ತುರ್ಬತ್ (ಪಾಕಿಸ್ತಾನ) – ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಸದಸ್ಯರು ಪಾಕಿಸ್ತಾನ ಸೇನೆಯ ಎರಡನೇ ಅತಿ ದೊಡ್ಡ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಿಸುವ ಮೂಲಕ ದಾಳಿ ಈ ನಡೆಸಲಾಯಿತು. ದಾಳಿಯ ನಂತರ ತುರ್ಬತ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಕಳೆದ ಒಂದು ವಾರದಲ್ಲಿ ಬಿ.ಎಲ್.ಎ.ಯ ಮಜೀದ್ ಬ್ರಿಗೇಡ್‌ನಿಂದ ನಡೆಸಲಾದ ಇದು ಎರಡನೇ ದಾಳಿಯಾಗಿದೆ. ಇದಕ್ಕೂ ಮುಂಚೆ ಪಾಕಿಸ್ತಾನದ ಗ್ವಾದರ್ ಬಂದರಿನ ಮೇಲೆ ದಾಳಿ ನಡೆಸಲಾಗಿತ್ತು.
‘Balochistan Liberation Army’ (#BLA) attacks #Pakistan‘s second largest #navalairbase.
Turbat (#Pakistan) – Rebels from B.L.A.’s Majeed Brigade carried out the attack by firing rounds, followed by bomb blasts.
A state of #emergency has been declared in Turbat. This is the… pic.twitter.com/x3OhLTWs7h
— Sanatan Prabhat (@SanatanPrabhat) March 26, 2024
ಚೀನಾದ ಡ್ರೋನ್‌ಗಳ ನೆಲೆ ಇದ್ದ ಸ್ಥಳದ ಮೇಲೆ ದಾಳಿ ನಡೆಸಿರುವುದಾಗಿ ಬಿ.ಎಲ್.ಎ.ಯು ಹೇಳಿಕೊಂಡಿದೆ. ಈ ದಾಳಿಯ ನಂತರ, ಪಾಕ್ ಸೇನೆಯು ಬಿ.ಎಲ್.ಎ.ಯ 6 ಸದಸ್ಯರನ್ನು ಕೊಂದಿರುವುದಾಗಿ ತಿಳಿಸಿದೆ. ಈ ದಾಳಿಯಿಂದ ವಾಯುಪಡೆಗೆ ಯಾವುದೇ ದೊಡ್ಡ ನಷ್ಟವಾಗಿಲ್ಲ ಎಂದು ಪಾಕ್ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಬಿ.ಎಲ್.ಎ.ಯು ತಮ್ಮ ದಾಳಿಯಲ್ಲಿ ಹಲವಾರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಹೇಳಿದೆ; ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.