ವಕ್ಫ್ ಬೋರ್ಡ್‌ನ ಕೆಲಸ ಮಾಫಿಯಾದಂತೆ ಇದ್ದು, ಭ್ರಷ್ಟಾಚಾರದ ತಾಣವಾಗಿದೆ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ ಇವರ ಆರೋಪ

ನವ ದೆಹಲಿ : ವಕ್ಫ್ ಬೋರ್ಡ್ ವಿಚಾರದಲ್ಲಿ ಈಗ ಮುಸ್ಲಿಂ ಸಮುದಾಯದವರಿಗೆ, ವಕ್ಫ್ ಬೋರ್ಡ್ ಕೆಲಸ ಮಾಫಿಯಾದಂತೆ ನಡೆಯುತ್ತಿದ್ದು, ಅದು ಬೋರ್ಡ್ ಆಗಿರದೇ ಭ್ರಷ್ಟಾಚಾರದ ತಾಣವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಇಂದ್ರೇಶ ಕುಮಾರ ಹೇಳಿದ್ದಾರೆ.

ಇಂದ್ರೇಶ ಕುಮಾರ ಮಾತು ಮುಂದುವರೆಸಿ,

1. ನಮ್ಮ ದೇಶದಲ್ಲಿ, ಯಾವುದೇ ಭೂಮಿಗೆ ಸಂಬಂಧಿಸಿದ ನಿರ್ಣಯಗಳನ್ನು ನ್ಯಾಯಾಲಯಗಳು ತೆಗೆದುಕೊಳ್ಳುತ್ತಿವೆ. ಈಗ ವಕ್ಫ್ ಬೋರ್ಡ್ ಆಸ್ತಿಯ ವಿಷಯ ಕಂಡು ಬಂದಿವೆ ಹೀಗಿರುವಾಗ ಅವುಗಳ ನಿರ್ಣಯವನ್ನು ವಕ್ಫ್ ಬೋರ್ಡ್‌ ತೆಗೆದುಕೊಳ್ಳುತ್ತದೆ ಎಂದರೆ ಅದು ಹೇಗೆ ಸಾಧ್ಯ ? ಒಂದು ವೇಳೆ ವಕ್ಫ್ ಬೋರ್ಡ್ ಈ ಮಸೂದೆ ವಿರುದ್ಧ ನಿರ್ಣಯ ನೀಡಿದರೆ, ಅದು ಅಂತಿಮ ನಿರ್ಧಾರವೆಂದು ಪರಿಗಣಿಸಲಾಗುತ್ತದೆ, ಹಾಗೆಯೇ ಅನೇಕ ಸ್ವತ್ತುಗಳ ಮೇಲೆ ಅಯೋಗ್ಯವಾಗಿ ನಿಯಂತ್ರಣವನ್ನು ಪಡೆದಿರುವುದು ಕಂಡು ಬರುತ್ತಿದೆ.

2. ಒಂದು ವೇಳೆ ಮುಸಲ್ಮಾನರನ್ನು ಹೊರತುಪಡಿಸಿ ಇತರೆ ಧರ್ಮದ ಜನರೂ ವಕ್ಫ್ ಬೋರ್ಡ್‌ಗೆ ಭೂಮಿ ನೀಡಿದ್ದರೆ, ವಕ್ಫ್ ಬೋರ್ಡ್‌ನಲ್ಲಿ ಇತರ ಧರ್ಮದವರು ಏಕೆ ಪ್ರತಿನಿಧಿಸುವಂತಿಲ್ಲ ? ವಕ್ಫ್ ಬೋರ್ಡ್‌ನ ಜವಾಬ್ದಾರಿಗಳನ್ನು ದೃಢಪಡಿಸುವುದು, ವಕ್ಫ್ ಬೋರ್ಡ್‌ಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಮುಸ್ಲಿಮೇತರ ವ್ಯಕ್ತಿಗಳನ್ನು ನೇಮಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವುದು ಈ ಮೂರು ಉದ್ದೇಶಗಳು ಈ ತಿದ್ದುಪಡಿ ಮಸೂದೆಯಲ್ಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಿ, ಭೂಮಿಯನ್ನು ಕಬಳಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !