ದೈನಿಕ ‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಬರವಣಿಗೆಯನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಬರೆದು ಕಳುಹಿಸಿ !
‘ಅನೇಕ ಸಾಧಕರು ಸಂಕಲನ ವಿಭಾಗಕ್ಕೆ ಪ್ರಸಾರದಲ್ಲಿನ ಅನುಭವ, ಅನುಭೂತಿಗಳು, ಕಲಿಯಲು ಸಿಕ್ಕಿದ ಅಂಶಗಳು, ಸಾಧನಾ ಪ್ರವಾಸ, ಭಾವಪ್ರಯೋಗ, ಕವಿತೆ ಮುಂತಾದ ವಿವಿಧ ಬರವಣಿಗೆಗಳನ್ನು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲು ಕಳುಹಿಸುತ್ತಾರೆ. ಆ ಬರವಣಿಗಳು ವಿಸ್ತೃತ(ವ್ಯಾಪಕ) ಪ್ರಮಾಣದಲ್ಲಿ ಬರುತ್ತಿವೆ. ಆದುದರಿಂದ ‘ಆ ಬರವಣಿಗೆಗಳನ್ನು ಆಯ್ದುಕೊಳ್ಳುವುದು, ಸಂಕಲನ ಮಾಡುವುದು ಮತ್ತು ಆ ಬರವಣಿಗೆಗಳನ್ನು ಮುದ್ರಿಸುವುದು’, ಇವುಗಳಲ್ಲಿ ಅಡಚಣೆಗಳು ಬರುತ್ತಿವೆ. ಇನ್ನು ಮುಂದೆ ಸಾಧಕರು ಮುಂದಿನ ಅಂಶಗಳನ್ನು ಗಮನದಲ್ಲಿಟ್ಟು ಬರವಣಿಗೆಗಳನ್ನು ಕಳುಹಿಸಬೇಕು.
‘ಗುರುಕೃಪಾಯೋಗವು ಸಾಧನೆಯ ವಿಹಂಗಮ ಮಾರ್ಗವಾಗಿದ್ದು ಗುರುತತ್ತ್ವವು ನಮಗೆ ಹೆಜ್ಜೆಹೆಜ್ಜೆಗೂ ಪ್ರತಿಯೊಂದು ಕ್ಷಣ ಕಲಿಸುತ್ತಿರುತ್ತದೆ ಮತ್ತು ಸಾಧನೆಗಾಗಿ ತಯಾರು ಮಾಡುತ್ತಿರುತ್ತದೆ. ಇದರ ಅನುಭೂತಿಯನ್ನು ಸನಾತನದ ಪ್ರತಿಯೊಬ್ಬ ಸಾಧಕರು ಪಡೆಯುತ್ತಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸಾಧಕರಿಗೆ ಬಹಳಷ್ಟು ವೈಶಿಷ್ಟ್ಯಪೂರ್ಣ ಅನುಭೂತಿಗಳು ಬರುತ್ತವೆ, ಹಾಗೆಯೇ ಅಂಶಗಳು ಕಲಿಯಲು ಸಿಗುತ್ತಿರುತ್ತವೆ; ಆದರೆ ಈ ವೈಶಿಷ್ಟ್ಯಪೂರ್ಣ ಅನುಭೂತಿಗಳನ್ನು ಮತ್ತು ಕಲಿಯಲು ಸಿಕ್ಕ ಅಂಶಗಳನ್ನು ತಕ್ಷಣ ಬರೆದು ಕೊಡುವಲ್ಲಿ ಸಾಧಕರ ಉದಾಸೀನತೆ ಕಂಡು ಬರುತ್ತದೆ. ‘ತಮ್ಮ ಬರವಣಿಗೆಯಿಂದ, ಅನುಭೂತಿಗಳಿಂದ ಇತರರಿಗೆ ಕಲಿಯಲು ಸಿಗುತ್ತದೆ, ಹಾಗೆಯೇ ವಾಚಕರ ಶ್ರದ್ಧೆಯು ಹೆಚ್ಚಾಗಲು ಸಹಾಯವಾಗುತ್ತದೆ’, ಎಂಬ ಮಹತ್ವವನ್ನು ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಮಾಧ್ಯಮಗಳಿಂದ ಸಾಧಕರಿಗೆ ಹೇಳಿದ್ದಾರೆ. ಗುರುದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹಾಗೆಯೇ ‘ನಮಗೆ ಕಲಿಯಲು ಸಿಕ್ಕಿದ ಅಂಶಗಳಿಂದ ಮತ್ತು ಅನುಭೂತಿಗಳಿಂದ ಇತರ ಸಾಧಕರು ಸಿದ್ಧರಾಗಬೇಕು ಮತ್ತು ಅವರಿಗೆ ಸಾಧನೆಯ ದಿಶೆ ಸಿಗಬೇಕೆಂದು’, ಸಾಧಕರು ತಮ್ಮ ವೈಶಿಷ್ಟ್ಯಪೂರ್ಣ ಅನುಭೂತಿಗಳನ್ನು ಮತ್ತು ಸಾಧನೆಯ ಪ್ರಯತ್ನವನ್ನು ಮಾಡುವಾಗ ಕಲಿಯಲು ಸಿಕ್ಕಿದ ಅಂಶಗಳನ್ನು ತಕ್ಷಣ ಬರೆದು ಅದನ್ನು [email protected] ಈ ಗಣಕೀಯ ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, c/o ‘ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ. ಪಿನ್ – ೪೦೩೪೦೧ – ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೧.೨೦೨೨) |
೧. ‘ಸನಾತನ ಪ್ರಭಾತ’ಕ್ಕಾಗಿ ಎಂತಹ ಬರವಣಿಗೆಗಳನ್ನು ಕಳುಹಿಸಬೇಕು ?
ಅ. ಪರಾತ್ಪರ ಗುರು ಡಾ. ಆಠವಲೆಯವರಿಗೆ ಸಂಬಂಧಿತ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಮೊದಲಿನ ಅವರ ಭೇಟಿಯ ಪ್ರಸಂಗಗಳು, ಅವರಿಂದ ಕಲಿಯಲು ಸಿಕ್ಕಿದ ಅಂಶಗಳು, ‘ಅವರು ಸೇವೆಯಲ್ಲಿ, ಹಾಗೆಯೇ ಸಾಧನೆಯಲ್ಲಿ ಹೇಗೆ ನಮ್ಮನ್ನು ರೂಪಿಸಿದರು ?’, ಇವುಗಳ ಬಗೆಗಿನ ಅಂಶಗಳು ಮುಂತಾದ ಬರವಣಿಗೆಗಳನ್ನು ಪ್ರಾಧಾನ್ಯತೆಯಿಂದ ಮತ್ತು ತೀರಾ ನಿಖರವಾಗಿ ಕಳುಹಿಸಬೇಕು.
ಆ. ಸನಾತನದ ಸಂತರು ಮತ್ತು ಸದ್ಗುರುಗಳಿಗೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಕಳುಹಿಸಬೇಕು.
ಇ. ಸಾಧಕರಿಗೆ ಬಂದ ನಾವೀನ್ಯಪೂರ್ಣ ಅನುಭೂತಿಗಳು, ಸಾಧಕರ ಜೀವನದಲ್ಲಿನ ಕೆಲವು ವಿಶಿಷ್ಟ ಪ್ರಸಂಗಗಳು ಮುಂತಾದ ಬರವಣಿಗೆಗಳನ್ನು ಸಂಕ್ಷಿಪ್ತವಾಗಿ ಕಳುಹಿಸಬೇಕು.
ಈ. ಇತರ ಸಾಧಕರು, ಹಾಗೆಯೇ ಬಾಲಸಾಧಕರ ಗುಣವೈಶಿಷ್ಟ್ಯಗಳನ್ನು ಕಳುಹಿಸುವಾಗ ಸಾಧಕರು ಅದನ್ನು ಸಂಕ್ಷಿಪ್ತವಾಗಿ, ಹಾಗೆಯೇ ವಾಚಕರಿಗೆ ಅರ್ಥವಾಗುವ ರೀತಿಯಲ್ಲಿ ಬರೆದು ಕಳುಹಿಸಬೇಕು. ಬಾಲಸಾಧಕರ ವೈಶಿಷ್ಟ್ಯಪೂರ್ಣ ಬರವಣಿಗೆಯನ್ನು ಕಳುಹಿಸುವ ಬಗ್ಗೆ ಸನಾತನ ಪ್ರಭಾತದಲ್ಲಿ ಆಗಾಗ ಚೌಕಟ್ಟುಗಳು ಪ್ರಕಾಶನವಾಗಿವೆ. ಆ ಚೌಕಟ್ಟುಗಳ ಕತ್ತರಿಸಿದ ಭಾಗಗಳನ್ನು ಅಥವಾ ಆ ಸಂಚಿಕೆಯನ್ನು ತಮ್ಮ ಬಳಿ ಇಟ್ಟುಕೊಂಡು ಎಲ್ಲವನ್ನು ಪರಿಪೂರ್ಣಗೊಳಿಸಿಯೇ ಬರವಣಿಗೆಯನ್ನು ಕಳುಹಿಸಬೇಕು.
ಉ. ಇತರ ವಿಷಯಗಳ ನಾವೀನ್ಯಪೂರ್ಣ ಬರವಣಿಗೆಯನ್ನೂ ಸ್ವಲ್ಪಪ್ರಮಾಣದಲ್ಲಿ ಬರೆದು ಕಳುಹಿಸಬೇಕು.
ಊ. ಆಯಾ ಸಮಯದ ವಿಷಯ, ಉದಾ. ‘ಕೊರೊನಾ’ ಮಹಾಮಾರಿಯ ಬಗೆಗಿನ ಬರವಣಿಗೆಯನ್ನು ಕಳುಹಿಸುವಾಗ ಯಾವ ಮಾಹಿತಿಯು ‘ಸನಾತನ ಪ್ರಭಾತ’ದಲ್ಲಿ ಈ ಮೊದಲೇ ಪ್ರಕಟವಾಗಿದೆಯೋ, ಅದೇ ರೀತಿಯ ಮಾಹಿತಿಯನ್ನು ಪುನಃ ಕಳುಹಿಸಬಾರದು. ಅದಕ್ಕಿಂತಲೂ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣ ಮಾಹಿತಿ ಇದ್ದರೆ ಅದನ್ನು ಸಂಕ್ಷಿಪ್ತವಾಗಿ ಕಳುಹಿಸಬೇಕು.
ಎ. ಸಾಧಕರು ಮೃತ ಸಾಧಕರ ಬಗೆಗಿನ ಮಹತ್ವಪೂರ್ಣ ಬರವಣಿಗೆಯನ್ನು ಕಳುಹಿಸಬೇಕು.
೨. ಎಂತಹ ಬರವಣಿಗೆಗಳನ್ನು ಕಳುಹಿಸಬಾರದು ?
ಅ. ಸಾಧಕರು ಮನಸ್ಸಿನ ಸ್ತರದಲ್ಲಿನ ವಿಚಾರಪ್ರಕ್ರಿಯೆಯನ್ನು ವಿಸ್ತಾರವಾಗಿ ಬರೆದು ಕಳುಹಿಸಬಾರದು. ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿ ಹೇಳಬಹುದು.
ಆ. ಸಾಧಕರು ಒಂದೇ ಸಲಕ್ಕೆ ೫-೬ ದೊಡ್ಡ ಕವಿತೆಗಳನ್ನು ಬರೆದು ಕಳುಹಿಸಬಾರದು. ಕೆಲವೊಮ್ಮೆ ಕವಿತೆಗಳಲ್ಲಿನ ಕೆಲವು ಸಾಲುಗಳು ಅಪೂರ್ಣವಿರುತ್ತವೆ. ಅವುಗಳ ಅರ್ಥವನ್ನು ತಿಳಿದುಕೊಂಡು ಸಂಕಲನ ಮಾಡಲು ಕಠಿಣವಾಗುತ್ತದೆ ಮತ್ತು ಹೆಚ್ಚು ಸಮಯ ನೀಡಬೇಕಾಗುತ್ತದೆ. ಅನೇಕ ಸಾಧಕರು ಬಹಳ ದೊಡ್ಡ ಕವಿತೆಗಳನ್ನು ಕಳುಹಿಸುತ್ತಾರೆ. ಆದುದರಿಂದ ಕವಿತೆಗಳಲ್ಲಿನ ಅನಾವಶ್ಯಕ ಭಾಗವನ್ನು ತೆಗೆದು ಅದನ್ನು ವ್ಯವಸ್ಥಿತವಾಗಿ ಮಾಡಲು ಸಾಧಕರು ಸಮಯ ನೀಡಬೇಕಾಗುತ್ತದೆ.
೩. ಇತರ ಅಂಶಗಳು
ಅ. ಬರವಣಿಗೆಗಳನ್ನು ಕಳುಹಿಸುವ ಎಲ್ಲ ಸಾಧಕರು ಬರವಣಿಗೆಯ ಕೆಳಗೆ ತಮ್ಮ ಹೆಸರು, ವಯಸ್ಸು, ಊರು, ದಿನಾಂಕ ಮತ್ತು ಸಂಪರ್ಕ ಕ್ರಮಾಂಕವನ್ನು ಬರೆಯಬೇಕು. ಸಾಧಕರು ಊರಿನ ಹೆಸರು ಬರೆಯುವಾಗ ತಾಲೂಕು ಮತ್ತು ಜಿಲ್ಲೆಯ ಹೆಸರನ್ನೂ ಬರೆಯಬೇಕು.
ಆ. ಕಡತದಲ್ಲಿ ಯಾವ ಸಾಧಕರ, ಹಾಗೆಯೇ ಸಂಬಂಧಿಕರ ಉಲ್ಲೇಖವಿರುತ್ತದೋ, ಅವರೆಲ್ಲರ ಹೆಸರು, ಊರು, ವಯಸ್ಸು, ಆಧ್ಯಾತ್ಮಿಕ ಮಟ್ಟದ ಮಾಹಿತಿಯನ್ನೂ ಬರೆಯಬೇಕು.
ಇ. ಬರವಣಿಗೆಯಲ್ಲಿ ಕೆಲವು ಸಂದರ್ಭಗಳನ್ನು ಬರೆದಿದ್ದರೆ, ಅವು ಯೋಗ್ಯವಿರುವ ಬಗ್ಗೆ ಖಚಿತಪಡಿಸಿಕೊಂಡಿರಬೇಕು, ಹಾಗೆಯೇ ‘ಸನಾತನ ಪ್ರಭಾತ’ದಲ್ಲಿನ ಬರವಣಿಗೆಯ ಸಂದರ್ಭವನ್ನು ನೀಡಿದ್ದರೆ ಸಾಧ್ಯವಿದ್ದಷ್ಟು ಆ ಸಂಚಿಕೆಯ ದಿನಾಂಕವನ್ನೂ ಬರೆಯಬೇಕು, ಇಲ್ಲದಿದ್ದರೆ ಇಂತಹ ಮಾಹಿತಿಯನ್ನು ಹುಡುಕಲು ಸಂಕಲನ ಸೇವೆಯಲ್ಲಿನ ಸಾಧಕರ ಸಮಯ ಹೋಗುತ್ತದೆ.
ಈ. ಸಾಧಕರು ತಮ್ಮ ಮತ್ತು ಯಾವ ಸಾಧಕರ ಬಗ್ಗೆ ಬರೆದು ಕೊಟ್ಟಿರುವರೋ, ಅವರ ಛಾಯಾಚಿತ್ರವನ್ನು ಕಳುಹಿಸಬೇಕು, ಉದಾ. ಯಾರಾದರೊಬ್ಬ ಸಾಧಕರ ಬಗ್ಗೆ ಅವನ ತಾಯಿ-ತಂದೆ ಮತ್ತು ಮಗಳು ವಿಷಯವನ್ನು ಬರೆದುಕೊಟ್ಟಿದ್ದರೆ, ತಾಯಿ-ತಂದೆ, ಮಗಳು ಇವರ ಮತ್ತು ಅವರು ಯಾವ ಸಾಧಕನ ಬಗ್ಗೆ ವಿಷಯವನ್ನು ಬರೆದು ಕೊಟ್ಟಿರುವರೋ, ಅವನ ಛಾಯಾಚಿತ್ರವನ್ನು ಕಳುಹಿಸಬೇಕು.
ಉ. ಬಾಲಸಾಧಕರ ಬರವಣಿಗೆಯನ್ನು ಕಳುಹಿಸುವಾಗ ಆ ಬಾಲಸಾಧಕರ ಸದ್ಯದ ಛಾಯಾಚಿತ್ರ ಮತ್ತು ಯಾರು ಆ ಬಾಲಸಾಧಕನ ಬಗ್ಗೆ ಬರೆದು ಕೊಟ್ಟಿರುವರೋ, ಅವರೆಲ್ಲರ ಛಾಯಾಚಿತ್ರಗಳನ್ನು ಕಳುಹಿಸಬೇಕು.
ಊ. ಕೆಲವು ಸಾಧಕರು ಕೊನೆ ಗಳಿಗೆಯಲ್ಲಿ ‘ವಾಟ್ಸ್‌ಆಪ್’ನಲ್ಲಿ ಬರೆದು ಕಳುಹಿಸುತ್ತಾರೆ. ಸಾಧಕರು ಈ ರೀತಿ ‘ವಾಟ್ಸ್‌ಆಪ್’ನಲ್ಲಿ ಬರವಣಿಗೆಯನ್ನು ಕಳುಹಿಸದೇ ಅದನ್ನು ಸಂಕಲನ ವಿಭಾಗದ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು.
ಎ. ಬಹುತೇಕ ಬಾರಿ ಸಾಧಕರ ಹುಟ್ಟುಹಬ್ಬ, ಉಪನಯನ, ವಿವಾಹ ಇವುಗಳ ಬಗೆಗಿನ ಕಡತಗಳು ಕೊನೆ ಗಳಿಗೆಯಲ್ಲಿ ಬರುತ್ತವೆ. ಆದುದರಿಂದ ಸಂಕಲನ ವಿಭಾಗಕ್ಕೆ ಇತರ ನಿಯೋಜಿತ ಸೇವೆಗಳನ್ನು ನಿಲ್ಲಿಸಿ ಈ ಕಡತಗಳ ಸಂಕಲನ ಮಾಡಬೇಕಾಗುತ್ತದೆ. ಇಂತಹ ಕಡತಗಳ ಸಂಕಲನ ವಿಭಾಗದ ಕಡೆಗೆ ಕನಿಷ್ಠ ೩ ವಾರಗಳ ಮೊದಲು ಬರುವುದು ಅಪೇಕ್ಷಿತವಿದೆ.
ಐ. ನಿಧನ ಹೊಂದಿದ ಸಾಧಕರ ಬಗ್ಗೆ ಬರವಣಿಗೆಯನ್ನು ಅವರ ಕುಟುಂಬದವರು ಮತ್ತು ಸಾಧಕರು ಬೇಗನೆ ಕಳುಹಿಸಿದರೆ, ಅದನ್ನು ನಿಧನದ ನಂತರದ ೧೦ ನೇ ಅಥವಾ ೧೨ ನೇ ದಿನ ಮುದ್ರಿಸಲು ಸಾಧ್ಯವಾಗುತ್ತದೆ. ಬಹುತೇಕ ಬಾರಿ ಈ ಬರವಣಿಗೆಯು ೨-೩ ದಿನ ಮೊದಲು ಬರುವುದರಿಂದ ಸಂಕಲನ ಮಾಡಿ ಅದನ್ನು ದೈನಿಕದಲ್ಲಿ ಮುದ್ರಿಸಲು ಬಹಳ ಗಡಿಬಿಡಿಯಾಗುತ್ತದೆ. ಇಂತಹ ಬರವಣಿಗೆಗಳನ್ನು ಕಳುಹಿಸುವಾಗ ಜೊತೆಗೆ ಮೃತ ಸಾಧಕರ ಛಾಯಾಚಿತ್ರವನ್ನು ಕಳುಹಿಸಬೇಕು. ಬರವಣಿಗೆಯಲ್ಲಿ ಅವರ ವಯಸ್ಸನ್ನು ಉಲ್ಲೇಖಿಸಬೇಕು. ‘ಮೃತ ಸಾಧಕರ ೧೨ ನೇ ಮತ್ತು ೧೩ ನೇ ದಿನ ಯಾವಾಗ ಇದೆ ? ಬರವಣಿಗೆಯನ್ನು ಯಾವ ದಿನ ಮುದ್ರಿಸಬೇಕು ?’, ಎಂಬುದನ್ನೂ ಕಡತದಲ್ಲಿ ಬರೆಯಬೇಕು. ಸಂಕಲನ ವಿಭಾಗದ ಕಡೆಗೆ ಅಪೂರ್ಣ ಮಾಹಿತಿ ಬಂದರೆ ಎಲ್ಲವನ್ನು ಪೂರ್ಣಗೊಳಿಸಲು ಸಮನ್ವಯ ಮಾಡುವ ಸಾಧಕರಿಗೆ ಬಹಳ ಸಮಯ ನೀಡಬೇಕಾಗುತ್ತದೆ.
– ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೧.೨೦೨೨)