ಕುನ್ನೂರ(ತಮಿಳುನಾಡು) – ಇಲ್ಲಿಯ ಸೈನ್ಯದ ಹೆಲಿಕಾಪ್ಟರ್ ಅಪಘಾತದಲ್ಲಿ ೧೪ ಜನರಲ್ಲಿ ೧೩ ಜನರ ಮೃತ್ಯು ಸಂಭವಿಸಿದೆ. ಈ ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಶೇ. ೪೫ ರಷ್ಟು ಸುಟ್ಟಿರುವುದರಿಂದ ಅವರಿಗೆ ಇಲ್ಲಿಯ ವೆಲಿಂಗ್ಟನ್ ಸೈನ್ಯ ನೆಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ‘ವೆಂಟಿಲೇಟರ್’ನಲ್ಲಿ ಇರಿಸಲಾಗಿದೆ. ಅಲ್ಲಿಂದ ಅವರನ್ನು ಬೆಂಗಳೂರಿನ ವಾಯುದಳದ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ‘ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಇವರ ಪ್ರಾಣ ಉಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ’, ಎಂಬ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಸಂಸತ್ತಿನಲ್ಲಿ ನೀಡಿದರು. ಈ ಮೊದಲು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಹ ಇವರು ನಿಯಂತ್ರಣ ಕಳೆದುಕೊಂಡಿರುವ ವಿಮಾನವನ್ನು ಮತ್ತೆ ನಿಯಂತ್ರಣಕ್ಕೆ ಪಡೆದು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಕ್ಕಾಗಿ ಅವರಿಗೆ ಶೌರ್ಯಚಕ್ರದಿಂದ ಸನ್ಮಾನಿಸಲಾಗಿತ್ತು.
ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್!#HelicopterCrash #helicopter #choppercrash #TamilNadu #IAF #VarunSingh #IndiaNews #KannadaNews https://t.co/cle36OOEP2
— Asianet Suvarna News (@AsianetNewsSN) December 8, 2021