`ಧಾರ್ಮಿಕ ಉಡುಪು ಧರಿಸಬೇಕೋ ಅಥವಾ ಬೇಡವೋ ಇದು ಕರ್ನಾಟಕ ಸರಕಾರ ನಿರ್ಧರಿಸಬಾರದು ! – ಅಮೆರಿಕ

* ಕರ್ನಾಟಕ ಸರಕಾರ ಏನು ಮಾಡಬೇಕು ಮತ್ತು ಏನು ಮಾಡಬಾರದು, ಇದು ಅಮೆರಿಕ ಹೇಳಬಾರದು. ಅವರು ಅವರ ದೇಶದಲ್ಲಿರುವ ಕಪ್ಪು ಜನರ ಜೊತೆಗೆ ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದಾರೆ, ಅದರ ಕಡೆಗೆ ಗಮನ ಕೊಡಬೇಕು ! -ಸಂಪಾದಕರು

(ಬಲಭಾಗದಲ್ಲಿ)ಅಮೇರಿಕಾದ ರಾಯಭಾರಿ ರಷದ ಹುಸೇನ್

ವಾಷಿಂಗ್ಟನ್ (ಅಮೇರಿಕಾ) – ಧಾರ್ಮಿಕ ಉಡುಪು ಧರಿಸಬೇಕೋ ಅಥವಾ ಬೇಡವೋ ಇದು ಕರ್ನಾಟಕ ಸರಕಾರವು ನಿರ್ಧರಿಸಬಾರದು, ಯಾವುದಾದರೂ ಧಾರ್ಮಿಕ ಸ್ವಾತಂತ್ರ್ಯ ನಿರ್ಧರಿಸಲು ಅದಕ್ಕೆ ಅವರ ಧರ್ಮದ ಉಡುಪು ಧರಿಸಲು ಸ್ವಾತಂತ್ರ್ಯವೂ ಒಳಗೊಂಡಿರಬೇಕು, ಎಂದು ಅಮೆರಿಕ ಸರಕಾರದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಪ್ರಕರಣದ ಅಮೇರಿಕಾದ ರಾಯಭಾರಿ ರಷದ ಹುಸೇನ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಮೂಲ ಭಾರತೀಯ ವಂಶದವರಾಗಿರುವ ಹುಸೇನ್ ಇವರು ಅವರ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಮತಾಂಧ ಯಾವುದೇ ದೇಶದಲ್ಲಿದ್ದರೂ ಮತ್ತು ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಅವರ ಧರ್ಮದ ಪರವಾಗಿ ತಪ್ಪು ಇದ್ದರೂ ಸಹ ಅದನ್ನು ಬೆಂಬಲಿಸಲು ಮುಂದೆ ಬರುತ್ತಾರೆ, ಇದನ್ನು ಗಮನದಲ್ಲಿಡಿ ! – ಸಂಪಾದಕರು)