ಭಾರತೀಯರೇ, ‘ಸಂಸ್ಕೃತದ ತಿರಸ್ಕಾರವೆಂದರೆ ತೀವ್ರ ಸಂಸ್ಕೃತಿವಿರೋಧಿ ಹಾಗೂ ರಾಷ್ಟ್ರವಿರೋಧಿ ಕೃತ್ಯವಾಗಿದೆ’, ಎಂಬುದನ್ನು ಗಮನದಲ್ಲಿಟ್ಟು ಸಂಸ್ಕೃತದ ಸಂವರ್ಧನೆಗಾಗಿ ಪ್ರಯತ್ನಿಸಿರಿ !

ಕಾಂಗ್ರೆಸ್‌ನವರು ಮತ್ತು ಸಾಮ್ಯವಾದಿ ನಾಯಕರು ದೇವವಾಣಿ ಸಂಸ್ಕೃತದ ಮಹತ್ವವನ್ನು ತಿಳಿದುಕೊಳ್ಳುವರೇ ?

ಕರ್ನಾಟಕದ ಭಾಜಪ ಸರಕಾರ ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲು ೧೦೦ ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಈ ನಿರ್ಣಯವನ್ನು ಕಾಂಗ್ರೆಸ್, ಜಿಹಾದಿ ಉಗ್ರ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಪ್ರಗತಿಪರರು ವಿರೋಧಿಸಲು ಆರಂಭಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ಸಿನ ವಕ್ತಾರರು ಈ ಸಂಸ್ಕೃತ ವಿಶ್ವವಿದ್ಯಾಲಯವು ‘ವ್ಯರ್ಥ’ ಎಂದು ಕೂಡ ಹೇಳಿದ್ದಾರೆ. ಕಾಂಗ್ರೆಸ್ಸಿನ ದಿವಂಗತ ಪ್ರಧಾನಮಂತ್ರಿ ಜವಾಹರಲಾಲ ನೆಹರು ಸಂಸ್ಕೃತವನ್ನು ‘ಮೃತಭಾಷೆ’ ಎಂದು ನಿರ್ಧರಿಸಿದ್ದರು. ನಿಜವಾಗಿಯೂ ದೇವವಾಣಿಯಾಗಿರುವ ಚೈತನ್ಯಮಯ ಸಂಸ್ಕೃತ ಭಾಷೆಯು ಮಾನವನಿಗೆ ಸಿಕ್ಕಿದ ಅಮೂಲ್ಯವಾದ ಕೊಡುಗೆಯಾಗಿದೆ. ಇಂತಹ ಸಂಸ್ಕೃತಭಾಷೆಗೆ ನಮ್ಮ ಜೀವನದಲ್ಲಿರುವ ಮಹತ್ವವು ಎಲ್ಲರಿಗೂ ತಿಳಿಯಲೆಂದು ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಸಂಸ್ಕೃತದಲ್ಲಿ ಆಂಗ್ಲದ ಹಾಗೆ ಕಾಗುಣಿತ (ಸ್ಪೆಲ್ಲಿಂಗ್) ಕಲಿಯಬೇಕಾಗಿಲ್ಲ !

ಪರಾತ್ಪರ ಗುರು ಡಾ. ಆಠವಲೆ

‘ಇದರ ಕಾರಣವೆಂದರೆ, ‘ಸಂಸ್ಕೃತದಲ್ಲಿ ಉಚ್ಚಾರಕ್ಕನುಸಾರ ಬರವಣಿಗೆಯಿರುತ್ತದೆ. ಬರವಣಿಗೆಯನ್ನು ಕಣ್ಣುಗಳಿಂದ ನೋಡುತ್ತೇವೆ, ಅಂದರೆ ಅದು ತೇಜತತ್ತ್ವಕ್ಕೆ ಸಂಬಂಧಿಸಿದೆ, ಶಬ್ದವನ್ನು ಉಚ್ಚರಿಸುವುದು’ ಇದು ಆಕಾಶತತ್ತ್ವಕ್ಕೆ ಸಂಬಂಧಿಸಿದೆ, ತೇಜತತ್ತ್ವಕ್ಕಿಂತ ಆಕಾಶತತ್ತ್ವವು ಮೇಲಿನ ಹಂತದ್ದಾಗಿರುವುದರಿಂದ ಬರವಣಿಗೆಗನುಸಾರ ಉಚ್ಚಾರವನ್ನು ಮಾಡದೆ ಉಚ್ಚಾರಕ್ಕನುಸಾರ ಬರೆಯುವುದು ಅವಶ್ಯವಾಗಿರುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೧೫.೪.೨೦೧೪)

‘ಸಂಸ್ಕೃತದ ಉಚ್ಚಾರದಿಂದಲೇ ವ್ಯಕ್ತಿಗೆ ಒಂದು ರೀತಿಯ ಗೌರವ, ಶಕ್ತಿ ಹಾಗೂ ಬಲ ಪ್ರಾಪ್ತಿಯಾಗುತ್ತದೆ’, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ‘ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿಗಾಗಿ ಸಂಸ್ಕೃತದ ಜ್ಞಾನವಿರುವುದು ಆವಶ್ಯಕವಾಗಿದೆ’, ಎಂದು ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಮ್ ಹೇಳುತ್ತಿದ್ದರು.

‘ಸಂಸ್ಕೃತದಲ್ಲಿರುವ ಸಿಹಿತನದಿಂದಾಗಿ ನಾವೆಲ್ಲ ವಿದೇಶಿಯರು ಅದಕ್ಕೆ ಮರುಳಾಗಿದ್ದೇವೆ. ಎಷ್ಟರವರೆಗೆ ವಿಂಧ್ಯ, ಹಿಮಾಲಯ ಮತ್ತು ಗಂಗೆ, ಗೋದಾವರಿಗಳಿವೆಯೊ, ಅಷ್ಟರವರೆಗೆ ಸಂಸ್ಕೃತವಿರಲಿದೆ’ ಎಂದು ಪ್ರಾಚೀನ ವಿದ್ಯೆಯ ಅಭ್ಯಾಸಕ ಎಚ್.ಎಚ್. ವಿಲ್ಸನ್ ಇವರು ಬರೆದಿದ್ದಾರೆ.

೧. ಸ್ವಾತಂತ್ರ್ಯಾನಂತರ ವಿವಿಧ ರೀತಿಯಲ್ಲಿ ಸಂಸ್ಕೃತ ಶಿಕ್ಷಣವನ್ನು ಪ್ರೋತ್ಸಾಹಿಸಲು ಮಾಡಿದ ಪ್ರಯತ್ನಗಳು

‘ಸಂಸ್ಕೃತವನ್ನು ಕಲಿಸಲಾಗುವುದಿಲ್ಲ’ ಎಂದು ೧೯೪೬ ರಲ್ಲಿ ‘ಡಾ. ರಾಧಾಕೃಷ್ಣನ್ ಆಯೋಗ’ವು ತೀವ್ರ ಚಿಂತೆಯನ್ನು ವ್ಯಕ್ತಪಡಿಸಿತು. ೧೯೫೨-೫೩ ರಲ್ಲಿ ‘ಮಾಧ್ಯಮಿಕ ಶಿಕ್ಷಣ ಆಯೋಗ’ವೂ ‘ಸಂಸ್ಕೃತ ಶಿಕ್ಷಣಕ್ಕೆ ಪ್ರೋತ್ಸಾಹ’ ನೀಡಲು ವಿನಂತಿಸಿತು. ೧೯೫೫-೫೬ ರಲ್ಲಿ ‘ರಾಜ್ಯಭಾಷಾ ಆಯೋಗ’ವೂ ‘ಸಂಸ್ಕೃತವನ್ನು ಕಲಿಸಬೇಕು’, ಎನ್ನುವುದಕ್ಕೆ ಒತ್ತು ನೀಡಿತು. ೧೯೫೬ ರಲ್ಲಿ ‘ಸಂಸ್ಕೃತ ಆಯೋಗ’ವನ್ನೂ ಸ್ಥಾಪಿಸಲಾಯಿತು. ಈ ಆಯೋಗವು ವಿಸ್ತಾರವಾಗಿ ಸಂಸ್ಕೃತದ ವಿವಿಧ ವೈಶಿಷ್ಟ್ಯಗಳಿಗೆ ಒತ್ತುಕೊಟ್ಟಿತು. ಇಷ್ಟು ಮಾತ್ರವಲ್ಲ, ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ೧೯೫೬ ರಲ್ಲಿ ಕುರುಕ್ಷೇತ್ರದಲ್ಲಿ ಸಂಸ್ಕೃತ ವಿದ್ಯಾಲಯವನ್ನೂ ಸ್ಥಾಪಿಸಿದರು.

೨. ೧೯೬೦ ರಿಂದ ಸಂಸ್ಕೃತಕ್ಕಾದ ಘೋರ ಉಪೇಕ್ಷೆ

೧೯೬೦ ರ ದಶಮಾನದಿಂದ ಭಾರತದಲ್ಲಿ ಸಂಸ್ಕೃತದ ಸ್ಥಾನವು ವೇಗದಿಂದ ಕುಸಿಯಲು ಆರಂಭವಾಯಿತು ಏಕೆಂದರೆ ಆಂಗ್ಲವನ್ನು ಕಲಿತಿರುವ ನೌಕರವರ್ಗ ಮತ್ತು ಪಾಶ್ಚಾತ್ಯರ ಬಣ್ಣಕ್ಕೆ ಮರುಳಾದ ಆಡಳಿತದವರು ವಿವಿಧ ಆಯೋಗಗಳ ಶಿಫಾರಸುಗಳಿಗೆ ಕಸದ ಬುಟ್ಟಿಯನ್ನು ತೋರಿಸಿದರು. ದೆಹಲಿ ವಿದ್ಯಾಪೀಠವೂ ಸಂಸ್ಕೃತ ಹಾಗೂ ಕೃಷಿಯಲ್ಲಿ ಸಿಕ್ಕಿದ ಅಂಕಗಳಿಗೆ ಮಹತ್ವ ನೀಡಲಿಲ್ಲ. ಜವಾಹರಲಾಲ ನೆಹರು ಇವರ ‘ನವಶಿಕ್ಷಾ ಧೋರಣೆ’ಯು ಸಂಸ್ಕೃತವನ್ನು ‘ಮೃತಭಾಷೆ’ ಎಂದು ನಿರ್ಧರಿಸಿತು. ಸಂಸ್ಕೃತದ ಇಂದಿನ ಸ್ಥಿತಿಯು ಎಲ್ಲರಿಗೂ ತಿಳಿದಿದೆ. ಮೇರಠ್ ವಿದ್ಯಾಪೀಠದಲ್ಲಿ ‘ಸಂಸ್ಕೃತ’ ವಿಷಯದ ಎಮ್.ಫಿಲ್.ನ ಅಭ್ಯಾಸ ಹಾಗೂ ಸಂಶೋಧನೆಯನ್ನು ನಿಲ್ಲಿಸಲಾಗಿದೆ. ಭಾರತದಲ್ಲಿ ಸಂಸ್ಕೃತವನ್ನು ಕಲಿಸುವ ಒಟ್ಟು ೧೨ ವಿದ್ಯಾಪೀಠಗಳಿವೆ; ಆದರೆ ಅವುಗಳಲ್ಲಿ ಮೇಲಿನ ಹುದ್ದೆಯಲ್ಲಿರುವ ಜನರು ಸಂಸ್ಕೃತದ ವಿದ್ವಾಂಸರಲ್ಲ.

೩. ಜಗತ್ತಿನ ೪೬ ದೇಶಗಳಲ್ಲಿನ ೨೫೦ ವಿದ್ಯಾಪೀಠಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಲಾಗುತ್ತದೆ, ಎಂಬುದನ್ನು ಈ ಜಾತ್ಯತೀತರು ಗಮನದಲ್ಲಿಡಬೇಕು !

ನಾವು ಯಾವಾಗಲೂ ಗಮನದಲ್ಲಿಡಬೇಕು ಏನೆಂದರೆ, ಸಂಸ್ಕೃತವು ಕೇವಲ ಭಾಷೆಯೇ ಅಲ್ಲ, ಅದು ಸಂಸ್ಕೃತಿ ಜೋಪಾಸನೆಯ ಒಂದು ಶ್ರೇಷ್ಠ ಅಧಿಕಾರವಾಗಿದೆ. ಸಂಸ್ಕೃತವೇ ಭಾರತವನ್ನು ವಿಶ್ವಗುರುವನ್ನಾಗಿಸಿದೆ; ಆದ್ದರಿಂದಲೇ ಸಂಸ್ಕೃತದ ಹೊರತು ಭಾರತದ ಶೈಕ್ಷಣಿಕ ವಿಸ್ತಾರ, ನೈತಿಕ ಉನ್ನತಿ ಹಾಗೂ ವಿವಿಧ ದೇಶಗಳೊಂದಿಗಿನ ಮಧುರ ಬಾಂಧವ್ಯವನ್ನು ನಾವು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ, ಉದಾ. ವಿದೇಶ ಸಚಿವಾಲಯದಲ್ಲಿರುವ ವಿದೇಶಮಂತ್ರಿ, ಸಚಿವರು ಮತ್ತು ಸಾಕಷ್ಟು ಸಂಖ್ಯೆಯಲ್ಲಿರುವ ಭಾರತೀಯ ರಾಜದೂತರಿಗೆ ಸಂಸ್ಕೃತ ಸಾಹಿತ್ಯಗಳ ಪರಿಚಯವಿರಬೇಕು. ಹಾಗಿರದಿದ್ದರೆ, ಅವರು ಭಾರತೀಯ ಹಿತದ ಪ್ರತಿನಿಧಿತ್ವವನ್ನು ಹಾಗೂ ವಿಶ್ವಕಲ್ಯಾಣದ ವಿಷಯವನ್ನು ಹೇಗೆ ವಿಚಾರ ಮಾಡಬಲ್ಲರು ? ಸಂಸ್ಕೃತ ಜ್ಞಾನದ ಅಭಾವವೆಂದರೆ ಭೂತಕಾಲದೊಂದಿಗಿನ ಸಂಬಂಧ ಮುರಿದಂತೆ ಎನ್ನಬಹುದು. ಹೀಗೂ ಒಂದು ಅನುಭವವಾಗಿದೆ, ಅಂದರೆ ಓರ್ವ ವಿದೇಶಿ ವ್ಯಕ್ತಿಗೆ ಭಾರತದ ಸಾಂಸ್ಕೃತಿಕ ದೂತರಿಂದ ಯಾವುದೇ ಒಂದು ಶ್ಲೋಕ ಅಥವಾ ಸಂಸ್ಕೃತ ಸಾಹಿತ್ಯದ ಮಾಹಿತಿ ಬೇಕಾಗಿರುತ್ತದೆ, ಆಗ ಅವರು ಏನಾದರೂ ತರ್ಕ ಮಾಡಿ ಮಾಹಿತಿಯನ್ನು ಕೊಡಲು ಮುಂದಾಗುತ್ತಾರೆ. ಅನೇಕ ವೇಳೆ ಭಾರತದ ತಥಾಕಥಿತ ಜಾತ್ಯತೀತವಾದಿಗಳು ಸಂಸ್ಕೃತ ಭಾಷೆಯು ಅರಬಿ, ಪಾರ್ಸಿ ಭಾಷೆಗೆ ಸಮಾನವಾಗಿರುವ ಭಾಷೆ ಆಗಿದೆ ಎಂದು ತರ್ಕ ಮಾಡಿ ತಮ್ಮ ಅಜ್ಞಾನವನ್ನು ಅಡಗಿಸುವ ಪ್ರಯತ್ನಿಸುತ್ತಾರೆ; ಆದರೆ ಜಗತ್ತಿನಲ್ಲಿ ೪೬ ದೇಶಗಳ ೨೫೦ ವಿದ್ಯಾಪೀಠಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಲಾಗುತ್ತದೆ ಎಂಬುದು ಅವರಿಗೆ ಅರ್ಥವಾಗದ ವಿಷಯವಾಗಿದೆ.

೪. ಮೋದಿ ಸರಕಾರ ಹಿಂದಿ ಭಾಷೆಯ ಎಲ್ಲ ರಾಜ್ಯಗಳಲ್ಲಿನ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸಬೇಕು !

ಸಂಸ್ಕೃತವನ್ನು ತಿರಸ್ಕರಿಸುವುದೆಂದರೆ ಇದೊಂದು ತೀವ್ರ ಸಂಸ್ಕೃತಿವಿರೋಧಿ ಹಾಗೂ ರಾಷ್ಟ್ರವಿರೋಧಿ ಕೃತ್ಯವಾಗಿದೆ. ಇಂದಿನ ಸಾಂಸ್ಕೃತಿಕ ರಾಷ್ಟ್ರವಾದವನ್ನು ಸಮರ್ಥಿಸುವ ಮೋದಿ ಸರಕಾರ ಕೂಡ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಸ್ಕೃತ ಭಾಷೆಯ ವಿದ್ವಾಂಸರನ್ನು ಸಿದ್ಧಪಡಿಸುವ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಬೇಕು, ಅಂದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಸಂಸ್ಕೃತವನ್ನು ಎಲ್ಲ ಹಿಂದಿ ಭಾಷೆಯ ರಾಜ್ಯಗಳಲ್ಲಿನ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಾಥಮಿಕ ಸ್ತರದಲ್ಲಿ ಕಡ್ಡಾಯಗೊಳಿಸಲಾಗುವುದು ಹಾಗೂ ಹಿಂದಿಯೇತರ ಭಾಷೆಯ ಪ್ರಾಂತಗಳಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಅದನ್ನು ಪರ್ಯಾಯ ವಿಷಯವೆಂದು ಬಳಸಿಕೊಳ್ಳಬಹುದು. ‘ಮುಂದಿನ ಪೀಳಿಗೆಗೆ ಸಂಸ್ಕೃತವನ್ನು ಕಲಿಸುವುದು’, ಭಾರತದ ಭಾವೀ ನಾಗರಿಕರಲ್ಲಿ ಸ್ವದೇಶಪ್ರೇಮ ಜಾಗೃತಗೊಳಿಸುವ ಉತ್ತಮ ಉಪಕ್ರಮವಾಗಿದೆ.’

(ಆಧಾರ : ಮಾಸಿಕ ‘ಗೀತಾ ಸ್ವಾಧ್ಯಾಯ’, ಆಗಸ್ಟ್ ೨೦೧೫)

ಭಾರತೀಯರಲ್ಲಿ ರಾಷ್ಟ್ರಪೇಮದ ಅಭಾವ

ಚೀನಾದಿಂದ ಆಮದು ಮಾಡಿದಂತಹ ವಸ್ತುಗಳು ತುಂಬ ಹಿಂದಿನ ಕಾಲದಿಂದಲೇ ಭಾರತದಲ್ಲಿ ತಯಾರು ಮಾಡಲಾಗುತ್ತಿದೆ ಆದರೂ ಭಾರತೀಯರು ಸ್ವದೇಶಿ ವಸ್ತುವನ್ನು ಖರೀದಿಸದೆ ಚೀನಾದ ವಸ್ತುಗಳಿಗೆ ಪ್ರಾಧಾನ್ಯ ನೀಡುತ್ತಾನೆ. ಇದಕ್ಕೆ ಭಾರತೀಯರಲ್ಲಿರುವ ರಾಷ್ಟ್ರಪ್ರೇಮದ ಅಭಾವವೇ ಕಾರಣವೆಂದು ಹೇಳಬೇಕಾಗುತ್ತದೆ. ಅಮೇರಿಕವು ಜಪಾನನ ಮಾರುಕಟ್ಟೆಯಲ್ಲಿ ಕಡಿಮೆದರದಲ್ಲಿ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡಲು ಪ್ರಯತ್ನಿಸಿತ್ತು. ಈ ಮೂಲಕ ಅಮೇರಿಕಾಕ್ಕೆ ಜಪಾನಿನ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದಿತ್ತು. ಆದರೆ ದೇಶದ ಬಗ್ಗೆ ಸ್ವಾಭಿಮಾನವಿದ್ದ ಜಪಾನಿನ ಜನತೆಯು ಅಮೇರಿಕದ ವಸ್ತುಗಳ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ ಅವರು ಅದರ ಮೇಲೆ ಒಂದು ರೀತಿಯಲ್ಲಿ ಬಹಿಷ್ಕಾರವನ್ನೇ ಹಾಕಿದರು.

– ಶ್ರೀ. ಸಚಿನ್ ಕೌಲಕರ, ಮುಂಬೈ