‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !
‘ದತ್ತಾತ್ರೆಯ’ನ ಎಲ್ಲ ತೀರ್ಥಕ್ಷೇತ್ರಗಳು ಅತ್ಯಂತ ಜಾಗೃತ ತೀರ್ಥಕ್ಷೇತ್ರಗಳಾಗಿವೆ. ಈ ತೀರ್ಥಕ್ಷೇತ್ರಗಳಿಗೆ ಹೋದಾಗ ಭಕ್ತರಿಗೆ ಅಲ್ಲಿನ ಚೈತನ್ಯದ ಅನುಭೂತಿ ಬರುತ್ತದೆ. ಶ್ರೀ ಕ್ಷೇತ್ರ ನೃಸಿಂಹವಾಡಿ (ನರಸೋಬಾನ ವಾಡಿ) ಇದು ಮಹಾರಾಷ್ಟ್ರದಲ್ಲಿನ ಅತ್ಯಂತ ಜಾಗೃತ ದತ್ತ ಕ್ಷೇತ್ರವಾಗಿದೆ. ದತ್ತಾವತಾರ ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ೧೨ ವರ್ಷಗಳ ಕಾಲ ವಾಸವಾಗಿದ್ದರು. ಅಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮವಿದೆ. ಪ್ರಸ್ತುತ ಕಲಿಯುಗದಲ್ಲಿ ಅನೇಕ ಕುಟುಂಬದವರಿಗೆ ಅತೃಪ್ತ ಪೂರ್ವಜರಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುತ್ತವೆ. ಪೂರ್ವಜರ ತೊಂದರೆಗಳನ್ನು ದೂರಗೊಳಿಸಲು ‘ಶ್ರೀ ಗುರುದೇವ ದತ್ತ|’ ಈ ನಾಮಜಪವನ್ನು ಮಾಡಬೇಕಾಗುತ್ತದೆ. ಹಾಗೆಯೇ ದತ್ತನ ತೀರ್ಥಕ್ಷೇತ್ರಗಳಿಗೆ ಹೋದರೂ ಅಲ್ಲಿನ ಚೈತನ್ಯದಿಂದ ವ್ಯಕ್ತಿಗೆ ಪೂರ್ವಜರಿಂದಾಗುವ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ. ತೀರ್ಥಕ್ಷೇತ್ರಗಳಲ್ಲಿನ ಚೈತನ್ಯದಿಂದ ಅಲ್ಲಿನ ವಾತಾವರಣದ ಮೇಲೆಯೂ ಪರಿಣಾಮವಾಗುತ್ತದೆ. ಶ್ರೀ ಕ್ಷೇತ್ರ ನೃಸಿಂಹವಾಡಿಯಲ್ಲಿನ ಮಣ್ಣು ಮತ್ತು ಕೃಷ್ಣಾ ನದಿಯ ನೀರಿನ ಮೇಲೆ ಅಲ್ಲಿನ ಚೈತನ್ಯದಿಂದ ಆಗಿರುವ ಪರಿಣಾಮವನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಈ ಉಪಕರಣದ ಉಪಯೋಗವನ್ನು ಮಾಡಲಾಯಿತು. ಈ ಪರೀಕ್ಷಣೆಯ ಸ್ವರೂಪ, ಯು.ಟಿ.ಎಸ್. ಉಪಕರಣದಿಂದ ಮಾಡಿದ ಅಳತೆಗಳ ನೋಂದಣಿಗಳು ಮತ್ತು ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ಸ್ವರೂಪ
ಈ ಪರೀಕ್ಷಣೆಯಲ್ಲಿ ಶ್ರೀ ನೃಸಿಂಹವಾಡಿ ಕ್ಷೇತ್ರದಲ್ಲಿನ ಮಣ್ಣು ಮತ್ತು ಶ್ರೀ ಕ್ಷೇತ್ರದಲ್ಲಿನ ಕೃಷ್ಣಾ ನದಿಯ ನೀರು, ಹಾಗೆಯೇ ತುಲನೆಗಾಗಿ ಸಾಧಾರಣ ನೀರಿನ ಮಾದರಿಗಳನ್ನು ತೆಗೆದುಕೊಂಡು ‘ಯು.ಟಿ.ಎಸ್. ಉಪಕರಣದ ಮೂಲಕ ಮಾಡಿದ ಅವುಗಳ ಪ್ರಭಾವಲಯದ ಅಳತೆಗಳ ನೋಂದಣಿಯನ್ನು ಮಾಡಲಾಯಿತು. ಆ ಮೇಲೆ ಮಾಡಿದ ಎಲ್ಲ ನೋಂದಣಿಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.
೨. ಮಾಡಿದ ಅಳತೆಗಳ ನೋಂದಣಿಗಳು ಮತ್ತು ಅವುಗಳ ವಿವೇಚನೆ
ಅ. ನಕಾರಾತ್ಮಕ ಊರ್ಜೆಗಳ ಬಗ್ಗೆ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ
೨ ಅ ೧. ಸಾಮಾನ್ಯ ಮಣ್ಣಿನಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಗಳಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ಇತ್ತು ಮತ್ತು ಅದರ ಪ್ರಭಾವಲಯ ೧.೪೬ ಮೀಟರ್ ಇತ್ತು.
೨ ಅ ೨. ಶ್ರೀ ನೃಸಿಂಹವಾಡಿ ಕ್ಷೇತ್ರದಲ್ಲಿನ ಮಣ್ಣು ಹಾಗೆಯೇ ಸರ್ವಸಾಧಾರಣ ನೀರು ಮತ್ತು ಕ್ಷೇತ್ರದಲ್ಲಿನ ಕೃಷ್ಣಾ ನದಿಯ ನೀರಿನಲ್ಲಿ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳು ಕಂಡುಬರಲಿಲ್ಲ.
೨ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ
೨ ಆ ೧. ಸಾಧಾರಣ ಮಣ್ಣಿನಲ್ಲಿ ಸಕಾರಾತ್ಮಕ ಊರ್ಜೆ ಇರದಿರುವುದು; ಆದರೆ ಶ್ರೀ ನೃಸಿಂಹವಾಡಿ ಕ್ಷೇತ್ರದಲ್ಲಿನ ಮಣ್ಣಿನಲ್ಲಿ ಸಕಾರಾತ್ಮಕ ಊರ್ಜೆ ತುಂಬಾ ಪ್ರಮಾಣದಲ್ಲಿರುವುದು : ಎಲ್ಲ ವ್ಯಕ್ತಿ, ವಾಸ್ತುಗಳಲ್ಲಿ ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆ, ಎಂದೇನಿಲ್ಲ. ಸಾಮಾನ್ಯ ಮಣ್ಣಿನಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಕಂಡು ಬರಲಿಲ್ಲ. ತದ್ವಿರುದ್ಧ ಶ್ರೀ ನೃಸಿಂಹವಾಡಿ ಕ್ಷೇತ್ರದಲ್ಲಿನ ಮಣ್ಣಿನಲ್ಲಿ ಸಕಾರಾತ್ಮಕ ಊರ್ಜೆ ತುಂಬಾ ಪ್ರಮಾಣದಲ್ಲಿತ್ತು. ಅದರ ಪ್ರಭಾವಲಯವು ೩.೭೬ ಮೀಟರ್ ಇತ್ತು.
೨ ಆ ೨. ಸಾಮಾನ್ಯ ನೀರಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಮತ್ತು ಕ್ಷೇತ್ರದಲ್ಲಿನ ಕೃಷ್ಣಾ ನದಿಯ ನೀರಿನಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು : ಸಾಮಾನ್ಯ ನೀರಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು; ಆದರೆ ಅದರ ಪ್ರಭಾವಲಯವು ಅಳೆಯಲು ಬರುವಂತೆ ಇರಲಿಲ್ಲ (ಸಾಮಾನ್ಯ ನೀರಿನ ಸಂದರ್ಭದಲ್ಲಿ ‘ಯು.ಟಿ.’ ಸ್ಕ್ಯಾನರದ ಭುಜಗಳು ೯೦ ಅಂಶದ ಕೋನವನ್ನು ಮಾಡಿದವು. ಸ್ಕ್ಯಾನರದ ಭುಜಗಳು ೧೮೦ ಅಂಶ ಕೋನವನ್ನು ಮಾಡಿದರೇ ಮಾತ್ರ ಪ್ರಭಾವಲಯವನ್ನು ಅಳೆಯಲು ಬರುತ್ತದೆ.) ಕೃಷ್ಣಾ ನದಿಯ ನೀರಿನಲ್ಲಿ ಅಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿತ್ತು. ಅದರ ಪ್ರಭಾವಳಿಯು ೨.೮೦ ಮೀಟರ್ ಇತ್ತು.
೨ ಇ. ಒಟ್ಟು ಪ್ರಭಾವಲಯದ (ಟಿಪ್ಪಣಿ) ಸಂದರ್ಭದಲ್ಲಿ ಮಾಡಿದ ನೋಂದಣಿಗಳ ವಿವೇಚನೆ :
ಟಿಪ್ಪಣಿ – ಒಟ್ಟು ಪ್ರಭಾವಲಯ : ವ್ಯಕ್ತಿಯ ಬಗ್ಗೆ ಅವನ ಉಗುಳು, ಹಾಗೆಯೇ ವಸ್ತುವಿನ ಬಗ್ಗೆ ಅದರ ಧೂಳಿನ ಕಣಗಳು ಅಥವಾ ಅದರ ಸ್ವಲ್ಪ ಭಾಗವನ್ನು ‘ಮಾದರಿ’ ಎಂದು ಉಪಯೋಗಿಸಿ ಆ ವ್ಯಕ್ತಿಯ ಅಥವಾ ವಸ್ತುವಿನ ‘ಒಟ್ಟು ಪ್ರಭಾವಲಯವನ್ನು ಅಳೆಯುತ್ತಾರೆ. ಈ ಪ್ರಭಾವಲಯದಲ್ಲಿ ಆ ಘಟಕದ ಸಗುಣ ಮತ್ತು ನಿರ್ಗುಣ ಸ್ಪಂದನಗಳು ಒಟ್ಟಿಗಿರುತ್ತವೆ; ಆದುದರಿಂದ ಅದಕ್ಕೆ ಆ ಘಟಕದ ‘ಒಟ್ಟು ಪ್ರಭಾವಲಯ’, ಎಂದು ಹೇಳುತ್ತಾರೆ.
೨ ಇ ೧. ಸಾಮಾನ್ಯ ಮಣ್ಣಿಗಿಂತ ಶ್ರೀ ನೃಸಿಂಹವಾಡಿ ಕ್ಷೇತ್ರದಲ್ಲಿನ ಮಣ್ಣಿನ ಒಟ್ಟು ಪ್ರಭಾವಲಯವು ತುಂಬಾ ಅಧಿಕ ಪ್ರಮಾಣದಲ್ಲಿರುವುದು : ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸುಮಾರು ೧ ಮೀಟರ್‌ನಷ್ಟು ಇರುತ್ತದೆ. ಸಾಮಾನ್ಯ ಮಣ್ಣಿನ ಒಟ್ಟು ಪ್ರಭಾವಲಯವು ೨.೦೨ ಮೀಟರ್ ಮತ್ತು ಶ್ರೀ ನೃಸಿಂಹವಾಡಿ ಕ್ಷೇತ್ರದ ಮಣ್ಣಿನ ಪ್ರಭಾವಲಯವು ೫.೧೮ ಮೀಟರ್‌ನಷ್ಟು ಇತ್ತು. ಇದರ ಅರ್ಥ ಸಾಮಾನ್ಯ ಮಣ್ಣಿಗಿಂತ ಶ್ರೀ ನೃಸಿಂಹವಾಡಿ ಕ್ಷೇತ್ರದಲ್ಲಿನ ಮಣ್ಣಿನ ಒಟ್ಟು ಪ್ರಭಾವಲಯವು ೩.೧೬ ಮೀಟರನಷ್ಟು ಹೆಚ್ಚಿತ್ತು.
೨ ಇ ೨. ಸಾಮಾನ್ಯ ನೀರಿಗಿಂತ ಕೃಷ್ಣಾ ನದಿಯ ನೀರಿನ ಒಟ್ಟು ಪ್ರಭಾವಲಯವು ಹೆಚ್ಚಿರುವುದು : ಸಾಮಾನ್ಯ ನೀರಿನ ಒಟ್ಟು ಪ್ರಭಾವಲಯ ೨.೩೯ ಮೀಟರ್‌ನಷ್ಟು, ಕೃಷ್ಣಾ ನದಿಯ ನೀರಿನ ಒಟ್ಟು ಪ್ರಭಾವಲಯವು ೩.೪೭ ಮೀಟರ್‌ನಷ್ಟು ಇತ್ತು. ಇದರ ಅರ್ಥ ಸಾಮಾನ್ಯ ನೀರಿಗಿಂತ ಕೃಷ್ಣಾ ನದಿಯ ನೀರಿನ ಒಟ್ಟು ಪ್ರಭಾವಲಯ ೧.೦೮ ಮೀಟರನಷ್ಟು ಹೆಚ್ಚಿತ್ತು.
೩. ನಿಷ್ಕರ್ಷ
ಈ ವೈಜ್ಞಾನಿಕ ಪರೀಕ್ಷಣೆಯಿಂದ ಶ್ರೀ ಕ್ಷೇತ್ರ ನೃಸಿಂಹವಾಡಿಯಲ್ಲಿನ ಮಣ್ಣು ಮತ್ತು ಕೃಷ್ಣಾ ನದಿಯ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿರುವುದು ಸ್ಪಷ್ಟವಾಯಿತು. ಕಲಿಯುಗದಲ್ಲಿ ಎಲ್ಲೆಡೆ ರಜ-ತಮದ ಪ್ರಭಾವ ಹೆಚ್ಚಿರುವುದರಿಂದ ಸಾಮಾನ್ಯ ವಸ್ತು ಅಥವಾ ವ್ಯಕ್ತಿಯಲ್ಲಿ ಸಕಾರಾತ್ಮಕ ಸ್ಪಂದನಗಳಿಗಿಂತ ನಕಾರಾತ್ಮಕ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ. ಇಂತಹ ಅನುಭವವೇ ಸಾಧಾರಣ ಮಣ್ಣಿನ ಬಗ್ಗೆ ಮಾಡಿದ ಪರೀಕ್ಷಣೆಯಿಂದ ಕಂಡುಬಂದಿತು. ಇಂದು ಭಾರತದಲ್ಲಿನ ಹೆಚ್ಚಿನ ಜಲಮೂಲಗಳು ಕಲುಷಿತಗೊಂಡಿವೆ. ದೇವತೆಗಳ ತೀರ್ಥಕ್ಷೇತ್ರಗಳಲ್ಲಿ ಈ ಚೈತನ್ಯದ ಸ್ರೋತವಿರುವುದರಿಂದ ಆ ಚೈತನ್ಯದ ಪರಿಣಾಮವು ಅಲ್ಲಿನ ಮಣ್ಣು, ಹಾಗೆಯೇ ನದಿಯ ಹರಿಯುವ ನೀರಿನ ಮೇಲೆಯೂ ಆಗುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. ತೀರ್ಥಕ್ಷೇತ್ರಗಳಲ್ಲಿನ ಚೈತನ್ಯವನ್ನು ಕಾಪಾಡಿಕೊಳ್ಳಲು, ಹಾಗೆಯೇ ಎಲ್ಲೆಡೆ ಚೈತನ್ಯವನ್ನು ನಿರ್ಮಾಣ ಮಾಡಲು ಕಲಿಯುಗದಲ್ಲಿ ಮನುಷ್ಯನು ಧರ್ಮಾಚರಣೆ ಮತ್ತು ಅದರ ಜೊತೆಗೆ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ.
– ಶ್ರೀ. ಅರುಣ ಡೊಂಗರೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೫.೧೨.೨೦೧೮)
ಈ-ಮೇಲ್ : [email protected]