Complaint against Indian Express : ‘ಕರವಾ ಚೌಥ’ನ ವಿಕೃತಿಕರಣ; ದೈನಿಕ ‘ಇಂಡಿಯನ್ ಎಕ್ಸ್ಪ್ರೆಸ್’ ವಿರುದ್ಧ ನೋಟಿಸ್ !

ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಕಾರ್ಯನಿರತ ನ್ಯಾಯವಾದಿ ಅಮಿತಾ ಸಚದೇವಾ ಇವರಿಂದ ದೂರ !

(‘ಕರವಾ ಚೌಥ’ ಎಂದರೆ ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿಯು ಉಪವಾಸ ಇದ್ದು ಮಾಡುವ ವ್ರತ)

ನವ ದೆಹಲಿ – ಉತ್ತರ ಭಾರತದಲ್ಲಿನ ಹಿಂದುಗಳು ಆಚರಿಸುವ ‘ಕರವಾ ಚೌಥ’ ಈ ವ್ರತದ ಬಗ್ಗೆ ದೈನಿಕ ‘ಇಂಡಿಯನ್ ಎಕ್ಸ್ಪ್ರೆಸ್’ ಈ ಆಂಗ್ಲ ವಾರ್ತಾಪತ್ರಿಕೆಯು ವಿಕೃತಿಕರಣ ಮಾಡಿತ್ತು. ಈ ವೃತ್ತ ಪತ್ರಿಕೆಯು ಅಕ್ಟೋಬರ್ ೧೮ ರಂದು ‘ಕರವಾ ಚೌಥ’ ದಿನ ಉಪವಾಸ ಮಾಡುವ ಮಹಿಳೆಯರ ಹಾರ್ಮೋನ್ ಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’, ಎಂಬ ವಿಷಯ ಒಳಗೊಂಡಿರುವ ವಾರ್ತೆಯನ್ನು ಪತ್ರಿಕೆಯಲ್ಲಿ ಪ್ರಸಾರ ಮಾಡಿತ್ತು. ಇದರಿಂದ ದೇಶಾದ್ಯಂತದಲ್ಲಿನ ಅನೇಕ ಹಿಂದುತ್ವನಿಷ್ಠರು ವಾರ್ತಾ ಪತ್ರಿಕೆಯನನ್ನು ನಿಷೇಧಿಸುತ್ತಾ ಅದರ ಹಿಂದುದ್ವೇಷಿ ಮುಖವಾಡ ಬಹಿರಂಗಗೊಳಿಸಿದರು. ಇದರಿಂದ ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಮಿತಾ ಸಚದೇವಾ ಇವರು ‘ಇಂಡಿಯನ್ ಎಕ್ಸ್ಪ್ರೆಸ್’ ಬಳಿ ಲಿಖಿತ ದೂರು ನೀಡಿದರು.

ಈ ವಾರ್ತಾ ಪತ್ರಿಕೆಯಲ್ಲಿ ಮಾರ್ಚ್ ೧೧ ರಂದು ರಮಜಾನದ ‘ರೋಜಾ’ ದಿಂದ (ಉಪವಾಸದಿಂದ) ತೂಕ ಕಡಿಮೆ ಆಗುವುದು ಹಾಗೂ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು’, ಎಂಬ ವಿಷಯ ಒಳಗೊಂಡ ಶೀರ್ಷಿಕೆ ನೀಡಿ ವಾರ್ತೆ ಪ್ರಸಾರ ಮಾಡಿತ್ತು. ಧರ್ಮಪ್ರೇಮಿ ಹಿಂದುಗಳು ಈ ಎರಡು ಸಮಾಚಾರದ ಆಧಾರ ನೀಡುತ್ತಾ ‘ಇಂಡಿಯನ್ ಎಕ್ಸ್ಪ್ರೆಸ್’ನ ಹಿಂದೂದ್ವೇಷಿ ಮತ್ತು ತಾರತಮ್ಯದ ಮುಖವಾಡ ಬಹಿರಂಗಗೊಳಿಸಿತು. ಇದರಿಂದ ನ್ಯಾಯವಾದಿ ಅಮಿತಾ ಸಚದೇವಾ ಇವರು ‘ಇಂಡಿಯನ್ ಎಕ್ಸ್ಪ್ರೆಸ್’ಗೆ ಅಧಿಕೃತ ಇ-ಮೇಲ್ ಕಳುಹಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ನ ದೂರು ನಿವಾರಣ ಅಧಿಕಾರಿ ಹೃತ್ತಿಕ ಶಾಂಡಿಲ್ಯ ಇವರಿಗೆ ದೂರು ನೀಡಿದರು. ಈ ದೂರಿನಲ್ಲಿ, ಕರವಾ ಚೌಥ ಕುರಿತಾದ ವಾರ್ತೆಯಿಂದ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದ್ದು ಅದರಿಂದ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ನಿಯಮ ೨೧ ಮತ್ತು ‘ಪ್ರೈಸ್ ಕೌನ್ಸಿಲ್ ಆಫ್ ಇಂಡಿಯಾ ಕಾನೂನು, ೧೯೭೮’ ಇದರ ಉಲ್ಲಂಘನೆ ಆಗಿದೆ. ಆದ್ದರಿಂದ ‘ಇಂಡಿಯನ್ ಎಕ್ಸ್ಪ್ರೆಸ್’ ಬೇಷರತ್ತು ಸಾರ್ವಜನಿಕ ಕ್ಷಮೆಯಾಚಿಸಬೇಕು ಮತ್ತು ಪತ್ರಿಕೋದ್ಯಮದ ನಿಯಮಗಳ ಪ್ರಕಾರ ಸ್ಪಷ್ಟೀಕರಣ ಕೂಡ ನೀಡಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದುಗಳ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟ ಆಡುವವರ ವಿರುದ್ಧ ತಕ್ಷಣ ಕೃತಿ ಮಾಡುವ ನ್ಯಾಯವಾದಿ ಅಮಿತಾ ಸಚದೇವ ಇವರ ಅಭಿನಂದನೆ ! ಇಂತಹ ಧರ್ಮಪ್ರೇಮಿಗಳೇ ಸನಾತನ ಧರ್ಮದ ನಿಜವಾದ ಶಕ್ತಿ !