ಚೀನಾದ ಸರಕಾರಿ ದಿನಪತ್ರಿಕೆ ‘ಗ್ಲೋಬಲ್ ಟೈಮ್ಸ್’ ವಿಷಕಕ್ಕಿದೆ !
ಇಂತಹ ಸುಳ್ಳು ಆರೋಪಗಳನ್ನು ಮಾಡಿ ಭಾರತೀಯ ಸೈನ್ಯ ಮತ್ತು ಭಾರತೀಯ ನಾಗರೀಕರ ಮಾನಸಿಕವಾಗಿ ತಗ್ಗಿಸುವ ಚೀನಾದ ಈ ಪ್ರಯತ್ನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಚೀನಾವು ಗಮನದಲ್ಲಿಡಬೇಕು !- ಸಂಪಾದಕರು
ಬೀಜಿಂಗ್ (ಚೀನಾ) – ಚೀನಾದ ಸರಕಾರಿ ಮುಖಪತ್ರವಾದ ‘ಗ್ಲೋಬಲ್ ಟೈಮ್ಸ್’ ಮತ್ತೊಮ್ಮೆ ಭಾರತದ ಮೂರೂ ಸೈನ್ಯ ದಳಗಳ ಪ್ರಮುಖರಾದ ಬಿಪಿನ ರಾವತರವರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತ್ಯುವಾದ ಪ್ರಕರಣದ ಬಗ್ಗೆ ಟೀಕಿಸಿದೆ. ‘ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ‘ಚೀಫ್ ಅಫ್ ಡಿಫೆನ್ಸ್ ಸ್ಟಾಫ್’ ನ (ಮೂರು ಸೈನ್ಯ ದಳಗಳ ಪ್ರಮುಖರ) ಮೃತ್ಯು ವು ಕೇವಲ ಭಾರತೀಯ ಸೈನ್ಯದ ಅಶಿಸ್ತು ಮತ್ತು ಯುದ್ಧದ ಸಿದ್ಧತೆಯ ಸ್ಥಿತಿಯನ್ನು ಮಾತ್ರ ದರ್ಶಿಸದೇ ಭಾರತೀಯ ಸೈನ್ಯದ ಆಧುನೀಕರಣದ ನಿಜವಾದ ಮುಖವನ್ನು ತೋರಿಸುತ್ತದೆ’ ಎಂದು ವಿಷಕಾರಿದೆ. ಇದೇ ಸಂದರ್ಭದಲ್ಲಿ ಈ ದೈನಿಕದ ಲೇಖನದಲ್ಲಿ ಬಿಪಿನ ರಾವತರವರನ್ನು ಚೀನಾವಿರೋಧಿ ಎಂದು ಉಲ್ಲೇಖಿಸಲಾಗಿದೆ. ‘ಚೀನಾ ಅಲ್ಲ’, ‘ಹಿಂದುಳಿಯುವಿಕೆ ‘ಯೇ ಭಾರತದ ಅತ್ಯಂತ ದೊಡ್ಡ ಶತ್ರುವಾಗಿದೆ, ಎಂದು ನಮೂದಿಸಲಾಗಿದೆ.
The death of India’s defense chief in a chopper crash on Wed. not only exposed the Indian military’s lack of discipline and combat preparedness, but also dealt a heavy blow to the country’s military modernization: Chinese expertshttps://t.co/4pZic8tNUs
— Global Times (@globaltimesnews) December 9, 2021
1. ಈ ಲೇಖನದಲ್ಲಿ ಮುಂದುವರಿದು ‘ಸದ್ಯದಲ್ಲಿ ನಡೆದ ಈ ದುರ್ಘಟನೆಯನ್ನು ತಡೆಯಬಹುದಾಗಿತ್ತು. ಉದಾಹರಣೆಗೆ, ಹವಾಮಾನದಲ್ಲಿ ಸುಧಾರಣೆಯಾಗುವವರೆಗೆ ಹಾರಾಟವನ್ನು ತಡೆದಿದ್ದರೆ, ವಿಮಾನ ಚಾಲಕರು ಹೆಚ್ಚು ಕಾಳಜಿಯಿಂದ ಮತ್ತು ಕುಶಲತೆಯಿಂದ ವಿಮಾನವನ್ನು ನಡೆಸಿದ್ದರೆ ಅಥವಾ ಹೆಲಿಕಾಪ್ಟರ್ ಕೆಲಸಗಾರರು ಯೋಗ್ಯ ಕಾಳಜಿಯನ್ನು ತೆಗೆದುಕೊಂಡಿದ್ದರೆ ಅಪಘಾತವನ್ನು ತಡೆಯಬಹುದಾಗಿತ್ತು’ಎಂದು ಹೇಳಿದೆ.
2. ಈ ಲೇಖನದಲ್ಲಿ ಓರ್ವ ತಜ್ಞರು ‘ಈ ಸಮಸ್ಯೆಯು ಸಂಪೂರ್ಣ ಭಾರತೀಯ ಸೈನ್ಯದ್ದಾಗಿದೆ. ಚೀನಾದ ಗಡಿಯಲ್ಲಿರುವ ಭಾರತೀಯ ಸೈನ್ಯವು ಯಾವಾಗಲೂ ಎಚ್ಚರಿಕೆ ನೀಡುವ ಕೆಲಸವನ್ನು ಮಾಡುತ್ತಿರುತ್ತದೆ. ನಿಜವಾದ ಯುದ್ಧ ನಡೆದರೆ ಚೀನಾ ಸೈನ್ಯದ ಎದುರು ಭಾರತಕ್ಕೆ ಯಾವುದೇ ಅವಕಾಶ ಸಿಗುವುದಿಲ್ಲ’ ಎಂದು ಹೇಳಿದ್ದಾರೆ.
3. ಓರ್ವ ಚೀನಾದ ತಜ್ಞರ ಸಂದರ್ಭವನ್ನು ನೀಡುತ್ತ, ಭಾರತೀಯ ಸೈನ್ಯದಲ್ಲಿ ಅಶಿಸ್ತು ಇದ್ದು ಅನೇಕ ಬಾರಿ ಭಾರತೀಯ ಸೈನ್ಯ ಪ್ರಕ್ರಿಯೆ ಮತ್ತು ನಿಯಮಗಳನ್ನು ಪಾಲಿಸುವುದಿಲ್ಲ. 2019 ರಲ್ಲಿ ಭಾರತೀಯ ವಿಮಾನಕ್ಕೆ ತಗುಲಿದ ಬೆಂಕಿ ಮತ್ತು 2013 ರಲ್ಲಿ ಭಾರತೀಯ ಜಲಾಂತರ್ಗಾಮಿಯಲ್ಲಿ ಆದಂತಹ ಸ್ಪೋಟ, ಎಲ್ಲವೂ ಮಾನವನ ತಪ್ಪುಗಳಿಂದಲೇ ಆಗಿದ್ದವು.
4. ಈ ಲೇಖನದಲ್ಲಿ ಬಿಪಿನ ರಾವತರವರ ನಿಧನದಿಂದ ಭಾರತೀಯ ಸೈನ್ಯದ ಆಧುನೀಕರಣದ ಯೋಜನೆಗೆ ದೊಡ್ಡ ಹಾನಿಯಾಗಿದೆ. ರಾವತ ಇವರ ನಿಧನದಿಂದಾಗಿ ಅಶಿಸ್ತಿನಿಂದ ಕೂಡಿದ ಸೈನ್ಯದ ಮೇಲಿನ ಸರಕಾರದ ನಿಯಂತ್ರಣವು ತಪ್ಪುವ ಸಾಧ್ಯತೆ ಇದೆ ಮತ್ತು ಗಡಿಯಲ್ಲಿನ ಸ್ಥಿತಿಯು ಕೈತಪ್ಪಿ ಹೋಗುವ ಸಾಧ್ಯತೆ ಇದೆ’ ಎಂದು ಹೇಳಲಾಗಿದೆ.