ಲವ್ ಜಿಹಾದ್‌ಅನ್ನು ಬೆಂಬಲಿಸುವ ಚಲನಚಿತ್ರವನ್ನು ಕಾನೂನಾತ್ಮಕವಾಗಿ ವಿರೋಧಿಸಿ !

೧. ಮತಾಂಧರ ದಾಳಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !

ಆಗ್ರಾದ (ಉತ್ತರಪ್ರದೇಶ) ಆಲಂಗಂಜ್ ಚೌಕಿ ಪ್ರದೇಶದ ರಾಧಾಕೃಷ್ಣ ದೇವಸ್ಥಾನದ ಬಳಿ ಸರಾಯಿ ಕುಡಿದು ಗೊಂದಲ ಮಾಡುತ್ತಿದ್ದ ಮತಾಂಧನನ್ನು ರಾ.ಸ್ವ. ಸಂಘವು ವಿರೋಧಿಸಿತೆಂದು ಮತಾಂಧರ ಗುಂಪುಗಳು ಸಂಘದ ಕಚೇರಿಯನ್ನು ಧ್ವಂಸಗೊಳಿಸಿದವು.

೨. ಲವ್ ಜಿಹಾದ್‌ಅನ್ನು ಬೆಂಬಲಿಸುವ ಚಲನಚಿತ್ರವನ್ನು ಕಾನೂನಾತ್ಮಕವಾಗಿ ವಿರೋಧಿಸಿ !

‘ಅತರಂಗಿ ರೇ’ ಹಿಂದಿ ಚಿತ್ರದಲ್ಲಿ ‘ಲವ್ ಜಿಹಾದ್’ಅನ್ನು ಬೆಂಬಲಿಸಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ನಾಯಕಿಯ ಕುಟುಂಬ ಮುಸಲ್ಮಾನ ನಾಯಕನನ್ನು ಜೀವಂತ ಸುಡುತ್ತದೆ. ಇದರಿಂದ ಹಿಂದೂಗಳನ್ನು ‘ಹಿಂಸಾಚಾರಿ’ಗಳು ಹಾಗೂ ಮುಸಲ್ಮಾನರು ‘ಸಂತ್ರಸ್ತ’ರು ಎಂದು ಬಿಂಬಿಸಲಾಗಿದೆ.

೩. ನ್ಯಾಯಾಂಗದ ಭಾರತೀಕರಣ ಆವಶ್ಯಕ !

ಮನು, ಚಾಣಕ್ಯ ಮತ್ತು ಬೃಹಸ್ಪತಿ ಅವರು ಅಭಿವೃದ್ಧಿಪಡಿಸಿದ ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆಯು ಭಾರತಕ್ಕೆ ಸೂಕ್ತವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ನಜೀರ್ ಇವರು ಅಭಿಪ್ರಾಯಪಟ್ಟಿದ್ದಾರೆ.

೪. ಇಸ್ಲಾಮಿಕ್ ದೇಶದ ಹಿಂದೂಗಳ ಬಗ್ಗೆ ನಸಿರುದ್ದೀನ್ ಶಾ ಯಾವಾಗ ಮಾತನಾಡುವರು ?

‘ದೇಶದಲ್ಲಿ ೨೦ ಕೋಟಿ ಮುಸಲ್ಮಾನರಿದ್ದಾರೆ. ನೀವು (ಹಿಂದೂಗಳು) ರಾತ್ರೋರಾತ್ರಿ ಅವರನ್ನು ನಾಶ ಮಾಡಲು ಸಾಧ್ಯವಿಲ್ಲ.  ಮುಸಲ್ಮಾನರ ಮೇಲೆ ದಾಳಿಯಾದರೆ ನಾವು ಅದರ ವಿರುದ್ಧ ಹೋರಾಡುವೆವು’ ಎಂದು ನಟ ನಸಿರುದ್ದೀನ್ ಶಾ ಹೇಳಿದ್ದಾರೆ.

೫. ಚರ್ಚ್ ಮತ್ತು ಮಸೀದಿಗಳು ಸರಕಾರದ ಆಸ್ತಿ ಅಲ್ಲವೇ ?

ಕರ್ನಾಟಕದ ಭಾಜಪ ಸರಕಾರವು ರಾಜ್ಯದ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಾಗಿ ಘೋಷಿಸಿದ ನಂತರ, ಕರ್ನಾಟಕದ ಕಾಂಗ್ರೆಸ್‌ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರು ‘ಸರಕಾರ ಐತಿಹಾಸಿಕ ತಪ್ಪು ಮಾಡುತ್ತಿದೆ. ದೇವಸ್ಥಾನಗಳು ಸರಕಾರದ ಆಸ್ತಿ’ ಎಂದು ಹೇಳಿದ್ದಾರೆ.

೬. ಹಿಂದೂಗಳನ್ನು ಇತರ ಧರ್ಮದವರು ಮತಾಂತರಿಸಬೇಕು ಎಂದು ಕಾಂಗ್ರೆಸ್‌ಗೆ ಅನಿಸುತ್ತದೆಯೇ ?

೨೦೨೩ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಹೇಳಿದ್ದಾರೆ.

೭. ಧಾರ್ಮಿಕ ಸ್ಥಳಗಳನ್ನು ಯಾರು ಅಪವಿತ್ರಗೊಳಿಸುತ್ತಾರೆ, ಎಂಬುದನ್ನು ಗಮನದಲ್ಲಿಡಿ !

ಮಂಗಳೂರು ಇಲ್ಲಿಯ ಮಾರ್ನಮಿಕಟ್ಟೆ ಪ್ರದೇಶದ ಕೊರಗಜ್ಜನ ದೇವಸ್ಥಾನದ ಎದುರು ಉಪಯೋಗಿಸಿರುವ ಗರ್ಭನಿರೋಧಕ ಮತ್ತು ಏಸುವಿನ ಲೇಖನಗಳ ಭಿತ್ತಿಪತ್ರಗಳು ಇಟ್ಟಿರುವ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳು ಮತಾಂತರಿತ ಕ್ರೈಸ್ತ ದೇವದಾಸ ದೇಸಾಯಿ ಈತನನ್ನು ಬಂಧಿಸಿದ್ದಾರೆ.