ಲಷ್ಕರ–ಎ-ತೊಯಬಾಗೆ ಗೌಪ್ಯ ಕಾಗದಪತ್ರಗಳನ್ನು ತಲುಪಿಸುವ ಎನ್.ಐ.ಎ.ನ ಹಿರಿಯ ಅಧಿಕಾರಿಯ ಬಂಧನ

ಹಿಂದೂಗಳನ್ನು ‘ಭಯೋತ್ಪಾದಕ’ ನಿರ್ಧರಿಸಿದ್ದ ಮಲೆಗಾವ್ ಬಾಂಬ್ ಸ್ಫೋಟ ಹಾಗೂ ಸಮಝೌತಾ ಎಕ್ಸಪ್ರೆಸ್ ಪ್ರಕರಣದ ತನಿಖೆಯನ್ನು ಮಾಡಿದ್ದರು !

ಇಂತಹ ದೇಶದ್ರೋಹಿಗಳಿಗೆ ಕಠಿಣವಾದ ಶಿಕ್ಷೆಯಾಗಲು ಸರಕಾರವು ಪ್ರಯತ್ನ ಮಾಡಬೇಕು !- ಸಂಪಾದಕರು 

ಹಿಂದೂಗಳನ್ನು ‘ಭಯೋತ್ಪಾದಕ’ರೆಂದು ನಿರ್ಧರಿಸಿರುವ ಹಾಗೂ ನೆಗೀಯವರು ಮಾಡಿದ ತನಿಖೆಯ ಎಲ್ಲಾ ಪ್ರಕರಣಗಳನ್ನು ಪುನಃ ಹೊಸದಾಗಿ ಮಾಡಬೇಕು, ಎಂದು ಹಿಂದೂಗಳು ಬೇಡಿಕೆಯನ್ನು ಮಾಡಿದರೆ ತಪ್ಪೇನಿದೆ ? ಜಿಹಾದಿ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುವ ನೆಗೀಯವರು ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದರು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಇಂತಹ ಘಟನೆಗಳಿಂದ ಜನತೆಗೆ ಪೊಲೀಸರ ಮೇಲಿನ ಅಳಿದುಳಿದಿರುವ ವಿಶ್ವಾಸವು ಇಲ್ಲವಾಗಿದೆ !-ಸಂಪಾದಕರು 

ತಮ್ಮದೆ ಖಾತೆಯ ಐ.ಪಿ.ಎಸ್. ಅಧಿಕಾರಿ ಭಯೋತ್ಪಾದಕರ ಸಂಪರ್ಕದಲ್ಲಿ ಇದ್ದುದರ ಸುಳಿವು ಸಿಗದಿರುವ ದೇಶದಲ್ಲಿಯ ಎಲ್ಲಕ್ಕಿಂತ ದೊಡ್ಡ ತನಿಖಾ ತಂಡಕ್ಕೆ ಎಂದಾದರೂ ದೇಶದ ಬೇರೆ ಭಯೋತ್ಪಾದಕ ಕಾರ್ಯಾಚರಣೆಯ ಮಾಹಿತಿಯು ಸಿಗಬಹುದೇ ? ಇದು ಅವರಿಗೆ ಲಜ್ಜಾಸ್ಪದವಾಗಿದೆ !- ಸಂಪಾದಕರು 

ಈವರೆಗೆ ಪೊಲೀಸರು ಗೂಂಡಾ, ಕಳ್ಳ, ದರೋಡೆಕೋರ, ಬಲತ್ಕಾರಿ, ಭ್ರಷ್ಟಾಚಾರಿಗಳು ಇರುವುದು ಎಲ್ಲರಿಗೂ ತಿಳಿದಿದೆ, ಈಗ ಅವರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ! ಜನತೆಗೆ, ಪರ್ಯಾಯವಾಗಿ ದೇಶಕ್ಕೆ ಇಂತಹ ಪೊಲೀಸರಿಂದಲೇ ನಿಜವಾಗಿ ಅಪಾಯವಿದೆ !- ಸಂಪಾದಕರು 

ಅಧಿಕಾರಿ ಅರವಿಂದ ದಿಗ್ವೀಜಯ ನೆಗೀಯವರನ್ನು ರಾಷ್ಟ್ರೀಯ ತನಿಖಾ ದಳದವರು ಬಂಧಿಸಿದ್ದಾರೆ

ನವದೆಹಲಿ – ಪೊಲೀಸ್ ದ ಜಿಹಾದೀ ಭಯೋತ್ಪಾದಕ ಸಂಘಟನೆ ಲಷ್ಕರ-ಎ-ತೊಯಬಾಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯ) ಗೌಪ್ಯ ಕಾಗದಪತ್ರಗಳನ್ನು ಪೂರೈಸಿದ ಪ್ರಕರಣದಲ್ಲಿ ಇದೇ ದಳದ ಹಿಮಾಚಲ ಪ್ರದೇಶದಲ್ಲಿಯ ಐ.ಪಿ.ಎಸ್. ಅಧಿಕಾರಿ ಅರವಿಂದ ದಿಗ್ವೀಜಯ ನೆಗೀಯವರನ್ನು ದಳದಿಂದ ಬಂಧಿಸಲಾಯಿತು. ನೆಗೀ ಇವರು ಶಿಮ್ಲಾದಲ್ಲಿ ಎನ್.ಐ.ಎ.ನ ಹೆಚ್ಚುವರಿ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು ಅವರು ಲಷ್ಕರ-ಎ-ತೊಯಿಬಾದ ಒಂದು ಒಂದು ಭಯೋತ್ಪಾದಕನಿಗೆ ಗೌಪ್ಯ ಕಾಗದಪತ್ರಗಳನ್ನು ನೀಡಿದ್ದರು. ಎನ್.ಐ.ಎ.ಯು ನವಂಬರ 6, 2021 ರಂದು ನೆಗೀಯವರ ವಿರೋಧದಲ್ಲಿ ಅಪರಾಧವನ್ನು ನೋಂದಾಯಿಸಿದ್ದರು ಅನಂತರ ಅವರ ಮನೆಯಲ್ಲಿ ತಪಾಸಣೆ ಮಾಡಲಾಗಿತ್ತು ಈ ಪ್ರಕರಣದಲ್ಲಿ 6 ಜನರನ್ನು ಬಂದಿಸಲಾಗಿತ್ತು.

(ಸೌಜನ್ಯ : Republic World )

ಹಿಂದೂಗಳನ್ನು ‘ಭಯೋತ್ಪಾದಕ’ ಎಂದು ನಿರ್ಧರಿಸುವ ಪ್ರಕರಣದ ತನಿಖೆಯನ್ನು ಮಾಡಿದ್ದರು.

ನಗೀಯು 2007 ರಲ್ಲಿ ಆದಂತಹ ಅಜಮೆರ ದರ್ಗ ಸ್ಫೋಟ ಪ್ರಕರಣದ ತನಿಖೆಯನ್ನು ಮಾಡಿದ್ದರು. ಈ ಪ್ರಕರಣದಲ್ಲಿ ಹಿಂದುತ್ವನಿಷ್ಠರ ಕೈಯಿದೆ ಎಂದು ಹೇಳಲಾಗಿತ್ತು. ನೆಗೀಯವರು 2008 ರಲ್ಲಿ ಮಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿಯೂ ಸಹಭಾಗವಿತ್ತು; ಆದರೆ ನಂತರ ಅವರನ್ನು ತೆಗೆಯಲಾಯಿತು. ಸಮಝೌತಾ ಎಕ್ಸಪ್ರೆಸ್ ಬಾಂಬ್‍ಸ್ಫೋಟದ ಪ್ರಕರಣವನ್ನು ಅವರು ತನಿಖೆ ಮಾಡಿದ್ದರು ಈ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದರನ್ನು ಬಂದಿಸಲಾಗಿತ್ತು.