ಲಾಲು ಪ್ರಸಾದ ಯಾದವ ಇವರಿಗೆ ಮೇವು ಹಗರಣದ ೫ನೇ ಪ್ರಕರಣದಲ್ಲಿ ೫ ವರ್ಷದ ಶಿಕ್ಷೆ !

೬೦ ಲಕ್ಷರೂಪಾಯಿಗಳ ದಂಡ !

ರಾಂಚಿ(ಝಾರಖಂಡ) – ಝಾರಖಂಡದ ಡೊರಂಡಾ ಖಜಾನೆಯಿಂದ ೧೯೯೦ ಮತ್ತು ೧೯೯೫ ರ ನಡುವೆ ಅಕ್ರಮವಾಗಿ ೧೩೯ ಕೋಟಿ ೩೫ ಲಕ್ಷ ರೂಪಾಯಿಗಳನ್ನು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಮತೆ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ೫ ವರ್ಷಗಳ ಸೆರೆಮನೆ ಶಿಕ್ಷೆ ಮತ್ತು ೬೦ ಲಕ್ಷ ರೂಪಾಯಿ ದಂಡ ಹೇರಲಾಗಿದೆ, ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಇನ್ನೂ ೩೭ ಜನರನ್ನು ಶಿಕ್ಷೆ ವಿಧಿಸಲಾಗುವುದು.

ಈ ಹಿಂದೆ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಅವರಿಗೆ ೧೪ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣಗಳಲ್ಲಿ ದುಮಕಾ, ದೇವಘರ ಮತ್ತು ಚೈಬಸಾ ಖಜಾನೆಗಳಿಂದ ಹಣ ತೆಗೆದಿರುವ ಬಗ್ಗೆ ಇತ್ತು.