|
|
ಕರಾಚೀ (ಪಾಕಿಸ್ತಾನ) – ಇಬ್ಬರು ಮತಾಂಧರು ಇಲ್ಲಿನ ನಾರಾಯಣ ಪುರದಲ್ಲಿ ರಣಛೋಡ ಲಾಯಿನ ವಿಭಾಗದಲ್ಲಿ ಒಂದು ಹಿಂದೂ ದೇವಾಲಯದೊಳಗೆ ಪ್ರವೇಶಿಸಿ ಸುತ್ತಿಗೆಯಿಂದ ಶ್ರೀ ದುರ್ಗಾದೇವಿಯ ಎರಡು ಮೂರ್ತಿಗಳನ್ನು ಧ್ವಂಸ ಮಾಡಿದರು, ಹಾಗೂ ದೇವಾಲಯಕ್ಕೂ ಕೂಡ ಹಾನಿಯುಂಟು ಮಾಡಿದರು. ಹಿಂದೂಗಳು ಘಟನಾಸ್ಥಳದಲ್ಲಿಯೇ ಇಬ್ಬರು ಮತಾಂಧರ ಪೈಕಿ ಮಹಂಮದ ವಲಿದ ಎಂಬುವವನನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದರು. ಅವರ ವಿರುದ್ಧ ಈಶನಿಂದೆಯ ಅಪರಾಧವನ್ನು ನೋಂದಾಯಿಸಲಾಗಿದೆ. ಧ್ವಂಸ ಮಾಡಿದ ಮಾಹಿತಿ ಸಿಕ್ಕಿದ ತಕ್ಷಣ ಅಲ್ಲಿ ಒತ್ತಡದ ಸ್ಥಿತಿ ನಿರ್ಮಾಣವಾಯಿತು. ಧ್ವಂಸದ ಬಳಿಕ ಆಂದೋಲನ ನಡೆಸಲಾಯಿತು. ಹಿಂದೂಗಳು ದೋಷಿಗಳಿಗೂ ಗಲ್ಲು ಶಿಕ್ಷೆ ನೀಡಬೇಕು ಎಂಬ ಬೇಡಿಕೆ ಮಾಡಿದರು. ಆಗ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸು ಬಂದೋಬಸ್ತು ಮಾಡಲಾಯಿತು. ಈ ಘಟನೆಯ ಮೊದಲು ಕೆಲವು ವಾರಗಳ ಹಿಂದೆ ಸಿಂಧನಲ್ಲಿ ಒಂದು ದೇವಾಲಯವನ್ನು ಧ್ವಂಸ ಮಾಡಿ ಅಲ್ಲಿನ ಸಂಪತ್ತನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಲಾಯಿತು. ಪಾಕನಲ್ಲಿ ಕಳೆದ ೨೨ ತಿಂಗಳಿನಲ್ಲಿ ದೇವಾಲಯಗಳ ಮೇಲೆ ದಾಳಿಯಾದ ೯ನೇಯ ಘಟನೆ ಇದಾಗಿದೆ.
Pakistan: Hindu temple desecrated, idols destroyed in Karachi https://t.co/BCWsG2cUki
— OpIndia.com (@OpIndia_com) December 21, 2021
ಭಾಜಪದ ಮುಖಂಡರಾದ ಮನಜಿಂದರ ಸಿಂಹ ಸಿರಸಾರವರು ದೇವಾಲಯದ ಘಟನೆಯ ವ್ಹಿಡಿಯೋ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು ಹಾಗೂ ‘ಕರಾಚಿಯಲ್ಲಿ ದೇವಾಲಯಗಳ ಧ್ವಂಸ ಮಾಡಲಾಗಿದೆ. ‘ದೇವಾಲಯಗಳು ಪ್ರಾರ್ಥನಾಸ್ಥಳಗಳಾಗಲು ಪಾತ್ರವಿಲ್ಲ’, ಎಂದು ಹೇಳಿ ದಾಳಿ ಮಾಡಿದವರು ಧ್ವಂಸಕ್ಕೆ ಬೆಂಬಲಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ರಾಜ್ಯ-ಬೆಂಬಲಿತ ಉಗ್ರಗಾಮೀ ಕೃತ್ಯವಾಗಿದೆ.’ ಹಾಗೂ ಸಿರಸಾರವರು ವಿದೇಶಾಂಗ ಮಂತ್ರಿಗಳಾದ ಎಸ್. ಜಯಶಂಕರರಿಗೆ ಗಡಿಯ ಆಚೆಗೆ ಹಿಂದೂ ಹಾಗೂ ಸಿಕ್ಖರ ಧರ್ಮಸ್ವಾತಂತ್ರ್ಯಕ್ಕೆ ಬೆಂಬಲ ನೀಡಲು ಜಾಗತಿಕ ಮಟ್ಟದಲ್ಲಿ ಈ ಅಂಶಗಳನ್ನು ಉಪಸ್ಥಿತಗೊಳಿಸುವ ಬೇಡಿಕೆ ಮಾಡಿದ್ದಾರೆ.
Minorities in Pakistan are distressed with such continued attack on their faith while the Pak Govt chooses to stay mute over such harassment
I urge @DrSJaishankar Ji to raise this issue at global level to support the freedom of religion of Hindus/Sikhs across the border@ANI https://t.co/fZztRvEGED pic.twitter.com/LU7lAPZPRz
— Manjinder Singh Sirsa (@mssirsa) December 21, 2021
Another Hindu temple desecrated in Ranchore line, Karachi Pakistan
Attackers justified vandalism saying “ये इबादत के लायक नहीं है”
“Temple is unworthy of being a
place of worship”This is state backed terror against minorities of Pakistan @ANI @republic @ZeeNews @thetribunechd pic.twitter.com/GWxOVE96Hy
— Manjinder Singh Sirsa (@mssirsa) December 21, 2021
ಈ ಮೇಲಿನ ಚಿತ್ರ ಪ್ರಸಿದ್ಧಿ ಮಾಡುವ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೆ ನಿಜ ಸ್ಥಿತಿಯನ್ನು ತಿಳಿಸುವುದಾಗಿದೆ. |