ಭಾರತದಲ್ಲಿ ಯುದ್ಧ ಸಂಸ್ಕೃತಿಯ ಅಭಾವವಿದೆಯೇ ?

‘ಯುದ್ಧದಲ್ಲಿ ವಿಜಯದ ಬಳಿಕ ಅಧಿಕಾರದ ಹಸ್ತಾಂತರವಾಗುತ್ತದೆ ಅಥವಾ ಅದು ತಡೆಯಲ್ಪಡುತ್ತದೆ. ಯುದ್ಧದ ವಿಜಯವು ರಾಷ್ಟ್ರದ ವಿಜಯವಾಗಿರುತ್ತದೆ. ಸೈನಿಕರು ಪ್ರತ್ಯಕ್ಷ ಯುದ್ಧವನ್ನು ಮಾಡುತ್ತಿದ್ದರೂ, ಯುದ್ಧದ ವಿಜಯದಲ್ಲಿ ಎಲ್ಲ ಸಮಾಜ ಬಾಂಧವರ ಸಮಪಾಲಿರುತ್ತದೆ. ಎಲ್ಲಿ ಸಮಾಜ ವಿಭಜಿಸಲ್ಪಟ್ಟಿರುತ್ತದೆಯೋ, ಅಲ್ಲಿ ಇಂತಹ ಸ್ಥಿತಿ ಇರುವುದಿಲ್ಲ. ಪರಕೀಯರ ಕೈಯಲ್ಲಿ ಅಧಿಕಾರ ಹೋಗಬಾರದೆಂದು ಪ್ರಯತ್ನಗಳ ಪರಾಕಾಷ್ಠೆಯನ್ನು ಮಾಡುವುದೆಂದರೆ ಯುದ್ಧ ಸಂಸ್ಕೃತಿಯನ್ನು ಜೀವಂತವಿಡುವುದು. ಒಂದು ವೇಳೆ ಯುದ್ಧದ ಕೊನೆಯಲ್ಲಿ ಸೋಲಿನಿಂದಾಗಿ ಅಧಿಕಾರ ಹಸ್ತಾಂತರವಾದರೆ ಮತ್ತು ಪರಕೀಯರ ಕೈಯಲ್ಲಿ ಅಧಿಕಾರ ಹೋದರೆ, ಎಷ್ಟು ರೋಷದಿಂದ ಸಮಾಜ ಮತ್ತು ರಾಷ್ಟ್ರ ಯುದ್ಧದಲ್ಲಿ ಪರಕೀಯರನ್ನು ಪರಾಭವಗೊಳಿಸಿ ಸ್ವಕೀಯರ ಅಧಿಕಾರವನ್ನು ಮರಳಿ ಸ್ಥಾಪಿಸಲು ಪ್ರಯತ್ನಿಸುತ್ತದೆಯೋ, ಅದೇ ರೀತಿ ವಿಜಯವನ್ನು ಪಡೆಯುತ್ತದೆಯೋ, ಅಷ್ಟು ಪ್ರಮಾಣದಲ್ಲಿ ಯುದ್ಧ ಸಂಸ್ಕೃತಿ ಸುದೃಢವಾಗಿದೆ ಎಂಬ ನಿಷ್ಕರ್ಷವನ್ನು ತೆಗೆಯಬಹುದು.

ಲೇಖಕರು : (ನಿವೃತ್ತ) ಲೆಫ್ಟಿನೆಂಟ ಜನರಲ್ ಅಶೋಕ ಜೋಶಿ ಮತ್ತು (ನಿವೃತ್ತ) ಎರ್ ಕಮಾಂಡರ ಅವಿನಾಶ ವಳವಡೆ

೧. ರಾಷ್ಟ್ರಹಿತಕ್ಕಾಗಿ ಯುದ್ಧ ಮಾಡುವುದು, ಎಂಬ ವಿಶ್ವಾಸವೆಂದರೆ ಸಮರನಿಷ್ಠೆ !

ವಿಜಯದ ಹಿಂದೆ ಯುದ್ಧ ಕೌಶಲ್ಯವಿರುತ್ತದೆ. ಈ ಕೌಶಲ್ಯವು ಪ್ರಮುಖವಾಗಿ ಸೇನಾಪತಿ ಮತ್ತು ಸೇನೆಯದ್ದಾಗಿರುತ್ತದೆ. ಯುದ್ಧದ ಸಿದ್ಧತೆಯು ಸೇನೆ ಮತ್ತು ರಾಷ್ಟ್ರ ಹೀಗೆ ಎರಡರದ್ದೂ ಆಗಿರುತ್ತದೆ. ಯುದ್ಧಕ್ಕೆ ಸಿದ್ಧರಾಗುವುದರಲ್ಲಿ ಸೈನ್ಯ ಮತ್ತು ರಾಷ್ಟ್ರ ಇವೆರಡರ ಸಮಪಾಲಿರುತ್ತದೆ. ಸೈನ್ಯಕ್ಕೆ ಯೋಗ್ಯ ಮನುಷ್ಯಬಲ ಮತ್ತು ಶಸ್ತ್ರಬಲ ದೊರಕಲು ಸಂಪೂರ್ಣ ರಾಷ್ಟ್ರದ ಬೆಂಬಲ ಬೇಕಾಗುತ್ತದೆ. ಅದಲ್ಲದೇ ಯುದ್ಧನಿಷ್ಠೆಯೂ ಇರಬೇಕಾಗುತ್ತದೆ. ರಾಷ್ಟ್ರಹಿತಕ್ಕಾಗಿ ಯುದ್ಧ ಮಾಡುವುದು ಯೋಗ್ಯ ಮತ್ತು ಆವಶ್ಯಕವಾಗಿದೆ ಎಂಬ ವಿಶ್ವಾಸವಿರುವುದೆಂದರೆ ಯುದ್ಧನಿಷ್ಠೆಯಾಗಿದೆ. ಸಮರ ಕೌಶಲ್ಯದ ಸಿದ್ಧತೆ ಮತ್ತು ನಿಷ್ಠೆಯು ಮೂಲ ರಾಷ್ಟ್ರದ ಸಂಸ್ಕೃತಿಯ ಆಧಾರದಿಂದ ಪೋಷಿಸಲ್ಪಡುತ್ತದೆ. ಎಲ್ಲಿಯವರೆಗೆ ಅದರ ಬೇರುಗಳು ಸಡಿಲಗೊಂಡು ಹೊರಗೆ ಬರುವು ದಿಲ್ಲವೋ, ಅಲ್ಲಿಯವರೆಗೆ ಯುದ್ಧ ಸಂಸ್ಕೃತಿಯು ಭದ್ರವಾಗಿರುತ್ತದೆ.

೨. ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಯ್ಯುವುದು ಯುದ್ಧ ಸಂಸ್ಕೃತಿಯಾಗಿರಲಿಲ್ಲ !

ಸ್ವಾತಂತ್ರ್ಯಪ್ರಾಪ್ತವಾದ ಬಳಿಕ ಭಾರತದ ಯುದ್ಧ ಕ್ಷೇತ್ರದಲ್ಲಿನ ಕಾರ್ಯವನ್ನು ಪರಿಶೀಲಿಸ ಬೇಕಾಗಿದ್ದರೆ ರಾಜಕೀಯ ಮುಖಂಡರು ಯಾವ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರೋ ಅದರ ಮತ್ತು  ಸೈನ್ಯದಳದ ಕಾರ್ಯದ ಬೇರೆ ಬೇರೆ ವರದಿಗಳನ್ನು ತೆಗೆದುಕೊಳ್ಳಬೇಕಾಗುವುದು. ಕಾಶ್ಮೀರದಲ್ಲಿನ ಸೈನ್ಯದ ಕೆಲಸ ಒಳ್ಳೆಯದೇ ಆಗಿತ್ತು, ಆದರೆ ವಿಜಯವನ್ನು ಪಡೆದು, ಮುಂದುವರಿದಿದ್ದ ಸೈನ್ಯವನ್ನು (ಆಗಿನ) ಪ್ರಧಾನಮಂತ್ರಿಗಳು ನಿಲ್ಲಿಸಿದರು. ಇಲ್ಲದಿದ್ದರೆ ಭಾರತೀಯ ಸೈನ್ಯ ಮುಜಫ್ಫರಾಬಾದವರೆಗೆ ಹೋಗಬಹುದಿತ್ತು ಎಂದು ಲೆಫ್ಟ್ಟೆನೆಂಟ್ ಜನರಲ್ ಶಂಕರರಾವ ಪಾಂಡುರಂಗ ಪಾಟೀಲ-ಥೋರಾತ ಇವರು ಅಂದಾಜು ವ್ಯಕ್ತಪಡಿಸಿದ್ದರು. ಹಾಗೆಯೇ ಕಾಶ್ಮೀರದ ವಿಷಯವನ್ನು ವಿಶ್ವ ಸಂಸ್ಥೆಗೆ ತೆಗೆದುಕೊಂಡು ಹೋಗುವುದು ವಿವಾದಾಸ್ಪದವಾಗಿದೆ ಮತ್ತು ಯುದ್ಧ ಸಂಸ್ಕೃತಿಯ ತುಣುಕು ತೋರಿಸುವಂತಹದ್ದಂತೂ ಅಲ್ಲವೇ ಅಲ್ಲ. ಇದರೊಂದಿಗೆ ಕಾಶ್ಮೀರದಲ್ಲಿ ಯುದ್ಧಗಳು ನಡೆಯುತ್ತಲೇ ಇದ್ದವು.

೩. ಆಗಿನ ರಾಜಕೀಯ ನೇತೃತ್ವದ ಅಭಾವದಿಂದ ಭಾರತಕ್ಕೆ ಆಗಿರುವ ಹಾನಿ !

೧೯೬೫, ೧೯೭೧ ಮತ್ತು ೧೯೯೯ ನೇ ಇಸವಿಯಲ್ಲಿ ಪ್ರತಿಯೊಂದು ಬಾರಿಯೂ ಪಾಕಿಸ್ತಾನ ನಮ್ಮ ಮೇಲೆ ಆಕ್ರಮಣ ಮಾಡಿತು ಮತ್ತು ಅದಕ್ಕೆ ಭಾರತ ನೀಡಿದ ಉತ್ತರ ಯೋಗ್ಯವಾಗಿತ್ತು. ಸಿಯಾಚಿನ್‌ನಲ್ಲಿ ಪಾಕಿಸ್ತಾನ ಕಪಟತನದಿಂದ ತನ್ನ ಹಕ್ಕನ್ನು ಸ್ಥಾಪಿಸಲು ನೋಡುತ್ತಿತ್ತು, ಇದರ ಅರಿವಾದ ಬಳಿಕ ಸರಿಯಾದ ಸಮಯದಲ್ಲಿ ಭಾರತವು ಸರಿಯಾದ ಹೆಜ್ಜೆಯನ್ನಿಟ್ಟಿತು.

೧೯೬೨ ನೇ ಇಸವಿಯಲ್ಲಿ ಚೀನಾ ಭಾರತ ವನ್ನು ಸೋಲಿಸಿತು. ಆಗ ಸೈನ್ಯದ ಮತ್ತು  ರಾಜಕೀಯ ನೇತಾರರ ಕಾರ್ಯ ಅಷ್ಟೊಂದು ಸಮಾಧಾನಕರವಾಗಿರಲಿಲ್ಲ. ೧೯೭೧ ನೇ ಇಸವಿಯಲ್ಲಿ ಭಾರತೀಯ ಸೇನೆಯು ತುಂಬಾ ಅತ್ಯುತ್ತಮ ಕಾರ್ಯವನ್ನು ಮಾಡಿತು. ಆ ವೇಳೆ ಗಂಭೀರ ರಾಜಕೀಯ ಮುಖಂಡರು ಅಮೇರಿಕದ ಬೆದರಿಕೆಗಳಿಗೆ ಬಗ್ಗಲಿಲ್ಲ ಮತ್ತು ಭಾರತೀಯ ಸೈನ್ಯದಳಕ್ಕೆ ಅವರ ಕ್ಷೇತ್ರದಲ್ಲಿ ಆವಶ್ಯಕವಿರುವ ಸ್ವಾತಂತ್ರ್ಯವನ್ನು ನೀಡಿದರು. ಅರ್ಥಾತ್ ೨ ಸಾವಿರ ವರ್ಷಗಳ ಇತಿಹಾಸದಲ್ಲಿ ಒಂದು ಹೊಸ ಪುಟವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾ ಯಿತು. ಕೌಶಲ್ಯದಲ್ಲಿ ಪಾರಂಗತರಾಗಿದ್ದ ಲೆಫ್ಟಿನೆಂಟ ಜನರಲ್ ಸಗತ ಸಿಂಗರು ‘ಆಪರೇಶನಲ್ ಆರ್ಟ್ ಭಾರತ ದಲ್ಲಿದೆ ಎಂಬುದನ್ನು ತೋರಿಸಿಕೊಟ್ಟರು; ಆದರೆ ಸಿಮ್ಲಾ ಒಪ್ಪಂದದ ಸಮಯದಲ್ಲಿ ಆಗಿನ ಭಾರತೀಯ ಪ್ರಧಾನಮಂತ್ರಿಗಳು  ಪಾಕಿಸ್ತಾನ ಪ್ರಧಾನಮಂತ್ರಿಗಳ ಆಶ್ವಾಸನೆಯನ್ನು ನಂಬಿ, ೯೦ ಸಾವಿರ ಪಾಕಿಸ್ತಾನಿ ಯುದ್ಧಕೈದಿ ಸೈನಿಕ ರನ್ನು ಯಾವುದೇ ಷರತ್ತನ್ನು ವಿಧಿಸದೇ ಮುಕ್ತಗೊಳಿಸಿದರು. ಈ ರೀತಿ ಯುದ್ಧದಲ್ಲಿ ಜಯಗಳಿಸಿ ಜಮೆ ಮಾಡಿದ ‘ಬಂಡವಾಳ ಕ್ಷಣದಲ್ಲಿ ಇಲ್ಲವಾಯಿತು. ‘ಆ ಕ್ಷಣ ಕ್ಷಣದಲ್ಲಿ ಹೋಯಿತು, ಎನ್ನುವ ಕೊರಗು ಮಾತ್ರ ಹಿಂದೆ ಉಳಿಯಿತು. ಪಾಕಿಸ್ತಾನದ ನಾಡಿಗಳು ಭಾರತದ ಕೈಯಲ್ಲಿದ್ದವು, ಅವುಗಳ ಯೋಗ್ಯ ಉಪಯೋಗವನ್ನು ಮಾಡಿಕೊಳ್ಳಲಿಲ್ಲ. ಶ್ರೀಲಂಕಾಗೆ ಅವರ ಸಹಾಯಕ್ಕೆ ಹೋಗುವ ರಾಜಕೀಯ ನಿರ್ಣಯವನ್ನು ಪೂರ್ಣ ವಿಚಾರ ವಿನಿಮಯದೊಂದಿಗೆ ತೆಗೆದುಕೊಳ್ಳಲಾಗಿತ್ತು ಎಂದೆನಿಸುವುದಿಲ್ಲ. ಇಂತಹ ನಿರ್ಣಯಗಳು ವಾದಾತೀತ ಇರಬೇಕಾಗುತ್ತದೆ; ಏಕೆಂದರೆ ಯುದ್ಧದ ಪರಿಣಾಮವನ್ನು ಕೇವಲ ಸರಕಾರ ಮಾತ್ರವಲ್ಲ ಸಂಪೂರ್ಣ ರಾಷ್ಟ್ರಕ್ಕೆ ಭೋಗಿಸ ಬೇಕಾಗುತ್ತದೆ, ರಾಜಕೀಯ ಮುಖಂಡರ ಈ ನಿರ್ಣಯ ಭಾರತಕ್ಕೆ ಬಹಳ ದುಬಾರಿಯಾಯಿತು.

೪. ಸಿಕಂದರನು ಭಾರತದ ಮೇಲೆ ಆಕ್ರಮಣ ಮಾಡಿ ಪೋರಸನ ಮೇಲೆ ಜಯಗಳಿಸುವುದು ಮತ್ತು ಭಾರತೀಯ ಮನೋವೃತ್ತಿ

ಸಿಕಂದರನು ಕ್ರಿ.ಪೂ. ೩೨೬ ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದನು.  ಯಾವ ಯುದ್ಧದಲ್ಲಿ ಅವನು ಪೋರಸನನ್ನು ಸೋಲಿಸಿದನೋ, ಆ ಯುದ್ಧಕ್ಕೆ ‘ಹಿಡಾಸ್ಪಿಸ್ ಎಂದು ಕರೆಯುತ್ತಾರೆ. ‘ಹಿಡಾಸ್ಪಿಸ್ ಇದು ಒಂದು ನದಿಯ ಹೆಸರಾಗಿದೆ. ಭಾರತೀಯರು ಇದೇ ನದಿಗೆ ಆಗಿನ ಕಾಲದಲ್ಲಿ ‘ವಿತಸ್ತಾ ಎನ್ನುತ್ತಿದ್ದರು ಮತ್ತು ಈಗ ಅದಕ್ಕೆ ‘ಝೇಲಮ್ ಎನ್ನುತ್ತಾರೆ. ತುಂಬಾ ಆವೇಶದ ಘನಘೋರ ಯುದ್ಧವಾಯಿತು. ಸಿಕಂದರನು ಪಳಗಿದ ಸೇನಾನಿಯಾಗಿದ್ದನು. ಅವನ ಎದುರು ಪೊರಸ್ ಕಳೆಗುಂದಿದನು (ನಿಸ್ತೇಜನಾದನು). ಅವನು ಸಿಕಂದರನ  ಮೋಸದ ಬಲೆಗೆ ಬಿದ್ದನು. ತುಂಬಿ ಹರಿಯುತ್ತಿದ್ದ ವಿತಸ್ತಾ (ಝೇಲಮ್) ನದಿಯನ್ನು ಕಾಲ್ದಳದ ಸೈನಿಕರು ತೆಪ್ಪಗಳ ಸಹಾಯದಿಂದ ದಾಟಿದರು. ಇದಕ್ಕೆ ಭಾರತೀಯ ಅಶ್ವದಳವು ಏನೂ ಮಾಡಲಿಲ್ಲ ಎಂಬ ವದಂತಿ ಯಿದೆ. ‘ಇದು ಕಾಲ್ದಳದ  ಕಾರ್ಯವಾಗಿದೆ. ನಮ್ಮದಲ್ಲ, ಎನ್ನುವ ಭಾರತೀಯ ಅಶ್ವದಳದ ಮನೋವೃತ್ತಿ ಸಿಕಂದರನ ಸೈನ್ಯಕ್ಕೆ ಲಾಭ ಮಾಡಿ ಕೊಟ್ಟಿತು ಪೋರಸನ ಸೈನ್ಯ ಎಲ್ಲಿ ವಿಭಜಿಸ ಲ್ಪಟ್ಟಿತ್ತೊ, ಅಲ್ಲಿ ಇನ್ನುಳಿದ ಸಮಾಜವೂ ವಿಭಜಿಸಲ್ಪಟ್ಟಿರುವುದು ಸಹಜವಾಗಿದೆ.

ಕೆಲವು ಸಮಯದ ಬಳಿಕ ನೀರಿನ ಹರಿವು ಕಡಿಮೆಯಾದ ಬಳಿಕ ಸಿಕಂದರನ ಅಶ್ವದಳವು ಕಾಲ್ದಳ ಸೈನಿಕರಲ್ಲಿ ಸೇರಿಕೊಂಡಿತು. ಸಿಕಂದರನ ವ್ಯೂಹರಚನೆಯು ಪೂರ್ಣವಾಯಿತು. ಅವನು ಆ ವ್ಯೂಹವನ್ನು ಚಕ್ರದಂತೆ ತಿರುಗಿಸಿದನು ಮತ್ತು ಬಳಿಕ ಸಿಕಂದರನ ಅಶ್ವದಳವು ಎಡಬಲದ ಪಕ್ಕದಿಂದ ಎದುರಿಗಿದ್ದ ಪೋರಸನ ಮೇಲೆ ಆಕ್ರಮಣ ಮಾಡಿತು. ಒಂದು ಕಡೆ ವಿತಸ್ತಾ ನದಿ ಹರಿಯುತ್ತಿತ್ತು. ಭಾರತೀಯ ಸೇನೆಯ ಕೆಲವು ಆನೆಗಳು ಚೆಲ್ಲಾಪಿಲ್ಲಿ ಆದವು. ಈ ಘೋರ ಯುದ್ಧದಲ್ಲಿ ೧ ಸಾವಿರ ಗ್ರೀಕರು ಮತ್ತು ಅವರ ೧೨ ಪಟ್ಟುಗಳಷ್ಟು (೧೨ ಸಾವಿರ) ಪೋರಸನ ಸೈನಿಕರು ಕಡಿಮೆಯಾದರು, ಅಲ್ಲದೇ ಸಿಕಂದರನು ೯ ಸಾವಿರ ಸೈನಿಕರನ್ನು ಬಂಧಿಸಿ ತನ್ನ ಜೊತೆಗೆ ಕರೆದುಕೊಂಡು ಹೋದನು; ಆದರೆ ನಮ್ಮ ಪಾರಂಪಾರಿಕ ಸ್ಮೃತಿಯಲ್ಲಿ ವರ್ಣನೆಯಾವುದಿ ರುತ್ತದೆ ? ಅದೆಂದರೆ ಪೋರಸನು ಸಿಕಂದರನಿಗೆ ‘ನಾನು ರಾಜನಾಗಿದ್ದೇನೆ. ನನ್ನನ್ನು ರಾಜನಂತೆ ನಡೆಸಿಕೋ ಎಂದು ಎದೆಯುಬ್ಬಿಸಿ ಗಟ್ಟಿಯಾಗಿ ಹೇಳಿದ್ದಲ, ಅದು. ಭಾರತದ ೨೧ ಪಟ್ಟುಗಳಷ್ಟು ಹಾನಿಯಾಯಿತು. ಅದರ ದುಃಖವಂತೂ ಇಲ್ಲವೇ ಇಲ್ಲ. ಭಾರತ ಪರಾಭವಗೊಂಡಿತು. ಇದು ಕೂಡ ಈಗ ನಮ್ಮ ನೆನಪಿನಿಂದ ಅಳಿಸಿ ಹೋಗಿದೆ. ಗ್ರೀಕ ಮತ್ತು ಭಾರತೀಯ ಸಂಸ್ಕೃತಿಯ ಸಂಗಮ ಹೇಗಾಯಿತು ? ಇದರ ರಸಭರಿತ ವರ್ಣನೆ ಮಾತ್ರ ಇರುತ್ತದೆ. ಅದಕ್ಕೇನು ಪ್ರೀತಿ ಸಂಗಮ ಎಂದು ಹೇಳಬೇಕೇ ? ಇತಿಹಾಸದಿಂದ ‘ಇದು ಹೀಗೆ ಘಟಿಸಿತು ಎನ್ನುವುದು ಎಲ್ಲರಿಗೂ ತಿಳಿಯಬೇಕಾಗಿದೆ.

೫. ಯುದ್ಧದ ವಿಷಯದಲ್ಲಿ ಅರ್ಥಶಾಸ್ತ್ರದ ಕಲಿಕೆ ಮತ್ತು ಪಾತ್ರ

ಸಿಕಂದರನು ವಿತಸ್ತಾ (ಝೇಲಮ್) ನದಿಯ ಮೇಲಿನ ಯುದ್ಧದಲ್ಲಿ ಭಾರತೀಯರ ಮೇಲೆ ವಿಜಯ ಸಾಧಿಸಿದನು. ಆ ಕಾಲದಲ್ಲಿ ತಕ್ಷಶಿಲೆಯಲ್ಲಿ ಚಿಂತನ-ಮಂಥನ ಮಾಡಿ ವಿಜಿಗೀಷೂ, ಅಂದರೆ ವಿಜಯದ ಇಚ್ಛೆಯನ್ನು ಮಾಡುವ ರಾಜನು ರಾಜ್ಯವನ್ನು ಹೇಗೆ ಸ್ಥಾಪಿಸಬೇಕು ಮತ್ತು ಅದನ್ನು ಸಮುದ್ರದಿಂದ ಹಿಮಾಲಯದ ವರೆಗೆ ಹೇಗೆ ಬೆಳೆಸಬೇಕು, ಈ ವಿಷಯವನ್ನು ಕೇಂದ್ರಸ್ಥಾನದಲ್ಲಿ ಇಟ್ಟುಕೊಂಡು ಅರ್ಥಶಾಸ್ತ್ರದ ನಿರ್ಮಾಣವನ್ನು ಮಾಡಿದರು. ಅರ್ಥಾತ್ ಅದರಲ್ಲಿ ವಿದೇಶನೀತಿ ಮತ್ತು ಯುದ್ಧಶಾಸ್ತ್ರದ ಸಮನ್ವಯ ಇರುತ್ತಿತ್ತು. ಪ್ರತ್ಯಕ್ಷ ಯುದ್ಧದ ಸಮಯದಲ್ಲಿ ರಾಜನು ತನ್ನ ಆನೆ ಅಥವಾ ಅಶ್ವದ ಮೇಲೆ ತನ್ನಂತೆ ಕಾಣಿಸುವ ಒಬ್ಬ ಮನುಷ್ಯನನ್ನು ಕೂಡಿಸಬೇಕು ಹಾಗೂ ಅವನನ್ನು ಎಲ್ಲಕ್ಕಿಂತ ಮುಂದೆ ಇಡಬೇಕು ಮತ್ತು ಸ್ವತಃ ಹಿಂದಿದ್ದು ರಣಾಂಗಣವನ್ನು ಸರಿಯಾಗಿ ನಿರೀಕ್ಷಣೆ ಮಾಡಿ ಯೋಗ್ಯ ಆದೇಶವನ್ನು ನೀಡಬೇಕು ಎಂದು ಅರ್ಥಶಾಸ್ತ್ರ ಹೇಳುತ್ತದೆ. ಚತುರಂಗ ಸೇನೆಯ ಎಲ್ಲ ಅಂಗಗಳನ್ನು ಹೇಗೆ ಮತ್ತು ಎಲ್ಲಿ ಉಪಯೋಗ ಮಾಡಬೇಕು ಎಂಬುದನ್ನು ಅರ್ಥಶಾಸ್ತ್ರ ಹೇಳುತ್ತದೆ. ನಮ್ಮ ಸಂರಕ್ಷಣ ಸಿದ್ಧತೆಯ ಜೊತೆಗೆ ಪರರಾಷ್ಟ್ರದ ಮೇಲೆ ಆಕ್ರಮಣ ಮಾಡುವ ಶಕ್ತಿಯೂ ಇರಲೇ ಬೇಕು. ‘ಮಿತ್ರರಾಷ್ಟ್ರ ಈ ಆವಶ್ಯಕತೆಯನ್ನು ದೂರಗೊಳಿಸಲು ಸಾಧ್ಯವಿಲ್ಲ, ಇದನ್ನು ಅರ್ಥಶಾಸ್ತ್ರ ಕಲಿಸುತ್ತದೆ. ಗ್ರಂಥಗಳ ಉತ್ತಮ ಪಾರಂಪಾರಿಕ ಸ್ಮೃತಿಯಿರುವ ದೇಶದಲ್ಲಿ ಯುದ್ಧದ ಪರಾಭವಗಳ ಮತ್ತು ಅರ್ಥಶಾಸ್ತ್ರ ಮರೆತು ಹೋಗುತ್ತದೆ, ಇದು ಯಾವುದರ ಸಂಕೇತವಾಗಿದೆ ? “ಯುದ್ಧವನ್ನು ತಪ್ಪ್ಪಿಸಬೇಕು, ಜಯಶಾಲಿಗಳಾದ ಪರಕೀಯರ ಗುಲಾಮಗಿರಿ ನಡೆಯಬಹುದು ಅಥವಾ ಅವರ ಮಾಂಡಲೀಕ ರಾಗೋಣ; ಆದರೆ ಯುದ್ಧ ಮಾಡುವುದು ಬೇಡ; ಏಕೆಂದರೆ ಸೋಲು ನಿಶ್ಚಿತ, ಇಂತಹ ಮಾನಸಿಕತೆ ಕಾಲಾಂತರದಲ್ಲಿ ಭಾರತದಲ್ಲಿ ನಿರ್ಮಾಣ ಆಗಿಲ್ಲವಲ್ಲ ?

೬. ಹಿಡಾಸ್ಪಿಸ್‌ನ ಯುದ್ಧ ಮತ್ತು ಪಾಣಿಪತದ ಮೂರನೇ ಯುದ್ಧ ಇವುಗಳಲ್ಲಿನ  ಸಾಮ್ಯತೆ

ಹಿಡಾಸ್ಪಿಸ್‌ನ ಯುದ್ಧ ಮತ್ತು ಪಾನಿಪತ್‌ನ ಮೂರನೇ ಯುದ್ಧ ಇವುಗಳಲ್ಲಿ ಸುಮಾರು ೨ ಸಾವಿರದ ೧೦೦ ವರ್ಷಗಳ ಅಂತರವಿದೆ; ಆದರೆ ಪರಕೀಯ ಯಶಸ್ವಿ ಸೇನಾಪತಿಗಳು ಅವಲಂಬಿಸಿದ ಯುದ್ಧನೀತಿಯಲ್ಲಿರುವ ಸಾಮ್ಯತೆ ಎದ್ದು ಕಾಣಿಸುವಂತಹದ್ದಾಗಿದೆ. ಮೋಸದಿಂದ ಗೊಂದಲವನ್ನೆಬ್ಬಿಸಿ ಜಾಣತನದಿಂದ ನದಿಯಲ್ಲಿ ಇಳಿದು ಸೇನಾಪತಿಯ ಮತ್ತು ರಾಜನ ಅಂದಾಜು ತೆಗೆದು ಕೊಂಡು ಅವರ ಮೇಲೆ ಆಕ್ರಮಣಗಳನ್ನು ಮಾಡುವುದು ಮತ್ತು ಉತ್ತಮ ಯುದ್ಧನೀತಿಯನ್ನು ಉಪಯೋಗಿಸಿ ಭಾರತೀಯ ರಾಜರ ಮೇಲೆ ವಿಜಯ ಸಾಧಿಸುವುದು, ಈ ಸಾಮ್ಯತೆಯು ಮನಸ್ಸಿಗೆ ನೋವನ್ನುಂಟು ಮಾಡುತ್ತದೆ. ಮರಾಠಿಗರ ಸೇನಾಪತಿ ಆನೆಯ ಮೇಲಿನ ಅಂಬಾರಿಯಲ್ಲಿ ಮುಂಚೂಣಿಯಲ್ಲಿ ಮತ್ತು ದುರಾಣರ ಸೇನಾಪತಿ ಅಹಮದಶಾಹ ಅಬ್ದಾಲಿ ಮಾತ್ರ ಸೈನ್ಯದ ಹಿಂಭಾಗದಲ್ಲಿರುತ್ತಿದ್ದನು. ಅಲ್ಲಿಂದ ಅವನು ನಿರೀಕ್ಷಣೆ ಮಾಡಿ, ಆವಶ್ಯಕತೆಯನುಸಾರ ವ್ಯೂಹರಚನೆಯನ್ನು ಬದಲಾಯಿಸುತ್ತಿದ್ದನು. ಅವನು ಅರ್ಥಶಾಸ್ತ್ರದ ಅಧ್ಯಯನ ಮಾಡಿದವನಂತೆ ಕಾಯ್ದಿರಿಸಿದ ಸೈನ್ಯ ದಳಗಳನ್ನು ಆವಶ್ಯಕ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಕಳುಹಿಸುತ್ತಿದ್ದನು. ಸೇನಾಪತಿ ಸ್ವತಃ ತಾನೇ ಯುದ್ಧದಲ್ಲಿ ಇಳಿದಾಗ ಅವನ ಕೆಲಸವನ್ನು ಯಾರು ಮಾಡುವವರು ? ‘ಸಿಕಂದರ ಮತ್ತು ‘ಅಬ್ದಾಲಿ ಇವರು ಪ್ರಜ್ಞಾವಂತ ಸೇನಾಪತಿಗಳಾಗಿದ್ದರು ! ಅವರಿಗೆ ಯಾವುದೇ ಶಾಸ್ತ್ರದ ಆವಶ್ಯಕತೆಯಿರಲಿಲ್ಲ; ಆದರೆ ಇತರರಿಗೆ ಅದರ ಅವಶ್ಯಕತೆ ಇರುತ್ತದೆ.

೭. ಹೊಸ ಶಸ್ತ್ರಾಸ್ತ್ರಗಳ ಅಭಾವದಿಂದ ಭಾರತ ಯುದ್ಧದಲ್ಲಿಗಳಿಸಿದ ವಿಜಯಗಳ ಸಂಖ್ಯೆ ಕಡಿಮೆ

ಕಳೆದ ೧ ಸಾವಿರ ವರ್ಷಗಳಲ್ಲಿ ಭಾರತವು ಯುದ್ಧಗಳಲ್ಲಿ ಗಳಿಸಿದ ವಿಜಯಗಳ ಸಂಖ್ಯೆ ಇಷ್ಟು ಕಡಿಮೆ ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಹೋದರೆ ಏನು ಸಿಗುತ್ತದೆ ? ಇದರ ಉತ್ತರವೆಂದರೆ ಹೊಸ ಶಸ್ತ್ರಾಸ್ತ್ರಗಳ ಅಭಾವ ! ಈ  ಕಾರಣ ಒಂದು ಸೀಮಿತದ ವರೆಗೆ ಯೋಗ್ಯವಾಗಿದೆ. ತಲವಾರಿನ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ೧೭ ನೇ ಶತಮಾನದಲ್ಲಿ ಕೂಡ ತಲವಾರಿನ ಅಲಗನ್ನು ಯುರೋಪಿನಿಂದ ಆಮದು ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಆಯುಧಗಳಿಗೆ ಅಗತ್ಯವಾಗಿರುವ ಸೂಕ್ತ ಉಕ್ಕನ್ನು ತಯಾರಿಸಲು ಭಾರತೀಯರಿಗೆ ಸಾಧ್ಯವಾಗುತ್ತಿರಲೇ ಇಲ್ಲ. ಅಶೋಕನ ಕಾಲದಲ್ಲಿ ಅಂದರೆ ಕ್ರಿ.ಪೂ. ೨೫೦ ರ ಸುಮಾರಿಗೆ ಮಿಶ್ರ ಧಾತುವಿನ ೭ ಮೀಟರ ಎತ್ತರದ ಸ್ತಂಭ ದೆಹಲಿಯಲ್ಲಿ ಇಂದಿಗೂ ಇದೆ. ತದನಂತರ ಆ ಶಾಸ್ತ್ರಿಯ ಜ್ಞಾನ ಮತ್ತು ಆ ಕಲೆ ಒಂದು ಸಾವಿರ ೫೦೦ ವರ್ಷಗಳಲ್ಲಿ ಹೇಗೆ ಇಲ್ಲವಾಯಿತು ? ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಕುಶಲಕರ್ಮಿಗಳ ಘನತೆ ಸಮಾಜದಲ್ಲಿ ಬಹಳ ಕಡಿಮೆಯಾಗಿರಬೇಕು ಅಥವಾ ಉಳಿಯದಿರದೇ ಇರಬಹುದು. ೪-೫ ಪೀಳಿಗೆಗಳಲ್ಲಿ ಪಾರಂಪಾರಿಕ ಜ್ಞಾನ ಮತ್ತು ಕೌಶಲ್ಯ ಲೋಪವಾಗಿರಬೇಕು.

ಇದರ ವಿರುದ್ಧ ಜಪಾನಿನಲ್ಲಿ ೧ ಸಾವಿರ ವರ್ಷದ ಮೊದಲು ‘ಸಾಮುರಾಯಿ ತಲವಾರ(ಖಡ್ಗ)ಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಅಲಗಿನ ಹರಿತ ಬಹಳಷ್ಟು ಕಾಲದ ವರೆಗೆ ಉಳಿಯಬೇಕು; ಆದರೆ ಅಲಗು ಮೃದುವಾಗಿರಬೇಕು ಇಲ್ಲವಾದರೆ ಅದು ತುಂಡಾಗಬಹುದು. ಈ ತಲವಾರದ ಆವಶ್ಯಕತೆಯನ್ನು ಪೂರೈಸಲು ಮಿಶ್ರಧಾತುವಿನ ಕೆಲಸ ಮಾಡುವವರು ಮತ್ತು ಕುಶಲಕರ್ಮಿಗಳು ಒಂದುಗೂಡಿದರು. ಅತ್ಯಂತ ಗಟ್ಟಿಯಾದ ಉಕ್ಕಿನಿಂದ ಹೊರಗಿನ ಭಾಗವನ್ನು ತಯಾರಿಸಿ ಒಳಗಿನ ಅಲಗನ್ನು ಮಾತ್ರ ಮೃದುವಾದ ಉಕ್ಕಿನಿಂದ ತಯಾರಿಸ ಬೇಕು ಎನ್ನುವುದು ಶಾಸ್ತ್ರೀಯ ಕಲ್ಪನೆ ಆಯಿತು. ಅಂತಹ ಅಲಗನ್ನು ಪ್ರತ್ಯಕ್ಷ ತಯಾರಿಸಿ ಯೋಧನಿಗೆ ಹಿಡಿದುಕೊಳ್ಳಲು ಅನುಕೂಲ ವಾಗಿರುವಂತೆ ಹಿಡಿಕೆಯನ್ನು ಕೂಡಿಸುವುದು ಕುಶಲಕಾರ್ಮಿಕರ ಕೌಶಲ್ಯವಾಗಿತ್ತು. ಇದು ಕಲೆಯ ಮತ್ತು ಉದ್ಯೋಗದ (ಕಾರ್ಯದ) ಭಾಗವಾಯಿತು. ಇವೆಲ್ಲವುಗಳ ಸಂಗಮವಾಯಿತು, ಆದ್ದರಿಂದ ಸಮುರಾಯಿ ಅಸ್ತಿತ್ವದಲ್ಲಿ ಬಂದಿತು. ಇಲ್ಲದಿದ್ದರೆ ಅದನ್ನು ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆ ಮೂರೂ ಕ್ಷೇತ್ರಗಳಲ್ಲಿನ ಕೌಶಲ್ಯವುಳ್ಳವರು ಒಟ್ಟಿಗೆ ಬರುವುದು ಆವಶ್ಯಕವಾಗಿತ್ತು. ಆದರೆ ವಿಭಜಿಸಲ್ಪಟ್ಟಿರುವ ಸಮಾಜದಲ್ಲಿ ಹೀಗಾಗುವುದು ಅಸಾಧ್ಯವೆಂದು ಹೇಳಬಹುದು. ಎರಡನೇಯ ಮಹಾಯುದ್ಧದಲ್ಲಿ ಯುರೋಪಿನ ಮೇಲೆ ಸಮುದ್ರಮಾರ್ಗದಿಂದ ಆಕ್ರಮಣ ಮಾಡಲು ‘ಕೃತಕ ಬಂದರುಗಳ ಆವಶ್ಯಕತೆ ನಿರ್ಮಾಣವಾಯಿತು. ಈ ಕಲ್ಪನೆ ‘ಮಲಬೆರಿ ಹಾರ್ಬರ ಎಂದು  ಸಾಕಾರವೂ ಆಯಿತು. ಪ್ರಧಾನಮಂತ್ರಿ ಚರ್ಚಿಲರ ಸ್ವತಃ ಕಾಲ್ಪನಿಕ ಯೋಜನೆ, ವಿಜ್ಞಾನಿ ಮತ್ತು ಹಡಗುಗಳನ್ನು ಕಟ್ಟುವ ತಂತ್ರಜ್ಞರು ಮತ್ತು ಕಾರ್ಮಿಕರು ಇವರ ಒಂದುಗೂಡಿದ ಕಾರ್ಯವೆಂದರೆ ‘ಮಲಬೆರಿ ಹಾರ್ಬರ ! ಎಲ್ಲ ಕ್ಷೇತ್ರದಲ್ಲಿನ ಕುಶಲಕರ್ಮಿಗಳು  ವಿಭಜಿಸಲ್ಪಟ್ಟ ಸಮಾಜದಲ್ಲಿ ಹೀಗೆ ಒಂದು ಗೂಡುವುದು ಕೇವಲ ಅಸಾಧ್ಯವೇ ಆಗಿರುತ್ತದೆ.

೮. ‘ಯುದ್ಧದಲ್ಲಿ ಜಯಗಳಿಸುವುದೇ ಧರ್ಮ

ಬ್ರಿಟಿಷರು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನನನ್ನು ಸೋಲಿಸಿದರು. ವೆಲ್ಲಿಂಗ್ಟನ್‌ನ ‘ಡ್ಯೂಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಕೌಶಲ್ಯವನ್ನು ಹಿಂದುಸ್ಥಾನದಲ್ಲಿನ ಅನುಭವದಿಂದ ಹೆಚ್ಚಿಸಿಕೊಂಡರು. ಮುಂದೆ ಅವರು ವಸಯಿಯಲ್ಲಿ ಮರಾಠಿಗರನ್ನು ಸೋಲಿಸಿದರು. ಈ ಯುದ್ಧಗಳು ಬಹಳ ಶಕ್ತಿ ಸಾಮರ್ಥ್ಯದಿಂದ ನಡೆದವು. ಇವುಗಳಿಂದ ಡ್ಯೂಕರು ಬಹಳಷ್ಟು ಕಲಿತರು. ಈ ಅನುಭವದ ಉಪಯೋಗ ಅವರಿಗೆ ವಾಟರ್‌ಲೂ ಯುದ್ಧದಲ್ಲಿ ನೆಪೋಲಿಯನ್ನನ ವಿರುದ್ಧ ಜಯಸಾಧಿಸಲು ಸಹಾಯವಾಯಿತು. ಭಾರತೀಯರು ಮಾತ್ರ ‘ಆದದ್ದೆಲ್ಲ ದೈವೇಚ್ಛೆ, ಕೃಷ್ಣಾರ್ಪಣಮಸ್ತು ಎಂದು ಹೇಳಿ ಸೋಲನ್ನು ನಿರ್ಲಕ್ಷಿಸಿದರು ಮತ್ತು ಯುದ್ಧಕ್ಕೆ ಬೆನ್ನು ತಿರುಗಿಸಿದರು. ಯುದ್ಧವು ‘ರಾಮಾಯಣ ಮತ್ತು ಮಹಾಭಾರತ ಈ ಮಹಾಕಾವ್ಯಗಳ ತಿರುಳಾಗಿದೆ. ಭಾರತೀಯ ದೇವತೆಗಳ ಮುಖಗಳು ಹಸನ್ಮುಖವಾಗಿರುತ್ತವೆ; ಆದರೆ ಎಲ್ಲರೂ ಶಸ್ತ್ರಧಾರಿಗಳಾಗಿರುತ್ತಾರೆ. ಈ ವಿರೋಧಾಭಾಸದ ಒಳಾರ್ಥವೇನು ? ಯುದ್ಧಕ್ಕೆ ಸ್ವಂತದ ಒಂದು ಧರ್ಮವಿದೆ. ‘ಯುದ್ಧದಲ್ಲಿ ವಿಜಯೀ ಆಗುವುದೇ  ಧರ್ಮವಾಗಿದೆ.

೯. ಯಶಸ್ಸನ್ನು ಪಡೆಯಲು ಆಕ್ರಮಣ ಮತ್ತು ಕೂಟನೀತಿಯನ್ನು ಉಪಯೋಗಿಸುವುದು ಆವಶ್ಯಕ !

ಅವಶ್ಯಕತೆಯಿದ್ದಾಗ, ಶಾಂತಿಯನ್ನು ಸ್ಥಾಪಿಸಲು ಸಾಧನವೆಂದು ಬಹುಜನರ ಹಿತಕ್ಕಾಗಿ ಮಾಡುವ ಯುದ್ಧವೇ ‘ಧರ್ಮಯುದ್ಧ ! ಅದರಲ್ಲಿ ಜಯ ಗಳಿಸಲೇ ಬೇಕು. ಜಯ ಗಳಿಸಲು ಆಕ್ರಮಣ ಮತ್ತು ಕೂಟನೀತಿಯನ್ನು ಉಪಯೋಗಿಸಬೇಕು. ಇದನ್ನು ಒಪ್ಪಿಕೊಳ್ಳುವುದು ಭಾರತೀಯರಿಗೆ ಕಠಿಣವಾಗುತ್ತದೆ. ಕರ್ಣನ ರಥದ ಚಕ್ರವನ್ನು ಭೂಮಿಯಲ್ಲಿ ಹುಗಿಯಿತು. ಇದರ ಬಗೆಗಿನ ಕರ್ಣನ ಮೇಲಿನ ಕರುಣೆ ಭಾರತೀಯರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದೆ. ಶ್ರೀಕೃಷ್ಣನಿಗೆ ಅರ್ಜುನನಿಗೆ ಅವನ ಕರ್ತವ್ಯವನ್ನು ತಿಳಿಸಿಕೊಡಬೇಕಾಯಿತು; ಆದರೆ ಬಹುಸಂಖ್ಯಾತ ಭಾರತೀಯರು ಶ್ರೀಕೃಷ್ಣನ ಯುದ್ಧ ಕೌಶಲ್ಯದ ಪಾಠವನ್ನು ಸ್ವಲ್ಪ ಸಂಶಯದಿಂದಲೇ ನೋಡುತ್ತಾರೆ ಎಂದೆನಿಸುತ್ತದೆ. ಭಾರತೀಯರ ಮನಸ್ಸಿನಲ್ಲಿ ವಿಜಯದ ಹಸಿವೇಕೆ ಇಲ್ಲ ? ವಿಶ್ವದಲ್ಲಿನ ಬಹುತೇಕ ಧರ್ಮಗಳು ಶಾಂತಿಪ್ರಿಯವಾಗಿರುತ್ತವೆ. ಭಾರತದಲ್ಲಿನ ಧರ್ಮವಂತೂ  ಖಂಡಿತವಾಗಿಯೂ ಶಾಂತಿಪ್ರಿಯ ವಾಗಿದೆ; ಆದರೆ ಆ ಧರ್ಮದ ಪಾಲನೆಯನ್ನು ಮಾಡಲು ಅವಕಾಶ ವಾದರೂ ಸಿಗಬೇಕು. ಕಳಿಂಗದ ಯುದ್ಧವನ್ನು ಗೆಲ್ಲದೇ ರಾಜಾ ಅಶೋಕನಿಗೆ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿತ್ತೇ ? ಎಂದು ವಿಚಾರ ಮಾಡಬೇಕು.

೧೦. ಭಾರತದಲ್ಲಿ ಭಗವದ್ಗೀತೆಯಲ್ಲಿ ಅಹಿಂಸೆ ಕಂಡು ಬರುವುದರ ಹಿಂದೆ ಯುದ್ಧ ಸಂಸ್ಕೃತಿಯ ಅಭಾವ ?

ನೆಪೋಲಿಯನ್ನನ ವಿರುದ್ಧದ ಯುದ್ಧವನ್ನು ಯಾರೂ ಗೆಲ್ಲುತ್ತಿರಲಿಲ್ಲ. ಪ್ರಶಿಯಾದ ಗತಿಯೂ ಅದೇ ಆಯಿತು. ಆದರೆ ಪ್ರಶಿಯಾ ಯುದ್ಧದಿಂದ ದೂರ ಓಡಿ ಹೋಗಲಿಲ್ಲ. ಅದೇ ದೇಶದ ಕ್ಲೌಝವಿತ್ಸನು ಯುದ್ಧದ ಆಳವಾದ ಅಧ್ಯಯನವನ್ನು ಮಾಡಿ ಯುದ್ಧ ಶಾಸ್ತ್ರವನ್ನು ನಿರ್ಮಿಸಿದನು. ಆ ಗ್ರಂಥ ಅಜರಾಮರವಾಯಿತು; ಏಕೆಂದರೆ ಆ ಗ್ರಂಥದಲ್ಲಿ ಯುದ್ಧದ ವಿಷಯದಲ್ಲಿ ಅಮೂಲ್ಯ ವಿಚಾರಗಳಿವೆ. ಆ ಗ್ರಂಥದ ಆಂಗ್ಲ ಭಾಷಾಂತರ ಕರ್ನಲ ಮಾಡ್ ಈ ಬ್ರಿಟಿಷ ಅಧಿಕಾರಿಯು ೨೦ ನೇ ಶತಮಾನದ ಪ್ರಾರಂಭದಲ್ಲಿ ಮಾಡಿದನು ಮತ್ತು ಆಶ್ಚರ್ಯವೆಂದರೆ ಪ್ರಸ್ತಾವನೆಯ ಸಮಾರೋಪದಲ್ಲಿ ಓದುಗರಿಗೆ ಯುದ್ಧದ ಮೊದಲು ದುರ್ಬಲಗೊಂಡಿರುವ ಮನಸ್ಸನ್ನು ಮರಳಿ ಯುದ್ಧಕ್ಕಾಗಿ ಪ್ರೇರೇಪಿಸಲು ಭಗವದ್ಗೀತೆಗಿಂತ ಒಳ್ಳೆಯ ಉಪದೇಶ ಮತ್ತೊಂದಿಲ್ಲ ಎಂದು ಬರೆದಿದ್ದಾನೆ. ಭಾರತದಲ್ಲಿ ಮಾತ್ರ ಇದೇ ಭಗವದ್ಗೀತೆಯಲ್ಲಿ ‘ಅಹಿಂಸೆ ಕಾಣಿಸತೊಡಗಿತು. ಯುದ್ಧ ಸಂಸ್ಕೃತಿಯ ಅಭಾವವು ಇದರ ಹಿಂದಿರುವ ಕಾರಣವಾಗಿರಬಹುದೇ ?

೧೧. ಭಾರತೀಯರು ಬ್ರಿಟನ್‌ನಿಂದ ಕಲಿಯುವುದು ಆವಶ್ಯಕ !

ಬ್ರಿಟನ್ನಿನ ವೈಶಿಷ್ಟ್ಯವೆಂದರೆ, ಎಷ್ಟೋ ಶತಮಾನಗಳಿಂದ ಆ ದೇಶಕ್ಕೆ ಸೋಲು ಗೊತ್ತೇ ಇಲ್ಲ. ಏರಿಳಿತ ನೋಡಿದೆ ಅಷ್ಟೆ ! ಆ ದೇಶದಿಂದ ಕಲಿಯಬೇಕು. ಬ್ರಿಟನ್ ಶತ್ರುವನ್ನು ತನ್ನ ಸ್ವಂತ ಭೂಮಿಯಿಂದ ದೂರವಿಟ್ಟಿತು. ಯುದ್ಧವನ್ನು ತನ್ನ ಭೂಮಿಯ ಮೇಲಲ್ಲ, ಶತ್ರುವಿನ ದೇಶಕ್ಕೆ ಹೋಗಿ ಮಾಡಿತು. ಯುದ್ಧ ಸಂಸ್ಕೃತಿ ಜೀವಂತವಾಗಿರುವ ಸಮಾಜದ ಎಲ್ಲ ಕ್ಷೇತ್ರಗಳ ಧುರೀಣರಿಗೆ ಯುದ್ಧದ ಬಗ್ಗೆ ಬಹಳಷ್ಟು ಪ್ರಮಾಣದಲ್ಲಿ ತಿಳುವಳಿಕೆ ಇರುತ್ತದೆ. ಯುದ್ಧ ಮಾಡುವುದು ಸಶಸ್ತ್ರ ಸೇನೆಯ ಕೆಲಸವಾಗಿದ್ದರೂ ಯುದ್ಧದ ಸ್ವರೂಪವನ್ನು ತಿಳಿದುಕೊಳ್ಳ್ಳುವುದು ಎಲ್ಲ ಕ್ಷೇತ್ರದಲ್ಲಿನ ಜಿಜ್ಞಾಸು ವ್ಯಕ್ತಿಗಳಿಗೆ ಸಾಧ್ಯವಿದೆ. ಯುದ್ಧದ ಸೋಲಿನ ಪರಿಣಾಮಗಳು ಬಹಳ ಭಯಂಕರವಾಗಿರುತ್ತವೆ ಮತ್ತು ಸೋಲಿನ ಸರಮಾಲೆಯೇ ಪ್ರಾರಂಭವಾದರೆ ಎಲ್ಲವೂ, ಅಂದರೆ ಸ್ವತ್ವ ಕೂಡ ಇಲ್ಲವಾಗುತ್ತದೆ. ಬಳಿಕ ಮರದ ಕೆಳಗೆ ಕೇವಲ ಅದರ ಬೊಡ್ಡೆ  ಮಾತ್ರ ಉಳಿಯುತ್ತದೆ

(ಆಧಾರ: ‘ಧರ್ಮಭಾಸ್ಕರ, ಫೆಬ್ರುವರಿ ೨೦೧೬)