ಪಾಕಿಸ್ತಾನದ ಪ್ರಸಿದ್ಧ ಹಿಂಗಲಾಜ ದೇವಾಲಯದ ಮೇಲೆ ಮತಾಂಧರಿಂದ ೨೨ ತಿಂಗಳಲ್ಲಿ ೧೧ ನೇ ಬಾರಿ ದಾಳಿ !

  • ‘ಭಾರತ ಸರಕಾರವು ದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲವಾಗಿದೆ; ಆದರೆ ಪಾಕಿಸ್ತಾನದಲ್ಲಿ ಹಿಂದೂಗಳ ರಕ್ಷಣೆ ಮಾಡಲಾಗುತ್ತದೆ’, ಎಂದು ಜಂಭ ಕೊಚ್ಚಿಕೊಳ್ಳುವ ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ ಈ ಘಟನೆಯ ಬಗ್ಗೆ ಬಾಯಿ ತೆರೆಯುವರೇ ?
  • ‘ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳಿಂದ ಹಿಂದೂಗಳನ್ನು ರಕ್ಷಿಸಲು ಭಾರತ ಸರಕಾರ ಏನಾದರೂ ಮಾಡುವುದೇ ?’, ಎಂಬ ಪ್ರಶ್ನೆ ನಿರಂತರವಾಗಿ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ !

ಥಾರಪಾರಕರ್ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರಪಾರಕರ್ ಜಿಲ್ಲೆಯ ಖತ್ರಿ ಮೊಹಲ್ಲಾದಲ್ಲಿರುವ ಪ್ರಸಿದ್ಧ ಹಿಂಗಲಾಜ ಮಾತಾ ದೇವಾಲಯದ ಮೇಲೆ ಮತಾಂಧರು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಕಳೆದ ೨೨ ತಿಂಗಳಲ್ಲಿ ಈ ದೇವಸ್ಥಾನದ ಮೇಲೆ ನಡೆದ ೧೧ ನೇ ದಾಳಿ ಇದಾಗಿದೆ. ಈ ಘಟನೆಯ ನಂತರ ಹಿಂದೂಗಳು ಇದನ್ನು ಖಂಡಿಸಿದರು.

(ಈ ಚಿತ್ರ ಹಾಗು ವಿಡಿಯೋ ಹಾಕುವ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೆ ನೈಜ ಸ್ಥಿತಿ ತಿಳಿಸುವ ಉದ್ದೇಶವಾಗಿದೆ)

ಈ ಘಟನೆಯ ನಂತರ ‘ಪಾಕಿಸ್ತಾನದ ಹಿಂದೂ ದೇವಾಲಯದ ಆಡಳಿತ ಮಂಡಳಿ’ಯ ಅಧ್ಯಕ್ಷ ಕೃಶೆನ ಶರ್ಮಾ ಘಟನಾ ಸ್ಥಳಕ್ಕೆ ತಲುಪಿದರು. ಅವರು, ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಕಟ್ಟರವಾದಿಗಳಿಗೆ ಪಾಕಿಸ್ತಾನ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಯಾವುದೇ ಭಯವಿಲ್ಲ ಎಂದು ಹೇಳಿದರು.