ಅಮೇರಿಕಾದ ಟೆಕ್ಸಾಸ್‍ನ ಜ್ಯೂಗಳ ಪ್ರಾರ್ಥನಾ ಸ್ಥಳದ ಮೇಲೆ ಭಯೋತ್ಪಾದಕನಿಂದ ದಾಳಿ !

*ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !

*ಭದ್ರತಾ ದಳದ ಕಾರ್ಯಾಚರಣೆಯಲ್ಲಿ ಹತನಾದ ಉಗ್ರ

*4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ

ವಾಶಿಂಗ್ಟನ್ – ಅಮೇರಿಕಾದ ಟೆಕ್ಸಾಸ್‍ನ ಜ್ಯೂಗಳ ಧಾರ್ಮಿಕ ಸ್ಥಳದ ಮೇಲೆ ಓರ್ವ ಭಯೋತ್ಪಾದಕನು ದಾಳಿ ನಡೆಸಿ ಅಲ್ಲಿದ್ದ ನಾಲ್ಕು ಅಮೇರಿಕಾದ ನಾಗರಿಕರನ್ನು ಒತ್ತೆಯಾಳನ್ನಾಗಿಟ್ಟುಕೊಂಡಿದ್ದನು. ಹಾಗೂ ಪಾಕಿಸ್ತಾನಿ ಮೂಲದ ಮಹಿಳಾ ಭಯೋತ್ಪಾದಕಿ ಆಫಿಯಾ ಸಿದ್ಧಿಕಿಯನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಒಡ್ಡಿದ್ದನು. ಈ ಒತ್ತೆಯಾಳುಗಳಲ್ಲಿ ಯಹುದಿಯ ಓರ್ವ ಧರ್ಮಗುರು ಸಹ ಇದ್ದರು. ಸ್ವಲ್ಪಸಮಯದ ನಂತರ ಅವರ ಪೈಕಿ ಒಬ್ಬರನ್ನು ಬಿಡುಗಡೆ ಮಾಡಿದ್ದನು. ನಂತರ ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದ ನಾಗರಿಕರನ್ನು ಬಿಡಿಸುವಲ್ಲಿ ಭದ್ರತಾ ಪಡೆಗೆ ಯಶಸ್ಸು ಸಿಕ್ಕಿತು. ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಹತನಾಗಿದ್ದಾನೆ.

ಯಾರು ಈ ಆಫಿಯಾ ಸಿದ್ಧಿಕಿ ?

ಆಫಿಯಾ ಸಿದ್ಧಿಕಿ

ಅಮೇರಿಕಾದ ಸೆರೆಮನೆಯಲ್ಲಿರುವ ಜಿಹಾದಿ ಭಯೋತ್ಪಾದಕಿ ಆಫಿಯಾ ಸಿದ್ಧಿಕಿಯು ಪಾಕಿಸ್ತಾನ ಮೂಲದ ವಿಜ್ಞಾನಿಯಾಗಿದ್ದಾಳೆ. ಅಮೇರಿಕಾ ಯೋಧನನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿತ್ತು. ಅಮೇರಿಕಾದ ಭದ್ರತಾ ಪಡೆಯಿಂದ 2008 ರಲ್ಲಿ ಆಫಿಯಾಳನ್ನು ಅಫಗಾನಿಸ್ತಾನದಿಂದ ಬಂಧಿಸಲಾಗಿತ್ತು. ಆ ಸಮಯದಲ್ಲಿ ಆಕೆ ನ್ಯೂಯಾರ್ಕ್‍ನ ಬ್ರುಕಲಿನ ಬ್ರಿಜ ಮತ್ತು ಎಂಪಾಯರ್ ಸ್ಟೇಟ್ ಕಟ್ಟಡದ ಮೇಲೆ ದಾಳಿ ಮಾಡುವ ಸಂಚನ್ನು ರೂಪಿಸಿದ್ದಳು. ಸಧ್ಯ ಆಕೆ ಟೆಕ್ಸಾಸ್‍ನ ಫೋರ್ಟ್ ವರ್ಥನಲ್ಲಿನ ಕಾರ್ಸವೆಲನಲ್ಲಿ 86 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ. ಆಕೆಯನ್ನು `ಲೇಡಿ ಅಲ್ ಕಾಯದಾ’ ಎಂದೂ ಕೂಡಾ ಗುರುತಿಸಲಾಗುತ್ತದೆ. ಆಕೆಯ ಮೇಲೆ ಎಫ್‍ಬಿಐ ಅಧಿಕಾರಿಯ ಹತ್ಯೆ ಮಾಡಿರುವ ಆರೋಪವನ್ನೂ ಹೊರಿಸಲಾಗಿದೆ.