ಈರೋಡ (ತಮಿಳುನಾಡು)ದಲ್ಲಿನ ಶ್ರೀ ಜ್ವರಹರೇಶ್ವರನ ದೇವಸ್ಥಾನದಲ್ಲಿ ಮಹರ್ಷಿಗಳ ಆಜ್ಞೆಯಂತೆ ಸಾಧಕರ ಆರೋಗ್ಯಕ್ಕಾಗಿ ಮಂಗಲಮಯ ಪೂಜೆ ! 

ಶ್ರೀ. ವಿನಾಯಕ ಶಾನಭಾಗ

‘ಈರೋಡ (ತಮಿಳುನಾಡು)ದಲ್ಲಿನ ಶ್ರೀ ಜ್ವರಹರೇಶ್ವರನ ದೇವಸ್ಥಾನದಲ್ಲಿ ಮಹರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ನೀಡಿದ ಆಜ್ಞೆಯತೆ ಸಾಧಕರ ಉತ್ತಮ ಆರೋಗ್ಯಕ್ಕಾಗಿ ೧೦.೩.೨೦೨೦ ರಂದು ಮಂಗಲಮಯ ವಾತಾವರಣದಲ್ಲಿ ಅಭಿಷೇಕ ಮತ್ತು ಪೂಜೆಯನ್ನು ಮಾಡಲಾಯಿತು. ಆ ಸಮಯದಲ್ಲಿ ಪೂ. ಡಾ. ಓಂ ಉಲಗನಾಥನ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಂದನೀಯ ಉಪಸ್ಥಿತಿಯು ಲಭಿಸಿತು. ಈ ಪೂಜೆಯನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಜನ್ಮನಕ್ಷತ್ರ ಉತ್ತರಾಫಾಲ್ಗುಣಿ, ಜನ್ಮವಾರ ಮಂಗಳವಾರ ಮತ್ತು ಕನ್ಯಾರಾಶಿಯಲ್ಲಿರುವಾಗ ಯಮಗಂಡ ಕಾಲದಲ್ಲಿ ಮಾಡಲಾಯಿತು.

ಶ್ರೀ ಜ್ವರಹರೇಶ್ವರನಲ್ಲಿ ಸಾಧಕರ ಆರೋಗ್ಯದ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುತ್ತಿರುವ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ

 

ಭವಾನಿ, ಈರೋಡನಲ್ಲಿನ ಶ್ರೀ ಜ್ವರಹರೇಶ್ವರ ದೇವರ ಮೂರ್ತಿ

ಸದ್ಯ ಜಗತ್ತಿನಲ್ಲಿ ವಿವಿಧ ಸಾಂಕ್ರಾಮಿಕರೋಗಗಳ ಮಾಧ್ಯಮದಿಂದ ಅನೇಕ ಜನರು ಕಾಯಿಲೆ ಬೀಳುತ್ತಿದ್ದಾರೆ. ಆದುದರಿಂದ ‘ಸನಾತನದ ಸಾಧಕರು ಯಾವುದೇ ಜ್ವರಪೀಡಿತರಾಗಿ ಭಯಭೀತರಾಗಬಾರದು’, ಎಂದು ಶ್ರೀ ಜ್ವರಹರೇಶ್ವರನ ಪೂಜೆಯನ್ನು ಮಾಡಲಾಯಿತು. ಆ ಸಮಯದಲ್ಲಿ ಹೆಚ್ಚೆಚ್ಚು ಹಣ್ಣಿನರಸದ ಅಭಿಷೇಕವನ್ನು ಮಾಡಲಾಯಿತು.

ಈ ಪೂಜೆಯ ಬಗ್ಗೆ ಮಹರ್ಷಿಗಳು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, “ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಹೆಸರಿನಲ್ಲಿ, ಅವರ ಜನ್ಮನಕ್ಷತ್ರ ಮತ್ತು ಜನ್ಮವಾರ ಇರುವ ದಿನದಂದು ಶ್ರೀ ಜ್ವರಹರೇಶ್ವರನಿಗೆ ಅಭಿಷೇಕವನ್ನು ಮಾಡುವುದರಿಂದ ಎಲ್ಲ ಸಾಧಕರಿಗಾಗಿ ಪ್ರತ್ಯೇಕವಾದ ಪೂಜೆಯನ್ನು ಮಾಡುವ ಅವಶ್ಯಕತೆಯಿಲ್ಲ”, ಎಂದು ಹೇಳಿದರು.

೧. ಶ್ರೀ ಜ್ವರಹರೇಶ್ವರ ದೇವಸ್ಥಾನದ ಮಾಹಿತಿ

ಶ್ರೀ ಜ್ವರಹರೇಶ್ವರನ ದೇವಸ್ಥಾನವು ಈರೋಡದಲ್ಲಿನ ಭವಾನಿ ಊರಿನ ಸಂಗಮೇಶ್ವರ ದೇವಸ್ಥಾನದಲ್ಲಿದೆ. ಭವಾನಿ ಊರಿನಲ್ಲಿ ಕಾವೇರಿ, ಭವಾನಿ ಮತ್ತು ಅಮೃತವಾಹಿನಿ (ಗುಪ್ತನದಿ) ಈ ೩ ನದಿಗಳ ಸಂಗಮವಿದೆ. ಈ ಸಂಗಮದ ಸ್ಥಳದಲ್ಲಿ ಸಂಗಮೇಶ್ವರನ ಶಿವ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶಿವ ಮತ್ತು ಪಾರ್ವತಿ ಈ ಇಬ್ಬರ ದೇವತೆಗಳ ದೇವಸ್ಥಾನಗಳ ಮಧ್ಯದಲ್ಲಿ ಶ್ರೀ ಜ್ವರಹರೇಶ್ವರನ ದೇವಸ್ಥಾನವಿದೆ. ಶ್ರೀ ಜ್ವರಹರೇಶ್ವರನಿಗೆ ೩ ಮುಖಗಳು, ೩ ಕೈಗಳು ಮತ್ತು ೩ ಕಾಲುಗಳಿದ್ದೂ ಈ ದೇವತೆಯು ಶಿವನ ಒಂದು ರೂಪವಾಗಿದೆ.

೨. ಗಮನಾರ್ಹ ಅಂಶಗಳು

ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪ್ರಾರ್ಥನೆಯನ್ನು ಮಾಡುತ್ತಿರುವಾಗ ಶ್ರೀ ಜ್ವರಹರೇಶ್ವರ ದೇವರಿಗೆ ಮುಡಿಸಿದ ಹೂವುಗಳು ಕೆಳಗೆ ಬಿದ್ದವು.

ಆ. ಪೂಜೆ ಮುಗಿದ ನಂತರ ಅನೇಕ ಮಹಿಳೆಯರು ಮಡಿಕೆಗಳಲ್ಲಿ ಕಾವೇರಿ ನದಿಯ ನೀರನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಬಂದರು. ಆಗ ಪೂ. ಡಾ. ಓಂ ಉಲಗನಾಥನ್ ಇವರು, “ಇದು ಶುಭಸಂಕೇತವಾಗಿದೆ”, ಎಂದು ಹೇಳಿದರು.

– ಶ್ರೀ. ವಿನಾಯಕ ಶಾನಭಾಗ, ಈರೋಡ, ತಮಿಳುನಾಡು. (೧೧.೩.೨೦೨೦)