YesToUniform_NoToHijab ನ ಬಗ್ಗೆ : ಸಂವಿಧಾನಕ್ಕನುಸಾರ ತೀರ್ಪು ನೀಡಲಾಗುವುದು ! – ಕರ್ನಾಟಕ ಉಚ್ಚ ನ್ಯಾಯಾಲಯ

ಕರ್ನಾಟಕದ ಮಹಾವಿದ್ಯಾಲಯಗಳಲ್ಲಿನ ಹಿಜಾಬ್ ಪ್ರಕರಣ

ಬೆಂಗಳೂರು – ಹಿಜಾಬ್ ಹಾಕಿಕೊಂಡು ಮಹಾವಿದ್ಯಾಲಯದಲ್ಲಿ ಬರಲು ಅನುಮತಿ ನೀಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು, ನ್ಯಾಯಾಲಯ ಭಾವನೆಯಲ್ಲಿ ಅಲ್ಲ, ಬದಲಾಗಿ ಸಂವಿಧಾನಕ್ಕನುಸಾರ ನಡೆಯುತ್ತದೆ. ಸಂವಿಧಾನ ನ್ಯಾಯಾಲಯಕ್ಕೆ ಭಗವತ್‌ಗೀತೆಯಾಗಿದೆ. ಯಾವ ನಿರ್ಣಯ ತೆಗೆದುಕೊಳ್ಳಬೇಕು, ಅದು ಎಲ್ಲಾ ಅರ್ಜಿಗಳಿಗೆ ಜಾರಿಯಾಗುತ್ತದೆ ಎಂದು ಹೇಳಿದೆ.

೧. ಅರ್ಜಿದಾರರ ಪರವಾಗಿ ಮಂಡಿಸಿದ್ದ ನ್ಯಾಯವಾದಿ ದೇವದತ್ತ ಕಾಮತ್ ಇವರು, ಹಿಜಾಬ್ ಹಾಕುವುದು ಇದು ಇಸ್ಲಾಮಿ ಸಂಸ್ಕೃತಿಯ ಒಂದು ಮಹತ್ವದ ಭಾಗವಾಗಿದೆ ಎಂದು ಹೇಳಿದರು.

೨. ಈ ಬಗ್ಗೆ ರಾಜ್ಯ ಸರಕಾರದ ನ್ಯಾಯವಾದಿ, ಮಹಾವಿದ್ಯಾಲಯಗಳಿಗೆ ಸಮವಸ್ತ್ರ ಆಯ್ಕೆಗೆ ಸ್ವಾತಂತ್ರ್ಯ ನೀಡಿದೆ. ಯಾವ ವಿದ್ಯಾರ್ಥಿಗಳಿಗೆ ಅಡಚಣೆಯಿದೆ, ಅವರು ಮಹಾವಿದ್ಯಾಲಯದ ಸಮಿತಿಯನ್ನು ಸಂಪರ್ಕ ಮಾಡಬಹುದು ಎಂದು ಹೇಳಿದರು.