ಪಾಕಿಸ್ತಾನವು ಅಫಗಾನಿಸ್ತಾನದ ಆಂತರಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬೇಡ ! – ಅಫಗಾನಿಸ್ತಾನದ ಮಾಜಿ ರಾಷ್ಟ್ರಪತಿ ಹಮಿದ ಕರಜಾಯಿ

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತು ಅಫಗಾನಿಸ್ತಾನದ ಮಾಜಿ ರಾಷ್ಟ್ರಪತಿ ಹಮೀದ ಕರಜಾಯಿ

ಕಾಬೂಲ್ (ಅಫಗಾನಿಸ್ತಾನ) – ಅಫಗಾನಿಸ್ತಾನದ ಆಂತರಿಕ ಸಮಸ್ಯೆಗಳ ವಿಷಯದಲ್ಲಿ ಪಾಕಿಸ್ತಾನವು ಹಸ್ತಕ್ಷೇಪ ಮಾಡುವುದು ಬೇಡ, ಹಾಗೂ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಅಫಗಾನಿಸ್ತಾನದ ಪ್ರತಿನಿಧಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಎಂದು ಅಫಗಾನಿಸ್ತಾನದ ಮಾಜಿ ರಾಷ್ಟ್ರಪತಿ ಹಮೀದ ಕರಜಾಯಿಯು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಇಮ್ರಾನ್ ಖಾನ್ ರವರು ಇಸ್ಲಾಮಿ ದೇಶಗಳ ಸಂಘಟನೆಯ ಸಭೆಯಲ್ಲಿ `ಒಂದುವೇಳೆ ಅಫಗಾನಿಸ್ತಾನದಲ್ಲಿ ತಾಲಿಬಾನಿನ ನೇತೃತ್ವದ ಸರಕಾರದ ಬಳಿ ಭಯೋತ್ಪಾದಕರೊಂದಿಗೆ ಹೋರಾಡಲು ಕ್ಷಮತೆಯಿಲ್ಲದಿದ್ದರೆ, ಇಸ್ಲಾಮಿಕ ಸ್ಟೇಟ ಒಂದು ಅಪಾಯವಾಗಿ ಎದುರಾಗಲಿದೆ. ಈಗ ಅಫಗಾನಿಸ್ತಾನವು ಅರಾಜಕತೆಯ ಕಡೆ ಹಜ್ಜೆ ಇಟ್ಟಿದೆ’, ಎಂದು ಹೇಳಿದ್ದರಿಂದ ಕರಜಾಯಿಯವರು ಖಾನರವರಿಗೆ ಎಚ್ಚರಿಕೆ ನೀಡಿದ್ದಾರೆ.

ಕರಜಾಯಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇಸ್ಲಾಮಿಕ ಸ್ಟೇಟ ಮೊದಲಿನಿಂದಲೂ ಪಾಕಿಸ್ತಾನದಿಂದ ಅಫಗಾನಿಸ್ತಾನಕ್ಕೆ ಬೆದರಿಕೆ ನೀಡುತ್ತಾ ಬಂದಿದೆ. ಈಗ ಅಫಗಾನಿಸ್ತಾನದ ವಿಷಯವಾಗಿ ಪಾಕಿಸ್ತಾನ ನೀಡಿದ ಹೇಳಿಕೆಯು ಕೇವಲ ಒಂದು ತೋರಿಕೆಯಷ್ಟೇ ಆಗಿದೆ. ಈ ರೀತಿ ಪಾಕಿಸ್ತಾನದ ಹೇಳಿಕೆಗಳು ಅಫಗಾನಿಸ್ತಾನದ ಜನರ ಅವಮಾನ ಮಾಡುವಂತಹದ್ದಾಗಿವೆ ಎಂದು ಹೇಳಿದ್ದಾರೆ.