ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವ) ಅವರಂತಹ ಮಹಾನ್ ವಿಭೂತಿಯ ಸಿದ್ಧಹಸ್ತ ಲೇಖನಿಯಿಂದ ಸಾಕಾರಗೊಂಡಿರುವ ಸನಾತನದ ಗ್ರಂಥಗಳು ಚೈತನ್ಯಮಯವಾದ ಜ್ಞಾನಭಂಡಾರವೇ ಆಗಿವೆ ! ಈ ಗ್ರಂಥಗಳು ಕಬ್ಬಿಣವನ್ನು ಚಿನ್ನವಾಗಿಸುವ ಸ್ಪಟಿಕಮಣಿಯಂತಿವೆ; ಏಕೆಂದರೆ ಈ ಗ್ರಂಥಗಳಲ್ಲಿನ ಬೋಧನೆಯನ್ನು ಆಚರಣೆಗೆ ತರುವುದರಿಂದ ಅನೇಕರ ಜೀವನದಲ್ಲಿ ಆಮೂಲಾಗ್ರ ಬದಲಾವಣೆಗಳಾಗುತ್ತಿವೆ !

ಅನೇಕ ಸಂತರು ಧರ್ಮ, ಅಧ್ಯಾತ್ಮದ ಕುರಿತು ಗ್ರಂಥಗಳನ್ನು ಬರೆಯುತ್ತಾರೆ; ಆದರೆ ಧರ್ಮ, ಅಧ್ಯಾತ್ಮದೊಂದಿಗೆ ರಾಷ್ಟ್ರರಕ್ಷಣೆ, ಧರ್ಮರಕ್ಷಣೆ, ಹಿಂದೂ ರಾಷ್ಟ್ರದ ಸ್ಥಾಪನೆ, ಭಾಷಾಶುದ್ಧಿ, ಸಾತ್ತ್ವಿಕ ಕಲೆಗಳಂತಹ ವೈವಿಧ್ಯಮಯ ವಿಷಯಗಳ ಕುರಿತು ಗ್ರಂಥಗಳನ್ನು ಬರೆಯುತ್ತಿರುವ ಪ್ರಸ್ತುತ ಕಲಿಯುಗದ ಏಕೈಕ ಸಂತ ಬಹುಶಃ ಗುರುದೇವರೊಬ್ಬರೇ ಇರಬಹುದು ! ಗುರುದೇವರ ಅವಿರತ ತಳಮಳದಿಂದಾಗಿ ಏಪ್ರಿಲ್ ೨೦೨೬ ರ ವರೆಗೆ ಸನಾತನದ ೩೭೦ ಗ್ರಂಥಗಳು ಮತ್ತು ಕಿರುಗ್ರಂಥಗಳ ವಿವಿಧ ಭಾಷೆಗಳಲ್ಲಿ ಒಟ್ಟು ೧ ಕೋಟಿ ೨ ಲಕ್ಷದ ೬೭ ಸಾವಿರ ಪ್ರತಿಗಳು ಪ್ರಕಟಗೊಂಡಿವೆ !

ಸನಾತನದ ಗ್ರಂಥಗಳು ೧ ಕೋಟಿಯ ಮೈಲಿಗಲ್ಲನ್ನು ದಾಟಿರುವುದು ಸನಾತನದ ಗ್ರಂಥಕಾರ್ಯಕ್ಕೆ ಹೆಮ್ಮೆಯ ಸಂಗತಿ ಆಗಿದೆ. ಪ್ರಕಟಗೊಂಡಿರುವ ಪ್ರತಿಗಳ ಸಂಖ್ಯೆಯಿಂದ ಸಮಾಜದಲ್ಲಿನ ಜಿಜ್ಞಾಸುಗಳಿಗೆ ಅಧ್ಯಾತ್ಮದ ಮತ್ತು ಶಾಸ್ತ್ರವನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಎಷ್ಟಿದೆ ಎಂಬುದು ಗಮನಕ್ಕೆ ಬರುತ್ತದೆ.

ಗ್ರಂಥಬರಹದ ಮಾಧ್ಯಮದಿಂದ ಅಖಿಲ ಮನುಕುಲದ ಉದ್ಧಾರ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕಾಲದ ಪ್ರವಾಹದಲ್ಲಿ ಹಿಂದೂ ಧರ್ಮದ ಮಹತ್ವವು ಕಡಿಮೆಯಾಗತೊಡಗಿತು. ಧರ್ಮ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳದೆ ಕೃತಿ ಮಾಡಿದ್ದರಿಂದ ಅದರಿಂದ ನಿರೀಕ್ಷಿತ ಲಾಭ ಸಿಗಲಿಲ್ಲ, ಹೀಗಾಗಿ ಮನುಷ್ಯನು ಧಾರ್ಮಿಕ ಕೃತಿಗಳಿಂದ ದೂರವಾಗತೊಡಗಿದನು. ಈಶ್ವರ ಪ್ರಾಪ್ತಿ ಮಾಡಿಕೊಳ್ಳುವುದು ಇದುವೇ ಮನುಷ್ಯಜನ್ಮದ ಮೂಲ ಉದ್ದೇಶವಾಗಿದೆ ಮತ್ತು ಮಾನವನಿಗೆ ಅದರ ವಿಸ್ಮೃತಿಯಾಗಿದೆ. ಆದ್ದರಿಂದ ಧರ್ಮದಲ್ಲಿನ ಜ್ಞಾನ ಮತ್ತು ಈಶ್ವರಪ್ರಾಪ್ತಿಯ ಮಾರ್ಗಗಳು ಅಖಿಲ ಮನುಕುಲಕ್ಕೆ ತಿಳಿಯಬೇಕು ಎಂಬ ಉದ್ದೇಶದಿಂದ ನಾನು ಗ್ರಂಥಬರಹವನ್ನು ಮಾಡುತ್ತಿದ್ದೇನೆ. ಈ ಗ್ರಂಥಗಳ ಮೂಲಕ ಆನಂದಪ್ರಾಪ್ತಿ ಮತ್ತು ಶೀಘ್ರವಾಗಿ ಈಶ್ವರಪ್ರಾಪ್ತಿಯಾಗಲು ಕಾಲಕ್ಕನುಸಾರವಾಗಿ ಅತ್ಯಾವಶ್ಯಕವಾದ ಸಾಧನೆಯ ಬೋಧನೆಯನ್ನು ನೀಡಲಾಗುತ್ತಿದೆ.

ನಾನು ಇತರ ಸಂತರಂತೆ ಎಲ್ಲೆಡೆ ಸಂಚರಿಸಿ ಕೀರ್ತನೆ ಮತ್ತು ಪ್ರವಚನಗಳನ್ನು ಮಾಡಿದ್ದರೆ ಸಮಾಜದಲ್ಲಿ ಕೇವಲ ನನ್ನ ಹೆಸರು ಪ್ರಸಿದ್ಧಿಯಾಗುತ್ತಿತ್ತು. ಹಾಗೆ ಮಾಡದೆ, ನಾನು ಆ ಸಮಯವನ್ನು ಅಧ್ಯಾತ್ಮಶಾಸ್ತ್ರದ ಮತ್ತು ಇತರ ವಿಷಯಗಳ ಮೇಲಿನ ಗ್ರಂಥಗಳನ್ನು ಬರೆಯಲು ವಿನಿಯೋಗಿಸಿದೆ. ಸಾವಿರಾರು ಜಿಜ್ಞಾಸುಗಳು ಅಧ್ಯಾತ್ಮಶಾಸ್ತ್ರದ ಗ್ರಂಥಗಳನ್ನು ಅಭ್ಯಾಸ ಮಾಡಿದರು ಮತ್ತು ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ ಎಂಬುದನ್ನು ಅರಿತು ತಕ್ಷಣವೇ ಸಾಧನೆಯನ್ನು ಪ್ರಾರಂಭಿಸಿದರು. ಇದರಿಂದಾಗಿ ಜಿಜ್ಞಾಸುಗಳು ಸಾಧಕರಾದರು ಮತ್ತು ಮುಂದಿನ ಹಂತದ ಸಾಧನೆಯನ್ನು ಮಾಡುತ್ತಾ ಅವರು ಸಂತಪದವಿಯತ್ತ ಹೆಜ್ಜೆ ಇಡತೊಡಗಿದರು. ೧೩ ಮೇ ೨೦೨೬ ರವರೆಗೆ ೧೩೪ ಸಾಧಕರು ಸಂತರಾಗಿದ್ದಾರೆ, ಹಾಗೆಯೇ ೧ ಸಾವಿರದ ೨೬ ಸಾಧಕರು ಸಂತತ್ವದ ದಿಶೆಯಲ್ಲಿ ಮುನ್ನಡೆಯುತ್ತಿದ್ದಾರೆ. ಇಷ್ಟೊಂದು ವೇಗವಾಗಿ ಸಾಧಕರು ಮತ್ತು ಸಂತರ ನಿರ್ಮಾಣವಾಗಿರುವುದು ಇದೇ ಮೊದಲ ಉದಾಹರಣೆಯಾಗಿರಬಹುದು ! ಸಮಾಜಕ್ಕೆ ಆಧ್ಯಾತ್ಮಿಕ ಮಟ್ಟದಲ್ಲಿ ಸಿಕ್ಕಿರುವ ಈ ಲಾಭವು ನನ್ನ ಪ್ರಸಿದ್ಧಿಗೆ ಹೋಲಿಸಿದರೆ ಎಷ್ಟೋ ಪಟ್ಟು ಹೆಚ್ಚು ಮಹತ್ವದ್ದಾಗಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೮.೫.೨೦೨೬)

೧. ಸನಾತನದ ಚೈತನ್ಯಮಯ ಗ್ರಂಥಸಂಪತ್ತಿನ ಕೆಲವು ಅದ್ವಿತೀಯ ವೈಶಿಷ್ಟ್ಯಗಳು

(ಪೂ.) ಸಂದೀಪ ಆಳಶಿ

ಅ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸನಾತನದ ವಿವಿಧ ಗ್ರಂಥಗಳಲ್ಲಿ ಸುಮಾರು ಶೇ. ೩೦ ರಷ್ಟು ಬರವಣಿಗೆಯು ಇತರ ಉಲ್ಲೇಖಿತ ಗ್ರಂಥಗಳಿಂದ ಪಡೆದದ್ದಾಗಿದೆ, ಸುಮಾರು ಶೇ. ೨೦ ರಷ್ಟು ಬರವಣಿಗೆಯು ಸಾಧಕರಿಗೆ ಸೂಕ್ಷ್ಮದಲ್ಲಿ ದೊರೆತ ಈಶ್ವರಿ ಜ್ಞಾನವಾಗಿದೆ ಮತ್ತು ಶೇ. ೫೦ ರಷ್ಟು ಬರವಣಿಗೆಯು ಗುರುದೇವರಿಗೆ ಅವರ ಗುರುಗಳ ಆಶೀರ್ವಾದದಿಂದ ಒಳಗಿನಿಂದ ಸ್ಫುರಿಸಿದ್ದಾಗಿದೆ !

ಆ. ಅಧ್ಯಾತ್ಮದಲ್ಲಿನ ಕೃತಿಗಳ ಕುರಿತು ‘ಏಕೆ ಮತ್ತು ಹೇಗೆ ? ಎಂಬುದಕ್ಕೆ ಶಾಸ್ತ್ರೀಯ ಉತ್ತರಗಳು !

ಇ. ವಿಜ್ಞಾನಯುಗದ ಓದುಗರಿಗೆ ಸುಲಭವಾಗಿ ಅರ್ಥವಾಗುವಂತಹ ಆಧುನಿಕ ವೈಜ್ಞಾನಿಕ ಭಾಷೆಯಲ್ಲಿನ (ಉದಾ. ಶೇಕಡಾವಾರು ತಿಳಿಸುವುದು) ಜ್ಞಾನ !

ಈ. ಅಧ್ಯಾತ್ಮದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಲಾದ ಸಂಶೋಧನೆ, ಸೂಕ್ಷ್ಮ ಸ್ತರದ ಪ್ರಕ್ರಿಯೆ ತೋರಿಸುವ ಚಿತ್ರ ಮತ್ತು ಬರಹಗಳು !

ಉ. ಶೀಘ್ರ ಈಶ್ವರಪ್ರಾಪ್ತಿಗಾಗಿ ಸಾಧನೆಯ ಕುರಿತು ಕೇವಲ ತಾತ್ತ್ವಿಕ ವಿವೇಚನೆ ಮಾತ್ರವಲ್ಲ, ಸಾಧನೆಯನ್ನು ಕೃತಿಯಲ್ಲಿ ತರುವ ಕುರಿತು ಮಾರ್ಗದರ್ಶನ !

ಊ. ಸನಾತನದ ಬಹುತೇಕ ಗ್ರಂಥಗಳಲ್ಲಿ ಇತರ ಉಲ್ಲೇಖಿತ ಗ್ರಂಥಗಳ ಸಾರವನ್ನೂ ತೆಗೆದು ಕೊಳ್ಳಲಾಗಿರುತ್ತದೆ. ಆದ್ದರಿಂದ ಅಧ್ಯಾತ್ಮಶಾಸ್ತ್ರದ ಅಭ್ಯಾಸಿಗರಿಗೆ ಅಗತ್ಯವಿರುವ ಎಲ್ಲಾ ಜ್ಞಾನವು ಆಯಾ ವಿಷಯದ ಒಂದೇ ಗ್ರಂಥದಲ್ಲಿ ದೊರೆಯುತ್ತದೆ, ಇದರಿಂದ ಅವರ ಅನೇಕ ಗ್ರಂಥಗಳನ್ನು ಓದುವ ಸಮಯವು ಉಳಿಯುತ್ತದೆ !

೨. ಸನಾತನದ ಗ್ರಂಥಸಂಪತ್ತಿನ ಭಾಷಾವಾರು ವಿಸ್ತಾರ

ಸನಾತನದ ಗ್ರಂಥಗಳಲ್ಲಿನ ಚೈತನ್ಯಮಯ ಜ್ಞಾನವು ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ ವಿವಿಧ ಪ್ರಾಂತ್ಯಗಳ ಜಿಜ್ಞಾಸುಗಳನ್ನು ತಲುಪಬೇಕು ಎಂಬ ಉದ್ದೇಶದಿಂದ ಸನಾತನವು ಏಪ್ರಿಲ್ ೨೦೨೬ ರವರೆಗೆ ೧೩ ಭಾಷೆಗಳಲ್ಲಿ ತನ್ನ ಜ್ಞಾನ ಭಂಡಾರವನ್ನು ಎಲ್ಲರಿಗೂ ಲಭ್ಯವಾಗಿಸಿದೆ. ಇದರಲ್ಲಿ ಅತ್ಯಧಿಕವಾಗಿ ೩೪೮ ಗ್ರಂಥಗಳು ಮರಾಠಿ ಭಾಷೆಯಲ್ಲಿದ್ದು, ಅದರ ನಂತರದ ಸ್ಥಾನದಲ್ಲಿ ಆಂಗ್ಲ ಭಾಷೆಯಲ್ಲಿ ೨೦೨ ಹಾಗೂ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತಲಾ ೨೦೧ ಗ್ರಂಥಗಳು ಪ್ರಕಟಗೊಂಡಿವೆ.  ಇದರೊಂದಿಗೆ ಗುಜರಾತಿ ಭಾಷೆಯಲ್ಲಿ ೭೦, ತೆಲುಗಿನಲ್ಲಿ ೫೪, ತಮಿಳಿನಲ್ಲಿ ೪೯, ಬಂಗಾಳಿಯಲ್ಲಿ ೩೦, ಮಲಯಾಳಂನಲ್ಲಿ ೨೫, ಒಡಿಯಾದಲ್ಲಿ ೨೨, ಪಂಜಾಬಿಯಲ್ಲಿ ೧೩, ನೇಪಾಳಿಯಲ್ಲಿ ೩ ಮತ್ತು ಆಸ್ಸಾಮಿ ಭಾಷೆಯಲ್ಲಿ ೨ ಗ್ರಂಥಗಳು ಪ್ರಕಟವಾಗಿವೆ. ಈ ಮೂಲಕ ಗ್ರಂಥಗಳ ಮಾಧ್ಯಮದಿಂದ ಅಧ್ಯಾತ್ಮದ ಚೈತನ್ಯಮಯ ಪ್ರವಾಹವು ಭಾರತದಾದ್ಯಂತ ಹರಿಯುತ್ತಿದೆ.

೩. ಇನ್ನು ೫ ಸಾವಿರಕ್ಕೂ ಅಧಿಕ ಗ್ರಂಥಗಳು ಪ್ರಕಾಶನದ ನಿರೀಕ್ಷೆಯಲ್ಲಿವೆ !

‘ಸಮಷ್ಟಿಗೆ ಅಧ್ಯಾತ್ಮದ ಸಣ್ಣಪುಟ್ಟ ವಿಷಯಗಳ ಹಿಂದಿರುವ ಶಾಸ್ತ್ರವು ಅರ್ಥವಾಗಬೇಕು ಎಂಬ ಉದ್ದೇಶದಿಂದ ಗುರುದೇವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಗುರುದೇವರಿಗೆ ಈಗ ವಯೋಸಹಜ ಆಯಾಸ ಇರುತ್ತದೆ. ಅವರಿಗೆ ಆಯಾಸದ ಕಾರಣದಿಂದ ಮಂಚದ ಮೇಲೆ ಮಲಗಬೇಕಾಗಿ ಬಂದರೂ, ಅವರ ಕೈಯಲ್ಲಿ ಯಾವುದಾದರೂ ಪುಸ್ತಕ ಇದ್ದೇ ಇರುತ್ತದೆ. ಆ ಪುಸ್ತಕದ ಮೇಲೆ ಗುರುದೇವರು ಗುರುತುಗಳನ್ನು ಮಾಡಿ, ಆ ಬರಹವನ್ನು ಗಣಕಯಂತ್ರದಲ್ಲಿ ಸಂಗ್ರಹಿಸಿಡಲು ನೀಡುತ್ತಾರೆ. ಅವರ ಈ ಅವಿರತ ಜ್ಞಾನಸಂಗ್ರಹದಿಂದಾಗಿ ಇನ್ನು ೫ ಸಾವಿರಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗುವಷ್ಟು ಬರಹಗಳನ್ನು ಗಣಕಯಂತ್ರದಲ್ಲಿ ವಿಷಯಗಳಿಗನುಸಾರವಾಗಿ ವರ್ಗೀಕರಿಸಿ ಇಡಲಾಗಿದೆ.

ಗುರುದೇವರ ಕೃಪೆ ಮತ್ತು ಸಂಕಲ್ಪದಿಂದ ಸನಾತನದ ಗ್ರಂಥಕಾರ್ಯವು ಹೀಗೆಯೇ ದಿನೇದಿನೇ ವೃದ್ಧಿಯಾಗುತ್ತಾ ಇರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ !

– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೮.೫.೨೦೨೬)


ಆಬಾಲವೃದ್ಧರ ವರೆಗೆ ಎಲ್ಲರಿಗೂ ಉಪಯುಕ್ತವಾಗಿರುವ ಸನಾತನದ ವೈವಿಧ್ಯಮಯ ಗ್ರಂಥಮಾಲಿಕೆಗಳು

ಹಿಂದೂ ಧರ್ಮದಲ್ಲಿನ ಆಚಾರಗಳು (೨೮ ಗ್ರಂಥಗಳು)

  • ಧಾರ್ಮಿಕ ಕೃತಿಗಳು (೧೩ ಗ್ರಂಥಗಳು)
  • ದೇವತೆಗಳ ಉಪಾಸನೆ (೪೦ ಗ್ರಂಥಗಳು)
  • ನಾಮಜಪ-ಸಾಧನೆ (೪ ಗ್ರಂಥಗಳು)
  • ಸಾಧನೆ ಮತ್ತು ಭಾವಜಾಗೃತಿ (೬೬ ಗ್ರಂಥಗಳು)
  • ಗುರುಕೃಪಾಯೋಗ (೪ ಗ್ರಂಥಗಳು)
  • ಗುರು ಮತ್ತು ಶಿಷ್ಯ (೫ ಗ್ರಂಥಗಳು)
  • ಕರ್ಮಯೋಗ (೬ ಗ್ರಂಥಗಳು)
  • ಸಾತ್ತ್ವಿಕ ಕಲೆ (೫ ಗ್ರಂಥಗಳು)
  • ಭಾಷೆ (೧೦ ಗ್ರಂಥಗಳು)
  • ರಾಷ್ಟ್ರ ಮತ್ತು ಧರ್ಮ ರಕ್ಷಣೆ (೧೯ ಗ್ರಂಥಗಳು)
  • ಹಿಂದೂ  ರಾಷ್ಟ್ರದ ಸ್ಥಾಪನೆ (೭ ಗ್ರಂಥಗಳು)
  • ಹಿಂದೂ ಧರ್ಮ ಮತ್ತು ಧರ್ಮಗ್ರಂಥಗಳು (೧೧ ಗ್ರಂಥಗಳು)
  • ಸಂತರ ಚರಿತ್ರೆಗಳು ಮತ್ತು ಬೋಧನೆಗಳು (೫೮ ಗ್ರಂಥಗಳು)
  • ಬಾಲಸಂಸ್ಕಾರ (೮ ಗ್ರಂಥಗಳು)
  • ಮಕ್ಕಳ ಪಾಲನೆ-ಪೋಷಣೆ (೧೬ ಗ್ರಂಥಗಳು)
  • ಆಯುರ್ವೇದ (೩೩ ಗ್ರಂಥಗಳ
  • ಸ್ವಭಾವದೋಷ-ಅಹಂ ನಿರ್ಮೂಲನೆ (೧೧ ಗ್ರಂಥಗಳು)
  • ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಸಿದ್ಧತೆ ಮತ್ತು ಉಪಾಯಗಳು (೨೬ ಗ್ರಂಥಗಳು)

 

ಗ್ರಂಥಗಳ ಆನ್ ಲೈನ್ ಖರೀದಿಗಾಗಿ SanatanShop.com 

ಗ್ರಂಥಗಳನ್ನು ಪಡೆಯಲು ಸಂಪರ್ಕಿಸಿ : 9342599299

  • ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.
  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಇಲ್ಲಿ ಪ್ರಸಿದ್ಧಪಡಿಸಲಾದ ಅನುಭೂತಿಗಳು ಕೆಲವು ಬಾರಿ ಕೆಷ್ಟ ಶಕ್ತಿಗಳಿಂದ ಅಥವಾ ‘ಭಾವವಿದ್ದಲ್ಲಿ ದೇವ’ ಎಂಬ ಉಕ್ತಿಯಂತೆ ಸಾಧಕರಿಗೆ / ಸಂತರಿಗೆ / ಧರ್ಮಪ್ರೇಮಿಗಳಿಗೆ ಬಂದಿರುವ ವೈಯಕ್ತಿಕ ಅನುಭೂತಿಗಳಾಗಿವೆ. ಅವು ಎಲ್ಲರಿಗೂ ಬರುತ್ತವೆ ಎಂದೇನಿಲ್ಲ. - ಸಂಪಾದಕರು
  • ಸೂಕ್ಷ್ಮ-ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆ ಮಾಡುವವನಿಗೆ ಆಗುತ್ತದೆಯೋ, ಅದನ್ನು ‘ಸೂಕ್ಷ್ಮ-ಜಗತ್ತು’ ಎಂದು ಕರೆಯುತ್ತಾರೆ.