BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್‌ಗೆ ಕಳುಹಿಸಿದ ಭಾರತ !

ನವದೆಹಲಿ – ಭಾರತವು ಫಿಲಿಪೈನ್ಸ್‌ಗೆ ‘ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ’ಯನ್ನು ಪೂರೈಸಲು ಪ್ರಾರಂಭಿಸಿದೆ. 2022 ರಲ್ಲಿ, ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಪೂರೈಸಲು ಎರಡು ದೇಶಗಳ ನಡುವೆ 3 ಸಾವಿರ 132 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವಾಗಿತ್ತು. ಈ ಒಪ್ಪಂದದಂತೆ, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳ ಮೊದಲ (ಸೆಟ್)ಕಂತನ್ನು ಫಿಲಿಪೈನ್ಸಗೆ ಕಳುಹಿಸಲಾಗಿದೆ. ಭಾರತೀಯ ವಾಯುದಳ ಈ ಕ್ಷಿಪಣಿಯ ಜೊತೆಗೆ `ಸಿ-17 ಗ್ಲೋಬಮಾಸ್ಟರ್ ಕಾರ್ಗೊ 3 ವಿಮಾನವನ್ನೂ ಸಹ ಫಿಲಿಫೈನ್ಸಗೆ ಕಳುಹಿಸಿದೆ. ಈ ಕ್ಷಿಪಣಿಗಳನ್ನು ಫಿಲಿಫೈನ್ಸ `ಮರೀನ ಕಾರ್ಪ್ಸ’ ಗೆ ಒಪ್ಪಿಸಲಾಗುವುದು.

ದಕ್ಷಿಣ ಚೀನಾ ಸಮುದ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಘರ್ಷಣೆಯಿಂದ ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಫಿಲಿಫೈನ್ಸ ಈ ಕ್ಷಿಪಣಿಗಳನ್ನು ಪಡೆದುಕೊಂಡಿದೆ. ಫಿಲಿಫೈನ್ಸ ತನ್ನ ಕರಾವಳಿಯ ಭಾಗದಲ್ಲಿ ಬ್ರಹ್ಮೋಸ ಕ್ಷಿಪಣಿಗಳ ಪ್ರಣಾಲಿಯ 3 ಬ್ಯಾಟರಿಯನ್ನು ನಿಯೋಜಿಸಲಿದೆ ಮತ್ತು ಈ ಪ್ರದೇಶದ ಯಾವುದೇ ಅಪಾಯದಿಂದ ತನ್ನ ರಕ್ಷಣೆಯನ್ನು ಮಾಡಿಕೊಳ್ಳಲಿದೆ. ಬ್ರಹ್ಮೋಸ ಸೂಪರ್‌ಸಾನಿಕ್ ಕ್ರೂಝ ಕ್ಷಿಪಣಿಯು, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್.ಡಿ.ಒ) ಮತ್ತು ರಷ್ಯಾದ `ಎನ್.ಪಿ.ಓ.ಮಶಿನೊಸ್ಟ್ರೋಯೆನಿಯಾ’ ನಡುವಿನ ಜಂಟಿ ಯೋಜನೆಯಾಗಿದ್ದು, ಅದು ಜಗತ್ತಿನ ಅತ್ಯಂತ ಯಶಸ್ವಿ ಕ್ಷಿಪಣಿ ಯೋಜನೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಭಾರತದ ಸಂರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬ್ರಹ್ಮೋ ಸ ಪ್ರಮುಖ ಪಾತ್ರ ವಹಿಸಿದೆ.