ತಪ್ಪುಗಳನ್ನು ಯೋಗ್ಯ ಪದ್ಧತಿಯಲ್ಲಿ ಬರೆದುಕೊಡುವುದು, ತಪ್ಪುಗಳ ಪರಿಮಾರ್ಜನೆಗಾಗಿ ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಹಾಗೂ ಪರಾತ್ಪರ ಗುರು ಡಾ. ಆಠವಲೆಯವರು ಕಲಿಸಿರುವ ವಿಷಯಗಳನ್ನು ಆಚರಣೆಯಲ್ಲಿ ತರುವುದು ಇವುಗಳ ಮಹತ್ವವನ್ನು ಸ್ಪಷ್ಟಗೊಳಿಸುವ ಸಂಶೋಧನೆ !

ಹಸ್ತಲಿಖಿತ ಹಾಗೂ ಗಣಕೀಯ ಪ್ರತಿಯ (ಪ್ರಿಂಟ್) ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ಸಾಧಕರಲ್ಲಿನ ಸ್ವಭಾವದೋಷ ಮತ್ತು ಅಹಂ, (‘ನಾನು’ ಎನ್ನುವ ಅರಿವು) ಇವುಗಳಿಂದಾಗಿ ಅವರಿಂದ ಬರವಣಿಗೆಯ ಸೇವೆಯಲ್ಲಿ ವ್ಯಾಕರಣ ಮತ್ತು ಸಂಕಲನದಲ್ಲಿ ಸಣ್ಣ-ದೊಡ್ಡ ತಪ್ಪುಗಳಾಗುತ್ತವೆ. ಇದರಿಂದ ಸಾಧಕರ ಸಾಧನೆ ಖರ್ಚಾಗುತ್ತದೆ. ಸೇವೆಯಲ್ಲಾಗುವ ತಪ್ಪುಗಳ ಅಭ್ಯಾಸ ಮಾಡುವುದು, ಅದೇ ಅದೇ ತಪ್ಪು ಪದೇ ಪದೇ ಆಗಬಾರದೆಂದು ಪರಿಹಾರೋಪಾಯ ಮಾಡುವುದು, ತಪ್ಪುಗಳಿಗೆ ಯೋಗ್ಯವಾದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು (ತಪ್ಪುಗಳಿಂದಾಗಿ ಸಾಧಕರ ಸಾಧನೆ ಖರ್ಚಾಗುತ್ತದೆ. ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದರಿಂದ ಸ್ವಲ್ಪ ಪ್ರಮಾಣದಲ್ಲಿಯಾದರೂ ತಪ್ಪುಗಳ ಪರಿಮಾರ್ಜನೆಯಾಗುತ್ತದೆ ಹಾಗೂ ಸಾಧಕರ ಸಾಧನೆ ವ್ಯರ್ಥವಾಗುವುದಿಲ್ಲ. ಆದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಯಾವಾಗಲೂ ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳುತ್ತಾರೆ.) ಇತ್ಯಾದಿ ವಿಷಯಗಳ ಸಂಸ್ಕಾರವನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿ ಮೂಡಿಸಿದ್ದಾರೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೨೦.೫.೨೦೨೧ ರಿಂದ ಪರಾತ್ಪರ ಗುರು ಡಾಕ್ಟರರು ದೈನಿಕದಲ್ಲಿನ ತಪ್ಪುಗಳನ್ನು ಅರಿವು ಮಾಡಿಕೊಡಲು ಆರಂಭಿಸಿದರು. ಅನಂತರ ದೈನಿಕಕ್ಕೆ ಸಂಬಂಧಿಸಿದ ಸೇವೆ ಮಾಡುವ ಸಾಧಕರು ತಮ್ಮಿಂದಾಗುವ ವ್ಯಾಕರಣದ ಮತ್ತು ಸಂಕಲನದ ತಪ್ಪುಗಳನ್ನು ಕಾಗದದಲ್ಲಿ ಬರೆದು ಕೊಡಲು ಆರಂಭಿಸಿದರು. ಪ್ರಾರಂಭದಲ್ಲಿ ೧ ತಿಂಗಳು ಸಾಧಕರು ತಮ್ಮ ತಪ್ಪುಗಳನ್ನು ಸಣ್ಣ ಸಣ್ಣ ಕಾಗದದಲ್ಲಿ ಬರೆದುಕೊಡುತ್ತಿದ್ದರು. ಇದು ಅಯೋಗ್ಯವಾಗಿದೆಯೆಂದು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಅರಿವು ಮಾಡಿಕೊಟ್ಟರು. ಅನಂತರ ಸಾಧಕರು ತಪ್ಪುಗಳ ಗಣಕೀಯ ಕಡತವನ್ನು ಮಾಡಿ ಅದರಲ್ಲಿ ತಪ್ಪುಗಳನ್ನು ಬರೆಯಲು ಆರಂಭಿಸಿದರು ಹಾಗೂ ಅದರ ಪ್ರತಿಯನ್ನು (ಪ್ರಿಂಟ್)ತೆಗೆದು ಅದನ್ನು ಪರಾತ್ಪರ ಗುರು ಡಾಕ್ಟರರಿಗೆ ಕಳುಹಿಸಲು ಆರಂಭಿಸಿದರು.

ಸಾಧಕರ ಹಸ್ತಲಿಖಿತದ ತಪ್ಪುಗಳ ಕಾಗದ ಹಾಗೂ ತಪ್ಪುಗಳ ಗಣಕೀಯ ಪ್ರತಿಯಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳ ಅಭ್ಯಾಸವನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಪರಿಶೀಲನೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆ ಹಾಗೂ ಅದರ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ಜೂನ್‌ನಿಂದ ಸಪ್ಟೆಂಬರ್ ೨೦೨೧ ಈ ಅವಧಿಯಲ್ಲಿನ ದೈನಿಕ ಸನಾತನ ಪ್ರಭಾತಕ್ಕೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರ ಕಾಗದದಲ್ಲಿ ಹಸ್ತಲಿಖಿತದಲ್ಲಿ ಬರೆದ ತಪ್ಪುಗಳು ಹಾಗೂ ತಪ್ಪುಗಳ ಗಣಕೀಯ ಪ್ರತಿ (ಪ್ರಿಂಟ್) ಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು.

೧ ಅ. ಸಾಧಕರ ಹಸ್ತಲಿಖಿತದ ತಪ್ಪುಗಳು ಹಾಗೂ ತಪ್ಪುಗಳ ಗಣಕೀಯ ಪ್ರತಿಗಳಲ್ಲಿ ನಕಾರಾತ್ಮಕ ಉರ್ಜೆ ಕಂಡು ಬರುವುದು ಹಾಗೂ ಹಸ್ತಲಿಖಿತದಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿರುವುದು : ಇದು ಮುಂದಿನ ಕೋಷ್ಟಕದಿಂದ ಅರಿವಾಗುತ್ತದೆ.

೧ ಅ ೧. ಹಸ್ತಲಿಖಿತದಲ್ಲಿದ್ದ ತಪ್ಪುಗಳಲ್ಲಿ ನಕಾರಾತ್ಮಕ ಉರ್ಜೆಯ ಪ್ರಮಾಣವು ತುಂಬಾ ಹೆಚ್ಚಾಗಿರುವುದರ ಕಾರಣ : ವ್ಯಕ್ತಿಯ ಹಸ್ತಲಿಖಿತದಿಂದ (ಹಸ್ತಾಕ್ಷರದಿಂದ) ಪ್ರಕ್ಷೇಪಣೆಯಾಗುವ ಸ್ಪಂದನಗಳು ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ, ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆ ಇರುವುದು ಅಥವಾ ಇಲ್ಲದಿರುವುದು, ಬರವಣಿಗೆಯ ವಿಷಯ, ಬರವಣಿಗೆ ಮಾಡುವಾಗ ವ್ಯಕ್ತಿಯ ಮನಃಸ್ಥಿತಿ ಇತ್ಯಾದಿ ಅನೇಕ ಘಟಕಗಳ ಮೇಲೆ ಅವಲಂಬಿಸಿರುತ್ತದೆ. ಸಾಧಕರ ತಪ್ಪುಗಳ ಹಸ್ತಲಿಖಿತಗಳಲ್ಲಿ ಸಕಾರಾತ್ಮಕ ಉರ್ಜೆ ಸ್ವಲ್ಪವೂ ಇರದೆ ಬಹಳ ಪ್ರಮಾಣದಲ್ಲಿ ನಕಾರಾತ್ಮಕ ಉರ್ಜೆಯು ಕಂಡು ಬಂತು. ಇದರ ಕಾರಣವೆಂದರೆ, ಸಾಧಕರು ತಪ್ಪುಗಳನ್ನು ಬರೆದುಕೊಡುವಾಗ ಅವುಗಳನ್ನು ಅಭ್ಯಾಸಪೂರ್ಣವಾಗಿ ಬರೆದು ಕೊಡುವುದಿಲ್ಲ. ಆದ್ದರಿಂದ ಅದರಲ್ಲಿ ಅನೇಕ ಕೊರತೆಗಳಿರುತ್ತವೆ. ಕೆಲವೊಮ್ಮೆ ಸಾಧಕರು ತಪ್ಪುಗಳನ್ನು ಬರೆಯುವಾಗ ಈ ಮುಂದಿನ ತಪ್ಪುಗಳೂ ಆಗುತ್ತವೆ.

ಅ. ಬರೆಯುವಾಗ ಏಕಾಗ್ರತೆ ಇಲ್ಲದಿರುವುದು

ಆ. ಬರೆಯುವಾಗ ಬರೆಯುವುದು-ಗೀಚುವುದು,

ಇ. ತಪ್ಪುಗಳ ಚಿಂತನೆ ಮಾಡದೆ ಮೇಲುಮೇಲೆ ಬರೆಯುವುದು

ಈ. ತಪ್ಪುಗಳನ್ನು ಬರೆಯುವಾಗ ಆ ವಿಷಯದಲ್ಲಿ ಮನಸ್ಸಿಗೆ ದುಃಖವಾಗದಿರುವುದು

ಉ. ತಪ್ಪುಗಳನ್ನು ಮನಃಪೂರ್ವಕವಾಗಿ ಬರೆಯದೆ ಕೇವಲ ‘ಹೇಳಿದ್ದಾರೆ ಅದಕ್ಕಾಗಿ ಬರೆದು ಕೊಡೋಣ’, ಎಂದು ತಪ್ಪು ದೃಷ್ಟಿಕೋನವನ್ನಿಟ್ಟು ಬರೆಯುವುದು

ಊ. ತಪ್ಪುಗಳಿಗೆ ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದು ಕೊಳ್ಳದಿರುವುದು ಇತ್ಯಾದಿ.

ಈ ಮೇಲಿನ ಎಲ್ಲದರ ಒಟ್ಟು ಪರಿಣಾಮವೆಂದು ಸಾಧಕರ ಹಸ್ತಲಿಖಿತಗಳಿಂದ ತುಂಬಾ ನಕಾರಾತ್ಮಕ ಸ್ಪಂದನವು ಪ್ರಕ್ಷೇಪಣೆಯಾಯಿತು.

೧ ಅ ೨. ಹಸ್ತಲಿಖಿತದ ತಪ್ಪುಗಳ ತುಲನೆಯಲ್ಲಿ ಗಣಕೀಯ ಪ್ರತಿಯಲ್ಲಿ ನಕಾರಾತ್ಮಕ ಉರ್ಜೆಯ ಪ್ರಮಾಣ ಕಡಿಮೆ ಇರುವ ಕಾರಣ : ಕಾಗದದ ಮೇಲೆ ಕೈಯಿಂದ ಬರೆಯುವಾಗ ಆಗುವ ಕೊರತೆಯನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವಾಗ ತಡೆಯಬಹುದು, ಉದಾ. ಯಾವುದೇ ಶಬ್ದವನ್ನು ಬೆರಳಚ್ಚು ಮಾಡುವಾಗ ತಪ್ಪಾದರೆ ಅದನ್ನು ಸುಧಾರಿಸಬಹುದು; ವಾಕ್ಯರಚನೆಯನ್ನು ಸುಧಾರಿಸಬಹುದು ಇತ್ಯಾದಿ. ಗಣಕಯಂತ್ರದಲ್ಲಿ ಲೇಖನ ಮಾಡುವಾಗ ಸುಲಭ ಹಾಗೂ ಬಿಡಿ ಬಿಡಿಯಾಗಿ ಸಂರಚನೆ ಮಾಡುವುದು ಇತ್ಯಾದಿ ವಿಷಯಗಳನ್ನೂ ಮಾಡಬಹುದು, ಉದಾ. ಕೋಷ್ಟಕವನ್ನು ತಯಾರಿಸುವುದು. ಗಣಕಯಂತ್ರದಲ್ಲಿ ಲೇಖನ ಮಾಡುವಾಗ ವ್ಯಕ್ತಿಯ ಹಸ್ತಾಕ್ಷರಗಳಿಂದ ನೇರವಾಗಿ ಪರಿಣಾಮವಾಗದಿದ್ದರೂ, ಅದರ ಮನಃಸ್ಥಿತಿಯ ಸೂಕ್ಷ್ಮ ಪರಿಣಾಮ ಮಾತ್ರ ಆಗುತ್ತದೆ.

ಸಾಧಕರ ಹಸ್ತಲಿಖಿತದ ತಪ್ಪುಗಳ ತುಲನೆಯಲ್ಲಿ ಗಣಕೀಯ ಪ್ರತಿಯಲ್ಲಿ ನಕಾರಾತ್ಮಕ ಉರ್ಜೆಯ ಪ್ರಮಾಣವು ಕಡಿಮೆ ಇರುವುದರ ಕಾರಣಗಳನ್ನು ಮುಂದೆ ಕೊಡಲಾಗಿದೆ.

ಅ. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಹಸ್ತಲಿಖಿತದಲ್ಲಿ ಬರೆದ ತಪ್ಪುಗಳ ವಿಷಯದಲ್ಲಿ ಅವರಿಂದಾಗುವ ತಪ್ಪುಗಳನ್ನು ಅರಿವು ಮಾಡಿಕೊಟ್ಟ ನಂತರ ಅವರು ಗಣಕಯಂತ್ರದಲ್ಲಿ ಬರೆಯಲು ಆರಂಭಿಸಿದರು. ಆದ್ದರಿಂದ ಲೇಖನಗಳ ತಪ್ಪುಗಳನ್ನು ತಡೆಯಲು ಸಾಧ್ಯವಾಯಿತು.

ಆ. ಸಾಧಕರು ತಪ್ಪುಗಳ ಬೆರಳಚ್ಚು ಮಾಡುವಾಗ ಕೋಷ್ಟಕದಲ್ಲಿ ನೀಡಿರುವ ಅಂಕಣಕ್ಕನುಸಾರ ತಪ್ಪುಗಳ ವಿವರಣೆಯನ್ನು ಬರೆಯಲು ಆರಂಭಿಸಿದರು,

ಉದಾ. ‘ಏನು ತಪ್ಪಾಯಿತು ? ಯೋಗ್ಯ ಏನಿರಬೇಕಿತ್ತು ? ತಪ್ಪುಗಳಿಗಾಗಿ ಜವಾಬ್ದಾರ ಸಾಧಕರ ಹೆಸರು ಮತ್ತು ಅವರು ಯಾವ ಪ್ರಾಯಶ್ಚಿತ್ತವನ್ನು ತೆಗೆದುಕೊಂಡರು ?’, ಇತ್ಯಾದಿ ವಿವರಣೆಯನ್ನು ಬರೆಯಲು ಆರಂಭಿಸಿದರು. ಅದೇ ರೀತಿ ತಪ್ಪುಗಳನ್ನು ವರ್ಗೀಕರಿಸಿ ಮೊದಲು ಸಣ್ಣ ತಪ್ಪುಗಳು, ನಂತರ ಮಧ್ಯಮ ತಪ್ಪುಗಳು ಮತ್ತು ಕೊನೆಗೆ ದೊಡ್ಡ ತಪ್ಪುಗಳನ್ನು ಕೋಷ್ಟಕದಲ್ಲಿ ಆಯಾಯ ಸ್ವರೂಪದ ತಪ್ಪುಗಳನ್ನು ಬೆರಳಚ್ಚು ಮಾಡಿದರು.

ಇ. ಸಾಧಕರು ತಪ್ಪುಗಳಿಗೆ ಯೋಗ್ಯವಾದ ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಆರಂಭಿಸಿದರು.

ಈ ಮೇಲಿನ ಎಲ್ಲದರ ಪರಿಣಾಮವೆಂದು ಹಸ್ತಲಿಖಿತದಲ್ಲಿದ್ದ ತಪ್ಪುಗಳ ತುಲನೆಯಲ್ಲಿ ತಪ್ಪುಗಳ ಗಣಕೀಯ ಪ್ರತಿಯಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಿರುವುದು ಕಂಡುಬಂತು.

೧ ಅ ೩. ೧೪.೭.೨೦೨೧ ರ ಗಣಕೀಯ ಪ್ರತಿಯಲ್ಲಿ ಎಲ್ಲಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಕಾರಾತ್ಮಕ ಉರ್ಜೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆ ಇರುವುದರ ಕಾರಣ : ೧೪.೭.೨೦೨೧ ರಂದು ವಿಷಯ ‘೧ ಅ ೨ ರಲ್ಲಿ ನೀಡಿರುವ ಎಲ್ಲ ವಿಷಯಗಳೊಂದಿಗೆ ಸಾಧಕರು ಗಣಕೀಯ ಪ್ರಿಂಟ್ ತೆಗೆಯುವಾಗ ಒಂದು ಬದಿ ಖಾಲಿಯಿರುವ ಕಾಗದವನ್ನು ಉಪಯೋಗಿಸಿದರು ಹಾಗೂ ಅದು ಕೂಡ ಆವಶ್ಯಕವಿರುವಷ್ಟೇ ಮಾಡಿದರು. ಈ ದಿನ ಕಡತದಲ್ಲಿ ಎರಡೇ ತಪ್ಪುಗಳಿದ್ದ ಕಾರಣ ಪ್ರಿಂಟ್ ತೆಗೆಯುವ ಸಾಧಕನು ಪ್ರಿಂಟ್ ತೆಗೆದ ನಂತರ ಕೆಳಗೆ ಖಾಲಿ ಇರುವ ಭಾಗವನ್ನು ಕತ್ತರಿಸಿ ಅದನ್ನು ಬದಿಗಿಟ್ಟನು. ಇದರಿಂದ ಶ್ರೀಗುರುಗಳು (ಪರಾತ್ಪರ ಗುರು ಡಾ. ಆಠವಲೆಯವರು) ಕಲಿಸಿರುವುದನ್ನು ಅವನು ಆಚರಣೆಯಲ್ಲಿ ತಂದನು, ಎಂಬುದು ಅರಿವಾಗುತ್ತದೆ. (ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಪ್ರತಿಯೊಂದು ಕೃತಿಯನ್ನು ‘ಸತ್ಯಂ ಶಿವಂ ಸುಂದರಮ್’ ಮಾಡುವ ಬೋಧನೆಯನ್ನು ನೀಡಿದ್ದಾರೆ. ಪ್ರತಿಯೊಂದು ಕೃತಿಯನ್ನು ಮಾಡುವಾಗ ಅದನ್ನು ವ್ಯವಸ್ಥಿತವಾಗಿ ಮಾಡಬೇಕು, ಎಂಬುದನ್ನು ಅವರು ಸಾಧಕರಿಗೆ ನಿರಂತರ ಅರಿವು ಮೂಡಿಸುತ್ತಿರುತ್ತಾರೆ.) ೨೦.೯.೨೦೨೧ ರಂದು ಸಾಧಕನು ಪ್ರಿಂಟ್ ತೆಗೆಯುವಾಗ ಒಂದು ಬದಿ ಖಾಲಿಯಿರುವ ಕಾಗದವನ್ನು ಉಪಯೋಗಿಸದೇ ಎರಡೂ ಬದಿ ಖಾಲಿ ಇರುವ ಕಾಗದದಲ್ಲಿ ತೆಗೆದನು, ಅದು ಅಯೋಗ್ಯವಾಗಿತ್ತು. ಪರಾತ್ಪರ ಗುರು ಡಾಕ್ಟರರು ಯಾವ ಲೇಖನಕ್ಕೆ ಯಾವ ಕಾಗದವನ್ನು ಉಪಯೋಗಿಸಬೇಕು, ಲೇಖನಕ್ಕನುಸಾರ ಯೋಗ್ಯ ಆಕಾರದ ಕಾಗದವನ್ನು ತೆಗೆದುಕೊಳ್ಳಬೇಕು ಇತ್ಯಾದಿ ವಿಷಯವನ್ನೂ ಸಾಧಕರಿಗೆ ಹೇಳುತ್ತಾರೆ. ಈಶ್ವರನು ನೀಡಿರುವ ಪ್ರತಿಯೊಂದು ವಸ್ತುವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಬೇಕು, ಎಂಬುದು ಅವರ ಬೋಧನೆಯಾಗಿದೆ.

ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಸಾಧಕರು ತಮ್ಮಿಂದಾಗುವ ತಪ್ಪುಗಳನ್ನು ಅಂತರ್ಮುಖರಾಗಿ ಚಿಂತನೆ ಮಾಡಿ ಮನಃಪೂರ್ವಕವಾಗಿ ಬರೆಯುವುದರಿಂದ ಹಾಗೂ ಅದಕ್ಕೆ ಯೋಗ್ಯವಾದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ಅವರ ಸಾಧನೆ ವ್ಯರ್ಥವಾಗುವುದಿಲ್ಲ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ಶ್ರೀಗುರುಗಳು (ಪರಾತ್ಪರ ಗುರು ಡಾ. ಆಠವಲೆಯವರು) ಕಲಿಸಿರುವ ವಿಷಯಗಳನ್ನು ಆಚರಣೆಯಲ್ಲಿ ತರಲಾಗುತ್ತದೆ. ‘ಪರಾತ್ಪರ ಗುರು ಡಾಕ್ಟರ್, ತಾವು ನಮ್ಮೆಲ್ಲ ಸಾಧಕರಿಗೆ ಮಾಡುತ್ತಿರುವ ಚೈತನ್ಯಮಯ ಮಾರ್ಗದರ್ಶನದಿಂದ ನಾವು ಲಾಭ ಪಡೆಯುವಂತಾಗಲಿ’, ಎಂದು ತಮ್ಮ ಕೋಮಲ ಚರಣಗಳಲ್ಲಿ ಆತರ್ತೆಯಿಂದ ಪ್ರಾರ್ಥನೆ !

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧೨.೨೦೨೧)

ವಿ-ಅಂಚೆ : [email protected]

ಈ ಲೇಖನದಲ್ಲಿ ‘ಯೂ.ಎ.ಎಸ್. (‘ಯು.ಟಿ.ಎಸ್.) ಉಪಕರಣದ ಪರಿಚಯ, ಉಪಕರಣದ ಮೂಲಕ ಮಾಡ ಬೇಕಾದ ಪರೀಕ್ಷಣೆಯ ಘಟಕಗಳು ಹಾಗೂ ಅವುಗಳ ವಿವರಣೆ, ಘಟಕದ ಪ್ರಭಾವಲಯವನ್ನು ಅಳೆಯುವುದು. ‘ಪರೀಕ್ಷಣೆಯ ಪದ್ಧತಿ ಹಾಗೂ ‘ಪರೀಕ್ಷಣೆ ಒಂದೇ ರೀತಿಯಲ್ಲಿ ಬರಲು ತೆಗೆದುಕೊಂಡ ಕಾಳಜಿ ಈ ನಿತ್ಯದ ಅಂಶಗಳನ್ನು ಸನಾತನ ಸಂಸ್ಥೆಯ https://bit.ly/UASResearch ಈ ಲಿಂಕ್‌ನಲ್ಲಿ ನೀಡಲಾಗಿದೆ. ಈ ಲಿಂಕ್‌ನಲ್ಲಿ ಕೆಲವು ಅಕ್ಷರಗಳು ಕ್ಯಾಪಿಟಲ್ (Capital)ನಲ್ಲಿವೆ.