ಇಸ್ಲಾಮಿ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಅರಿಯಿರಿ ! ಭಾರತದಲ್ಲಿ ಎಂದಾದರೂ ಬಹುಸಂಖ್ಯಾತರಿಂದ ಈ ರೀತಿಯ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಘಟನೆಗಳು ನಡೆದಿದೆಯೇ ? ಆದರೂ ಹಿಂದೂಗಳನ್ನು `ತಾಲಿಬಾನಿ’ ಎನ್ನುವ ಪ್ರಯತ್ನ ನಡೆಯುತ್ತದೆ ಮತ್ತು ಇನ್ನೊಂದೆಡೆಗೆ ಅಪಘಾನಿಸ್ತಾನದ ತಾಲಿಬಾನಿಗಳಿಗೆ ಬೆಂಬಲಿಸುತ್ತಾರೆ !- ಸಂಪಾದಕರು ನೆರೆಯ ಇಸ್ಲಾಮಿ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹಿತಕ್ಕಾಗಿ ಭಾರತದಲ್ಲಿ ಇದು ವರೆಗಿನ ಎಲ್ಲ ಪಕ್ಷದ ಸರಕಾರಗಳು ಏನೂ ಮಾಡದ ಕಾರಣ ಅಲ್ಲಿನ ಹಿಂದೂಗಳು ನರಕಯಾತನೆ ಅನುಭವಿಸಬೇಕಾಗುತ್ತಿದೆ. ಭಾರತವನ್ನು `ಹಿಂದೂ ರಾಷ್ಟ್ರ’ ಘೋಷಿಸಿದರೆ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಎಂದು ತಿಳಿಯಿರಿ !-ಸಂಪಾದಕರು |
ಢಾಕಾ (ಬಾಂಗ್ಲಾದೇಶ) – ಶುಕ್ರವಾರ, ಡಿಸೆಂಬರ್ 31 ರಂದು ಬಾಂಗ್ಲಾದೇಶದ ಲಾಲ್‍ಮೋನಿಹಾಟನ ಹಾತಿಬಾಂಧಾ ಉಪಜಿಲ್ಲೆಯಲ್ಲಿನ ಗೆಂಡುಕುರಿ ಊರಿನಲ್ಲಿ ಹಿಂದೂಗಳ ಮೂರು ದೇವಸ್ಥಾನಗಳ ಬಾಗಿಲಿಗೆ ಮತ್ತು ಓರ್ವ ಹಿಂದೂ ವ್ಯಕ್ತಿಯ ಮನೆಯ ಬಾಗಿಲಿನ ಮೇಲೆ ಹಸಿ ಗೋಮಾಂಸ ತುಂಬಿರುವ ಪಾಲಿಥಿನ್ ಚೀಲಗಳಲ್ಲಿ ತಂದು ತುಗುಹಾಕಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಾತಿಬಾಂಧಾ ಪೊಲೀಸ್ ಠಾಣೆಯಲ್ಲಿ 4 ದೂರನ್ನು ದಾಖಲಿಸಲಾಗಿದೆ. ಈ ಘಟನೆಯನ್ನು ಖಂಡಿಸಲು ಸ್ಥಳೀಯ ಹಿಂದೂಗಳು ಗ್ರಾಮದ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನದಲ್ಲಿ ಒಟ್ಟಾಗಿ ಖಂಡಿಸಿದರು. `ಈ ಘಟನೆಯಿಂದ ನಮ್ಮ ಧಾರ್ಮಿಕ ಭಾವನೆಗೆ ನೋವುಂಟಾಗಿರುವುದರಿಂದ ತಪ್ಪಿತಸ್ಥರನ್ನು ಬಂಧಿಸುವ ವರೆಗೂ ಆಂದೋಲನ ಮಾಡುವೆವು’, ಎಂದು ಹಿಂದೂಗಳು ಘೋಷಿಸಿದ್ದಾರೆ. ಬಾಂಗ್ಲಾದೇಶದ `ದಿ ಡೆಲಿ ಸ್ಟಾರ್’ ದೈನಿಕದಲ್ಲಿ ಈ ವಾರ್ತೆ ಪ್ರಕಟವಾಗಿದೆ.
ಬಾಂಗ್ಲಾದೇಶದ ಹಟಿಬಂಧ ಜಿಲ್ಲೆಯ ಗೆಂಡುಕುರಿ ಗ್ರಾಮದ ಮೂರು ಹಿಂದೂ ದೇವಾಲಯಗಳು ಮುಂದೆ ಹಸಿ ಗೋಮಾಂಸ ಇರಿಸಿರುವ ಪ್ಲಾಸ್ಟಿಕ್ ಚೀಲಗಳನ್ನು ನೇತು ಹಾಕಲಾಗಿದೆ.#Bangladesh #Beef #HinduTempleshttps://t.co/UDS2yQQHyv
— Prajavani (@prajavani) January 2, 2022
1. `ಹಸಿ ಗೋಮಾಂಸ ತುಂಬಿರುವ ಪ್ಯಾಲಿಥಿನ್‍ನ ಚೀಲಗಳನ್ನು ಗೆಂಡುಕುರಿ ಕ್ಯಾಂಪ್ ಪಾರಾ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ, ಗೆಂಡುಕುರಿ ಕುಠಿಪಾರಾ ಶ್ರೀ ಮಹಾಕಾಳಿ ದೇವಸ್ಥಾನ, ಗೆಂಡುಕುರಿ ಬಟ್ಟಾಲಾ ಶ್ರೀ ಮಹಾಕಾಳಿ ದೇವಸ್ಥಾನ ಮತ್ತು ಶ್ರೀ ಮೋನಿಂದ್ರನಾಥ ಬರ್ಮನ ಇವರ ಮನೆಯ ಬಾಗಿಲಿಗೆ ತೂಗು ಹಾಕಲಾಗಿತ್ತು. ಪೊಲೀಸರು ನಮಗೆ, ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಆಶ್ವಾಸನೆಯನ್ನು ನೀಡಿದ್ದಾರೆ, ಎಂದು ಹಾತಿಬಾಂಧಾ ಉಪ ಜಿಲ್ಲೆಯ ಪೂಜಾ ಉದಜಪನ(ಉತ್ಸವ) ಪರಿಷತ್ತಿ’ನ ಅಧ್ಯಕ್ಷ ದಿಲೀಪ ಕುಮಾರ ಸಿಂಹ ಹೇಳಿದ್ದಾರೆ.
2. ಹಾತಿಬಾಂಧಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಇರಶಾದುಲ ಆಲಮ ಇವರು, ನಾವು ಈ ಘಟನೆಯ ತನಿಖೆಯನ್ನು ಮಾಡುತ್ತಿದ್ದೇವೆ, ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.