ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಆತ್ಮಹತ್ಯೆಯ ವಿಚಾರಣೆಗೆ ಸಹಕರಿಸಲು ನಿರಾಕರಿಸಿದ ತಮಿಳುನಾಡಿನ ಡಿಎಂಕೆ ಸರಕಾರ !

ಕಾನ್ವೆಂಟ್ ಶಾಲೆಯಲ್ಲಿ ಆಗುತ್ತಿದ್ದ ಮತಾಂತರದ ಒತ್ತಡದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ

ಕ್ರೈಸ್ತ ಪ್ರೇಮಿ ಹಾಗೂ ಹಿಂದೂದ್ವೇಷಿ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಘಮ್ – ದ್ರಾವಿಡ್ ಪ್ರಗತಿ ಸಂಘ) ಸರಕಾರ ಎಂದಾದರೂ ಹಿಂದೂಗಳಿಗೆ ಸಹಾಯ ಮಾಡಿ ಕ್ರೈಸ್ತ ಮಿಶನರಿಗಳನ್ನು ವಿರೋಧಿಸುವುದೇ ? ‘ಈ ಪ್ರಕರಣದಲ್ಲಿ ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ಸಿಬಿಐ ತನಿಖೆ ನಡೆಸಬೇಕು’, ಎಂದು ಹಿಂದೂಗಳಿಗೆ ಅನಿಸುತ್ತದೆ !

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಅಧ್ಯಕ್ಷ ಪ್ರಿಯಾಂಕ ಕಾನೂನಗೊ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ತಂಜಾವೂರಿನ ಮೈಕೆಲ್‌ಪಟ್ಟದಲ್ಲಿರುವ ‘ಸೇಕ್ರೆಡ್ ಹಾರ್ಟ್’ ಪ್ರೌಢಶಾಲೆಯಲ್ಲಿನ ೧೨ ನೇ ತರಗತಿಯಲ್ಲಿ ಓದುತ್ತಿದ್ದ ಲಾವಣ್ಯಗೆ ಮತಾಂತರಕ್ಕಾಗಿ ಕಿರುಕುಳ ನೀಡಲಾಯಿತು. ಅದಕ್ಕೆ ಬೇಸತ್ತು ಕೆಲವು ದಿನಗಳ ಹಿಂದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿಚಾರಣೆ ನಡೆಸಲಿದೆ, ಎಂದು ಆಯೋಗದ ಅಧ್ಯಕ್ಷ ಶ್ರೀ. ಪ್ರಿಯಾಂಕ ಕಾನೂನಗೊ ಮಾಹಿತಿ ನೀಡಿದ್ದಾರೆ. ಜನವರಿ ೩೦ ರಂದು ಸ್ವತಃ ಕಾನೂನಗೊ ತಂಜಾವೂರಿಗೆ ತೆರಳಲಿದ್ದಾರೆ. ವಿಚಾರಣೆಗೆ ಸಹಕರಿಸುವಂತೆ ತಮಿಳುನಾಡು ಸರಕಾರಕ್ಕೆ ಮಾಡಿದ್ದ ಮನವಿಯನ್ನು ಸರಕಾರ ತಿರಸ್ಕರಿಸಿದೆ ಎಂದು ಆಯೋಗ ಹೇಳಿದೆ. ಮತ್ತೊಂದೆಡೆ, ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸಬೇಕು ಎಂದು ಭಾಜಪ ಒತ್ತಾಯಿಸಿದೆ.

೧. ಆಯೋಗವು ಪ್ರಕಟಿಸಿದ ಒಂದು ಪ್ರಕಟಣೆಯಲ್ಲಿ, ತನಿಖೆಯಲ್ಲಿ ಸಹಾಯ ಮಾಡಲು ತಮಿಳುನಾಡು ಸರಕಾರವನ್ನು ವಿನಂತಿಸಿತ್ತು; ಆದರೆ, ಸರಕಾರವು ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಸಂಸ್ಥೆಗಳಿಗೆ ನೆರವು ನೀಡಲು ಸರಕಾರ ನಿರಾಕರಿಸಿದೆ. ಆದರೂ ನಮ್ಮ ತಂಡ ತಮಿಳುನಾಡಿಗೆ ತೆರಳಿ ವಿಚಾರಣೆ ನಡೆಸಲಿದೆ ಹಾಗೂ ‘ಪೊಲೀಸ್ ಅಧೀಕ್ಷಕರು ಮತ್ತು ತನಿಖಾಧಿಕಾರಿ ಹಾಜರಿರಬೇಕು’, ಎಂದೂ ಅದು ಹೇಳಿದೆ.

೨. ಈ ಪ್ರಕರಣದಲ್ಲಿ ಆಯೋಗವು ತಮಿಳುನಾಡು ಸರಕಾರದಿಂದ ಸ್ಪಷ್ಟೀಕರಣವನ್ನೂ ಕೇಳಿದೆ. ಈ ಕುರಿತು ಕಾನೂನಗೊ ಅವರು, ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಕಳುಹಿಸಲಾಗಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಜನವರಿ ೨೧ ರಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ; ಆದರೆ ಮಹಾನಿರ್ದೇಶಕರು ಇನ್ನೂ ವರದಿ ನೀಡಿಲ್ಲ. (ಇದರಿಂದ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಕಾನೂನುದ್ರೋಹ ಮಾಡಿ ಓರ್ವ ಹಿಂದೂ ಹುಡುಗಿಯ ಕೊಲೆಗಾರರನ್ನು ಬೆಂಬಲಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆಯೂ ಕೇಂದ್ರ ಸರಕಾರದ ಗೃಹ ಸಚಿವಾಲಯವು ಮಧ್ಯ ಪ್ರವೇಶಿಸಿ ಮೃತ ಪಟ್ಟ ಹಿಂದೂ ಹುಡುಗಿಯ ಸಂಬಂಧಿಕರಿಗೆ ನ್ಯಾಯ ಒದಗಿಸುವುದು ಆವಶ್ಯಕವಾಗಿದೆ ! – ಸಂಪಾದಕರು)