IAF Chief Statement: ರಾಜಕೀಯ ಇಚ್ಛಾಶಕ್ತಿ ಇದ್ದರೆ, ಶತ್ರುಗಳ ಗಡಿಯೊಳಗೆ ನುಗ್ಗಿಯೂ ವಾಯುಪಡೆಯ ಶಕ್ತಿ ತೋರಿಸಬಹುದು !

ವಾಯುಪಡೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಇವರ ನೇರ ಮಾತು !

ನವ ದೆಹಲಿ – ರಾಜಕಿಯ ಇಚ್ಛಾಶಕ್ತಿ ಇದ್ದರೆ, ಶತ್ರುಗಳ ಗಡಿಯೊಳಗೆ ನುಗ್ಗಿ ವಾಯುಪಡೆಯ ಶಕ್ತಿ ತೋರಿಸಬಹುದು, ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ನಂತಹ ಕಾರ್ಯಾಚರಣೆಯಿಂದ ತೋರಿಸಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಹಾಗೂ ಏರ್ ಚೀಫ್ ಮಾರ್ಷಲ್ ವಿವೇಕ ರಾಮ ಚೌಧರಿ ಹೇಳಿದ್ದಾರೆ. ಅವರು ಇಲ್ಲಿ ಆಯೋಜಿಸಿದ್ದ ‘ಏರೋಸ್ಪೇಸ್ ಪವರ್ ಇನ್ ಫ್ಯೂಚರ್ ಕಾನ್ಪ್ಲಿಕ್ಟಸ್’ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ನಾವು ಆಕಾಶದ ಕೆಲವು ಭಾಗಗಳಲ್ಲಿ ನಮ್ಮದೇ ಅಸ್ತಿತ್ವ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕಾಗಿ ನಮ್ಮ ವಾಯುಪಡೆಯ ಶಕ್ತಿ ಪ್ರಮುಖ ಪಾತ್ರವಹಿಸುತ್ತದೆ. ವಾಯುಪಡೆಯು ರಾಷ್ಟ್ರೀಯ ಪರಾಕ್ರಮದ ಸಂಕೇತವಾಗಿ, ಶಾಂತಿ ಮತ್ತು ಸಹಕಾರದ ಸಾಧನ ಎಂದು ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದಲ್ಲಿಯ ಯುದ್ಧಗಳು ಹೆಚ್ಚು ಮಾರಣಾಂತಕವಾಗಿರುತ್ತದೆ ಮತ್ತು ಸಹಜವಾಗಿ ಪ್ರಸಾರಮಾಧ್ಯಮಗಳ ತೀವ್ರ ನೋಟದ ಅಡಿಯಲ್ಲಿ ನಡೆಯುತ್ತದೆ ಎಂದರು.