ಶೀತ (ನೆಗಡಿ)-ಕೆಮ್ಮಿಗೆ ಉಪಯುಕ್ತ ಹೊಮಿಯೋಪಥಿಕ್ ಮತ್ತು ಹನ್ನೆರಡುಕ್ಷಾರ ಔಷಧಗಳು

ಹೋಮಿಯೋಪತಿ ವೈದ್ಯ ಪ್ರವೀಣ ಮೆಹತಾ

‘ಚಳಿಗಾಲದಲ್ಲಿ ಬಹಳಷ್ಟು ಜನರಿಗೆ ಶೀತ ಮತ್ತು ಕೆಮ್ಮು ಬರುತ್ತದೆ. ಅವುಗಳ ಲಕ್ಷಣಗಳಿಗನುಸಾರ ಉಪಯುಕ್ತ ಹೊಮಿಯೋಪಥಿಕ್ ಹಾಗೂ ಹನ್ನೆರಡು ಕ್ಷಾರ ಔಷಧಗಳ (ಬಯೋಕ್ಯಾಮಿಕ್ ಟಿಶ್ವು ರೆಮಿಡಿ) ಪಟ್ಟಿಯನ್ನು ಈ ವಾರದ ಸಂಚಿಕೆಯಲ್ಲಿ ನೀಡುತ್ತಿದ್ದೇವೆ.

ಶೀತಕ್ಕಾಗಿ (Allergic Rhinitis) ಉಪಯುಕ್ತವಾಗಿರುವ ಹೊಮಿಯೋಪಥಿಕ್ ಔಷಧಗಳು

೧ ಅ. ಲಕ್ಷಣಗಳು : ಶೀತದ ಪ್ರಾರಂಭಿಕ ಅವಸ್ಥೆಯಲ್ಲಿ

೧ ಅ ೧. ಔಷಧ : ‘ಎಕೋನಾಯಿಟ್’ ೩೦

೧ ಆ. ಲಕ್ಷಣಗಳು : ‘ಮೂಗಿನಿಂದ ತುಂಬಾ ಪ್ರಮಾಣದಲ್ಲಿ ಉರಿಉರಿಯಾಗುತ್ತಾ ದ್ರವ ಬರುವುದು, ಕಣ್ಣುಗಳಿಂದ ತಣ್ಣಗಿನ ನೀರು ಬರುವುದು, ನಿರಂತರ ಸೀನುಗಳು ಬರುವುದು. ಬೆಚ್ಚಗಿನ ಕೋಣೆಯಲ್ಲಿ ತೊಂದರೆ ಹೆಚ್ಚಾಗುವುದು ಮತ್ತು ಹೊರಗಿನ ಮುಕ್ತ ವಾತಾವರಣದಲ್ಲಿ ಒಳ್ಳೆಯದೆನಿಸುವುದು.

೧ ಆ ೧. ಔಷಧ : ‘ಎಲಿಯಮ್ ಸೀಪಾ’ ೩೦ ಅಥವಾ ೨೦೦

೧ ಇ. ಲಕ್ಷಣಗಳು : ಮೂಗಿನಿಂದ ತಣ್ಣಗಿನ ದ್ರವ ಬರುವುದು, ಕಣ್ಣುಗಳಿಂದ ಉರಿಉರಿಯಾಗಿ ನೀರು ಬರುವುದು, ರಾತ್ರಿ ವಿಶ್ರಾಂತಿ ತೆಗೆದುಕೊಳ್ಳುವಾಗ ಒಳ್ಳೆಯದೆನಿಸುವುದು ಹಾಗೂ ಹಗಲಿನಲ್ಲಿ ಕೆಮ್ಮು ಬರುವುದು.

೧ ಇ ೧. ಔಷಧ : ‘ಯುಫ್ರೇಶಿಯಾ’ ೬ ಅಥವಾ ೩೦

೧ ಈ. ಲಕ್ಷಣಗಳು : ಚಳಿಗಾಲದಲ್ಲಿ ಮತ್ತು ಹೊರಗಿನ ಮುಕ್ತ ವಾತಾವರಣದಲ್ಲಿ ತೊಂದರೆಗಳು ಹೆಚ್ಚಾಗುವುದು. ಮೂಗಿನಿಂದ ನೀರಿನಂತಹ ತೆಳು ದ್ರವ ಉರಿಯುತ್ತಾ ಬರುವುದು ಹಾಗೂ ಅದರೊಂದಿಗೆ ಸ್ವಲ್ಪಪ್ರಮಾಣದಲ್ಲಿ ತಲೆನೋವು ಹಾಗೆಯೇ ಸ್ವಲ್ಪ ಸ್ವಲ್ಪ ಸಮಯದ ನಂತರ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು.

೧ ಈ ೧. ಔಷಧ : ‘ಅರ್ಸೆನಿಕ್ ಆಲ್ಬ್’ ೩೦ ಅಥವಾ ೨೦೦

೧ ಉ. ಲಕ್ಷಣಗಳು : ತಣ್ಣಗಿನ ಮತ್ತು ಆರ್ದ್ರ (ಹಸಿ) ಗಾಳಿಯಲ್ಲಿ ಹೋಗುವುದರಿಂದ ಶೀತವಾಗುವುದು, ರಾತ್ರಿ ಮತ್ತು ಹೊರಗಿನ ಗಾಳಿಯಲ್ಲಿ ಮೂಗು ಬಂದಾಗುವುದು, ದಿನದಲ್ಲಿ ಮತ್ತು ಬೆಚ್ಚಗಿನ ಕೋಣೆಯಲ್ಲಿ ಮೂಗಿನಿಂದ ನೀರಿಳಿಯುವುದು, ತುಂಬಾ ಚಳಿಯಾಗುವುದು ಮತ್ತು ನಾಲಿಗೆ ಸ್ವಚ್ಛವಾಗಿರುವುದು.

೧ ಉ ೧. ಔಷಧ : ‘ನಕ್ಸ್‌ಹೋಮಿಕಾ’ ೩೦ ಅಥವಾ ೨೦೦

೧ ಊ. ಲಕ್ಷಣಗಳು : ತಂಪು ಗಾಳಿಯಲ್ಲಿ ಹೋಗಿದ್ದರಿಂದ ಶೀತವಾಗುವುದು, ಜ್ವರ ಬರುವುದು; ಆದರೆ ಬಾಯಾರಿಕೆ ಇಲ್ಲದಿರುವುದು, ತುಂಬಾ ಆಯಾಸ, ಮಲಗಿರಬೇಕೆಂದು ಅನಿಸುವುದು, ಮೂಗಿನಿಂದ ದ್ರವ ಉರಿಯುತ್ತಾ ಬರುವುದು, ತಲೆಭಾರವಾಗುವುದು, ನಾಲಿಗೆ ಮೇಲೆ ಹಳದಿ ಪದರು ಬರುವುದು, ರಾತ್ರಿ ತೊಂದರೆ ಹೆಚ್ಚಾಗುವುದು.

೧ ಊ ೧. ಔಷಧ : ‘ಜಲ್ಸೇಮಿಯಮ್’ ೩೦ ಅಥವಾ ೨೦೦

೧ ಎ. ಲಕ್ಷಣಗಳು : ಮೂಗಿನಿಂದ ದಪ್ಪ ಹಳದಿ ದ್ರವ ಬರುವುದು, ವಾಸನೆ ಬರದಿರುವುದು ಮತ್ತು ರುಚಿ, ಬಾಯಾರಿಕೆ ಇಲ್ಲದಿರುವುದು, ಹಸಿವು ಕಡಿಮೆಯಾಗುವುದು, ನಾಲಿಗೆಯ ಮೇಲೆ ದಪ್ಪ ಬಿಳಿ ಪದರು ಬರುವುದು.

೧ ಎ ೧. ಔಷಧ : ‘ಪಲ್ಸೇಟಿಲಾ’ ೩೦

೧ ಐ. ಲಕ್ಷಣಗಳು : ಚಳಿ ಸಹನೆಯಾಗದಿರುವುದು, ಬಾಗಿಲು ಕಿಟಿಕಿಗಳನ್ನು ಮುಚ್ಚಿ ಬೆಂಕಿಯ ಸಮೀಪ ಕುಳಿತುಕೊಳ್ಳುವುದು, ಚಳಿಯ ದಿನಗಳಲ್ಲಿ ಲಕ್ಷಣಗಳಲ್ಲಿ ಹೆಚ್ಚಳವಾಗುವುದು.

೧ ಐ ೧. ಔಷಧ : ‘ಹೇಪಾರ ಸಲ್ಫ್’ ೩೦ ಅಥವಾ ೨೦೦

೧ ಒ. ಲಕ್ಷಣಗಳು : ಮಳೆಯಲ್ಲಿ ನೆನೆದಿದ್ದರಿಂದ ಶೀತವಾಗುವುದು

೧ ಒ ೧. ಔಷಧ : ‘ರ‍್ಹಸ್‌ಟಾಕ್ಸ್’ ೨೦೦

ಹನ್ನೆರಡುಕ್ಷಾರ (ಬಯೋಕೆಮಿಕ್ ಟಿಶ್ವು ರೆಮಿಡಿ) ಔಷಧಗಳು

ಹೊಮಿಯೋಪತಿಯಂತೇ ಇದೂ ಒಂದು ಔಷಧೋಪಚಾರ ಪದ್ಧತಿಯಾಗಿದೆ. ಹೊಮಿಯೋಪತಿಯಲ್ಲಿ ೪ ಸಾವಿರ ಔಷಧಗಳಿವೆ ಮತ್ತು ಹನ್ನೆರಡುಕ್ಷಾರದಲ್ಲಿ ಕೇವಲ ೧೨ ಔಷಧಗಳಿವೆ.

೨ ಅ. ಲಕ್ಷಣಗಳು : ಪ್ರಥಮಾವಸ್ಥೆ. ಒಣಶೀತ, ಮೂಗು ಕಟ್ಟಿರುವುದು, ಮೈನೋವು, ಸ್ವಲ್ಪ ಜ್ವರವಿರುವುದು ಹಾಗೂ ಶೀತದೊಂದಿಗೆ ಕೆಮ್ಮು ಇರುವುದು.

೨ ಅ ೧. ಔಷಧಗಳು : ‘ಫೆರಮ್ ಫಾಸ್’

೨ ಆ. ಲಕ್ಷಣಗಳು : ‘ಫೆರಮ್ ಫಾಸ್’ದ ನಂತರ ‘ಕ್ಯಾಲೀ ಮೂರ್’ ಉಪಯುಕ್ತ ಔಷಧವಾಗಿದೆ. ಶೀತ ಹೆಚ್ಚಾಗಿರುವುದು, ಬಿಳಿ ದ್ರವ, ಅಂಟಂಟು ಹಾಗೂ ಮೂಗು ಗಟ್ಟಿಯಾಗುವುದು, ದ್ರವ ಬರುವಾಗ ಮೂಗಿನಲ್ಲಿ ಉರಿಯುವುದು, ಕೀವುಮಿಶ್ರಿತ, ಗಟ್ಟಿ ಹಾಗೂ ಅಂಟಂಟಾಗಿರುವುದು, ನಾಲಿಗೆ ಬಿಳಿ ಅಥವಾ ಬೂದಿಯ ಬಣ್ಣದ್ದಾಗಿರುವುದು ಹಾಗೂ ಹಸಿವಾಗದಿರುವುದು.

೨ ಆ ೧. ಔಷಧ : ‘ಕ್ಯಾಲಿ ಮೂರ್’

೨ ಈ. ಲಕ್ಷಣಗಳು : ಬೆಳಗಿನ ತಣ್ಣಗಿನ ಗಾಳಿಯಲ್ಲಿ ಸೀನುಗಳು ಬರುವುದು. ಹೊರಗಿನ ಗಾಳಿಯಲ್ಲಿ ಶೀತ ಮತ್ತು ಸೀನುಗಳು ಬರುವುದು ಹೆಚ್ಚಾಗುವುದು, ಮೂಗಿನ ತುದಿ ಮತ್ತು ಅಂಗೈ ತಣ್ಣಗಿರುವುದು, ದ್ರವಕ್ಕೆ ದುರ್ಗಂಧ ಬರುವುದು, ಮೂಗಿನಲ್ಲಿ ವೇದನೆಯಾಗುವುದು.

೨ ಇ. ಔಷಧ : ‘ಕ್ಯಾಲ್ಕೇರಿಯಾ ಫ್ವಾಸ್’

೨ ಆ ಇ. ಲಕ್ಷಣಗಳು : ಮೂಗಿನಲ್ಲಿನ ಎಲುಬು ಬೆಳೆದಿರುವುದರಿಂದ ಆಗುವ ಶೀತ. ಮೂಗು ಕಟ್ಟಿರುವುದು ಅಥವಾ ಒಣ ಶೀತವಿರುವುದು, ದ್ರವ ಹಸಿರು ಹಾಗೂ ಗಟ್ಟಿ, ‘ಸೀನು ಬರುವ ಹಾಗೆ ಅನಿಸುವುದು; ಆದರೆ ಪ್ರತ್ಯಕ್ಷದಲ್ಲಿ ಸೀನುಗಳು ಬರದಿರುವುದು, ತಂಪು ಗಾಳಿಯಲ್ಲಿ ತೊಂದರೆ ಹೆಚ್ಚಾಗುವುದು.

೨ ಈ ೧. ಔಷಧ : ‘ಕೆಲ್ಕೇರಿಯಾ ಫ್ಲೋರ್’

೨ ಉ. ಲಕ್ಷಣಗಳು : ಮೂಗಿನಿಂದ ದಪ್ಪ ಹಳದಿ ದ್ರವ ಬರುವುದು, ದ್ರವ ಬರುವಾಗ ಉರಿಯಾಗುವುದು, ಕೀವುಮಿಶ್ರಿತ ಹಾಗೂ ಗಟ್ಟಿಯಾಗಿರುವುದು, ತುಂಬಾ ಸೀನುಗಳು ಬರುವುದು, ದ್ರವಕ್ಕೆ ವಾಸನೆ ಇರುವುದಿಲ್ಲ (‘ಸಿಲಿಶೀಯಾ’ ದ್ರವಕ್ಕೆ ವಾಸನೆ ಇರುತ್ತದೆ.) ಹೊರಗಿನ (ಮುಕ್ತ) ವಾತಾವರಣದಲ್ಲಿ ಶೀತ ಕಡಿಮೆಯಾಗುವುದು. (‘ಸಿಲಿಶಿಯಾ’ – ಹೊರಗಿನ ವಾತಾವರಣದಲ್ಲಿ ತೊಂದರೆ ಹೆಚ್ಚಾಗುತ್ತದೆ.)

೨ ಉ ೧. ಔಷಧ : ‘ಕಲ್ಕೇರಿಯಾ ಸಲ್ಫ್’

೨ ಊ. ಲಕ್ಷಣಗಳು : ಮೂಗಿನಿಂದ ದಪ್ಪ ಹಳದಿ ಅಥವಾ ಹಸಿರು ಮಿಶ್ರಿತ ಹಳದಿ ದ್ರವ ಬರುತ್ತದೆ. ದ್ರವ ಮತ್ತು ಶ್ವಾಸೋಚ್ಛ್ವಾಸಕ್ಕೆ ದುರ್ಗಂಧ ಬರುತ್ತದೆ. ಮಧ್ಯರಾತ್ರಿ ತುಂಬಾ ಜೋರಾಗಿ ಸೀನುಗಳು ಬರುತ್ತವೆ. ರಾತ್ರಿ ಮೂಗು ಕಟ್ಟುತ್ತದೆ.

೨ ಊ ೧. ಔಷಧ : ‘ಕ್ಯಾಲಿಫ್ವಾಸ್’

೨ ಎ. ಲಕ್ಷಣಗಳು : ಮೂಗಿನಿಂದ ಬರುವ ದ್ರವ ತೆಳ್ಳಗೆ, ಹಳದಿ, ಅಂಟು ಮತ್ತು ದ್ರವ ಹೊರಗೆ ಬರುವಾಗ ಮೂಗಿನಲ್ಲಿ ಉರಿಯುವುದು ಚುಚ್ಚುವುದಾಗಿದ್ದು ದುರ್ಗಂಧಯುಕ್ತವಾಗಿರುವುದು, ಬೆಚ್ಚಗಿನ ಸ್ಥಳದಲ್ಲಿ, ಮುಚ್ಚಿರುವ ಕೋಣೆಯಲ್ಲಿ ಅಥವಾ ಸಾಯಂಕಾಲ ಮೂಗು ಕಟ್ಟುವುದು, ಮುಕ್ತ ವಾತಾವರಣದಲ್ಲಿ ದ್ರವ ಕಡಿಮೆಯಾಗುವುದು, ಮೂಗಿನ ಎಡಬದಿಯ ಹೊಳ್ಳೆಯಲ್ಲಿ ಶೀತವಿರುವುದು.

೨ ಎ ೧. ಔಷಧ : ಕ್ಯಾಲೀ ಸಲ್ಫ್ ‘೬ X ಪೊಟೆನ್ಸಿ (ಪವರ್ ಇರುವ) ಪ್ರತಿ ೩ ಗಂಟೆಗೊಮ್ಮೆ ತೆಗೆದುಕೊಳ್ಳಬೇಕು. (೬X ಅಂದರೆ ೬X ರಷ್ಟು ಪವರವಿರುವ. ಈ ಶಕ್ತಿಯನ್ನು ೧ X  ೨X …..ಈ ಕ್ರಮದಲ್ಲಿ ಎಣಿಸಲಾಗುತ್ತದೆ. – ಡಾ. ಮೆಹತಾ)

೨ ಐ. ಲಕ್ಷಣಗಳು : ದ್ರವ ನೀರಿನಂತೆ ತೆಳು, ಪಾರದರ್ಶಕ ಮತ್ತು ಉಪ್ಪಿನಂತಿರುತ್ತದೆ, ಮೂಗು ಮತ್ತು ಕಣ್ಣುಗಳಿಂದ ಸತತ ನೀರು ಹರಿಯುತ್ತಿರುತ್ತದೆ. ದ್ರವ ತುಂಬಾ ಹೆಚ್ಚು ಮತ್ತು ಬರುವಾಗ ಮೂಗಿನಲ್ಲಿ ಉರಿಯುತ್ತದೆ, ಬೆಳಗಿನ ಸಮಯ ಮತ್ತು ಹೊರಗಿನಿಂದ ಮನೆಗೆ ಬಂದ ನಂತರ ಸೀನು ಆರಂಭವಾಗುತ್ತವೆ, ಶೀತದಿಂದ ವಾಸನೆ ಬರುವುದಿಲ್ಲ, ಶೀತದೊಂದಿಗೆ ಕೆಮ್ಮಿರುತ್ತದೆ, ನಾಲಿಗೆಗೆ ರುಚಿ ಇರುವುದಿಲ್ಲ.

೨ ಐ ೧. ಔಷಧ : ‘ನೆಟ್ರಮ್ ಮೂರ್’

೨ ಒ. ಲಕ್ಷಣಗಳು : ಇದು ಮಳೆಗಾಲದಲ್ಲಿ ಅಥವಾ ನೀರಾಡುವ ಸ್ಥಳದಲ್ಲಿ ಆಗುವ ಶೀತದ ತೊಂದರೆಯಾಗಿದ್ದು ಮೂಗಿನಿಂದ ಬರುವ ದ್ರವವು ಹಸಿರು ಅಥವಾ ಹಸಿರು ಮಿಶ್ರಿತ ಹಳದಿಯಾಗಿರುತ್ತದೆ

೨ ಒ ೧. ಔಷಧ : ‘ನೆಟ್ರಮ್ ಸಲ್ಫ್’

೨ ಔ. ಲಕ್ಷಣಗಳು : ಮೂಗಿನ ಹೊಳ್ಳೆಗಳು ಕೆಲವೊಮ್ಮೆ ಒದ್ದೆ (ಹಸಿ) ಮತ್ತು ಕೆಲವೊಮ್ಮೆ ಒಣಗಿರುವುದು, ವಾಸನೆ ಬರುವುದಿಲ್ಲ.

೨ ಔ ೧. ಔಷಧ : ‘ಮ್ಯಾಗ್ ಫ್ವಾಸ್’

೨ ಅಂ. ಲಕ್ಷಣಗಳು : ಹಳೆಯ ಶೀತ, ಶ್ವಾಸಕ್ಕೆ ದುರ್ಗಂಧವಿರುವುದು, ದ್ರವ ದಪ್ಪ ಮತ್ತು ಹಳದಿಯಾಗಿರುವುದು, ತುಂಬಾ ಸೀನುಗಳು ಬರುವುದು, ಮೂಗು ಒಣಗುವುದು, ಬೆಳಗ್ಗೆ ಮೂಗು ಕಟ್ಟುವುದು ಮತ್ತು ದಿನದಲ್ಲಿ ಹರಿಯುವುದು, ಮೂಗಿನಲ್ಲಿ ವೇದನೆಗಳಾಗುವುದು, ವಾಸನೆ ಬರದಿರುವುದು, ತಲೆಗೆ ಬೆವರು ಬರುವುದು.

೨ ಅಂ ೧. ಔಷಧ : ‘ಸಿಲಿಶಿಯಾ’.

ಹೊಮಿಯೋಪಥಿ ಮತ್ತು ಹನ್ನೆರಡುಕ್ಷಾರ ಇವೆರಡಕ್ಕೂ ಪಥ್ಯ

ಕರ್ಪೂರ ಮತ್ತು ಅತ್ತರು ಇವುಗಳಿಂದ ಈ ಔಷಧಗಳನ್ನು ದೂರವಿಡಬೇಕು ಹಾಗೂ ನೀರುಳ್ಳಿ, ಬೆಳ್ಳುಳ್ಳಿ ಮತ್ತು ಕಾಫಿ ವರ್ಜ್ಯವಿದೆ. (ಆಧಾರ : ಸನಾತನದ ಮುಂಬರುವ ಗ್ರಂಥ ‘ಹೋಮಿಯೋಪಥಿ ಉಪಚಾರ’)

ಸಂಕಲನ : ಆಧುನಿಕ ವೈದ್ಯ ಪ್ರವೀಣ ಮೆಹತಾ, ಸನಾತನ ಆಶ್ರಮ, ದೇವದ, ಪನವೇಲ. (೧೫.೧೧.೨೦೧೯)