ಸನಾತನದ ರಾಮನಾಥಿ ಆಶ್ರಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ವೇಗ ಹೆಚ್ಚಿಸಲು ಸ್ಥಾಪಿಸಿದ ಧರ್ಮಧ್ವಜದಿಂದ ದೊಡ್ಡ ಪ್ರಮಾಣದ ಚೈತನ್ಯ ಪ್ರಕ್ಷೇಪಣೆಯಾಗುತ್ತಿರುವುದು

ಅಧ್ಯಾತ್ಮದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಮಹರ್ಷಿಗಳ ಆಜ್ಞೆಯನುಸಾರ ಸ್ಥಾಪನೆ ಮಾಡಲಾದ ಧ್ವಜದ ಎದುರಿನ ಭಾಗದಲ್ಲಿರುವ ಶ್ರೀರಾಮನ ಚಿತ್ರ

 

ಮಹರ್ಷಿಗಳ ಆಜ್ಞೆಯನುಸಾರ ಸ್ಥಾಪನೆ ಮಾಡಲಾದ ಧ್ವಜದ ಇನ್ನೊಂದು ಭಾಗದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಚಿತ್ರ

‘ಸಪ್ತರ್ಷಿಗಳ ಆಜ್ಞೆಯಿಂದ ೧೪.೫.೨೦೨೧ ರಂದು ಅಂದರೆ ಅಕ್ಷಯ ತದಿಗೆಯ ದಿನದಂದು ಸನಾತನದ ರಾಮನಾಥಿ ಆಶ್ರಮದ ಪರಿಸರದಲ್ಲಿ ಶ್ರೀ ತನ್ನೋಟಮಾತಾ, ತ್ರಿನೇತ್ರ ಗಣೇಶ ಮತ್ತು ವ್ಯಾಸ ಶಿಲೆಗಳ ಮಂದಿರಗಳ ಸಮೀಪ ೬ ಮೀಟರ್ ಎತ್ತರದ ಸ್ತಂಭದ ಮೇಲೆ ಕೇಸರಿ ಬಣ್ಣದ ಧರ್ಮಧ್ವಜವನ್ನು ಸ್ಥಾಪಿಸಲಾಯಿತು. ಕೇಸರಿ ಬಣ್ಣದ ಬಟ್ಟೆಯ ಈ ಧರ್ಮಧ್ವಜದ ಮೇಲೆ ಒಂದು ಬದಿಯಲ್ಲಿ ಸಿಂಹಾಸನದಲ್ಲಿ ಕುಳಿತಿರುವ ಪ್ರಭು ಶ್ರೀರಾಮನ ಮತ್ತು ಇನ್ನೊಂದು ಬದಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದ ಚಿತ್ರವಿದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಈ ಧರ್ಮಧ್ವಜಕ್ಕೆ ಪೂಜೆ ಮಾಡಿ ಅದನ್ನು ಸ್ಥಾಪಿಸಿದರು. ಈ ಧರ್ಮಧ್ವಜದಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ರಾಮನಾಥಿ (ಗೋವಾ)ಯ ಸನಾತನ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣದ ಮೂಲಕ ಒಂದು ಪರೀಕ್ಷೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ. 

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಮಹರ್ಷಿಗಳ ಆಜ್ಞೆಯಿಂದ ಸ್ಥಾಪಿಸಿರುವ ಧ್ವಜದಲ್ಲಿರುವ ಶ್ರೀರಾಮನ ಚಿತ್ರ ಧ್ವಜದ ಇನ್ನೊಂದು ಬದಿಯಲ್ಲಿ ಶ್ರೀರಾಮನ ರೂಪದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಚಿತ್ರ

ಧರ್ಮಧ್ವಜದ ಒಂದು ಬದಿಯಲ್ಲಿರುವ ಸಿಂಹಾಸನಾರೂಢ ಶ್ರೀರಾಮನ ಚಿತ್ರ ಮತ್ತು ಇನ್ನೊಂದು ಬದಿಯಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮಚಂದ್ರನ ರೂಪದ ಚಿತ್ರದಲ್ಲಿನ ಸಕಾರಾತ್ಮಕ ಉರ್ಜೆಯಲ್ಲಿ ವ್ಯತ್ಯಾಸ ಕಂಡು ಬಂದಿರುವುದರ ಕಾರಣ

ಸದ್ಗುರು (ಡಾ.) ಮುಕುಲ ಗಾಡಗೀಳ

ಧರ್ಮಧ್ವಜದ ಒಂದು ಬದಿಯಲ್ಲಿ ಸಿಂಹಾಸನದಲ್ಲಿ ಕುಳಿತಿರುವ ಪ್ರಭು ಶ್ರೀರಾಮನ ಚಿತ್ರವಿದೆ. ಅದು ನಿರ್ಗುಣ-ಸಗುಣ ಸ್ತರದಲ್ಲಿ ಅಪ್ರಕಟ(ಪರೋಕ್ಷ) ಸ್ವರೂಪದಲ್ಲಿ ಕಾರ್ಯನಿರತವಾಗಿದ್ದು ಅದರ ಕಾರ್ಯವು ಹೆಚ್ಚಿನ ಪ್ರಮಾಣ ಕಾಲದ ಸ್ತರದಲ್ಲಿ ನಡೆಯುವಂತಹದ್ದಾಗಿದೆ. ಧರ್ಮಧ್ವಜದ ಇನ್ನೊಂದು ಬದಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದ ಚಿತ್ರವಿದೆ. ಅದು ಪ್ರಕಟ(ಪ್ರತ್ಯಕ್ಷ) ಸ್ವರೂಪದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿ ಕಾರ್ಯನಿರತವಾಗಿದೆ; ಏಕೆಂದರೆ ಪರಾತ್ಪರ ಗುರು ಡಾ. ಆಠವಲೆಯವರಿಂದ ಪ್ರಸ್ತುತ ಸಮಯದಲ್ಲಿ ಕಾರ್ಯವು ನಡೆಯುತ್ತಿದೆ. ಹೀಗಿರುವಾಗ ಮೊದಲು ಧರ್ಮಧ್ವಜವನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಮಾಡಿದ ಪರೀಕ್ಷಣೆಯಲ್ಲಿ ಧರ್ಮಧ್ವಜದ ಶ್ರೀರಾಮನ ಚಿತ್ರವಿರುವ ಬದಿಯ ಛಾಯಾಚಿತ್ರದಲ್ಲಿ ಸಕಾರಾತ್ಮಕ ಉರ್ಜೆಯು ೧೮೯.೫ ಮೀಟರ್ ಹಾಗೂ ಪರಾತ್ಪರ ಗುರು ಡಾ. ಆಠವಲೆಯವರ ಪ್ರಭು ಶ್ರೀರಾಮನ ರೂಪದ ಚಿತ್ರವಿರುವ ಬದಿಯ ಛಾಯಾಚಿತ್ರದ ಸಕಾರಾತ್ಮಕ ಉರ್ಜೆಯು ೨೯೮.೧ ಮೀಟರ್ ಕಂಡು ಬಂತು. ಕಾರ್ಯವು ಪ್ರಕಟ ಸ್ವರೂಪದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದ್ದರೆ ಸಕಾರಾತ್ಮಕ ಉರ್ಜೆಯು ಹೆಚ್ಚು ಪ್ರಮಾಣದಲ್ಲಿರುತ್ತದೆ.

ಮೊದಲು ‘ಯು.ಎ.ಎಸ್.’ ಉಪಕರಣದ ಮೂಲಕ ಧರ್ಮಧ್ವಜದ ಪರೀಕ್ಷಣೆ ಮಾಡಿಯಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಧರ್ಮಧ್ವಜವನ್ನು ಕೈಯಿಂದ ಸ್ಪರ್ಶ ಮಾಡಿದರು. ಅವರ ಸ್ಪರ್ಶದಿಂದ ಧರ್ಮಧ್ವಜದ ಎರಡೂ ಬದಿಯ ಚಿತ್ರಗಳಿಗೆ ಅವರಿಂದ ಒಂದೇ ಸಲಕ್ಕೆ ಚೈತನ್ಯ ಪ್ರಕ್ಷೇಪಣೆಯಾಯಿತು. ಅನಂತರ ಧರ್ಮಧ್ವಜದ ಎರಡೂ ಬದಿಗಳ ಛಾಯಾಚಿತ್ರಗಳನ್ನು ತೆಗೆಯಲಾಯಿತು ಹಾಗೂ ಪುನಃ ಆ ಛಾಯಾಚಿತ್ರಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಆಗ ‘ಧರ್ಮಧ್ವಜ’ದ ಎರಡೂ ಬದಿಯ ಛಾಯಾಚಿತ್ರಗಳ ಸಕರಾತ್ಮಕ ಉರ್ಜೆಯಲ್ಲಿ ಎರಡಕ್ಕಿಂತಲೂ ಹೆಚ್ಚು ಪಟ್ಟು ಹೆಚ್ಚಳವಾಗಿದ್ದು ಅದು ಸಮಾನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಅರಿವಾಯಿತು.

– ಸದ್ಗುರು (ಡಾ.) ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

೧. ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ಬಟ್ಟೆಯ ಧರ್ಮಧ್ವಜಕ್ಕೆ ಪೂಜೆ ಮಾಡುವ ಮೊದಲು ಧರ್ಮಧ್ವಜದ ಎರಡೂ ಬದಿಯ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಪರಾತ್ಪರ ಗುರು ಡಾ. ಆಠವಲೆಯವರು ಧರ್ಮಧ್ವಜವನ್ನು ಸ್ಪರ್ಶಿಸುವ ಮೊದಲು ಮತ್ತು ಸ್ಪರ್ಶಿಸಿದ ನಂತರ ಪುನಃ ಧರ್ಮಧ್ವಜದ ಎರಡೂ ಬದಿಯ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಇವೆಲ್ಲ ಛಾಯಾಚಿತ್ರಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಉರ್ಜೆಗೆ ಸಂಬಂಧಿಸಿದ ನಿರೀಕ್ಷಣೆಯ ವಿಶ್ಲೇಷಣೆ – ಧರ್ಮಧ್ವಜದ ಛಾಯಾಚಿತ್ರದಿಂದ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯು (ಚೈತನ್ಯ) ಪ್ರಕ್ಷೇಪಣೆಯಾಗುವುದು : ಧರ್ಮಧ್ವಜದ ಛಾಯಾಚಿತ್ರಗಳಲ್ಲಿ ಸ್ವಲ್ಪವೂ ನಕಾರಾತ್ಮಕ ಉರ್ಜೆಯು ಕಂಡು ಬರಲಿಲ್ಲ. ಧರ್ಮಧ್ವಜದ ಛಾಯಾಚಿತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯಿರುವುದು ಕೆಳಗೆ ಕೊಟ್ಟಿರುವ ಕೋಷ್ಟಕದಿಂದ ಅರಿವಾಗುತ್ತದೆ.

ಈ ಮೇಲಿನ ಕೋಷ್ಟಕದಿಂದ ಈ ಮುಂದಿನ ವಿಷಯಗಳು ಅರಿವಾಗುತ್ತವೆ.

೧. ಧರ್ಮಧ್ವಜದ ಎರಡೂ ಬದಿಯ ಚಿತ್ರಗಳಲ್ಲಿ ಪ್ರಾರಂಭದಲ್ಲಿಯೇ (ಪರಾತ್ಪರ ಗುರು ಡಾಕ್ಟರರು ಧರ್ಮಧ್ವಜವನ್ನು ಸ್ಪರ್ಶ ಮಾಡುವ ಮೊದಲು) ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯಿತ್ತು.

೨. ಪರಾತ್ಪರ ಗುರು ಡಾಕ್ಟರರು ಧರ್ಮಧ್ವಜವನ್ನು ಸ್ಪರ್ಶಿಸಿದ ನಂತರ ಆ ಧರ್ಮಧ್ವಜದ ಎರಡೂ ಬದಿಯ ಛಾಯಾಚಿತ್ರವನ್ನು ತೆಗೆಯಲಾಯಿತು. ಈ ಛಾಯಾಚಿತ್ರಗಳಲ್ಲಿ ಮೊದಲಿಗಿಂತ ಅತೀ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯಿರುವುದು ಕಂಡು ಬಂತು. ಇದರಿಂದ ‘ಪರಾತ್ಪರ ಗುರು ಡಾಕ್ಟರರು ಧರ್ಮಧ್ವಜವನ್ನು ಸ್ಪರ್ಶಿಸಿದ ಬಳಿಕ ಅದರಲ್ಲಿನ ಚೈತನ್ಯವು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಯಿತು’, ಎಂಬುದು ಅರಿವಾಗುತ್ತದೆ.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಸನಾತನದ ರಾಮನಾಥಿ ಆಶ್ರಮದಲ್ಲಿ ಸ್ಥಾಪಿಸುವ ಧರ್ಮಧ್ವಜದಲ್ಲಿ ಮೊದಲೇ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯಿತ್ತು : ಯಾವುದೇ ಧ್ವಜದಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳು, ಧ್ವಜವನ್ನು ಸ್ಥಾಪಿಸುವ ಉದ್ದೇಶ, ಆ ಧ್ವಜದ ಆಕಾರ, ಧ್ವಜದಲ್ಲಿರುವ ಚಿಹ್ನೆಗಳು, ಧ್ವಜವನ್ನು ತಯಾರಿಸಲು ಉಪಯೋಗಿಸಿದ ಸಾಹಿತ್ಯಗಳು, ಉದಾ. ಬಟ್ಟೆಯ ವಿಧ, ಬಟ್ಟೆಯ ಬಣ್ಣ ಇತ್ಯಾದಿ ಅನೇಕ ಘಟಕಗಳನ್ನು ಅವಲಂಬಿಸಿರುತ್ತದೆ. ಈ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಆ ಧ್ವಜವೂ ಸಾತ್ತ್ವಿಕವಾಗುತ್ತದೆ. ಸನಾತನದ ರಾಮನಾಥಿ ಆಶ್ರಮದಲ್ಲಿ ಸಪ್ತರ್ಷಿಗಳ ಆಜ್ಞೆಯಿಂದ ಸ್ಥಾಪಿಸಿದ ಧರ್ಮಧ್ವಜವು ತುಂಬಾ ಸಾತ್ತ್ವಿಕವಾಗಿದೆ. ‘ಈ ಧರ್ಮಧ್ವಜವನ್ನು ಸ್ಥಾಪನೆ ಮಾಡುವುದರಿಂದ ಎಲ್ಲೆಡೆ ಹಿಂದೂ ಧರ್ಮದ ಕೀರ್ತಿ ಹರಡುವುದು ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ವೇಗ ಹೆಚ್ಚಾಗುವುದು’, ಎಂಬ ಆಶೀರ್ವಾದವನ್ನು ಸಪ್ತರ್ಷಿಗಳು ನೀಡಿದ್ದರು. ಇದು ಧರ್ಮಧ್ವಜವನ್ನು ಸ್ಥಾಪಿಸುವುದರ ಹಿಂದಿರುವ ವ್ಯಾಪಕ ಹಾಗೂ ಸಾತ್ತ್ವಿಕ ಉದ್ದೇಶವಾಗಿದೆ. ಈ ಧರ್ಮಧ್ವಜದ ಆಕಾರ ತ್ರಿಕೋನಿಯಾಗಿದ್ದು ಅದು ಕೇಸರಿ ಬಣ್ಣದ್ದಾಗಿದೆ. ಸಪ್ತರ್ಷಿಗಳ ಆಜ್ಞೆಗನುಸಾರ ಧರ್ಮಧ್ವಜದಲ್ಲಿ ಒಂದು ಬದಿಯಲ್ಲಿ ಪ್ರಭು ಶ್ರೀರಾಮ ಮತ್ತು ಇನ್ನೊಂದು ಬದಿಯಲ್ಲಿ ಶ್ರೀರಾಮನ ರೂಪದ ಪರಾತ್ಪರ ಗುರು ಡಾ. ಆಠವಲೆಯವರ ಚಿತ್ರವನ್ನು ಮುದ್ರಿಸಲಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಹಾಗೂ ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ, ಈ ತತ್ತ್ವಕ್ಕನುಸಾರ ಎಲ್ಲಿ ಶ್ರೀರಾಮನ ರೂಪವಿದೆಯೋ, ಅಲ್ಲಿ ಶ್ರೀರಾಮನ ಶಕ್ತಿ (ಚೈತನ್ಯ) ಇದೆ. ಈ ಧರ್ಮಧ್ವಜದಿಂದ ಶ್ರೀರಾಮತತ್ತ್ವ ಹಾಗೂ ಸದ್ಯದ ಕಲಿಯುಗದಲ್ಲಿ ಕಾರ್ಯನಿರತವಾಗಿರುವ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಶ್ರೀವಿಷ್ಣುತತ್ತ್ವವು ಪ್ರಕ್ಷೇಪಣೆಯಾಗುತ್ತಿದೆ. (‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ’, ಎಂದು ಸಪ್ತರ್ಷಿಗಳು ನಾಡಿಪಟ್ಟಿಯಿಂದ ಹೇಳಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಶೇ. ೫ ರಷ್ಟು ಶ್ರೀವಿಷ್ಣುತತ್ತ್ವವಿದೆ) ಆದ್ದರಿಂದ ಈ ಧರ್ಮಧ್ವಜದಲ್ಲಿ ಆರಂಭದಲ್ಲಿಯೇ (ಪರಾತ್ಪರ ಗುರು ಡಾಕ್ಟರರು ಧರ್ಮಧ್ವಜವನ್ನು ಸ್ಪರ್ಶಿಸುವ ಮೊದಲೇ) ದೊಡ್ಡ ಪ್ರಮಾಣದಲ್ಲಿ ಚೈತನ್ಯ ಇದ್ದ ಕಾರಣ ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಉರ್ಜೆಯಿತ್ತು.

೨ ಆ. ಪರಾತ್ಪರ ಗುರು ಡಾಕ್ಟರರು ಧರ್ಮಧ್ವಜವನ್ನು ಸ್ಪರ್ಶಿಸಿದ ನಂತರ ಅದರಲ್ಲಿನ ಚೈತನ್ಯವು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾದುದರ ಕಾರಣ : ಶ್ರೀವಿಷ್ಣುಸ್ವರೂಪಿ ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಹಸ್ತ ಸ್ಪರ್ಶದಿಂದ ಧರ್ಮಧ್ವಜದಲ್ಲಿನ ಶ್ರೀರಾಮ ತತ್ತ್ವವು ಜಾಗೃತವಾಗಿ ಕಾರ್ಯನಿರತವಾಯಿತು. ಆದ್ದರಿಂದ ಅದರಲ್ಲಿನ ಸಕಾರಾತ್ಮಕ ಉರ್ಜೆಯು ದೊಡ್ಡ ಪ್ರಮಾಣದಲ್ಲಿ (ಎರಡು ಪಟ್ಟಿಗಿಂತಲೂ ಹೆಚ್ಚು) ಹೆಚ್ಚಳವಾಗಿದೆ ಎಂದು ಈ ಪರೀಕ್ಷಣೆಯಿಂದ ಅರಿವಾಯಿತು. ಧರ್ಮಧ್ವಜದಲ್ಲಿ ಶ್ರೀರಾಮತತ್ತ್ವವು ಕಾರ್ಯನಿರತವಾಗಿರುವುದರಿಂದ ಸಪ್ತರ್ಷಿಗಳು ನೀಡಿರುವ ಆಶೀರ್ವಾದಕ್ಕನುಸಾರ ಹಿಂದೂ ರಾಷ್ಟ್ರ ಸ್ಥಾಪನೆಗೆ ವೇಗ ಬಂದಿದೆ ಎಂದು ಅನುಭವವಾಯಿತು.

‘ಧರ್ಮಧ್ವಜದ ಸ್ಥಾಪನೆಯಿಂದ ಎಲ್ಲೆಡೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದ ವೇಗ ಹೆಚ್ಚಾಗುವುದು’, ಎಂದು ಸಪ್ತರ್ಷಿಗಳು ಆಶೀರ್ವಾದ ನೀಡಿದ್ದಾರೆ. ಅದಕ್ಕಾಗಿ ಸಪ್ತರ್ಷಿಗಳ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೫.೨೦೨೧)

ವಿ-ಅಂಚೆ : [email protected]