‘ದೇವಸ್ಥಾನಗಳ ಸರಕಾರಿಕರಣ : ಸರಕಾರದ ಲೂಟಿಯ ತಂತ್ರ’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದ !
ಕೊರೊನಾ ಕಾಲದಿಂದ ಮುಂಬಯಿಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದರ್ಶನಕ್ಕಾಗಿ ‘ಆನ್‌ಲೈನ್ ಆಪ್’ನಲ್ಲಿ ಬುಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಭಕ್ತರಿಗೆ ನೇರ ದರ್ಶನ ಸಿಗುತ್ತಿಲ್ಲ. ಭಕ್ತರು ಬುಕ್ಕಿಂಗ್‌ಗಾಗಿ ಆನ್‌ಲೈನ್ ಆಪ್.ಗೆ ಒಮ್ಮೆ ಹೋದರೆ, ಮೊದಲೇ ದರ್ಶನದ ಎಲ್ಲಾ ಪ್ರವೇಶದ ಪಾಸ್‌ಗಳನ್ನು ದೇವಾಲಯದ ಪ್ರದೇಶದ ಎಲ್ಲಾ ಅಂಗಡಿಯವರು ಅನೇಕ ನಕಲಿ ಖಾತೆಗಳನ್ನು ತೆರೆದು ಬುಕ್ ಮಾಡಿರುತ್ತಾರೆ. ಹೀಗಾಗಿ ಭಕ್ತರಿಗೆ ಪ್ರವೇಶ ಸಿಗುತ್ತಿಲ್ಲ. ಸ್ಥಳೀಯ ಅಂಗಡಿಯವರು ‘ನಾವು ನಿಮಗೆ ದರ್ಶನಕ್ಕಾಗಿ ಪಾಸ್ ನೀಡುತ್ತೇವೆ’ ಎಂದು ಹೇಳಿ ಸಿನಿಮಾ ಟಿಕೆಟ್‌ನಂತೆ ಬ್ಲಾಕ್ ಮಾರ್ಕೆಟಿಂಗ್ ಮಾಡುತ್ತಿದ್ದು ಪ್ರತಿ ಭಕ್ತರಿಂದ 200 ರಿಂದ 300 ರೂಪಾಯಿ ಲೂಟಿ ಮಾಡುತ್ತಿದ್ದಾರೆ. ಅಂಗಡಿಯವರು ಮಾತ್ರವಲ್ಲದೇ, ಆಡಳಿತ ಮಂಡಳಿಯ ಕೆಲವು ಸದಸ್ಯರು ಭಾಗಿಯಾಗಿದ್ದು ಇಬ್ಬರಿಗೆ 1500 ರೂಪಾಯಿಗಳನ್ನು ಬೇಡಿಕೆ ಮಾಡುತ್ತಿದ್ದಾರೆ. ಇದೀಗ ಪೊಲೀಸರು ದಾಳಿ ನಡೆಸಿ ಕೆಲವರ ವಿರುದ್ಧ ಕ್ರಮ ಕೈಗೊಂಡಿದ್ದರೂ ಅದು ಚಿಕ್ಕಪುಟ್ಟದ್ದಾಗಿದ್ದು, ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಇಂತಹ ಹಣ ಪಡೆದ ಎಲ್ಲ ಭಕ್ತರು ದೂರು ನೀಡಲು ಮುಂದಾಗಬೇಕು, ಎಂದು ಈ ಹಗರಣವನ್ನು ಬೆಳಕಿಗೆ ತಂದ ಮುಂಬಯಿಯ ಡಾ. ಅಮಿತ ಥಡಾನಿ ಇವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ದೇವಾಲಯಗಳ ಸರಕಾರಿಕರಣ : ಸರಕಾರದ ಲೂಟಿಯ ತಂತ್ರ’ ಈ ವಿಷಯದ ಕುರಿತು ಆಯೋಜಿಸಿದ್ದ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಬಿಹಾರದಲ್ಲಿ ದೇವಾಲಯಗಳ ಮೇಲಿನ ತೆರಿಗೆ ಹೇರುವ ಕಾನೂನು ಜಾರಿಯಾಗಲು ಬಿಡುವುದಿಲ್ಲ ! – ನ್ಯಾಯವಾದಿ ರಾಕೇಶ್ ದತ್ತ ಮಿಶ್ರ
ಬಿಹಾರದಲ್ಲಿ ಸರಕಾರಕ್ಕೆ ದೇವಾಲಯಗಳ ಭೂಮಿ ಕಾಣುತ್ತಿದೆ; ಆದರೆ ಚರ್ಚ್ ಮತ್ತು ಮಸೀದಿಯ ಭೂಮಿ ಕಾಣಿಸುತ್ತಿಲ್ಲ. ಬಿಹಾರದಲ್ಲಿ ಯಾವುದೇ ಅರ್ಚಕರಿಗೂ ಸರಕಾರಿ ವೇತನ ಸಿಗುತ್ತಿಲ್ಲ, ಆದರೆ ಒಬ್ಬ ಮೌಲ್ವಿಗೆ 10 ಸಾವಿರ ರೂಪಾಯಿ ಸಂಬಳ ಹೇಗೆ ನೀಡಲಾಗುತ್ತಿದೆ ? ಇದು ಸಂವಿಧಾನದಲ್ಲಿರುವ ಸಮಾನತೆಗೆ ವಿರುದ್ಧವಾಗಿದೆ. ದೇವಸ್ಥಾನಗಳಿಗೆ ಶೇ. 4 ರಷ್ಟು ತೆರಿಗೆ ವಿಧಿಸುವ ನಿರ್ಧಾರವನ್ನು ನಾವು ವಿರೋಧಿಸುತ್ತಿದ್ದು ಮಾ. ರಾಜ್ಯಪಾಲರಿಗೆ ಮನವಿ ನೀಡುತ್ತೇವೆ. ಯಾವುದೇ ಪರಿಸ್ಥಿತಿಯಲ್ಲಿಯೂ ಈ ಕಾನೂನು ಅನುಮೋದನೆಯಾಗಲು ಬಿಡುವುದಿಲ್ಲ, ಎಂದು ಬಿಹಾರದ ‘ಭಾರತೀಯ ಜನಕ್ರಾಂತಿ ದಳ’ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರಾಕೇಶ ದತ್ತ ಮಿಶ್ರ ಇವರು ಪ್ರತಿಪಾದಿಸಿದರು.
ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಮಾತನಾಡುತ್ತಾ, ಮುಂಬಯಿಯ ಸಿದ್ಧಿವಿನಾಯಕ ದೇವಾಲಯದಲ್ಲಿ ದರ್ಶನ ಟಿಕೆಟ್‌ನ ಕಪ್ಪು ಮಾರುಕಟ್ಟೆಗೆ ಸಂಬಂಧಿಸಿದಂತೆ ಸೈಬರ್ ಸೆಲ್‌ಗೆ ದೂರು ನೀಡಬೇಕು, ಜೊತೆಗೆ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಶ್ನಿಸಬಹುದು ಎಂದು ಹೇಳಿದರು. ಬಿಹಾರದಲ್ಲಿ ಕೇವಲ ದೇವಸ್ಥಾನಗಳಿಂದ ಶೇ. 4 ರಷ್ಟು ತೆರಿಗೆ ಹಾಗೂ ಇತರ ಪಂಥದವರಿಗೆ ವಿನಾಯಿತಿ ನೀಡುವುದು, ಇದು ಭಾರತೀಯ ಸಂವಿಧಾನದ 14 ಮತ್ತು 19 ನೇ ಕಲಮ್.ನ ಉಲ್ಲಂಘನೆಯಾಗಿದೆ. ಜಾತ್ಯತೀತ ಸರಕಾರದ ಕೆಲಸ ದೇವಸ್ಥಾನಗಳನ್ನು ನಡೆಸುವುದಲ್ಲ ಎಂದು ಹೇಳಿದರು.
ಈ ವೇಳೆ ದೇಶದಾದ್ಯಂತ ಸರಕಾರಿಕರಣಗೊಂಡಿರುವ ವಿವಿಧ ದೇವಾಲಯಗಳ ಭ್ರಷ್ಟಾಚಾರದ ಮಾಹಿತಿಯನ್ನು ನೀಡಿದ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಅವರು, ವಿವಿಧ ರಾಜ್ಯ ಸರಕಾರಗಳು ಹಿಂದೂ ದೇವಾಲಯಗಳನ್ನು ಲೂಟಿ ಮಾಡುತ್ತಿರುವುದು ಸ್ವಾತಂತ್ರ್ಯದ ನಂತರ ದೇಶದ ಅತಿದೊಡ್ಡ ಅನ್ಯಾಯವಾಗಿದೆ ! ಭ್ರಷ್ಟಾಚಾರ ಮಾಡುವ ಸರಕಾರಿ ಟ್ರಸ್ಟಿಗಳ ನಿಜವಾದ ಸ್ಥಳ ಸೆರೆಮನೆಯಲ್ಲಿದೆ. ಅದಕ್ಕಾಗಿ ಡಾ. ಥಡಾನಿಯವರಂತೆ ಹಿಂದೂಗಳು ಹೋರಾಡಬೇಕು. ಉತ್ತರಾಖಂಡದಲ್ಲಿ ಹೇಗೆ ಅರ್ಚಕರು ಮತ್ತು ಹಿಂದುತ್ವವಾದಿ ಸಂಘಟನೆಗಳು ಒಟ್ಟಾಗಿ ಹೋರಾಡಿದ್ದರಿಂದ, ಅಲ್ಲಿನ ದೇವಾಲಯಗಳ ಸರಕಾರಿಕರಣವು ರದ್ದಾಯಿತೋ ಅದೇ ರೀತಿ ದೇಶದಾದ್ಯಂತ ಹಿಂದೂಗಳು ಒಗ್ಗೂಡಿದಾಗ ಹೀಗೆ ಸಂಭವಿಸಬಹುದು ಎಂದು ಹೇಳಿದರು.