ಹಿಂದೂ ಹುಡುಗ ಮತ್ತು ಮುಸಲ್ಮಾನ ಹುಡುಗಿಯ ವಿವಾಹ ಪ್ರಕರಣದಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪು !

೧. ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅಪಹರಿಸಿದ ಪ್ರಕರಣದಲ್ಲಿ ಹಿಂದೂ ಯುವಕನ ವಿರುದ್ಧ ನ್ಯಾಯಾಲಯದಲ್ಲಿ ‘ಹೆಬಿಯಸ್ ಕಾರ್ಪಸ್’ ಅರ್ಜಿಯನ್ನು ದಾಖಲಿಸುವ ಮತಾಂಧ ತಂದೆ ಹಾಗೂ ಯುವಕನ ವಿರುದ್ಧ ಅಪರಾಧ ನೋಂದಣಿಯಾಗುವುದು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

‘ಲಕ್ಷ್ಮಣಪುರಿ’ (ಉತ್ತರಪ್ರದೇಶದ)ಯ ಉಸ್ಮಾನ ಎಂಬವನು ‘ಹೆಬಿಯಸ್ ಕಾರ್ಪಸ್’ ಅರ್ಜಿಯನ್ನು ದಾಖಲಿಸಿದನು. (ಯಾರಾದರೊಬ್ಬ ವ್ಯಕ್ತಿ ಕಾಣೆಯಾದರೆ ಅಥವಾ ಆ ವ್ಯಕ್ತಿಯನ್ನು ಯಾರಾದರೂ ಅಪಹರಿಸುವುದು, ಅಡಗಿಸಿಡುವುದು ಅಥವಾ ವ್ಯಕ್ತಿಯ ಪತ್ತೆಯಾಗುವುದಿಲ್ಲ, ಇಂತಹ ಕಾರಣಕ್ಕಾಗಿ ‘ಹೆಬಿಯಸ್ ಕಾರ್ಪಸ್’ ಅರ್ಜಿಯನ್ನು ದಾಖಲಿಸಲಾಗುತ್ತದೆ. ಈ ಅರ್ಜಿಯನ್ನು ಕಾಣೆಯಾಗಿರುವ ವ್ಯಕ್ತಿಯ ಆಪ್ತರು ಅಥವಾ ಮಿತ್ರರು ಯಾರು ಕೂಡ ಮಾಡಬಹುದು) ಉಸ್ಮಾನನ ಅಪ್ರಾಪ್ತ ವಯಸ್ಸಿನ ಮಗಳನ್ನು ವಿನೀತ ಕುಮಾರ ಎಂಬ ಯುವಕನು ಅಪಹರಿಸಿದ ಪ್ರಕರಣದಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ ಉಸ್ಮಾನನು ಮುಂದಿನಂತೆ ಹೇಳಿದ್ದನು, ‘ಹಶ್ಮಿ ಎಂಬ ಹೆಸರಿನ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ವಿನೀತ ಕುಮಾರ ಎಂಬವನು ಪುಸಲಾಯಿಸಿ ಅಪಹರಿಸಿದ್ದಾನೆ ಹಾಗೂ ಅವನು ಶೀಘ್ರದಲ್ಲಿಯೇ ಅವಳೊಂದಿಗೆ ವಿವಾಹವಾಗಲಿಕ್ಕಿದ್ದಾನೆ. ಈ ಪ್ರಕರಣದಲ್ಲಿ ೧೬ ನವೆಂಬರ್ ೨೦೨೦ ರಂದು ಪೊಲೀಸರಲ್ಲಿ ದೂರನ್ನು ದಾಖಲಿಸಲಾಯಿತು. ದೂರಿಗನುಸಾರ ೧೬ ವರ್ಷದ ಹಶ್ಮಿ ೧೩ ನವೆಂಬರ ೨೦೨೦ ರಂದು ‘ಮಾವನ ಮನೆಗೆ ಹೋಗಿ ಬರುತ್ತೇನೆ’, ಎಂದು ಹೇಳಿ ಹೋದಳು; ಆದರೆ ಅವಳು ಹಿಂತಿರುಗಿ ಬರಲಿಲ್ಲ. ಎಲ್ಲೆಡೆ ವಿಚಾರಣೆ ಮಾಡಿದ ನಂತರ ‘ವಿನೀತ ಕುಮಾರನೇ ಅವಳನ್ನು ಅಪಹರಿಸಿದ್ದಾನೆ’, ಎಂದು ಅವಳ ಕುಟುಂಬದವರು ನಿರ್ಧರಿಸಿದರು. ಆದ್ದರಿಂದ ಅವರು ವಿನೀತ ಕುಮಾರನ ವಿರುದ್ಧ ದೂರನ್ನು ದಾಖಲಿಸಿದರು. ಈ ಪ್ರಕರಣದಲ್ಲಿ ಭಾರತೀಯ ದಂಡಸಂಹಿತೆ ಕಲಮ್ ೩೬೩ ಮತ್ತು ೩೬೬ ರ ಆಧಾರದಲ್ಲಿ ಕ್ರಿಮಿನಲ್ ಅಪರಾಧವನ್ನು ನೋಂದಾಯಿಸಲಾಯಿತು.

೨. ಹುಡುಗಿಯು ಪ್ರೌಢಳಾಗಿದ್ದಾಳೆ ಎಂದು ಹೇಳುತ್ತಾ ನೀಡಿದ ಸಾಕ್ಷಿಯ ನಂತರ ನ್ಯಾಯಾಧೀಶರು ಹುಡುಗಿಯನ್ನು ವಿನೀತ ಕುಮಾರನಿಗೆ ಒಪ್ಪಿಸಲು ಆದೇಶ ನೀಡುವುದು

ದೂರನ್ನು ದಾಖಲಿಸಿದ ನಂತರ ಪೊಲೀಸರು ತನಿಖೆಯನ್ನು ಆರಂಭಿಸಿದರು. ೧೭ ನವೆಂಬರ ೨೦೨೦ ರಂದು ಹಶ್ಮಿ ಹುಡುಕಿಯನ್ನು ಪೊಲೀಸ್ ಠಾಣೆಗೆ ತರಲಾಯಿತು. ಅಲ್ಲಿ ‘ಕ್ರಿಮಿನಲ್ ಪ್ರೊಸಿಜರ್ ಕೋಡ್’ನ ಕಲಮ್ ೧೬೧ ರ ಆಧಾರದಲ್ಲಿ ಅವಳ ಸಾಕ್ಷಿಯನ್ನು ನೋಂದಾಯಿಸಿಕೊಳ್ಳಲಾಯಿತು. ಅವಳು ಸಾಕ್ಷಿಯನ್ನು ನೀಡುವಾಗ, “ನಾನು ಪ್ರೌಢಳಾಗಿದ್ದೇನೆ. ಶಾಲೆಯಲ್ಲಿ ನನ್ನ ಜನ್ಮ ದಿನಾಂಕ ೫.೪.೨೦೦೧ ಎಂದು ನೋಂದಾಯಿಸಲಾಗಿದೆ. ನನಗೆ ತಾಯಿ-ತಂದೆಯರ ಮನೆಗೆ ಹೋಗಲಿಕ್ಕಿಲ್ಲ, ನನಗೆ ವಿನೀತ ಕುಮಾರನ ಮನೆಗೆ ಹೋಗಲಿಕ್ಕಿದೆ. ನನಗೆ ಅವನೊಂದಿಗೆ ವಿವಾಹವಾಗಲಿಕ್ಕಿದೆ. ಇದೆಲ್ಲವೂ ನನ್ನ ಇಚ್ಛೆಯಿಂದಲೇ ಆಗಿದೆ. ಅದಕ್ಕಾಗಿ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ ಅಥವಾ ಈಗಲೂ ಒತ್ತಡವಿಲ್ಲ”, ಎಂದು ಸ್ಪಷ್ಟವಾಗಿ ಹೇಳಿದಳು. ಅನಂತರ ಪೀಡಿತೆಯನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಉಪಸ್ಥಿತಗೊಳಿಸಲಾಯಿತು ಹಾಗೂ ಕಲಮ್ ೧೬೪ ರ ಆಧಾರದಲ್ಲಿ ಅವಳ ಸಾಕ್ಷಿಯನ್ನು ತೆಗೆದುಕೊಳ್ಳಲಾಯಿತು. ಅಲ್ಲಿಯೂ ಹಶ್ಮಿ ಇವಳು, “ನಾನು ಪ್ರೌಢಳಾಗಿದ್ದೇನೆ. ನನಗೆ ಅವನ ಜೊತೆಯಲ್ಲಿಯೇ ಹೋಗಲಿಕ್ಕಿದೆ, ನನ್ನ ತಾಯಿ-ತಂದೆಯರಲ್ಲಿಗೆ ಹಿಂತಿರುಗಿ ಹೋಗಲಿಕ್ಕಿಲ್ಲ. ನಾವಿಬ್ಬರೂ ವಿವಾಹವಾಗಲಿಕ್ಕಿದ್ದೇವೆ”, ಎಂದಳು. ಈ ಸಾಕ್ಷಿಯನ್ನು ನೋಂದಾಯಿಸಿದ ನಂತರ ನ್ಯಾಯಾಧೀಶರು ‘ಹುಡುಗಿಯನ್ನು ವಿನೀತ ಕುಮಾರನಿಗೆ ಒಪ್ಪಿಸಬೇಕು’, ಎಂದು ಲಕ್ಷ್ಮಣಪುರಿ (ಲಖ್ನೌ) ಪೊಲೀಸರಿಗೆ ಆದೇಶ ನೀಡಿದರು. ಅದೇ ರೀತಿ ಪೊಲೀಸರು ಹಶ್ಮಿಯನ್ನು ವಿನೀತಕುಮಾರನಿಗೆ ಒಪ್ಪಿಸಿದರು.

೩. ಹುಡುಗಿ ಅಪ್ರಾಪ್ತ ವಯಸ್ಸಿನವಳೆಂದು ತೋರಿಸಲು ಅವಳ ತಂದೆ ಆಧಾರಕಾರ್ಡ್‌ನಲ್ಲಿನ ಜನ್ಮದಿನಾಂಕದ ಆಧಾರವನ್ನು ನೀಡುವುದು

ಹುಡುಗಿಯ ತಂದೆಗೆ ಹಿಂದೂ ಹುಡುಗ ಮತ್ತು ಮುಸಲ್ಮಾನ ಹುಡುಗಿ ಎನ್ನುವ ಸಮೀಕರಣವು ಹೇಗೆ ಇಷ್ಟವಾಗಬಹುದು ? ಅವನು ಉತ್ತರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ‘ಹೆಬಿಯಸ್ ಕಾರ್ಪಸ್’ ಅರ್ಜಿಯನ್ನು ದಾಖಲಿಸಿದನು. ಈ ಅರ್ಜಿಯನ್ನು ಅವನು ಮುಂದಿನಂತೆ ನೀಡಿದ್ದನು “ನನ್ನ ಮಗಳು ೧೬ ವರ್ಷದವಳಾಗಿದ್ದು ಅವಳು ಅಪ್ರಾಪ್ತ ವಯಸ್ಸಿನವಳಾಗಿದ್ದಾಳೆ. ಅವಳ ಆಧಾರಕಾರ್ಡ್‌ನಲ್ಲಿ ಅವಳ ಜನ್ಮ ವರ್ಷ ೨೦೦೪ ಎಂದು ತೋರಿಸಲಾಗಿದೆ. (ವಾಸ್ತವಿಕ ಹುಡುಗಿಯ ಜನ್ಮದಿನಾಂಕ ೫.೪.೨೦೦೧ ಇದೆ) ಆದ್ದರಿಂದ ಉಚ್ಚ ನ್ಯಾಯಾಲಯ ಹಶ್ಮಿಯನ್ನು ವಿನೀತ ಕುಮಾರನ ವಶದಿಂದ ಬಿಡಿಸಿ ಉಸ್ಮಾನನಿಗೆ ಅಂದರೆ ಅವಳ ತಂದೆಗೆ ಒಪ್ಪಿಸಬೇಕು. ಈ ಪ್ರಕರಣದಲ್ಲಿ ಆಲಿಕೆಯಾಗಿ ವಿನೀತ ಕುಮಾರ, ಪೊಲೀಸ್ ಮತ್ತು ರಾಜ್ಯ ಸರಕಾರಕ್ಕೆ ನೋಟೀಸ್ ಜ್ಯಾರಿ ಮಾಡಲಾಯಿತು. ಈ ನೋಟೀಸಿಗೆ ಉತ್ತರ ನೀಡುವಾಗ ವಿನೀತ ಕುಮಾರನು, “ಹಶ್ಮಿ ಒಂದನೆ ತರಗತಿಗೆ ಪ್ರವೇಶ ಮಾಡಿದ ಶಾಲೆಯ ದಾಖಲೆಗನುಸಾರ  ಅವಳ ಜನ್ಮ ದಿನಾಂಕ ೫.೪.೨೦೦೧ ಎಂದಿದೆ. ಆದ್ದರಿಂದ ಅವಳು ೨೧ ವರ್ಷದವಳಾಗಿದ್ದಾಳೆ”, ಎಂದನು. ಅದಕ್ಕೆ ಉಸ್ಮಾನನು ‘ಅವಳು ಶಾಲೆಗೆ ಹೋಗಲೇ ಇಲ್ಲ, ಅವಳು ಕಲಿಯಲೇ ಇಲ್ಲ, ಎಂದು ಹೆಚ್ಚುವರಿ ಪ್ರತಿಜ್ಞಾಪತ್ರದ ಮೂಲಕ ಹೇಳಿದನು; ಆದರೆ ಅವನು ಒಂದೇ ಹಟ ಹಿಡಿದನು, ಅಂದರೆ ಆಧಾರ ಕಾರ್ಡ್‌ನಲ್ಲಿನ ಅವಳ ಜನ್ಮ ದಿನಾಂಕ ೨೦೦೪ ಎಂದು ತೋರಿಸುತ್ತದೆ. ಆದ್ದರಿಂದ ಅವಳು ಅಪ್ರಾಪ್ತ ವಯಸ್ಸಿನವಳಾಗಿದ್ದಾಳೆ.

೪. ಪೊಲೀಸರು ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಮತ್ತು ಸಾಕ್ಷಿಯನ್ನು ಪ್ರಸ್ತುತ ಪಡಿಸುವುದು

‘ಕ್ರಿಮಿನಲ್ ಪ್ರೊಸಿಜರ್ ಕೋಡ್ ೧೬೧ ಮತ್ತು ಕಲಮ್ ೧೬೪’ ರ ಆಧಾರದಲ್ಲಿ ನ್ಯಾಯಾಧೀಶರು ಸಂಗ್ರಹಿಸಿದ ಹುಡುಗಿಯ ಸಾಕ್ಷಿ ಮತ್ತು ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿದ ಪೊಲೀಸ್ ಡೈರಿಯಲ್ಲಿನ ನೋಂದಣಿಯನ್ನು ಉಚ್ಚ ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಲಾಯಿತು. ಆಗ ‘ಅವಳು ತಾನು ಪ್ರೌಢಳಾಗಿದ್ದೇನೆಂದು ನೀಡಿದ ಸಾಕ್ಷಿಗನುಸಾರ ಅವಳ ಮೇಲೆ ಯಾವುದೇ ಪ್ರಕಾರದ ಒತ್ತಡ ಹೇರಿಲ್ಲ. ಅವಳು ತನ್ನ ಇಚ್ಛೆಯಿಂದ ವಿನೀತ ಕುಮಾರನ ಜೊತೆಗೆ ಹೋಗಲು ಇಚ್ಛಿಸುತ್ತಾಳೆ. ಆದ್ದರಿಂದ ನ್ಯಾಯಾಲಯದ ಆದೇಶದಿಂದ ನಾವು ಅವಳನ್ನು ವಿನೀತ ಕುಮಾರನಿಗೆ ಒಪ್ಪಿಸಿದ್ದೇವೆ’, ಎಂದು ಪೊಲೀಸರು ಹೇಳಿದರು. ಇವೆಲ್ಲ ವಿಷಯಗಳನ್ನು ವಿಚಾರ ಮಾಡುವಾಗ ಉಚ್ಚ ನ್ಯಾಯಾಲಯವು ಮಹತ್ವದ ವಿಚಾರವನ್ನು ಗಮನಿಸಿತು. ‘ಇಂಡಿಯನ್ ಎವಿಡೆನ್ಸ್ ಏಕ್ಟ್ (ಭಾರತೀಯ ಸಾಕ್ಷಿಪುರಾವೆ ಅಧಿನಿಯಮ) ಕಲಮ್ ೧೧೪’ ಕ್ಕನುಸಾರ ಸರಕಾರಿ ಕಾರ್ಯಾಲಯದ ದೈನಂದಿನ ವ್ಯವಹಾರದಲ್ಲಿ ಕೆಲವು ಕಾಗದಪತ್ರಗಳನ್ನಿಡಲಾಗುತ್ತದೆ ಅಥವಾ ನೋಂದಣಿ ಮಾಡಲಾಗುತ್ತದೆ, ಅವುಗಳು ಸತ್ಯವಾಗಿವೆ. ಅದಕ್ಕೆ ಧಾರಣೆ, ಅನುಮಾನ, ಗ್ರಹಿತ ಅಥವಾ ತರ್ಕವೆಂದು ಹೇಳಲಾಗುತ್ತದೆ. ಶಾಲೆಯಲ್ಲಿನ ಜನ್ಮದಾಖಲೆ, ಅದರಲ್ಲಿನ ನೋಂದಣಿಯಿಂದ ೧೫-೨೦ ವರ್ಷಗಳ ಹಿಂದಿನ ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆ. ‘ರುಟಿನ್ ಕೋರ್ಸ್’ನಲ್ಲಿ (ನಿಯಮಿತ ಪದ್ಧತಿಯಲ್ಲಿ) ಅದನ್ನು ತೆಗೆದುಕೊಂಡರೆ ಅದಕ್ಕೆ ಮಹತ್ವವಿದೆ. ‘ಇಂಡಿಯನ್ ಎವಿಡೆನ್ಸ್ ಏಕ್ಟ್ ಕಲಮ್ ೯೦’ ಕ್ಕನುಸಾರ  ಅದು ಸತ್ಯವಾಗಿರುವುದರಿಂದ ಅದಕ್ಕೆ ಮಹತ್ವವಿದೆ.

೫. ‘ಜುವೆನಾಯಿಲ್ ಜಸ್ಟೀಸ್ ಏಕ್ಟ್ ೨೦೦೦’ ಮತ್ತು ‘ಜುವೆನಾಯಿಲ್ ಜಸ್ಟೀಸ್ ಕೆಯರ್ ಎಂಡ್ ಪ್ರೊಟೆಕ್ಶನ್ ಆಫ್ ಚಿಲ್ಡ್ರನ್ ೨೦೧೫’ ಈ ಕಾನೂನಿನ ಪಾತ್ರ

ಯಾವಾಗ ಯಾವುದಾದರೊಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯ ವಯಸ್ಸಿನ ವಿಷಯದಲ್ಲಿ ವಿವಾದವಿರುತ್ತದೊ, ಆಗ ‘ಜುವೆನಾಯಿಲ್ ಜಸ್ಟೀಸ್ ಏಕ್ಟ್’ಗನುಸಾರ (ಮಕ್ಕಳ ನ್ಯಾಯ ಕಾನೂನಿನಂತೆ) ಹಾಗೂ ‘ಜುವೆನಾಯಿಲ್ ಜಸ್ಟೀಸ್’ (ಕೆಯರ್ ಎಂಡ್ ಪ್ರೊಟೆಕ್ಶನ್ ಆಫ್ ಚಿಲ್ಡ್ರನ್) (ಮಕ್ಕಳ ನ್ಯಾಯ (ಮಕ್ಕಳ ಕಾಳಜಿ ಮತ್ತು ಸಂರಕ್ಷಣಾ) ಕಾನೂನು) ಅಥವಾ ‘ಜುವೆನಾಯಿಲ್ ಜಸ್ಟೀಸ್ ಏಕ್ಟ್ ೨೦೦೦ ಕಲಮ್ ೯೪’ ಕ್ಕನುಸಾರ ಹಾಗೂ ‘ಜುವೆನಾಯಿಲ್ ಜಸ್ಟೀಸ್ (ಕೆಯರ್ ಎಂಡ್ ಪ್ರೊಟೆಕ್ಶನ್ ಆಫ್ ಚಿಲ್ಡ್ರನ್) ೨೦೧೫’ ಕ್ಕನುಸಾರ ಕಲಮ್ ೧೨ (೩) ಕ್ಕನುಸಾರ ಒಂದು ಬೋರ್ಡ್ ಸ್ಥಾಪಿಸಲಾಗುತ್ತದೆ. ಅದು ವಾದಿ ಮತ್ತು ಪ್ರತಿವಾದಿಯಿಂದ ವಯಸ್ಸಿನ ಪುರಾವೆಯನ್ನು ಸಂಗ್ರಹಿಸಬಹುದು ಅಥವಾ ಅಂತಹ ಪುರಾವೆಯನ್ನು ಪ್ರಸ್ತುತ ಪಡಿಸಲು ಆದೇಶ ನೀಡಬಹುದು. ಕಲಮ್ ನಿಯಮ ೧೨ (೩) (೧) (ಅ) ಕ್ಕನುಸಾರ ಹತ್ತನೆ ತರಗತಿಯಲ್ಲಿ ಉತ್ತೀರ್ಣವಾದ ಪ್ರಮಾಣಪತ್ರ, ಕಲಮ್ ನಿಯಮ ೧೨ (೩) (೨) ಕ್ಕನುಸಾರ ಶಾಲೆಯಲ್ಲಿನ ಪ್ರಮಾಣಪತ್ರದಲ್ಲಿ ವಯಸ್ಸಿನ ಉಲ್ಲೇಖವಿರುವ ಪ್ರಮಾಣಪತ್ರವನ್ನು ಮನ್ನಿಸಲಾಗುತ್ತದೆ. ಇದರಲ್ಲಿ ಆಧಾರಕಾರ್ಡ್‌ನ ಉಲ್ಲೇಖವಿಲ್ಲ. ಶಾಲೆಯಲ್ಲಿ ‘ಇಂಡಿಯನ್ ಎವಿಡೆನ್ಸ್ ಏಕ್ಟ್ ಕಲಮ್ ೯೦’ ಕ್ಕನುಸಾರ ಯಾವ ನೊಂದಣಿಯನ್ನು ತೆಗೆದುಕೊಳ್ಳಲಾಗುತ್ತದೊ, ಅದನ್ನು ‘ಪಬ್ಲಿಕ್ ಡಾಕ್ಯುಮೆಂಟ್’ (ಸಾರ್ವಜನಿಕ ಕಾಗದಪತ್ರಗಳು) ಎಂದು ನಿರ್ಧರಿಸಲಾಗಿದೆ. ಕಲಮ್ ೬೪ ರಂತೆ ಸರಕಾರ ಅಥವಾ ಸರಕಾರಿ ಶಾಲೆಗಳಲ್ಲಿನ ನೋಂದಣಿಯನ್ನು ‘ಪಬ್ಲಿಕ್ ಡಾಕ್ಯುಮೆಂಟ್’ ಎಂದು ಹೇಳಲಾಗುತ್ತದೆ. ಇದಕ್ಕನುಸಾರವೇ ಶಾಲೆಯಲ್ಲಿನ ವಯಸ್ಸಿನ ದಾಖಲೆಗೆ ಸತ್ಯತೆಯ ಮಹತ್ವ ಪ್ರಾಪ್ತವಾಗಿದೆ. ಇವೆಲ್ಲ ವಿಷಯಗಳಲ್ಲಿ ಆಧಾರಕಾರ್ಡ್‌ನ ಉಲ್ಲೇಖವಿಲ್ಲ. ಆದ್ದರಿಂದ ಅದರಲ್ಲಿ ಯಾವುದಾದರೂ ನೋಂದಣಿ ಇರಬಹುದು ಹಾಗೂ ಆ ನೋಂದಣಿ ‘ಪಬ್ಲಿಕ್ ಡಾಕ್ಯುಮೆಂಟ್’ನೊಂದಿಗೆ ಹೊಂದಾಣಿಕೆಯಾಗದಿದ್ದರೆ ಅಲ್ಲಿ ‘ಜುವೆನಾಯಿಲ್ ಜಸ್ಟೀಸ್ ಏಕ್ಟ್’ ಮತ್ತು ‘ಜುವೆನಾಯಿಲ್ ಜಸ್ಟೀಸ್ (ಕೆಯರ್ ಎಂಡ್ ಪ್ರೊಟೆಕ್ಶನ್ ಆಫ್ ಚಿಲ್ಡ್ರನ್)’ ಈ ಮೇಲೆ ಉಲ್ಲೇಖಿಸಿದ ಕಾನೂನು ಪ್ರಕಾರ ಅದನ್ನು ಮನ್ನಿಸಲಾಗುವುದಿಲ್ಲ, ಎನ್ನುವ ನಿಯಮವಿದೆ.

೬. ಉತ್ತರಪ್ರದೇಶ ಉಚ್ಚ ನ್ಯಾಯಾಲಯವು ಉಸ್ಮಾನನ ಅರ್ಜಿಯನ್ನು ಮನ್ನಿಸದಿರುವುದು ಹುಡುಗಿಯ ಮತಾಂಧ ತಂದೆ ಕೋಮುಗಲಭೆಯಾಗುವ ವಿಷಯವನ್ನು ಮುಂದಿಡುವುದು ಹಾಗೂ ವಿನೀತ ಕುಮಾರ ಮತ್ತು ಹಶ್ಮಿ ಇವರಿಗೆ ಸಂರಕ್ಷಣೆ ನೀಡಲು ಪೊಲೀಸರಿಗೆ ನ್ಯಾಯಾಲಯವು ಆದೇಶ ನೀಡುವುದು

ಈ ವಿಷಯದಲ್ಲಿ ಉತ್ತರಪ್ರದೇಶದ ಉಚ್ಚ ನ್ಯಾಯಾಲಯವು ವಿನೀತ ಕುಮಾರನ ಹೇಳಿಕೆಯನ್ನು ಮನ್ನಿಸಿತು. ಇದರಲ್ಲಿ ಇನ್ನೊಂದು ವಿಷಯವೆಂದರೆ, ಹುಡುಗಿಯ ತಂದೆ ಉಸ್ಮಾನನು ದಾಖಲಿಸಿದ ‘ಹೆಬಿಯಸ್’ ಅರ್ಜಿಯನ್ನು ಮನ್ನಿಸುವ ವಿಷಯದಲ್ಲಿ ನ್ಯಾಯಾಲಯವು ಮುಂದಿನಂತೆ ಹೇಳಿತು, ಉಸ್ಮಾನನು ‘ಹೆಬಿಯಸ್ ಕಾಪರ್ಸ್’ ಅರ್ಜಿಯನ್ನು ದಾಖಲಿಸಿದನು, ನ್ಯಾಯಾಲಯದ ಮುಂದೆ ಸುಳ್ಳು ತರ್ಕ ಮಾಡಿದನು ಹಾಗೂ ಸತ್ಯವನ್ನು ಹೇಳದೆ ಆಧಾರ ಕಾರ್ಡ್‌ನ ವಿಷಯವನ್ನು ನ್ಯಾಯಾಲಯದ ಮುಂದಿಟ್ಟನು ಹಾಗೂ ಮಗಳು ಶಾಲೆಗೆ ಹೋಗಿದ್ದರೂ ನ್ಯಾಯಾಲಯದ ಮುಂದೆ ಅದನ್ನು ಅಡಗಿಸಿಟ್ಟನು, ಇದು ಅಯೋಗ್ಯವಾಗಿದೆ. ಈ ಸಂದರ್ಭದಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಲು ಸರ್ವೋಚ್ಚ ನ್ಯಾಯಾಲಯದ ಕೆಲವು ಹಳೆಯ ನಿರ್ಣಯಗಳ ದಾಖಲೆಗಳನ್ನು ನೀಡಿತು. ಅದು ‘ಡಾ. ವಿಜಯ ಕಥೂರಿಯಾ ವಿರುದ್ಧ ಹರ್ಯಾಣಾ ರಾಜ್ಯ’, ‘ಎಸ್.ಪಿ. ಗಲವರ ನಾಯ್ಡು ವಿರುದ್ಧ ಆಂಧ್ರಪ್ರದೇಶ’ ಹಾಗೂ ‘ಕೇಂದ್ರ ಸರಕಾರ ವಿರುದ್ಧ ಮುನಿ ಸುನೇಜಾ’ ಇವುಗಳ ತೀರ್ಪುಪತ್ರಗಳ ಆಧಾರವನ್ನು ತೆಗೆದುಕೊಂಡಿತು. ಅದರಲ್ಲಿ ಸ್ಪಷ್ಟವಾಗಿ ಮುಂದಿನಂತೆ ಹೇಳಲಾಗಿದೆ, ‘ನ್ಯಾಯಾಲಯದ ಮುಂದೆ ಯಾವುದೇ ವಿಷಯವನ್ನು ಅಡಗಿಸಿಡುವುದೆಂದರೆ ಇದು ಅಪಹರಣ (ವಂಚನೆ/ ಫ್ರಾಡ್) ಮಾಡಿದಂತಾಗುತ್ತದೆ. ಯಾವ ವ್ಯಕ್ತಿಯು ಹೀಗೆ ಮಾಡುತ್ತಾನೆಯೋ, ಆ ವ್ಯಕ್ತಿಯ ಅರ್ಜಿಯನ್ನು ಮನ್ನಿಸುವ ಅವಶ್ಯಕತೆಯಿಲ್ಲ’.

ಅನಂತರ ಮತಾಂಧರು ಅಂತಿಮ ಶಸ್ತ್ರವನ್ನು ಹೊರಗೆ ತೆಗೆದರು. ಉಸ್ಮಾನನು, “ನನ್ನ ಮಗಳು ಮುಸಲ್ಮಾನ ಮತ್ತು ಹುಡುಗ ಹಿಂದೂ ಆಗಿರುವುದರಿಂದ ಎರಡು ಧರ್ಮದಲ್ಲಿ ದ್ವೇಷ ಹೆಚ್ಚಾಗಿ ಜಾತಿಯ ಅಥವಾ ಕೋಮು ಗಲಭೆಯಾಗಬಹುದು. ಆದ್ದರಿಂದ ಹುಡುಗಿಯನ್ನು ತಂದೆ ತಾಯಿಗೆ ಒಪ್ಪಿಸಬೇಕು”, ಎಂದನು. ಉಚ್ಚ ನ್ಯಾಯಾಲಯವು ಉಸ್ಮಾನನ ಈ ತರ್ಕವನ್ನು ತಳ್ಳಿಹಾಕಿತು. ಆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ‘ಲತಾ ಸಿಂಹ ವಿರುದ್ಧ ಉತ್ತರಪ್ರದೇಶ’ ಇದರ ನಿರ್ಣಯದ ಆಧಾರವನ್ನು ನೀಡಿತು. ಅದರಲ್ಲಿ ಮುಂದಿನಂತೆ ಹೇಳಿದೆ, ‘ಪ್ರೌಢಳಾಗಿರುವ ಹುಡುಗಿ ಒಂದುವೇಳೆ ಅಂತರಜಾತೀಯ ವಿವಾಹ ಅಥವಾ ಅಂತರಧರ್ಮೀಯ ವಿವಾಹವಾಗುತ್ತಿದ್ದರೆ ಹಾಗೂ ಅದನ್ನು ವಿರೋಧಿಸಲು ಹುಡುಗಿಯ ಸಂಬಂಧಿಕರು ಗಲಭೆಯೆಬ್ಬಿಸಿ ಸಾರ್ವಜನಿಕ ಶಾಂತಿ ಭಂಗ ಮಾಡುತ್ತಿದ್ದರೆ, ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ನೋಂದಾಯಿಸಿ ಅವರ ವಿರುದ್ಧ ಖಟ್ಲೆ ನಡೆಸಬೇಕು’. ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದ ಆಧಾರಪಡೆದು ಉಸ್ಮಾನನ ಅರ್ಜಿಯನ್ನು ತಿರಸ್ಕರಿಸಲಾಯಿತು. ಅದೇ ರೀತಿ ‘ಪೊಲೀಸರು ಹಶ್ಮಿ ಮತ್ತು ವಿನೀತ ಕುಮಾರ ಇವರನ್ನು ರಕ್ಷಿಸಬೇಕು’, ಇವರ ಕಡೆಗೆ ಗಮನವಿಡಬೇಕು. ಅದೇ ರೀತಿ ಇವರಿಬ್ಬರೂ ವಿವಾಹವಾಗುವುದರಿಂದ ಉಸ್ಮಾನ ಅಥವಾ ಅವನ ಕುಟುಂಬದವರು ಯಾರಾದರೂ ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸಿದರೆ ಅಥವಾ ಗಲಭೆಯೆಬ್ಬಿಸಿದರೆ ಅವರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಿ ಖಟ್ಲೆ ನಡೆಸಬೇಕು’, ಎಂದು ಉತ್ತರಪ್ರದೇಶದ ಪೊಲೀಸ್ ಮಹಾಸಂಚಾಲಕರಿಗೆ ಆದೇಶವನ್ನು ನೀಡಿತು.

೭. ನ್ಯಾಯಾಲಯದ ಹೋರಾಟವನ್ನು ಗೆದ್ದುಕೊಂಡೆವು; ಎಂದು ಹಿಂದೂಗಳು ಖಷಿಯಿಂದ ಮೈಮರೆಯದೆ ಜಾಗರೂಕರಾಗಿದ್ದು ತಮ್ಮ ಜೀವವನ್ನು ಕಾಪಾಡಬೇಕು !

ಹಿಂದೂಗಳು ಅಥವಾ ಮುಸಲ್ಮಾನೇತರರ ಇಂದಿನ ವರೆಗಿನ ಅನುಭವವೆಂದರೆ, ಮತಾಂಧರ ಹುಡುಗಿ ಹಿಂದೂ ಹುಡುಗನೊಂದಿಗೆ ವಿವಾಹವಾದರೆ, ಆಗ ಮತಾಂಧರು ಹಿಂದೂ ಹುಡುಗನನ್ನು ಮನೆಗೆ ಕರೆದು ಕುತಂತ್ರದಿಂದ ಎಲ್ಲವೂ ಸರಿಯಾಗಿದೆಯೆಂದು ತೋರಿಸಿ ಊಟದಲ್ಲಿ ವಿಷಬೆರೆಸಿ ಹಿಂದೂ ಹುಡುಗ ಮತ್ತು ಅವನ ಸಂಬಂಧಿಕರನ್ನು ಕೊಂದು ಹಾಕುತ್ತಾರೆ. ಇಂತಹ ಅನೇಕ ಉದಾಹರಣೆಗಳಿವೆ. ಮತಾಂಧರ ಹುಡುಗಿಯರು ಬಾಲ್ಯದಿಂದಲೇ ಇಸ್ಲಾಮ್‌ಗನುಸಾರ ಆಚರಣೆ ಮಾಡುತ್ತಾರೆ. ಅವರಿಗೆ ಜನ್ಮದಿಂದಲೇ ಪ್ರಚಂಡ ಹಿಂದೂದ್ವೇಷವನ್ನು ಕಲಿಸಲಾಗುತ್ತದೆ. ಆದ್ದರಿಂದ ವಿನೀತ ಕುಮಾರ ಮತ್ತು ಹಶ್ಮಿ ಇವರಿಗೆ ಹುಟ್ಟುವ ಮಕ್ಕಳಿಗೆ ಈ ಹುಡುಗಿ ಮುಸಲ್ಮಾನ ಸಂಸ್ಕಾರವನ್ನು ಬಿತ್ತುತ್ತಾಳೇನು ಎಂಬುದನ್ನು ವಿನೀತ ಕುಮಾರ ಮತ್ತು ಅವನ ಸಂಬಂಧಿಕರು ಜಾಗರೂಕರಾಗಿದ್ದು ಕಾಳಜಿ ವಹಿಸಬೇಕಾಗುವುದು. ಅದೇ ರೀತಿ ಮುಸಲ್ಮಾನ ಹುಡುಗಿಯು ಹಿಂದೂ ಹುಡುಗನೊಂದಿಗೆ ವಿವಾಹವಾದರೆ ಅದು ಮುಸಲ್ಮಾನರ ಮರ್ಮವನ್ನು ಛೇದಿಸುತ್ತದೆ. ಆದ್ದರಿಂದ ಅವರು ಹಿಂದೂ ಹುಡುಗನನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ.

|| ಶ್ರೀಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (೧೮.೧.೨೦೨೨)