೧. ಗಾಂಧಿಯವರನ್ನು ಅನುಕೂಲಕರವಾಗಿ ನೆನಪಿಸಿಕೊಳ್ಳುವ ಮೆಹಬೂಬಾ ಮುಫ್ತಿ !
‘ಈಗಿನ ಭಾರತವು ಗಾಂಧಿಯವರದ್ದಲ್ಲ, ನಾಥೂರಾಮ್ ಗೋಡ್ಸೆಯವರದ್ದಾಗಿದೆ. ಇಲ್ಲಿನ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
೨. ಅಮಾಯಕ ಹಿಂದೂಗಳಿಗೆ ಅಂತಹ ನಷ್ಟಪರಿಹಾರ ಏಕೆ ಸಿಗುವುದಿಲ್ಲ ?
ಮಧುರೈ (ತಮಿಳುನಾಡು) ಇಲ್ಲಿಯ ರಾ.ಸ್ವ. ಸಂಘದ ಕಚೇರಿಯಲ್ಲಿ ಗೋವಿನ ತಲೆ ಎಸೆದ ಆರೋಪದ ಮೇಲೆ ಬಂಧಿತ ನಾಲ್ವರು ಮುಸಲ್ಮಾನ ಯುವಕರಿಗೆ ತಲಾ ೧ ಲಕ್ಷ ರೂಪಾಯಿ ನಷ್ಟಪರಿಹಾರ ನೀಡುವಂತೆ ತಮಿಳುನಾಡು ರಾಜ್ಯ ಮಾನವಹಕ್ಕುಗಳ ಆಯೋಗವು ಆದೇಶಿಸಿದೆ.
೩. ಸುಳ್ಳು ಇತಿಹಾಸ ಹೇಳುವ ಇಂತಹವರನ್ನು ಜೈಲಿಗೆ ಹಾಕಬೇಕು !
‘ಮೊಘಲ್ ದೊರೆಗಳು ಸಹ ದೇವಾಲಯಗಳು ಮತ್ತು ಅರ್ಚಕರಿಗೆ ಭೂಮಿಯನ್ನು ದಾನ ಮಾಡಿದ್ದರು. ಅವುಗಳಲ್ಲಿ ಕಾಮಾಖ್ಯಾ ದೇವಾಲಯವೂ ಒಂದಾಗಿದೆ’ ಎಂದು ಅಸ್ಸಾಂನ ‘ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ನ ಶಾಸಕ ಅಮಿನುಲ್ ಇಸ್ಲಾಂ ಹೇಳಿದ್ದಾರೆ.
೪. ಚೀನಾಗೆ ಇಂತಹ ಪಾಠ ಕಲಿಸುವುದು ಯೋಗ್ಯ !
ಶ್ರೀಲಂಕಾ ಸರಕಾರವು ಚೀನಾದ ರಸಗೊಬ್ಬರ ಕಂಪನಿಯಿಂದ ಆಮದು ಮಾಡಿಕೊಂಡ ೨೦ ಸಾವಿರ ಟನ್ ಸರಕುಗಳನ್ನು ಕಳಪೆ ಗುಣಮಟ್ಟದ್ದಾಗಿದೆ ಎಂದು ಹೇಳಿ ಅರ್ಧ ದಾರಿಯಿಂದಲೇ ಹಿಂದಿರುಗಿಸಿದೆ.
೫. ಸರಕಾರವು ಹಿಂದೂಗಳಿಗೆ ಅನುಮತಿ ನೀಡಬೇಕು !
ಅಖಿಲ ಭಾರತ ಹಿಂದೂ ಮಹಾಸಭೆಯು ಡಿಸೆಂಬರ್ ೧೦ ರಂದು ಮಥುರಾದ (ಉತ್ತರಪ್ರದೇಶ) ಶ್ರೀಕೃಷ್ಣ ಜನ್ಮಭೂಮಿಯ ಈದ್ಗಾ ಪರಿಸರದಲ್ಲಿ ಭಗವಾನ ಶ್ರೀಕೃಷ್ಣನ ಆರತಿಯನ್ನು ಮಾಡಲು ಜಿಲ್ಲಾಧಿಕಾರಿಯಿಂದ ಅನುಮತಿ ಕೋರಿತ್ತು; ಆದರೆ ಆಡಳಿತವು ಅದನ್ನು ನಿರಾಕರಿಸಿದೆ.
೬. ವಂದೇ ಮಾತರಂ ಅನ್ನು ವಿರೋಧಿಸುವವರು ದೇಶಕ್ಕೆ ನಿಷ್ಠರಾಗಿರುವರೇ ?
ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನವು ರಾಷ್ಟ್ರಗೀತೆ ‘ವಂದೇ ಮಾತರಂ’ನೊಂದಿಗೆ ಮುಕ್ತಾಯಗೊಂಡಿದ್ದರಿಂದ, ಅಸದುದ್ದೀನ ಓವೈಸಿಯವರ ಎಮ್‌ಐಎಮ್ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
೭. ಪಾಕಿಸ್ತಾನದ ಹಿಂದೂದ್ವೇಷವನ್ನು ಯಾವಾಗ ವಿರೋಧಿಸುತ್ತೀರಿ ?
ಪಾಕಿಸ್ತಾನದ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು, ‘ಪಾಕಿಸ್ತಾನದ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಹಿಂದೂದ್ವೇಷವನ್ನು ಕಲಿಸಲಾಗುತ್ತಿದೆ. ನನ್ನ ಮಗನು ನನಗೆ ‘ನಾವು ಸಿಂಧ್‌ನಲ್ಲಿ ವಾಸಿಸುತ್ತಿರುವಾಗ ನಾವು ಹಿಂದೂಗಳನ್ನು ಏಕೆ ಕೊಲ್ಲುತ್ತಿಲ್ಲ ? ಎಂದು ಪ್ರಶ್ನಿಸಿದ್ದನು’, ಎಂದರು.