ಮಧ್ಯಪ್ರದೇಶದ ಕುಂಡಲಪುರ ಮತ್ತು ಬಾಂದಕಪೂರ ಈ ನಗರಗಳು ‘ಪವಿತ್ರ ಕ್ಷೇತ್ರ’ ಎಂದು ಘೋಷಣೆ !

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ ಇವರು ರಾಜ್ಯದ ಕುಂಡಲಪೂರ ಮತ್ತು ಬಾಂದಕಪೂರ ಈ ನಗರಗಳನ್ನು ‘ಪವಿತ್ರ ಕ್ಷೇತ್ರ’ ಎಂದು ಘೋಷಿಸಿದರು. ಈ ಎರಡು ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಂದಕಪೂರ ನಗರುವು ಶಿವನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ ಹಾಗೂ ಕುಂಡಲಪೂರ ಜೈನ ತೀರ್ಥಕ್ಷೇತ್ರವಾಗಿದೆ. ಈ ಎರಡು ನಗರಗಳು ದಾಮೋಹ ಜಿಲ್ಲೆಯಲ್ಲಿವೆ. ಮುಖ್ಯಮಂತ್ರಿ ಚೌಹಾನ ಕುಂಡಲಪೂರದಲ್ಲಿ ಜೈನ ಸಮಾಜದ ಪಂಚಕಲ್ಯಣಕ ಉತ್ಸವದಲ್ಲಿ ಪಾಲ್ಗೊಂಡು ಆ ಸಮಯದಲ್ಲಿ ಅವರು ಈದನ್ನೂ ಘೋಷಿಸಿದರು.