ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

ಅಡುಗೆಮನೆಯ ಸೇವೆಯ ಮಹತ್ವ !

‘ಕುಟುಂಬವಿರಲಿ, ಆಶ್ರಮವಿರಲಿ, ಪ್ರತಿಯೊಬ್ಬರಿಗೆ ಅಡುಗೆಮನೆಯೊಂದಿಗೆ ಸಂಬಂಧವಿರುತ್ತದೆ. ಹಾಗಾಗಿ ಇಲ್ಲಿ ಸೇವೆ ಮಾಡಿದರೆ ಎಲ್ಲರೊಂದಿಗೆ ಸಂಪರ್ಕವಾಗುತ್ತದೆ. ಇಲ್ಲಿ ಪ್ರತಿಯೊಬ್ಬರ ಇಷ್ಟಾನಿಷ್ಟಗಳು, ಆಹಾರದ ಪಥ್ಯಗಳು ತಿಳಿಯುತ್ತವೆ. ಹಾಗಾಗಿ ಅನೇಕರೊಡನೆ ಆತ್ಮೀಯತೆ ಬೆಳೆಯುತ್ತದೆ. ಇದರ ಬಹುದೊಡ್ಡ ಲಾಭವೆಂದರೆ ನಾವು ನಮ್ಮನ್ನು ಮರೆತು ಇತರರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ. ಇದರಿಂದ ಅಹಂಕಾರವು ಕಡಿಮೆಯಾಗುತ್ತದೆ ಮತ್ತು ಪ್ರೇಮಭಾವವು ಹೆಚ್ಚಾಗುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೨೭.೧೧.೨೦೨೧)

ಸಾಧಕ ಗೃಹಿಣಿಯರಿಗೆ ಅಗತ್ಯ ದೃಷ್ಟಿಕೋನ !

‘ಸಾಧನೆಗೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕೆಲವು ಸಾಧಕ ಗೃಹಿಣಿಯರು ದೇವತೆಯ ನಾಮಜಪದ ಮಂಡಲದಲ್ಲಿ ಪತಿಯ ಹೆಸರನ್ನು ಬರೆದಿಡುತ್ತಾರೆ. ಗಂಡನ ವಿರೋಧವನ್ನು ತಪ್ಪಿಸಲು ಈ ಕ್ರಮವು ಸೂಕ್ತವಾಗಿದೆ; ಆದರೆ ಮಕ್ಕಳು ಕೇಳದಿದ್ದರೆ ಅಥವಾ ವಿರೋಧಿಸುತ್ತಿದ್ದರೆ, ಅವರ ಹೆಸರನ್ನು ದೇವತೆಯ ಜಪ ಮಂಡಲದಲ್ಲಿ ಬರೆಯಬಾರದು. ಅವರನ್ನು ತಾಯಿಯೆಂಬ ಸಂಬಂಧದಿಂದ ಗದರಿಸಬೇಕು.

– (ಪರಾತ್ಪರ ಗುರು) ಡಾ. ಆಠವಲೆ (೧೪.೧೧.೨೦೨೧)

ಅನುಭೂತಿಗಳನ್ನು ಖರೀದಿಸಲು ಸಾಧ್ಯವಿಲ್ಲ, ನೀವು ಅದಕ್ಕೆ ಅರ್ಹತೆ ಪಡೆಯಬೇಕಾಗುತ್ತದೆ !

‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ. ನಾವು  ಎಷ್ಟು ಪ್ರಮಾಣದಲ್ಲಿ ಅಥವಾ ಯಾವ ಹಂತದ ಸಾಧನೆಯನ್ನು (ಕೃತಿಯನ್ನು) ಮಾಡುತ್ತೇವೆ, ಆ ಹಂತದ ಅಧ್ಯಾತ್ಮದ ವಿವಿಧ ಅಂಶಗಳು ಅನುಭೂತಿಗಳ ಮೂಲಕ ಗಮನಕ್ಕೆ ಬರಲು ಪ್ರಾರಂಭವಾಗುತ್ತವೆ. ಪ್ರತಿಯೊಂದು ಹಂತದ ಅನುಭೂತಿಯನ್ನು ಪಡೆಯಲು, ಅಗತ್ಯವಿರುವಷ್ಟು ಪ್ರಮಾಣದಲ್ಲಿ ಸಾಧನೆಯನ್ನು ಮಾಡುವ ಮೂಲಕ ಅದಕ್ಕೆ ಸಕ್ಷಮರಾಗಿರುವುದು (ಅರ್ಹತೆ) ಅಗತ್ಯವಿದೆ. ಯಾರಿಗೂ ಹಣ ಕೊಟ್ಟು ಅನುಭೂತಿಗಳನ್ನು ಖರೀದಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಅರ್ಹತೆ ಇಲ್ಲದಿರುವಾಗ ಯಾರಾದರೂ ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರೆ, ಅದರಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೩.೧.೨೦೨೨)

‘ಅಧ್ಯಾತ್ಮದಲ್ಲಿ ಸಾಧನೆಗೆ ಆರಂಭ, ಎಂದರೆ ‘ಅ’ (AA) ಎಂದೇನೂ ಇರುವುದಿಲ್ಲ. ಅವರವರ ಮಟ್ಟಕ್ಕನುಸಾರ ಮತ್ತು ಸಾಧನೆಯ ಮಾರ್ಗಕ್ಕನುಸಾರವಾಗಿ ಪ್ರತಿಯೊಬ್ಬರ ಸಾಧನೆಯು ಪ್ರಾರಂಭವಾಗುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೨೯.೧೨.೨೦೨೧)