿ ‘ನೋ ಗೋ ಏರಿಯಾ’ ಎಂದಿಗೂ ಆಗಬಾರದು ! – ಆರಿಫ ಅಜಾಕಿಯಾ, ಲಂಡನ
(ಟಿಪ್ಪಣಿ : ‘ನೋ ಗೋ ಏರಿಯಾ’ ಎಂದರೆ ಒಂದು ಸ್ಥಳಕ್ಕೆ ಹೋಗಲು ನಿರ್ಬಂಧಿಸಲಾದ ಕ್ಷೇತ್ರ)
ಪಾಕಿಸ್ತಾನ, ಹಾಗೆಯೇ ಇತರ ದೇಶಗಳಲ್ಲಿ ಜಿಹಾದಿಗಳಿಂದ ಹಿಂದೂಗಳು ಹಾಗೂ ಮುಸಲ್ಮಾನರೇತರರ ಮೇಲಾಗುತ್ತಿರುವ ದಾಳಿಯ ವಿರುದ್ಧ ಧ್ವನಿಯೆತ್ತುವ ಲಂಡನ್‌ನಲ್ಲಿನ ಪ್ರಸಿದ್ಧ ಮಾನವ ಹಕ್ಕುಗಳ ಕಾರ್ಯಕರ್ತರಾದ ಆರಿಫ ಅಜಾಕಿಯಾರವರು ಇತ್ತೀಚೆಗೆ ಭಾರತಕ್ಕೆ ಬಂದು ಹೋಗಿದ್ದರು. ದೆಹಲಿಯಲ್ಲಿ ‘ದ ಕಶ್ಮೀರ ಫೈಲ್ಸ್’ ಎಂಬ ಚಲನಚಿತ್ರದ ‘ಸ್ಕ್ರೀನಿಂಗ್’ನ (ಚಲನಚಿತ್ರದ ಪ್ರಚಾರಕ್ಕಾಗಿ ಅದು ಎಲ್ಲ ಕಡೆಗಳಲ್ಲಿ ಪ್ರಸಾರವಾಗುವ ಮುನ್ನ ಕೆಲವರಿಗೆ ತೋರಿಸಲಾಗುತ್ತದೆ.) ಸಮಯದಲ್ಲಿ ಅವರೂ ಕೂಡ ಉಪಸ್ಥಿತರಿದ್ದರು. ಚಲನಚಿತ್ರದ ಬಗ್ಗೆ ‘ಸನಾತನ ಪ್ರಭಾತ’ದ ಓರ್ವ ಪ್ರತಿನಿಧಿಯೊಂದಿಗೆ ಮಾತನಾಡುತ್ತಿರುವಾಗ ಅವರು, “೩೦ ವರ್ಷಗಳ ಹಿಂದೆ ಹಿಂದೂಗಳಿಗೆ ಹಿಂದೂ ದೇಶದಲ್ಲೇ ನಿರಾಶ್ರಿತರಾಗಬೇಕಾಯಿತು. ಅವರ ನರಕಯಾತನೆಯನ್ನು ಈ ಚಲನಚಿತ್ರದ ಮೂಲಕ ಬಹಿರಂಗಗೊಳಿಸಲಾಗಿದೆ. ಒಂದು ಕಹಿಯಾದ ಸತ್ಯವನ್ನು ಬಹಿರಂಗಪಡಿಸುವಾಗ ಅದಕ್ಕೆ ವಿರೋಧ ವ್ಯಕ್ತವಾಗುತ್ತದೆ ! ಅದೇ ರೀತಿಯಲ್ಲಿ ಈ ಚಲನಚಿತ್ರದ ಸಂದರ್ಭದಲ್ಲಿಯೂ ಆಗುತ್ತಿರುವುದು ಕಂಡುಬರುತ್ತಿದೆ. ಈ ಚಲನಚಿತ್ರದ ಪ್ರತಿಯೊಂದು ಅಂಶವು ಸತ್ಯ ಮೇಲೆ ಆಧಾರಿತವಾಗಿದ್ದು ಚಲನಚಿತ್ರವನ್ನು ನೋಡುವಾಗ ಕಣ್ಣುಗಳಿಂದ ನೀರು ಬರದಿರಲು ಸಾಧ್ಯವಿಲ್ಲ. ಚಲನಚಿತ್ರದ ಮಾಧ್ಯಮದಿಂದ ಜಿಹಾದಿಗಳ ಕ್ರೂರತೆಯು ಗಮನಕ್ಕೆ ಬರುತ್ತದೆ. ಹಿಂದೂಗಳು ಜಾಗೃತರಾಗದಿದ್ದಲ್ಲಿ ಕಾಶ್ಮೀರದಲ್ಲಿ ನಡೆದಂತೆ ಬಂಗಾಳ, ಕೇರಳ ಈ ರಾಜ್ಯಗಳಲ್ಲಿಯೂ ನಡೆಯುವುದು, ಎಂಬುದನ್ನು ಮರೆಯಬಾರದು.
ಭಾರತ ಸರಕಾರವು ಕಾಶ್ಮೀರಿ ಹಿಂದೂಗಳ ಹಿತಕ್ಕಾಗಿ ಈಗ ತತ್ಪರತೆಯಿಂದ ಕಾರ್ಯ ಮಾಡಬೇಕಿದೆ. ಪ್ರತ್ಯೇಕತಾವಾದಿ ನಾಯಕ ಯಾಸಿನ ಮಲಿಕನಂತಹವರನ್ನು ಇಂದಿಗೂ ‘ಸರಕಾರಿ ಅತಿಥಿ’ ಎಂದು ಗೌರವಿಸಲಾಗುತ್ತದೆ. ಅವರನ್ನು ಗಲ್ಲಿಗೇರಿಸಬೇಕು. ಹಿಂದೂಗಳ ಸಂಖ್ಯೆ ಕಡಿಮೆಯಾಗಬಾರದು, ಅದಕ್ಕಾಗಿ ಪ್ರಯತ್ನವಾಗಬೇಕು. ಇಂದು ಮುಸಲ್ಮಾನರಿಗಾಗಿ ೫೭ ದೇಶಗಳಿವೆ. ಭಾರತವು ಹಿಂದೂಗಳಿಗೆ ‘ನೋ ಗೋ ಏರಿಯಾ’ ಆಗಬಾರದು !” ಎಂದು ಹೇಳಿದರು.
೧೯೭೧ ರಲ್ಲಿ (ಇಂದಿನ) ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ನರಮೇಧದ ಬಗ್ಗೆ ಸತ್ಯ ಚಿತ್ರಣ ನೀಡುವ ಚಲನಚಿತ್ರ ಪ್ರದರ್ಶನಗೊಳ್ಳಬೇಕು ! – ಕೊಎನರಾಡ ಎಲ್ಸ್ಟ, ಬೆಲ್ಜಿಯಮ
ಹಿಂದೂ ಧರ್ಮದ ಅಧ್ಯಯನಕಾರ ಹಾಗೂ ಪ್ರಸಿದ್ಧ ವಿಚಾರವಂತ ಬೆಲ್ಜಿಯಮ್‌ನಲ್ಲಿನ ಕೊಎನರಾಡ ಎಲ್ಸ್ಟರವರನ್ನು ಈ ಚಲನಚಿತ್ರದ ಸಂದರ್ಭದಲ್ಲಿ ಸಂಪರ್ಕಿಸಿದಾಗ ಅವರು, “ಕಾಶ್ಮೀರಿ ಹಿಂದೂಗಳಿಗೆ ಪಲಾಯನ ಮಾಡುವಂತೆ ಮಾಡಿದ ಪದ್ದತಿಗೆ ‘ಪೊಗರಮ’(ಠಿogಡಿom) ಎಂದು ಹೇಳಲಾಗುತ್ತದೆ. ಇದರ ಅಡಿಯಲ್ಲಿ ಕೆಲವರ ಹತ್ಯೆ ಮಾಡಿ ಇತರರಿಗೆ ಹೆದರಿಸಿ ಅವರನ್ನು ಪಲಾಯನ ಗೈಯ್ಯುವಂತೆ ಮಾಡಲಾಗುತ್ತದೆ. ಹೀಗೆಯೇ ಕಳೆದ ಶತಮಾನದಲ್ಲಿ ಯುರೋಪನಲ್ಲಿಯೂ ನಡೆದಿತ್ತು. ಹೇಗೆ ತೊಂಭತ್ತನೇ ದಶಕದಲ್ಲಿ ಕಾಶ್ಮೀರಿ ಹಿಂದೂಗಳ ವಿರುದ್ಧ ನಡೆದ ವಂಶಸಂಹಾರವನ್ನು ಪ್ರಸಾರ ಮಾಧ್ಯಮಗಳು ಬಹಿರಂಗ ಪಡಿಸಲಿಲ್ಲ, ಅದೇ ರೀತಿಯು ಕೆಲವು ಪಾಶ್ಚಾತ್ಯ ದೇಶಗಳಲ್ಲಿಯೂ ಕಂಡುಬರುತ್ತದೆ. ಇಸ್ಲಾಮಿ ಭಯೋತ್ಪಾದಕರ ಕುಕೃತ್ಯವನ್ನು ಯಾವಾಗಲೂ ನಿರ್ಲಕ್ಷಿಸಲಾಯಿತು. ಜಗತ್ತಿನಾದ್ಯಂತ ಇರುವ ಸರಕಾರಗಳೂ ಮುಸಲ್ಮಾನರ ಓಲೈಕೆಯಲ್ಲಿ ಧನ್ಯತೆಯನ್ನು ಕಾಣುತ್ತ ಬಂದಿವೆ. ಭಾರತದಲ್ಲಿರುವ ಸರಕಾರ ಇದೇ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದೆ; ಆದರೆ ಅವರಿಗೆ ಅದರಿಂದ ಯಾವುದೇ ಲಾಭವಾಗುವುದಿಲ್ಲ.
‘ದ ಕಶ್ಮೀರ ಫೈಲ್ಸ್’ ಚಲಚಿತ್ರದ ಮೂಲಕ ಅತ್ಯಂತ ಶ್ಲಾಘನೀಯ ಪ್ರಯತ್ನ ಮಾಡಲಾಗಿದೆ. ಪ್ರತಿಯೊಬ್ಬ ಭಾರತೀಯ ಹಿಂದೂವು ಈ ಚಲನಚಿತ್ರವನ್ನು ನೋಡಬೇಕು. ದೇಶದಲ್ಲಿರುವ ಮುಸಲ್ಮಾನರೂ ಈ ಚಲನಚಿತ್ರವನ್ನು ನೋಡಿ ಜಾಗೃತರಾಗುವುದು ಆವಶ್ಯಕವಾಗಿದೆ. ಬಹುಸಂಖ್ಯಾತರಾಗಿದ್ದರೂ ಬಡ ಹಿಂದೂಗಳ ಮೇಲೆ ಅವರದೇ ದೇಶದಲ್ಲಿ ಯಾವ ರೀತಿಯಲ್ಲಿ ಅತ್ಯಾಚಾರವಾಗಿದೆ ಎಂಬುದು ಜಗತ್ತಿಗೇ ತಿಳಿಯುವುದು ಅವಶ್ಯಕವಾಗಿದೆ. ಭಾರತೀಯ ಚಲನಚಿತ್ರ ನಿರ್ಮಾಪಕರು ಈಗ ೧೯೪೭ ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ, ಅದೇ ರೀತಿ ೧೯೭೧ ರ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶದಲ್ಲಿ) ನಡೆದಂತಹ ಹಿಂದೂಗಳ ನರಮೇಧದ ಬಗ್ಗೆ ಸತ್ಯ ದರ್ಶನ ಮಾಡಿಸುವ ಚಲನಚಿತ್ರವನ್ನು ನಿರ್ಮಿಸಬೇಕು” ಎಂದು ಹೇಳಿದರು.
ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರದ ಬಗ್ಗೆ ಜಾಗತಿಕ ಸಮುದಾಯವು ಜಾಗೃತವಾಗುವುದು ಆವಶ್ಯಕವಾಗಿದೆ ! – ರಾಹತ ಆಸ್ಟಿನ್, ದಕ್ಷಿಣ ಕೊರಿಯಾ
ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂ, ಸಿಖ್ಖ ಹಾಗೂ ಕ್ರೈಸ್ತರ ಮಾನವ ಹಕ್ಕುಗಳಿಗಾಗಿ ಹೋರಾಡುವ ಹಾಗೂ ದಕ್ಷಿಣ ಕೊರಿಯಾದಲ್ಲಿ ವಾಸವಾಗಿರುವ ರಾಹತ ಆಸ್ಟಿನ್ ಇವರನ್ನು ಸಂಪರ್ಕಿಸಿದಾಗ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಹಿಂದೂಗಳ ದುಃಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅವರು, “ಕಾಶ್ಮೀರಿ ಹಿಂದೂಗಳಿಗಾಗಿ ಭಾರತ ಸರಕಾರ ಏನಾದರೂ ಮಾಡುವುದು ಆವಶ್ಯಕವಾಗಿದೆ. ನಾವು ಏನೇ ಮಾಡಿದರೂ ವಿಶೇಷ ಲಾಭವಾಗುವುದಿಲ್ಲ. ಜಿಹಾದಿ ಭಯೋತ್ಪಾದನೆಗೆ ಬಲಿಯಾಗಿದ್ದವರು ಪಾತ್ರವನ್ನು ಬದಲಾಯಿಸುತ್ತಿರುತ್ತಾರೆ. ಮೊದಲು ರಾಜಾ ದಾಹಿರ ಆಗಿದ್ದರು, ಇಂದು ಕಾಶ್ಮೀರಿ ಹಿಂದೂಗಳಾಗಿದ್ದಾರೆ. ಆದುದರಿಂದಲೇ ‘ಇಸ್ಲಾಮಿಕ ಆಡಳಿತ’ದ ನಿರ್ಮಾಣವಾಗುತ್ತಲೇ ಇತ್ತು. ಕಾಶ್ಮೀರದಲ್ಲಿಯೂ ಇದೇ ನಡೆಯುತ್ತಿರುವುದು ಕಂಡುಬರುತ್ತಿದೆ. ಹಿಂದೂಗಳು ಯಾವಾಗಲೂ ಯಾರ ಮೇಲೆಯೂ ದಾಳಿ ಮಾಡಿಲ್ಲ. ಇಂದು ಭಾರತ ಮತ್ತೊಂದು ವಿಭಜನೆಯ ಹೊಸ್ತಿಲಿನಲ್ಲಿದೆ. ಪಂಜಾಬ್‌ನಲ್ಲಿ ಖಲಿಸ್ತಾನದ ಬೇಡಿಕೆ ಮಾಡಲಾಗುತ್ತಿದೆ. ಜಗತ್ತಿನಲ್ಲಿ ಕೇವಲ ಹಿಂದೂಗಳೇ ಮಾನವಿಯತೆಯ ದೃಷ್ಟಿಕೋನವನ್ನು ಇಡುತ್ತಾರೆ. ಇಂದು ಭಾರತದಲ್ಲಿ ರಾಷ್ಟ್ರವಾದ ಜಾಗೃತವಾಗುವುದು ಆವಶ್ಯಕವಾಗಿದೆ. ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳು ತಮ್ಮದೇ ದೇಶದಲ್ಲಿ ಪೆಟ್ಟು ತಿನ್ನುತ್ತಿದ್ದಾರೆ. ‘ದ ಕಾಶ್ಮಿರ ಫೈಲ್ಸ್’ ಚಲನಚಿತ್ರವನ್ನು ನೋಡಿ ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರದ ಬಗ್ಗೆ ಜಾಗತಿಕ ಸಮುದಾಯವು ಜಾಗೃತವಾಗುವುದು ಅವಶ್ಯಕವಾಗಿದೆ” ಎಂದು ಹೇಳಿದರು.
(ಸೌಜನ್ಯ : ABP NEWS HINDI) The Kashmir Files- Vivek Agnihotri ಇವರು ವಿವಾದ ಸೃಷ್ಟಿಸುವವರ ಕಪಾಳಮೋಕ್ಷ ಮಾಡಿದರು, ಈ ವಿಡೀಯೋ ಕಣ್ಣು ತೆರೆಸಲಿದೆ |
ಭಾರತೀಯ ಹಿಂದೂಗಳೊಂದಿಗೆ ಇಲ್ಲಿನ ಮುಸಲ್ಮಾನರೂ ಈ ಚಲನಚಿತ್ರವನ್ನು ತಪ್ಪದೇ ವೀಕ್ಷಿಸುವುದು ಆವಶ್ಯಕವಾಗಿದೆ ! – ಮಾರಿಯಾ ವರ್ಥ, ಜರ್ಮನ್ ಲೇಖಕಿ, ಭಾರತ
ಜರ್ಮನ್ ಮೂಲದವರಾದ ಹಾಗೂ ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿಯೇ ಇದ್ದು ಹಿಂದೂ ಧರ್ಮದ ಆಳವಾದ ಅಧ್ಯಯನ ಮಾಡುವ ಪ್ರಸಿದ್ಧ ಲೇಖಕಿಯಾದ ಮಾರಿಯಾ ವರ್ಥರವರನ್ನು ಸಂಪರ್ಕಿಸಿದಾಗ ಅವರು ‘ನಾನು ಕೇವಲ ೮ ವರ್ಷದವಳಾಗಿದ್ದಾಗಲೇ ೧೯೫೯ ರಲ್ಲಿ ಟಿಬೇಟಿನಲ್ಲಿ ದಲಾಯಿಲಾಮ ಮತ್ತು ಅವರ ಅನುಯಾಯಿಗಳ ಸ್ಥಳಾಂತರವಾಗಿದ್ದು ನನಗೆ ನೆನಪಿದೆ. ನನಗೆ ಈ ವಿಷಯದಲ್ಲಿ ಎಲ್ಲ ಮಾಹಿತಿ ದೊರೆತಿತ್ತು; ಆದರೆ ೧೯೭೧ರಲ್ಲಿ ಆಗಿನ ಪೂರ್ವ ಪಾಕಿಸ್ತಾನದಲ್ಲಿ ಲಕ್ಷಾಂತರ ಹಿಂದೂಗಳ ಮೇಲೆ ದೌರ್ಜನ್ಯವಾದಾಗ ನಾನು ೨೧ ವರ್ಷದವಳಾಗಿದ್ದರೂ ನನಗೆ ಆ ಬಗ್ಗೆ ಏನೂ ತಿಳಿದಿರಲಿಲ್ಲ. ೧೯೯೦ ರಲ್ಲಿ ನಾನು ಭಾರತದಲ್ಲಿ ವಾಸಿಸಲು ಆರಂಭಿಸಿದೆ. ಆಗ ಕಾಶ್ಮೀರದಲ್ಲಿನ ಹಿಂದೂಗಳ ವಂಶನಾಶವೇ ನಡೆಯಿತು. ಆದರೂ ೪೦ ವರ್ಷದ ನನ್ನಂತಹ ಮಹಿಳೆಯು ಈ ವಿಷಯದಲ್ಲಿ ಸಂಪೂರ್ಣವಾಗಿ ಅಪರಿಚಿತಳಾಗಿದ್ದಳು. ಇಂದು ‘ದಿ ಕಾಶ್ಮೀರ ಫೈಲ್ಸ್’ ಎಂಬ ಚಲನಚಿತ್ರದ ಅತ್ಯಂತ ಅವಶ್ಯಕತೆಯಿದೆ. ಭಾರತೀಯ ಹಿಂದೂಗಳೊಂದಿಗೆ ಇಲ್ಲಿನ ಮುಸಲ್ಮಾನರೂ ಈ ಚಲನಚಿತ್ರವನ್ನು ತಪ್ಪದೇ ನೋಡುವುದು ಆವಶ್ಯಕವಾಗಿದೆ. ಅವರು ಅದರಿಂದ ಅಂತರ್ಮುಖರಾಗಿ ‘ಅವರ ಸರ್ವೋಚ್ಚ ಧಾರ್ಮಿಕ ಶಕ್ತಿಯು ಅವರಿಗೆ ಇತರ ಧರ್ಮದವರ ಹತ್ಯೆ ಮಾಡುವ ವರೆಗೆ ತೊಂದರೆ ಕೊಡಲು ಹೇಳಿದೆಯೇ ? ಒಂದೇ ದೈವೀಶಕ್ತಿಯು ಎಲ್ಲರನ್ನು ನಿರ್ಮಿಸಿರುವಾಗ ಇಂತಹ ಶಿಕ್ಷಣ ನೀಡಿರುವುದು ಸಾಧ್ಯವೇ ? ಮುಸಲ್ಮಾನರಿಗೆ ಪಂಥವೇ ಮೊದಲಾದರೆ ಹಿಂದೂಗಳಿಗೂ ಅವರ ಧರ್ಮವು ಮೊದಲ ಆದ್ಯತೆಯದ್ದಾಗಿದೆ !” ಎಂದು ಹೇಳಿದರು.
ನರಮೇಧವನ್ನು ‘ಪಲಾಯನ’ ಎಂದು ಹೇಳಿ ಕಾಶ್ಮೀರಿ ಹಿಂದೂಗಳ ಮೇಲಿನ ಅನ್ಯಾಯದ ಕಾವನ್ನು ಕಡಿಮೆ ಮಾಡುವ ಪ್ರಯತ್ನ ! – ಅಂಕುರ ಶರ್ಮಾ, ಅಧ್ಯಕ್ಷರು, ‘ಇಕ್ಕಜುಟ ಜಮ್ಮು’ ಸಂಘಟನೆ
ಕಾಶ್ಮೀರಿ ಹಿಂದೂಗಳ ಹಿತಕ್ಕಾಗಿ ಹೋರಾಡುವ ಜಮ್ಮುವಿನ ‘ಇಕ್ಕಜುಟ ಜಮ್ಮು’ ಎಂಬ ಹಿಂದುತ್ವನಿಷ್ಠ ಸಂಘಟನೆಯ ಅಧ್ಯಕ್ಷರಾದ ಶ್ರೀ. ಅಂಕುರ ಶರ್ಮಾರವರೊಂದಿಗೆ ಮಾತನಾಡುವಾಗ ನನಗೆ ಅವರು ಜಮ್ಮುವಿನಲ್ಲಿ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರದ ಈಗಷ್ಟೇ ನಡೆದಿರುವ ಸ್ಕ್ರೀನಿಂಗ್‌ನ ಸಮಯದಲ್ಲಿ ಸ್ವತಃ ಉಪಸ್ಥಿತರಿದ್ದರು ಎಂಬುದು ತಿಳಿಯಿತು. ಅವರು ಚಲನಚಿತ್ರದ ಸಂದರ್ಭದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವಾಗ, ‘ಚಲನಚಿತ್ರದ ನಿರ್ಮಿತಿಯು ಪ್ರಶಂಸನೀಯವಾಗಿದೆ. ಅಂದಿನ ಕೇಂದ್ರ ಸರಕಾರವು ಹಿಂದೂಗಳ ನರಮೇಧವನ್ನು ಹೇಗೆ ನಿರ್ಲಕ್ಷಿಸಿದೆ, ಅಷ್ಟೇ ಅಲ್ಲದೇ ಅಕ್ಷರಶಃ ಮೂಕದರ್ಶಕನಂತೆ ಇತ್ತು, ಎಂಬುದರ ವಾಸ್ತವಿಕ ವರ್ಣನೆಯನ್ನು ಈ ಚಲನಚಿತ್ರದಲ್ಲಿ ಮಾಡಲಾಗಿದೆ. ಈ ನರಮೇಧವನ್ನು ಪಲಾಯನವೆಂದು ಹೇಳಿ ಕಾಶ್ಮೀರಿ ಹಿಂದೂಗಳ ಮೇಲಾದ ಅನ್ಯಾಯದ ಬಿಸಿಯನ್ನು ಕಡಿಮೆ ಮಾಡಿರುವ ಹಾಗೆಯೇ ಹಿಂದೂಗಳ ಮೇಲಿನ ಅತ್ಯಾಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಚಲನಚಿತ್ರದಲ್ಲಿ ಮಾಡಲಾಗಿದೆ. ಈ ಚಲನಚಿತ್ರದಿಂದ ‘ಜಿಹಾದಿ’ನ ಷಡ್ಯಂತ್ರವು ಯಾವ ರೀತಿಯಲ್ಲಿ ರಾಜಕೀಯ ಸ್ತರದಲ್ಲಿ ಹಾಗೂ ಪ್ರಸಾರ ಮಾಧ್ಯಮಗಳ ಮೂಲಕ ಸಕ್ರಿಯವಾಗಿದೆ, ಎಂಬುದು ತಿಳಿಯುತ್ತದೆ. ‘ಮುಸ್ಲಿಂ ಬ್ರದರಹುಡ’ನ ಹೆಸರಿನಲ್ಲಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳು ಯಾವ ರೀತಿಯಲ್ಲಿ ಜರ್ಜರಿತವಾಗಿವೆ ಎಂಬುದು ಈ ಚಲನಚಿತ್ರವನ್ನು ನೋಡಿದರೆ ಅನುಭವಕ್ಕೆ ಬರಬಹುದು. ಎಲ್ಲಿಯವರೆಗೆ ಹಿಮಾಲಯದ ಇಸ್ಲಾಮೀಕರಣವಾಗುವುದಿಲ್ಲ ಅಲ್ಲಿಯವರೆಗೆ ಸನಾತನ ಧರ್ಮದ ಇಸ್ಲಾಮೀಕರಣವಾಗಲು ಸಾಧ್ಯವಿಲ್ಲ. ಹಿಮಾಲಯವು ಸನಾತನ ಹಿಂದೂ ಧರ್ಮದ ಉಗಮಸ್ಥಾನವಾಗಿದೆ. ಆದುದರಿಂದ ಮೊದಲು ಕಾಶ್ಮೀರದ ಮೇಲೆ ಗಮನವನ್ನು ಕೇಂದ್ರೀಕರಿಸಲಾಯಿತು. ಸರಕಾರಿ ಮಟ್ಟದಲ್ಲಿ ಕಾಶ್ಮೀರದ ಇಸ್ಲಾಮೀಕರಣವು ನಡೆಯುತ್ತಲೇ ಇದೆ. ಕಾಶ್ಮೀರದ ನಂತರ ಏನಾದರೂ ಜಮ್ಮು ಕೂಡ ಹಿಂದೂಗಳ ಕೈತಪ್ಪಿದರೆ ಮುಂಬರುವ ಕಾಲ ಬಹಳ ಭಯಾನಕವಾಗಿರುತ್ತದೆ. ಭಾರತೀಯ ರಾಜ್ಯ ವ್ಯವಸ್ಥೆಯು ಸನಾತನ ವೈದಿಕ ಹಿಂದೂ ಧರ್ಮದ ಸಭ್ಯತೆಯ ವಿರುದ್ಧವಿದೆ’ ಎಂದು ಹೇಳಿದರು.