ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಇವರ ಪಕ್ಷದ ವಿದ್ಯಾರ್ಥಿ ಸಂಘಟನೆಯ ಮೇಲೆ ನಿಷೇಧ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಇವರ ಆವಾಮಿ ಪಕ್ಷದ ಸಂಘಟನೆ ‘ಬಾಂಗ್ಲಾದೇಶ ಛಾತ್ರ ಲೀಗ್’ ಮೇಲೆ ನಿಷೇದ ಹೇರಿದೆ. ೨೦೦೯ ರ ಭಯೋತ್ಪಾದಕ ವಿರೋಧಿ ಕಾನೂನಿನ ವ್ಯವಸ್ಥೆಯ ಪ್ರಕಾರ ಈ ನಿಷೇದ ಹೇರಲಾಗಿದೆ.

ಗೃಹ ಸಚಿವಾಲಯವು ಪ್ರಸಾರ ಮಾಡಿರುವ ಆದೇಶದಲ್ಲಿ, ಬಾಂಗ್ಲಾದೇಶ ಸ್ವತಂತ್ರವಾದ ನಂತರ ವಿಶೇಷವಾಗಿ ಕಳೆದ ೧೫ ವರ್ಷಗಳಲ್ಲಿ ಸರ್ವಾಧಿಕಾರದ ಆಡಳಿತದಲ್ಲಿ, ‘ಬಾಂಗ್ಲಾದೇಶ ಛಾತ್ರ ಲೀಗ್’ ಈ ವಿದ್ಯಾರ್ಥಿ ಸಂಘಟನೆಗೆ ಸಾರ್ವಜನಿಕ ಸುರಕ್ಷೆಗಾಗಿ ಅಪಾಯ ಇರುವುದೆಂದು ಹೇಳಲಾಗುತ್ತಿದೆ. ಈ ಚಟುವಟಿಕೆಯಲ್ಲಿ ಗಂಭೀರ ವಿಷಯದ ಸಮಾವೇಶ ಇದೆ. ಹತ್ಯೆ, ಕಾಲೇಜುಗಳ ಪರಿಸರದಲ್ಲಿ ಕಿರುಕುಳ, ವಿದ್ಯಾರ್ಥಿ ವಸತಿಗೃಹದಲ್ಲಿ ದುರ್ವ್ಯವಹಾರ, ಬಲಾತ್ಕಾರ ಮತ್ತು ಲೈಂಗಿಕ ಕಿರುಕುಳ ಇಂತಹ ಅಪರಾಧಿ ಕೃತ್ಯಗಳ ಸಮಾವೇಶ ಇದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಈಗ ಪ್ರಜಾಪ್ರಭುತ್ವವಿಲ್ಲ, ಅಲ್ಲಿ ಸರ್ವಾಧಿಕಾರ ನಡೆಯುತ್ತಿರುವುದರಿಂದ ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಅದರ ಬಗ್ಗೆ ಅಂತರಾಷ್ಟ್ರೀಯ ವೇದಿಕೆಯಿಂದ ಯಾರು ಕೂಡ ಮಾತನಾಡುತ್ತಿಲ್ಲ; ಕಾರಣ ಅದರ ಹಿಂದೆ ಅಮೇರಿಕಾ ಇದೆ !