ಚೆನ್ನೈ (ತಮಿಳುನಾಡು) – ಶರಿಯಾ ಕೌನ್ಸಿಲ್ ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆ ದೂರಗೋಳಿಸಲು ಸಹಾಯ ಮಾಡಬಹುದು; ಆದರೆ ವಿಚ್ಛೇದನದ ಪ್ರಮಾಣ ಪತ್ರ ಜಾರಿಗೊಳಿಸಲು ಮತ್ತು ದಂಡ ವಿಧಿಸಲು ಕೌನ್ಸಿಲ್ಲಿಗೆ ಅಧಿಕಾರವಿಲ್ಲ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ. ಈ ಸಮಯದಲ್ಲಿ ನ್ಯಾಯಾಲಯವು ತ್ರಿವಳಿ ತಲಾಕ್ ಪ್ರಕರಣಕ್ಕೆ ಸಂಬಂಧಿತ ಅರ್ಜಿ ತಳ್ಳಿ ಹಾಕಿತು.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು,
೧. ವಿಚ್ಛೇದನಕ್ಕಾಗಿ ಪತಿ ಶರಿಯಾ ಕೌನ್ಸಿಲ್ ಹತ್ತಿರ ಅಲ್ಲ, ಸ್ಥಳೀಯ ನ್ಯಾಯಾಲಯಕ್ಕೆ ಹೋಗಬೇಕು. ಈ ಅಂಶ ಪತಿಯ ಏಕ ಪಕ್ಷಿಯ ನಿರ್ಣಯಕ್ಕೆ ಬಿಡಲು ಸಾಧ್ಯವಿಲ್ಲ; ಕಾರಣ ಹೀಗೆ ಮಾಡಿದರೆ ಪತಿ ತನ್ನ ಮೊಕದ್ದಮೆಯ ನ್ಯಾಯಾಧೀಶನಾಗುತ್ತಾನೆ.
೨. ಪತಿಯು ೨ ನೇ ವಿವಾಹ ಮಾಡಿಕೊಂಡಿದ್ದಾನೆ. ಪತಿಯು ಎರಡನೆಯ ವಿವಾಹದಿಂದ ಸಂತ್ರಸ್ತ ಪತ್ನಿಗೆ ಭಾವನಿಕ ವೇದನೆ ಆಗಿವೆ, ಇದು ಕ್ರೂರತೆ ಆಗಿದೆ. ಮೊದಲ ವಿವಾಹ ಅಸ್ತಿತ್ವದಲ್ಲಿರುವಾಗ ಹಿಂದೂ, ಕ್ರೈಸ್ತ, ಪಾರಸಿ ಅಥವಾ ಜ್ಯೂ ಪತಿ ಎರಡನೆಯ ವಿವಾಹ ಮಾಡಿಕೊಂಡರೆ ಅದು ಧರ್ಮವಿವಾಹದ ಅಪರಾಧ ಎಂದು ಹೇಳಲಾಗುವುದು ಮತ್ತು ಕ್ರೂರತೆ ಎಂದು ಕೂಡ ಹೇಳಲಾಗುವುದು.
೩. ಇದು ಸ್ಪಷ್ಟವಾಗಿ ಕೌಟುಂಬಿಕ ಹಿಂಸಾಚಾರದ ಪ್ರಕರಣ ಎಂದು ಹೇಳಬಹುದು, ಇದರ ಅಡಿಯಲ್ಲಿ ಪತ್ನಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯ ಸಂರಕ್ಷಣಾ ಕಾನೂನು, ೨೦೦೫ ರ ಕಲಂ ೧೨ ರ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹತೆ ಇದೆ. ಮುಸಲ್ಮಾನರ ಸಂಧರ್ಭದಲ್ಲಿ ಕೂಡ ಈ ಪ್ರಸ್ತಾವ ಜಾರಿಯಾಗುತ್ತದೆ.
ಏನಿದು ಪ್ರಕರಣ ?
೨೦೧೦ ರಲ್ಲಿ ಓರ್ವ ಮುಸಲ್ಮಾನನ ವಿವಾಹವಾಗಿತ್ತು ಮತ್ತು ಕೆಲವು ವರ್ಷದ ನಂತರ ಪತಿಯು ಪತ್ನಿಗೆ ತ್ರಿವಳಿ ತಲಾಕ್ ನೀಡಿದನು. ತಮಿಳುನಾಡಿನ ತೌಹಿದ್ ಜಮಾತಿನ್ (ಶರಿಯಾ ಕೌನ್ಸಿಲ್) ಈ ದಂಪತಿಗೆ ವಿಚ್ಛೇದನ ಪ್ರಮಾಣ ಪತ್ರ ಜಾರಿಗೊಳಿಸಿತು. ಅದರ ನಂತರ ಪತಿಯು ಎರಡನೇ ವಿವಾಹ ಮಾಡಿಕೊಂಡನು. ಪ್ರಮಾಣ ಪತ್ರದ ವಿರುದ್ಧ ಸಂತ್ರಸ್ತೇ ಪತ್ನಿಯು ತಿರುನೇಲವೇಲಿ ನ್ಯಾಯದಂಡಾಧಿಕಾರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದಳು. ೨೦೨೧ ರಲ್ಲಿ ನ್ಯಾಯದಂಡಾಧಿಕಾರಿಗಳಿಂದ ಸಂತ್ರಸ್ತೇ ಪತ್ನಿಯ ಪರವಾಗಿ ತೀರ್ಪು ನೀಡಿತು. ದಂಡಾಧಿಕಾರಿ, ಪತಿ ಕೌಟುಂಬಿಕ ಹಿಂಸಾಚಾರಕ್ಕಾಗಿ ೫ ಲಕ್ಷರೂಪಾಯಿ ಮತ್ತು ಆಕೆಯ ಅಪ್ರಾಪ್ತ ಹುಡುಗನ ಪೋಷಣೆಗಾಗಿ ಪ್ರತೀ ತಿಂಗಳು ೨೫ ಸಾವಿರ ರೂಪಾಯಿ ಪರಿಹಾರ ನೀಡಬೇಕು.
ದಂಡಾಧಿಕಾರಿ ನ್ಯಾಯಾಲಯದ ತೀರ್ಪಿನ ವಿರುದ್ಧ ಪತಿಯು ಸೆಶನ್ಸ್ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಆ ಅರ್ಜಿ ತಿರಸ್ಕರಿಸಲಾಯಿತು. ಬಳಿಕ ಪತಿಯು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದನು. ಉಚ್ಚ ನ್ಯಾಯಾಲಯವು ಕೂಡ ಈ ಅರ್ಜಿ ತಿರಸ್ಕರಿಸಿದೆ.