ಪಾಕಿಸ್ತಾನ ಸರಕಾರದಿಂದ ಇದೇ ಮೊದಲಬಾರಿ ಹಿಂದೂಗಳ ಮಂದಿರಗಳ ಉಸ್ತುವಾರಿಗಾಗಿ ‘ಹಿಂದೂ ಮಂದಿರ ವ್ಯವಸ್ಥಾಪನಾ ಸಮಿತಿಯ ಸ್ಥಾಪನೆ

*ಇಂತಹ ಸಮಿತಿ ಸ್ಥಾಪಿಸಿ ಪಾಕಿಸ್ತಾನದಲ್ಲಿರುವ ಹಿಂದೂಗಳ ಮಂದಿರಗಳ ಮೇಲೆ ಜಿಹಾದಿಗಳು ನಡೆಸುತ್ತಿರುವ ಆಕ್ರಮಣಗಳು ಸ್ಥಗಿತಗೊಳ್ಳುವುದೇ ? ‘ನಾವೂ ಅಲ್ಪಸಂಖ್ಯಾತ ಹಿಂದೂಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ, ಎಂದು ಆಂತರರಾಷ್ಟ್ರೀಯ ಸಮುದಾಯಕ್ಕೆ ತೋರಿಸಲು ಪಾಕಿಸ್ತಾನ ಇಂತಹ ಸಮಿತಿಯನ್ನು ಸ್ಥಾಪಿಸುತ್ತಿದೆ, ಎಂಬುದನ್ನು ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ‘ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧನ ಸಮಿತಿಯಂತೆಯೇ ‘ಪಾಕಿಸ್ತಾನ ಹಿಂದೂ ಮಂದಿರ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ. ಪಾಕಿಸ್ತಾನ ಸರಕಾರದಿಂದ ಪ್ರಥಮ ಬಾರಿಗೆ ಈ ರೀತಿ ಹಿಂದೂಗಳ ಮಂದಿರಗಳ ಉಸ್ತುವಾರಿಗಾಗಿ ಇಂತಹ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ಸಭೆಯ ಮೊದಲ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಧಾರ್ಮಿಕ ಪ್ರಕರಣಗಳ ಸಚಿವ ಪೀರ ನೂರ-ಉಲ್-ಹಕ್ ಕಾದರಿ ನೆರವೇರಿಸಿದರು. ಈ ಸಮಿತಿಯಲ್ಲಿ ಚಂದ ಚಾವಲಾ, ಹಾರೂನ ಸರಬ ದಯಾಲ, ಮೋಹನದಾಸ, ನಾರಂಜನ ಕುಮಾರ, ಮೇಘಾ ಅರೋರಾ, ಅಮಿತ ಶದಾನಿ, ಅಶೋಕ ಕುಮಾರ, ವರ್ಸಿ ಮಿಲ್ ದೀವಾನಿ ಮತ್ತು ಅಮರ ನಾಥ ರಂಧಾವಾ ಇವರು ಸದಸ್ಯರಾಗಿದ್ದಾರೆ ಹಾಗೂ ಅಧ್ಯಕ್ಷ ಸ್ಥಾನದಲ್ಲಿ ಕೃಷ್ಣ ಶರ್ಮಾ ಇರಲಿದ್ದಾರೆ.