ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ‘ಸನಾತನ ಪ್ರಭಾತ’ ಪತ್ರಿಕೆಯ ಕೃತಿಶೀಲ ಸಹಭಾಗ, ಅದಕ್ಕೆ ದೊರೆತ ಯಶಸ್ಸು ಮತ್ತು ಓದುಗರಿಗೆ ಆಗುವ ಆಧ್ಯಾತ್ಮಿಕ ಲಾಭ !

ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ‘ಸನಾತನ ಪ್ರಭಾತ’ ಪತ್ರಿಕೆಯ ಸಹಭಾಗ ಈ ವಿಷಯವನ್ನು ನಾನು ಒಬ್ಬ ಓದುಗ, ಒಬ್ಬ ಸಾಧಕ, ಒಬ್ಬ ಹಿಂದೂ ಧರ್ಮಪ್ರೇಮಿ ಮತ್ತು ಒಬ್ಬ ರಾಷ್ಟ್ರಪ್ರೇಮಿಯ ಭೂಮಿಕೆಯಿಂದ ಮಂಡಿಸಲು ಪ್ರಯತ್ನಿಸುತ್ತೇನೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ‘ಸನಾತನ ಪ್ರಭಾತ’ ಇದು ‘ಸಾಪ್ತಾಹಿಕ ಸನಾತನ ಪ್ರಭಾತ’ ಅಲ್ಲ ಇದು ‘ಸೈನಿಕ ಸನಾತನ ಪ್ರಭಾತ’ !

ಭಾರತದಲ್ಲಿ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ‘ದರ್ಪಣಕಾರ ಬಾಳಶಾಸ್ತ್ರಿ ಜಾಂಭೇಕರ ಶಾಸ್ತ್ರಿ’ ಇವರು ೬ ಜನವರಿ ೧೮೧೨ ರಂದು ‘ದರ್ಪಣ’ ಎಂಬ ಹೆಸರಿನ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಇದರಿಂದ ಸ್ವಾತಂತ್ರ್ಯದ ಬಗ್ಗೆ ಬಹುದೊಡ್ಡ ಪ್ರಮಾಣದಲ್ಲಿ ಜಾಗೃತಿಯಾಯಿತು. ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಧರ್ಮಪ್ರೇಮಿಗಳ ಮನಸ್ಸಿನಲ್ಲಿ ಒಂದು ರೀತಿಯ ಹತಾಶೆ ನಿರ್ಮಾಣವಾಗಿತ್ತು. ಅದು ದೂರವಾಗಬೇಕೆಂದು ಈಶ್ವರನ ಮನಸ್ಸಿನಲ್ಲಿ ಒಂದು ಇಚ್ಛೆ ನಿರ್ಮಾಣವಾಯಿತು ಮತ್ತು ‘ಸನಾತನ ಪ್ರಭಾತ’ ನಿಯತಕಾಲಿಕೆ ಪ್ರಾರಂಭವಾಯಿತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ‘ದರ್ಪಣ’ ದಿನಪತ್ರಿಕೆ ಯಾವ ಭೂಮಿಕೆಯನ್ನು ನಿರ್ವಹಿಸಿತ್ತೋ, ಅದೇ ಭೂಮಿಕೆಯನ್ನು ಸ್ವಾತಂತ್ರ್ಯೋತ್ತರ ಕಾಲದಲ್ಲಿ ‘ಸನಾತನ ಪ್ರಭಾತ’ ನಿರ್ವಹಿಸುತ್ತಿದೆ. ಆದುದರಿಂದ ಇದಕ್ಕೆ ಸಾಪ್ತಾಹಿಕ ಸನಾತನ ಪ್ರಭಾತವಲ್ಲ, ಸೈನಿಕ ಸನಾತನ ಪ್ರಭಾತ ಎಂದು ಹೇಳಬೇಕು.

ಸಾಪ್ತಾಹಿಕ ‘ಸನಾತನ ಪ್ರಭಾತ’ದ ವಿಷಯದಲ್ಲಿ ಬರೆಯುವುದು, ಮಿಂಚುಹುಳ ಸೂರ್ಯನಿಗೆ ಬೆಳಕು ತೋರಿಸಿದಂತಾಗಿದೆ ! – (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

ಸಾಪ್ತಾಹಿಕ ‘ಸನಾತನ ಪ್ರಭಾತ’ದ ವಿಷಯದಲ್ಲಿ ಬರೆಯುವುದು ಮೂರ್ಖ ವ್ಯಕ್ತಿಯು ಸಾಧನೆ, ರಾಷ್ಟ್ರ ಮತ್ತು ಧರ್ಮ ಇವುಗಳಲ್ಲಿ ಅತ್ಯುಚ್ಚ ಪ್ರಗತಿ ಹೊಂದಿರುವ ಸಮೂಹದ ವಿಷಯದಲ್ಲಿ ಬರೆಯುವಂತೆ ಆಗಿದೆ ಮತ್ತು ಹಣತೆ ಅಥವಾ ಮಿಂಚುಹುಳವು ಸೂರ್ಯನಿಗೆ ಬೆಳಕು ತೋರಿಸಿದಂತಾಗಿದೆ ಎಂದು ನನಗೆ ಅನಿಸುತ್ತದೆ.

ನಿಯಮಿತವಾಗಿ ‘ಸನಾತನ ಪ್ರಭಾತ’ವನ್ನು ಓದುತ್ತಾ ‘ನಾನು ಯಾವಾಗ ಸನಾತನದ ಸಾಧಕನಾದೆ’, ಎಂದು ನನಗೆ ತಿಳಿಯಲೇ ಇಲ್ಲ ! – (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

ಪ್ರಾರಂಭದಲ್ಲಿ ನಾನು ದೈನಿಕ ‘ಸನಾತನ ಪ್ರಭಾತ’ವನ್ನು ಓದುತ್ತಿದ್ದೆನು. ಒಮ್ಮೆ ‘ಸನಾತನ ಪ್ರಭಾತ’ದ ಸಂಪಾದಕರನ್ನು ಬಂಧಿಸಿದರು. ಅವರ ಮೇಲೆ ದಾಖಲಿಸಿದ ದೂರು ರದ್ದಾಗಬೇಕೆಂದು ನಾನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದೆನು ಮತ್ತು ಅವರಿಗೆ ನ್ಯಾಯವನ್ನು ದೊರಕಿಸಿಕೊಡಲು ಪ್ರಯತ್ನಿಸಿದೆನು. ತದನಂತರ ಈ ವಿಷಯ ಅಲ್ಲಿಗೇ ಸೀಮಿತಗೊಳ್ಳಲಿಲ್ಲ, ನಾನು ದೈನಿಕವನ್ನು ಓದುತ್ತಾ ಓದುತ್ತಾ ಯಾವಾಗ ಸನಾತನದ ಸಾಧಕನಾದೆನು ಎಂಬುದು ನನಗೆ ತಿಳಿಯಲೇ ಇಲ್ಲ. ಇಂತಹ ಅವಕಾಶವನ್ನು ವಿವಿಧ ಕ್ಷೇತ್ರಗಳ ಅನೇಕ ಧರ್ಮಪ್ರೇಮಿಗಳಿಗೆ ‘ಸನಾತನ ಪ್ರಭಾತ’ ದೊರಕಿಸಿಕೊಟ್ಟಿತು. ಆದುದರಿಂದ ಅವರ ಮೇಲೆ ದೈನಿಕದ ಬಹಳ ಉಪಕಾರವಿದೆ. ಈ ವಿಷಯದಲ್ಲಿ ನಾನು ವೈಯಕ್ತಿವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ಪ್ರತಿಯೊಬ್ಬ ವ್ಯಕ್ತಿ (ಇದು ಅವರಿಂದ ಉಕ್ಕಿ ಬಂದ ಭಾವದಿಂದ) ಸಾಧಕರೇ ಆಗಿದ್ದಾರೆ ಅಥವಾ ಶಾಶ್ವತವಾಗಿ ಸನಾತನದ ಕಾರ್ಯದೊಂದಿಗೆ ಜೊತೆಗೂಡಿದ್ದಾರೆ. ಇದು ಅನೇಕ ಸಲ ಓದುಗರು ವ್ಯಕ್ತಪಡಿಸಿದ ಮನೋಗತದಿಂದ ಸ್ಪಷ್ಟವಾಗಿದೆ.

೨. ಸಾಪ್ತಾಹಿಕ ‘ಸನಾತನ ಪ್ರಭಾತ’ದಿಂದ ಓದುಗರಿಗೆ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಲಾಭವಾಗುವುದು !

ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನಗಳ ಮಾಧ್ಯಮದಿಂದ ಓದುಗರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಬಹಳ ಲಾಭವಾಗುತ್ತದೆ. ಶ್ರೀರಾಮನವಮಿ, ಶ್ರೀಕೃಷ್ಣಜನ್ಮಾಷ್ಟಮಿ ಗಣೇಶೋತ್ಸವ ಇಂತಹ ಉತ್ಸವಗಳಿದ್ದಾಗ ಆಯಾ ದೇವತೆಗಳ ಪೂಜೆಯನ್ನು ಹೇಗೆ ಮಾಡಬೇಕು ? ಅಲ್ಲಿ ಯಾವ ರಂಗೋಲಿಯನ್ನು ಹಾಕಬೇಕು ? ದೇವತೆಗೆ ಯಾವ ಹೂವನ್ನು ಅರ್ಪಿಸಬೇಕು ? ಚೈತನ್ಯದಾಯಕ ಧ್ವನಿಯಲ್ಲಿ ಆರತಿಯನ್ನು ಹೇಗೆ ಹೇಳಬೇಕು ? ಈ ವಿಷಯಗಳ ಅಮೂಲ್ಯ ಜ್ಞಾನವನ್ನು ಸಾಪ್ತಾಹಿಕದಲ್ಲಿ ನೀಡಲಾಗುತ್ತದೆ.

೩. ಮಂದಿರಗಳ ಸರಕಾರೀಕರಣದಿಂದ ಮಂದಿರಗಳಲ್ಲಿ ಆಗುವ ಅವ್ಯವಹಾರಗಳ ಕುರಿತು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು

ಅನೇಕ ಹಿಂದೂ ಮಂದಿರಗಳು ಸರಕಾರೀಕರಣಗೊಂಡಿರುವುದರಿಂದ ಅಲ್ಲಿ ನಡೆಯುವ ಭ್ರಷ್ಟಾಚಾರ, ಮಂದಿರಗಳ ಭೂಮಿಯ ಕಬಳಿಕೆ, ದೇವ ನಿಧಿಯನ್ನು ಅಪಹರಿಸುವುದು, ಬಂಗಾರದ ಆಭರಣಗಳನ್ನು ಲೂಟಿ ಮಾಡುವುದು ಇತ್ಯಾದಿ ಅವ್ಯವಹಾರಗಳ ಮಾಹಿತಿಯನ್ನು ಸ್ಪಷ್ಟ ಶಬ್ದಗಳಲ್ಲಿ ದೈನಿಕದಲ್ಲಿ ನೀಡಲಾಗುತ್ತದೆ. ಇದರೊಂದಿಗೆ ಮಂದಿರ ಸರಕಾರೀಕರಣದ ದುಷ್ಪರಿಣಾಮ ಮತ್ತು ‘ಮಂದಿರಗಳು ಚೈತನ್ಯದ ಮೂಲ ಸ್ರೋತವಾಗಿದ್ದು, ಅವು ಧರ್ಮದ ಆಧಾರಸ್ತಂಭಗಳಾಗಿವೆ’, ಎನ್ನುವ ವಿಷಯದಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಇದರಿಂದ ಸರಕಾರೀಕರಣಗೊಂಡಿರುವ ಮಂದಿರಗಳನ್ನು ಭಕ್ತರ ಸ್ವಾಧೀನಕ್ಕೆ ನೀಡುವ ಬಗ್ಗೆ ಜಾಗೃತಿಯನ್ನು ಸಾಪ್ತಾಹಿಕದ ಮಾಧ್ಯಮದಿಂದ ಮೂಡಿಸಲಾಗುತ್ತಿದೆ.

೪. ಹಿಂದೂ ಧರ್ಮದ ಮೇಲಿನ ಆಘಾತಗಳ ಸತ್ಯ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ನೀಡುವುದರಿಂದ ಹಿಂದೂಗಳಲ್ಲಿ ಜಾಗೃತಿ ಮೂಡುವುದು

ಇಂದು ರಾಷ್ಟ್ರ ಮತ್ತು ಧರ್ಮದ ಸ್ಥಿತಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಇತ್ತೀಚೆಗೆ ೫ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆದವು. ಬಂಗಾಲದಲ್ಲಿ ಹಿಂದೂಗಳ ಮೇಲೆ ಬಹಳ ದೊಡ್ಡ ಪ್ರಮಾಣದಲ್ಲಿ ಆಕ್ರಮಣಗಳಾದವು. ಅಲ್ಲಿಯ ಹಿಂದೂಗಳ ಮನೆಗಳನ್ನು ದೊಡ್ಡ ಪ್ರಮಾಣದಲ್ಲಿ ಸುಡಲಾಯಿತು. ೪೦೦ ರಿಂದ ೫೦೦ ಹಿಂದೂಗಳಿಗೆ ಆಸ್ಸಾಂನಲ್ಲಿ ಆಶ್ರಯವನ್ನು ಪಡೆಯಬೇಕಾಯಿತು. ಚುನಾವಣೆಯ ಕಾಲದಲ್ಲಿ ‘ಪೋಲಿಂಗ ಏಜೆಂಟ’ ಎಂದು ಕೆಲಸ ಮಾಡುವ ಮಹಿಳೆಯ ಮೇಲೆ ಬಲಾತ್ಕಾರ, ನಡೆಯಿತು. ಇತ್ತೀಚೆಗೆ ಸಂತರ, ಮಹಂತರ ಹತ್ಯೆ ನಡೆದವು. ಈ ವಿಷಯದಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ವು ಯೋಗ್ಯ ರೀತಿಯಲ್ಲಿ ಸತ್ಯಾನ್ವೇಷಿ ಮತ್ತು ಕಠಿಣ ಶಬ್ದಗಳಲ್ಲಿ ಸುದ್ದಿಯನ್ನು ನೀಡಿತು. ಯಾವುದಾದರೂ ಗಲಭೆಯ ಸುದ್ದಿಯನ್ನು ಕೊಡುವಾಗ ಬಹುತೇಕ ಪತ್ರಿಕೆಗಳು ಆಕ್ರಮಣಕಾರರನ್ನು ಅದರಲ್ಲಿಯೂ ಮತಾಂಧರನ್ನು ರಕ್ಷಿಸುವುದನ್ನು ನಾವು ನೋಡುತ್ತೇವೆ. ಗಲಭೆ ಹೆಚ್ಚಾಗಬಾರದು ಎಂಬ ಹೆಸರಿನಲ್ಲಿ ಹಿಂದೂಗಳ ಮೇಲಾಗುವ ಅತ್ಯಾಚಾರಗಳ ವಾರ್ತೆಗಳನ್ನು ಪ್ರಕಟಿಸುವುದನ್ನು ತಪ್ಪಿಸಲಾಗುತ್ತದೆ. ಇತರ ದಿನಪತ್ರಿಕೆಗಳಲ್ಲಿ ಗಲಭೆಯ ವಿಷಯದಲ್ಲಿ ಸಂದಿಗ್ಧ ಸುದ್ದಿಯನ್ನು ನೀಡಲಾಗುತ್ತದೆ. ತದ್ವಿರುದ್ಧ ‘ಸನಾತನ ಪ್ರಭಾತ’ದಲ್ಲಿ ಗಲಭೆ ಅಥವಾ ಆಕ್ರಮಣ ಏಕೆ ಆಯಿತು ? ಅದನ್ನು ಯಾರು ಮಾಡಿದರು ? ಅದರಲ್ಲಿ ಹಿಂದೂಗಳಿಗೆ ಎಷ್ಟು ಹಾನಿ ಆಯಿತು ? ಈ ಕುರಿತು ಸ್ಪಷ್ಟ ಮಾಹಿತಿಯಿರುತ್ತದೆ. ಹಾಗೆಯೇ ಕಠಿಣ ಶಬ್ದಗಳಲ್ಲಿ ಅದರ ವಿಶ್ಲೇಷಣೆಯನ್ನೂ ಮಾಡಲಾಗುತ್ತದೆ. ಧರ್ಮ, ಸಾಧುಸಂತರು ಮತ್ತು ಮಂದಿರಗಳ ಮೇಲಿನ ಅನೇಕ ಆಘಾತಗಳ ವಿಷಯದಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿ ಯೋಗ್ಯ ಶಬ್ದಗಳಲ್ಲಿ ಸುದ್ದಿಯನ್ನು ನೀಡಲಾಯಿತು. ಇದರಿಂದ ಅನೇಕ ಸ್ಥಳಗಳಲ್ಲಿ ಧರ್ಮಾಭಿಮಾನಿ ನ್ಯಾಯವಾದಿಗಳು ಮತ್ತು ಧರ್ಮಪ್ರೇಮಿಗಳಿಗೆ ಯೋಗ್ಯ ಕೃತಿಗಳನ್ನು ಮಾಡಲು ಸಾಧ್ಯವಾಯಿತು. ‘ಸನಾತನ ಪ್ರಭಾತ’ ಕೇವಲ ಭಾರತವಷ್ಟೇ ಅಲ್ಲ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ಈ ದೇಶಗಳಲ್ಲಿರುವ ಹಿಂದೂಗಳ ಮೇಲೆ ಆಗುವ ಆಘಾತಗಳನ್ನು ಕೂಡ ಪ್ರಕಾಶಿಸುತ್ತದೆ. ಇದರಿಂದ ವಿದೇಶಗಳಲ್ಲಿರುವ ಅನೇಕ ಹಿಂದೂಪ್ರೇಮಿಗಳು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಜೊತೆಗೂಡಿದರು.

೫. ಸನಾತನ ಪ್ರಭಾತದಲ್ಲಿನ ಸಂಪಾದಕೀಯದಲ್ಲಿ ಪ್ರಕಟಿಸುವ ವಿಚಾರಗಳಿಂದ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕಾಗಿ ಓದುಗರು ಉದ್ಯುಕ್ತರಾಗುವುದು

ಸಂಪಾದಕೀಯ ದೃಷ್ಟಿಕೋನವು ದಿನಪತ್ರಿಕೆ ‘ಸನಾತನ ಪ್ರಭಾತ’ದ ವೈಶಿಷ್ಟ್ಯವಾಗಿದೆ. ಈ ದಿನಪತ್ರಿಕೆಯಲ್ಲಿ ಚಲನಚಿತ್ರ, ನಟನಟಿಯರು, ಕ್ರಿಕೆಟ ಇವುಗಳ ಮಾಹಿತಿ, ಆಕರ್ಷಣೀಯ ಅಥವಾ ಸಮಾಜಕ್ಕೆ ಹಾನಿಕರವಾಗಿರುವ ಜಾಹೀರಾತುಗಳನ್ನು ನೀಡುವುದಿಲ್ಲ. ಇದರಿಂದ ದಿನಪತ್ರಿಕೆಯ ಪ್ರತಿಯೊಂದು ಪುಟವೂ ಚೈತನ್ಯಮಯವಾಗಿರುತ್ತದೆ. ಸಂಪಾದಕೀಯ ಲೇಖನಗಳು ಎಷ್ಟು ತೇಜಸ್ವಿಯಾಗಿರುತ್ತವೆ, ಎನ್ನುವುದು ಅವುಗಳನ್ನು ಓದಿದ ಮೇಲೆಯೇ ಗಮನಕ್ಕೆ ಬರುತ್ತದೆ. ದಿನಪತ್ರಿಕೆಯಲ್ಲಿ ಎಷ್ಟೊಂದು ಚೈತನ್ಯವಿರುತ್ತದೆ ಎಂದರೆ ಅದರಿಂದ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ. ಓದುಗರನ್ನು ಜಾಗೃತಗೊಳಿಸಿ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಹೇಗೆ ಉದ್ಯುಕ್ತರಾಗಬಹುದು ಈ ದೃಷ್ಟಿಯಿಂದ ಸಂಪಾದಕೀಯ ವಿಚಾರಗಳನ್ನು ಯಾವುದೇ ರೀತಿಯ ಹೆದರಿಕೆ ಇಲ್ಲದೇ ಧೈರ್ಯದಿಂದ ಮಂಡಿಸಲಾಗುತ್ತದೆ. ಇದರಿಂದ ಅನೇಕ ಓದುಗರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ಕಾಗಿ ಕೃತಿಶೀಲರಾಗಿದ್ದಾರೆ ಮತ್ತು ಅವರಿಗೆ ದೇಶದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಆವಶ್ಯಕತೆ ಅರಿವಾಗುತ್ತಿದೆ.

೬. ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಓದುಗರಿಗೆ ‘ಸನಾತನ ಪ್ರಭಾತ’ದ ಆಧಾರವೆನಿಸುವುದು

ಕೊರೊನಾ ಮಹಾಮಾರಿಯು ಕಳೆದ ಅನೇಕ ತಿಂಗಳುಗಳಿಂದ ಹೆದರಿಕೆ ಮತ್ತು ಜನರ ಮನಸ್ಸಿನ ಮೇಲೆ ಒತ್ತಡವನ್ನು ನಿರ್ಮಾಣ ಮಾಡಿದೆ. ಕೊರೊನಾದಿಂದ ಜಗತ್ತಿನಾದ್ಯಂತ ಲಕ್ಷಾವಧಿ ಜನರು ಮರಣ ಹೊಂದಿದರು ಮತ್ತು ಅನೇಕ ಜನರು ಮಾನಸಿಕವಾಗಿ ಕುಗ್ಗಿದರು. ಅವರ ಮನೋಧೈರ್ಯ ಹೆಚ್ಚಾಗಬೇಕೆಂದು ‘ಸನಾತನ ಪ್ರಭಾತ’ದಲ್ಲಿ ಈ ರೋಗದಿಂದ ಮುಕ್ತಗೊಂಡು ಆರೋಗ್ಯವಂತರಾಗಿ ಮರಳಿದ ವ್ಯಕ್ತಿಗಳ ಅನುಭವಗಳನ್ನು ಮುದ್ರಿಸಲಾಯಿತು. ಅದರಲ್ಲಿ ಅವರು ಆಧ್ಯಾತ್ಮಿಕ ಸ್ತರದಲ್ಲಿ ಮಾಡಿರುವ ಪ್ರಯತ್ನ, ಈಶ್ವರನ ಮೇಲಿನ ಶ್ರದ್ಧೆ ಮತ್ತು ಅದರಿಂದ ಅವರಿಗೆ ಆಗಿರುವ ಲಾಭ ಈ ವಿಷಯದಲ್ಲಿ ಮಾಹಿತಿಯಿರುತ್ತದೆ. ಇದರಿಂದ ಓದುಗರಿಗೆ ಸಕಾರಾತ್ಮಕ ದೃಷ್ಟಿಕೋನ ಸಿಗುತ್ತದೆ. ಇದರೊಂದಿಗೆ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಗಿರುವ ಕಹಿ ಅನುಭವಗಳನ್ನು ಕೂಡ ದೃಷ್ಟಿಕೋನದೊಂದಿಗೆ ಮುದ್ರಿಸಲಾಗುತ್ತದೆ. ಇದಲ್ಲದೇ ‘ಸನಾತನ ಪ್ರಭಾತ’ದಲ್ಲಿ ಸನಾತನದ ಸದ್ಗುರು ಮತ್ತು ಸಂತರ ಮಾರ್ಗದರ್ಶನ, ಶಾರೀರಿಕ ಮತ್ತು ಆತ್ಮಬಲವನ್ನು ಹೆಚ್ಚಿಸಲು ಸ್ವಯಂಸೂಚನೆಗಳನ್ನು ಮತ್ತು ಇತರ ಸೂಚನೆಗಳನ್ನು ಪ್ರಕಟಿಸಲಾಗುತ್ತದೆ. ಇದರಿಂದ ಅನೇಕ ಸಾಧಕರು, ಓದುಗರು, ಜಾಹೀರಾತುದಾರರು ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಿದೆ. ಇದರಿಂದ ಅನೇಕ ಜನರು ಪತ್ರಿಕೆಯ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.

೭. ಹಿಂದುತ್ವನಿಷ್ಠ ಮತ್ತು ಧರ್ಮಪ್ರೇಮಿಗಳಲ್ಲಿ ಆಗಿರುವ ಜಾಗೃತಿಯು ‘ಸನಾತನ ಪ್ರಭಾತ’ದ ದೊಡ್ಡ ಯಶಸ್ಸಾಗಿದೆ !

ವರ್ಷ ೨೦೧೪ ರಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಚರ್ಚೆ ಪ್ರಾರಂಭವಾಯಿತು; ಆದರೆ ದೈನಿಕ ‘ಸನಾತನ ಪ್ರಭಾತ’ ವರ್ಷ ೧೯೯೯ ರಿಂದ ‘ಈಶ್ವರಿ ರಾಜ್ಯದ ಸ್ಥಾಪನೆ’ ಅಂದರೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ಗಾಗಿ ಪ್ರಯತ್ನ ಪ್ರಾರಂಭಿಸಿತು. ಯಾವ ರೀತಿ ಸ್ವಾತಂತ್ರ್ಯವೀರ ಸಾವರಕರರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಗ್ರಹಿಯಾಗಿದ್ದರೋ ಆ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸಲು ಅನೇಕ ಧರ್ಮಪ್ರೇಮಿಗಳು ಉತ್ಸುಕರಾಗಿದ್ದಾರೆ. ಇಂತಹ ಧರ್ಮಪ್ರೇಮಿಗಳಿಗೆ ‘ಸನಾತನ ಪ್ರಭಾತ’ದಿಂದ ಪ್ರತಿದಿನ ಯೋಗ್ಯ ದೃಷ್ಟಿಕೋನ ಸಿಗುತ್ತದೆ. ಇದರಿಂದ ಅವರಲ್ಲಿ ಜಾಗೃತಿ ಮೂಡುತ್ತದೆ. ಧರ್ಮ ಮತ್ತು ರಾಷ್ಟ್ರ ಕಾರ್ಯವನ್ನು ಮಾಡಲು ಅನೇಕ ಹಿಂದುತ್ವನಿಷ್ಠರು ಮತ್ತು ಧರ್ಮಪ್ರೇಮಿಗಳು ‘ಸನಾತನ ಪ್ರಭಾತ’ದಿಂದಲೇ ಪ್ರೇರಿತರಾಗಿದ್ದಾರೆ. ಭಾರತದಾದ್ಯಂತದ ಹಿಂದುತ್ವನಿಷ್ಠ ಮತ್ತು ಧರ್ಮಪ್ರೇಮಿಗಳಲ್ಲಿ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಮೂಡಿರುವ ಜಾಗೃತಿಯು ‘ಸನಾತನ ಪ್ರಭಾತ’ದ ದೊಡ್ಡ ಯಶಸ್ಸು ಎಂದು ತಿಳಿಯಬೇಕಾಗುವುದು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ.(೧೭.೫.೨೦೨೧)