೧. ಶ್ರೀ. ರಾಜಗೋಪಾಲನ್ ಇವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಪಾದಪೂಜೆ ಮಾಡುವುದು
೧ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ‘ನಾನು ಆಶ್ರಮದ ಓರ್ವ ಸೇವಕಿಯಾಗಿದ್ದೇನೆ. ನನ್ನ ಪಾದಪೂಜೆ ಮಾಡ ಬೇಡಿ, ಎಂದು ಹೇಳಿದಾಗ ಶ್ರೀ. ರಾಜಗೋಪಾಲನ್ ಇವರು ‘ಪಾದಪೂಜೆ ಮಾಡುವುದು ನಮ್ಮ ಪರಂಪರೆಯಾಗಿದೆ, ಎಂದು ಹೇಳುವುದು : ೧೨.೨.೨೦೨೧ ರಂದು ನಾವು ಮಹರ್ಷಿಗಳು ಹೇಳಿದ ಹಾಗೆ ಕಾಂಚೀಪುರಮ್‌ನಲ್ಲಿನ ಮಂದಿರದಲ್ಲಿ ದರ್ಶನ ಪಡೆದು ಚೆನ್ನೈಗೆ ಹಿಂತಿರುಗಿ ಬರುವಾಗ ದಾರಿಯಲ್ಲಿ ಲೆಕ್ಕಪರಿಶೋಧಕರಾದ (‘ಆಡಿಟರ್) ಶ್ರೀ. ರಾಜಗೋಪಾಲನ್ ಎಂಬವರಲ್ಲಿ ಹೋದೆವು. ಹೊಸೂರಿನಲ್ಲಿರುವ ಶ್ರೀ. ಸುಭಾಷ್ ಇವರು ನಮಗೆ ಶ್ರೀ. ರಾಜಗೋಪಾಲನ್ ಇವರನ್ನು ಭೇಟಿಯಾಗಲು ಹೇಳಿದ್ದರು. ರಾಜಗೋಪಾಲನ್ ಇವರಲ್ಲಿಗೆ ಹೋದಾಗ ಅವರು ಕಾಂಚೀಪೀಠದ ಶಂಕರಾಚಾರ್ಯರ ಭಕ್ತರಾಗಿದ್ದಾರೆ, ಎಂದು ನಮಗೆ ತಿಳಿಯಿತು. ‘ನಾನು ಸದ್ಗುರು ಆಗಿದ್ದೇನೆ, ಎಂಬುದು ಅವರಿಗೆ ಶ್ರೀ. ಸುಭಾಷರಿಂದ ಮೊದಲೇ ತಿಳಿದಿರುವುದರಿಂದ ಅವರು ನನ್ನ ಪಾದಪೂಜೆಯ ಸಿದ್ದತೆಯನ್ನು ಮಾಡಿಟ್ಟಿದ್ದರು. ಅವರಿಗೆ ನಾನು “ನಾನು ಆಶ್ರಮದ ಓರ್ವ ಸೇವಕಿಯಾಗಿದ್ದೇನೆ. ನನ್ನ ಪಾದಪೂಜೆ ಮಾಡಬೇಡಿ, ಎಂದು ಹೇಳಿದರೂ ಅವರು ಕೇಳಲಿಲ್ಲ. “ಪಾದಪೂಜೆ ಬೇಡವೆಂದು ಹೇಳಬೇಡಿ. ಅದು ನಮ್ಮ ಪರಂಪರೆಯಾಗಿದೆ, ಎಂದು ಹೇಳಿ ಅವರು ನನ್ನ ಪಾದಪೂಜೆ ಮಾಡಿದರು.
೧ ಆ. ಪಾದಪೂಜೆ ನಡೆಯುತ್ತಿರುವಾಗ ಪರಾತ್ಪರ ಗುರು ಡಾ. ಆಠವಲೆ ಯವರ ಬೋಧನೆಗನುಸಾರ ಶಿಷ್ಯಭಾವದಲ್ಲಿರಲು ಸಾಧ್ಯವಾಗುವುದು : ಪಾದಪೂಜೆಯ ಸಮಯದಲ್ಲಿ ನಾನು ಮನಸ್ಸಿನಲ್ಲಿ ಗುರುದೇವರ ಸ್ಮರಣೆ ಮಾಡುತ್ತಿದ್ದೆ ಹಾಗೂ ಏನಾಗಲಿಕ್ಕಿದೆಯೋ ಅದು ಆಗಲಿ ಎಂದು, ಅದನ್ನು ಸಾಕ್ಷೀಭಾವದಿಂದ ನೋಡುತ್ತಿದ್ದೆ. ಗುರುದೇವರು ನಮಗೆ ಯಾವುದೇ ಸ್ಥಿತಿಯಲ್ಲಿ ಸಹಜಭಾವದಲ್ಲಿರುವ ಬೋಧನೆಯನ್ನು ನೀಡಿರುವುದರಿಂದ ನನಗೆ ಏನೂ ಅನಿಸಲಿಲ್ಲ. ‘ಅವರ ಪರಂಪರೆಯಲ್ಲಿ ಪಾದಪೂಜೆ ಹೇಗೆ ಮಾಡುತ್ತಾರೆ ?, ಎನ್ನುವುದು ನನಗೆ ಕಲಿಯಲು ಸಿಕ್ಕಿರುವುದರಿಂದ ಆಗ ನನಗೂ ಶಿಷ್ಯಭಾವದಲ್ಲಿರಲು ಸಾಧ್ಯವಾಯಿತು. ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ಯಾವಾಗಲೂ “ನಾವು ಸತತ ಶಿಷ್ಯಭಾವದಲ್ಲಿರಬೇಕು, ಅಂದರೆ ನಮಗೆ ಯಾವುದೇ ವಿಷಯದ ಅಹಂಕಾರ ಬರುವುದಿಲ್ಲ ಎಂದು ಹೇಳುತ್ತಾರೆ.
೧ ಇ. ಪಾದಪೂಜೆ ನಡೆಯುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗೆ ಕಾಶಾಯವಸ್ತ್ರ (ಕೇಸರಿ ವಸ್ತ್ರ) ಧರಿಸಿದ ಯತಿಗಳು (ಸನ್ಯಾಸಿ) ಕಾಣಿಸುವುದು ಹಾಗೂ ನಂತರ ಯತಿಶ್ರಾದ್ಧದ ವಿಷಯದಲ್ಲಿ ಶ್ರೀ. ರಾಜಗೋಪಾಲನ್ ಇವರು ಹೇಳಿದಾಗ ತಮಗಾದ ಯತಿ ದರ್ಶನದ ಗೂಡಾರ್ಥ (ಭಾವಾರ್ಥ) ತಿಳಿಯುವುದು : ಪಾದಪೂಜೆ ನಡೆಯುವಾಗ ಅನಿರೀಕ್ಷಿತವಾಗಿ ನನಗೆ ೫-೬ ಯತಿಗಳು (ಸನ್ಯಾಸಿ) ಮನೆಯಿಂದ ಅಂತರಿಕ್ಷದ (ಆಕಾಶದ) ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿಗೆ ಹೋಗುತ್ತಿರುವುದು ಅರಿವಾಯಿತು. ಅವರು ಕಾಶಾಯವಸ್ತ್ರ (ಕೇಸರಿ ವಸ್ತ್ರ) ಧರಿಸಿದ್ದರು. ಆಗ ‘ಯಾರೋ ಸಿದ್ಧಪುರುಷರಿಂದ ನಮ್ಮ ಕಾರ್ಯಕ್ಕೆ ಸಿಕ್ಕಿದ ಆಶೀರ್ವಾದವಿದು, ಎಂದು ಅರಿವಾಯಿತು. ಆ ಯತಿಗಳು ನನಗೆ ನಡುನಡುವೆಯೇ ಪ್ರಕಾಶ ರೂಪದಲ್ಲಿ ಕಾಣಿಸುತ್ತಿದ್ದರು. ಸ್ವಲ್ಪ ಸಮಯದಲ್ಲಿ ಶ್ರೀ. ರಾಜಗೋಪಾಲನ್ ಇವರು, “ಕಾಂಚೀಪೀಠದ ಪ್ರಸ್ತುತ ಶಂಕರಾಚಾರ್ಯರಾದ ಶ್ರೀ ವಿಜಯೇಂದ್ರ ಸರಸ್ವತಿಯವರು ನಮಗೆ ಮಹಾಲಯ ಶ್ರಾದ್ಧಪಕ್ಷದ ದ್ವಾದಶಿಗೆ ಬರುವ ಯತಿಶ್ರಾದ್ಧದ ದಿನ ಯತಿಗಳ ಶ್ರಾದ್ಧ ಮಾಡಲು ಹೇಳಿರುವುದರಿಂದ ನಾವು ಅದನ್ನು ಪ್ರತಿವರ್ಷ ಮಾಡುತ್ತೇವೆ, ಎಂದರು. ಆಗ ‘ನನಗೆ ಯತಿದರ್ಶನ ಏಕಾಯಿತು ?, ಎಂಬುದು ತಿಳಿಯಿತು.
೨. ವಾಸ್ತುವಿನಲ್ಲಿ ಪೂರ್ವಜರ ತೊಂದರೆಯ ಅರಿವಾಗುವುದು
ಪಾದಪೂಜೆ ಆದನಂತರ ನಾನು ಅಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡೆನು. ಅದೇ ವೇಳೆಗೆ ನನ್ನ ಹಿಂದಿನ ಗೋಡೆಯಲ್ಲಿ ತೂಗು ಹಾಕಿದ್ದ ಶ್ರೀ. ರಾಜಗೋಪಾಲನ್ ಇವರ ತಂದೆಯ ಛಾಯಾಚಿತ್ರವು ಒಮ್ಮೆಲೆ ಕೆಳಗೆ ಬಿತ್ತು. ನನಗೆ ಅವರ ವಾಸ್ತುವಿನಲ್ಲಿ ಪೂರ್ವಜರ ತೊಂದರೆ ಇರುವುದು ಅರಿವಾಯಿತು. ಅದಕ್ಕೆ ನಾನು ಅವರಿಗೆ ನಾಮಜಪಾದಿ ಉಪಾಯ ಮಾಡಲು ಹೇಳಿದೆನು.
೩. ಶ್ರೀ. ರಾಜಗೋಪಾಲನ್ ಇವರ ಮನೆಯಲ್ಲಿ ಮಹಾಸ್ವಾಮಿಗಳ (ಕಾಂಚೀಪೀಠದ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿಯವರ ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಯವರ) ಚರಣಪಾದುಕೆಗಳಿವೆ. ನಾವು ಅವರ ದೇವರ ಕೋಣೆಯಲ್ಲಿದ್ದ ದೇವತೆಗಳ ಮತ್ತು ಪಾದುಕೆಗಳ ದರ್ಶನ ಪಡೆದೆವು.
೪. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಶ್ರೀ. ರಾಜಗೋಪಾಲನ್ ಇವರ ಮನೆಯಲ್ಲಿ ‘ಇಂದ್ರಾಕ್ಷಿ ಹೋಮ ಮಾಡುವುದು
ಶ್ರೀ. ರಾಜಗೋಪಾಲನ್ ಇವರ ತಾಯಿಯವರು, “ಮಹಾಸ್ವಾಮಿಗಳು ನನ್ನ ಕನಸ್ಸಿನಲ್ಲಿ ಬಂದು ‘ನೀನು ಮನೆಯಲ್ಲಿ ದೇವಿಯ ಹವನವನ್ನು ಆರಂಭಿಸು, ಎಂದು ಸೂಚಿಸಿದರು, ಎಂದರು. ಅವರಿಗೆ ಶ್ರೀ. ಸುಭಾಷ ಇವರು, “ಮಹರ್ಷಿಗಳು ಹೇಳಿರುವ ಹಾಗೆ ನಾನು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಪ್ರತಿದಿನ ‘ಅಗ್ನಿಹೋತ್ರ ಮತ್ತು ‘ಇಂದ್ರಾಕ್ಷಿ ಹೋಮ ಮಾಡುತ್ತೇನೆ ಎಂದು ಹೇಳಿದ್ದರು. ಆದ್ದರಿಂದ ಶ್ರೀ. ರಾಜಗೋಪಾಲನ್ ಇವರ ತಾಯಿಯವರು ನನಗೆ, “ಇಂದು ನೀವು ನಮ್ಮ ಮನೆಯಲ್ಲಿ ‘ಇಂದ್ರಾಕ್ಷಿ ಹೋಮವನ್ನು ಮಾಡಿರಿ ಎಂದು ಹೇಳಿದರು. ಆಗ ನನಗೆ ಮಹಾಸ್ವಾಮಿಗಳೇ ಹೋಮವನ್ನು ಮಾಡಲು ಆಜ್ಞೆ ನೀಡಿದ್ದಾರೆ, ಎಂದು ಅನಿಸಿತು. ಆ ದಿನ ‘ವಿಶ್ವ ಅಗ್ನಿಹೋತ್ರ ದಿನ ಆಗಿತ್ತು. ನನಗೆ ಸೇವೆಯಿಂದ ಬೆಳಿಗ್ಗೆ ಅಗ್ನಿಹೋತ್ರ ಮಾಡಲು ಸಾಧ್ಯವಾಗಿರಲಿಲ್ಲ. ಆ ದಿನ ಗುರುಗಳು ಆ ಕರ್ಮವನ್ನೂ ನನ್ನಿಂದ ಮಾಡಿಸಿಕೊಂಡರು. ಶ್ರೀ. ರಾಜಗೋಪಾಲನ್ ಇವರ ಮನೆಯಲ್ಲಿ ನಾನು ‘ಇಂದ್ರಾಕ್ಷಿ ಹೋಮ ಮಾಡಿದುದರಿಂದ ಅವರಿಗೂ ತುಂಬಾ ಆನಂದವಾಯಿತು. ‘ಪರೇಚ್ಛೆಯಿಂದ ವರ್ತಿಸುವುದರಲ್ಲಿ ಮತ್ತು ಇತರರಿಗೆ ಆನಂದವನ್ನು ನೀಡುವುದರಲ್ಲಿ ಎಷ್ಟು ಆನಂದವಿರುತ್ತದೆ !, ಎಂಬುದನ್ನು ನಾವು ಅನುಭವಿಸಿದೆವು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೧೭.೩.೨೦೨೧)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
* ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ. * ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಸಂತರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |