ಮಕರಸಂಕ್ರಾಂತಿಯ ನಿಮಿತ್ತ ಮೂರ್ತಿ ಭಾರತಕ್ಕೆ ಹಸ್ತಾಂತರ !
ಭಾರತದ ದೇವತೆಗಳ ಪ್ರಾಚೀನ ಮೂರ್ತಿಯ ಕಳ್ಳಸಾಗಣೆಯಾಗುವುದು, ಇದು ಪುರಾತತ್ವ ಇಲಾಖೆಗೆ ಲಜ್ಜಾಸ್ಪದ ! ಪ್ರಾಚೀನ ಮೂರ್ತಿ ಮತ್ತು ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ಇಲಾಖೆ ಒಂದು ವೇಳೆ ಸಮರ್ಪಕವಾಗಿ ಕಾರ್ಯವನ್ನು ನಿರ್ವಹಿಸದೇ ಇದ್ದರೆ, ಈ ಇಲಾಖೆಯನ್ನು ವಿಸರ್ಜಿಸಬೇಕು ! -ಸಂಪಾದಕರು
ಲಂಡನ – ಬುಂದೇಲಖಂಡ (ಉತ್ತರಪ್ರದೇಶ)ದ ಒಂದು ದೇವಸ್ಥಾನದಿಂದ ಸುಮಾರು 40 ವರ್ಷಗಳ ಹಿಂದೆ ಕಳ್ಳತನವಾಗಿದ್ದ ದೇವಿಯ ಮೂರ್ತಿ ಇಂಗ್ಲೆಂಡಿನ ಒಂದು ಉದ್ಯಾನದಲ್ಲಿ ಇರುವುದು ಬೆಳಕಿಗೆ ಬಂದಿದೆ. ಈ ಮೂರ್ತಿ 10ನೇ ಶತಮಾನದ್ದಾಗಿದ್ದು, ಮಕರಸಂಕ್ರಾಂತಿಯ ನಿಮಿತ್ತ ಅದನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಈಗ ಈ ಮೂರ್ತಿ ನವ ದೆಹಲಿಯ ಭಾರತೀಯ ಪುರಾತತ್ವ ವಿಭಾಗಕ್ಕೆ ಒಪ್ಪಿಸಲಾಗುವುದು.
The sculpture, which is part of a Yogini set from Lokhari Temple in Banda district of Bundelkhand, will now be dispatched to the Archaeological Survey of India in New Delhi. #MakarSankrantihttps://t.co/ee9jpaOz5X
— IndiaToday (@IndiaToday) January 15, 2022
ಈ ಮೂರ್ತಿ ಬುಂದೇಲಖಂಡದ ಬಾಂದಾ ಜಿಲ್ಲೆಯ ಲೋಖರಿ ದೇವಸ್ಥಾನದಲ್ಲಿ ಸ್ಥಾಪಿಸಲಾಗಿರುವ ‘ಯೋಗಿನಿ’ ಸಮೂಹದ ಒಂದು ಮೂರ್ತಿಯಾಗಿದೆ. ಯೋಗಿನಿಯು ತಾಂತ್ರಿಕ ಉಪಾಸನೆಗೆ ಸಂಬಂಧಿಸಿರುವ ಶಕ್ತಿಶಾಲಿ ದೇವಿಯ ಒಂದು ಸಮೂಹವಾಗಿದೆ. ಸಮೂಹ ರೂಪದಲ್ಲಿ ಪೂಜಿಸಲಾಗುತ್ತದೆ. ಅಕ್ಟೋಬರ 2021 ರಲ್ಲಿ ಹೈಕಮೀಷನರ್ ಇವರಿಗೆ ಈ ಮೂರ್ತಿಯ ಮಾಹಿತಿಯನ್ನು ನೀಡಲಾಗಿತ್ತು. ಇಂಗ್ಲೆಂಡಿನ ಭಾರತೀಯ ಹೈಕಮೀಷನರ್ ಗಾಯತ್ರಿ ಇಸ್ಸರ ಕುಮಾರ ಇವರಿಗೆ ಈ ಮೂರ್ತಿಯನ್ನು ಹಸ್ತಾಂತರಿಸಲಾಯಿತು. ಗಾಯತ್ರಿ ಕುಮಾರ ಇವರು ಪ್ಯಾರಿಸ್‍ನಲ್ಲಿರುವ ಕಾಲಾವಧಿಯಲ್ಲಿಯೂ ಯೋಗಿನಿಯ ಮತ್ತೊಂದು ಮೂರ್ತಿಯನ್ನು ವಶಕ್ಕೆ ಪಡೆದು ಭಾರತಕ್ಕೆ ಕಳುಹಿಸಿದ್ದರು. ಆ ಮೂರ್ತಿಯೂ ಲೋಖರಿಯ ಅದೇ ದೇವಸ್ಥಾನದಿಂದ ಕಳ್ಳತನ ಮಾಡಲಾಗಿತ್ತು. 2013 ರಲ್ಲಿ ಮೂರ್ತಿಯನ್ನು ದಹಲಿಯ ರಾಷ್ಟ್ರೀಯ ಸಂಗ್ರಹಾಲಯದಲ್ಲಿ.