ಮಾನವೀ ಬುದ್ಧಿ ಮತ್ತು ಪಾರಮಾರ್ಥಿಕ ಸತ್ಯ !

ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ಇವರು ‘ಐಐಟಿ’, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ ಅಧ್ಯಾಪಕರೆಂದು ಕಾರ್ಯನಿರತರಾಗಿದ್ದರು ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಮುಂತಾದ ವಿಷಯಗಳ ೧೧ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಅವುಗಳಲ್ಲಿನ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಎಂಬ ಹಿಂದಿ ಭಾಷೆಯ ಗ್ರಂಥದ ಕೆಲವೊಂದು ಲೇಖನಗಳನ್ನು ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಸಾಪ್ತಾಹಿಕ ಸನಾತನ ಪ್ರಭಾತದ ೨೩/೧೦ ನೇ ಸಂಚಿಕೆಯಲ್ಲಿ ‘ಅನೇಕ ವಿಷಯಗಳ ಬಗ್ಗೆ ಬುದ್ಧಿಯಲ್ಲಿರುವ ಅಜ್ಞಾನ !’ ಈ ವಿಷಯದ ಮಾಹಿತಿಯನ್ನು ನೀಡಲಾಗಿತ್ತು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.  

(ಭಾಗ ೧೨)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/53774.html

೪೬. ಮಾನಸಿಕ ಭಾವನೆಗಳ ಪ್ರಾಬಲ್ಯ ಮತ್ತು ಅಯೋಗ್ಯ ಕೃತಿ

ಜೀವನದಲ್ಲಿ ‘ಇಂತಿಂತಹ ಒಂದು ಕಾರ್ಯವನ್ನು ಮಾಡುವುದು ಅಯೋಗ್ಯವಾಗಿದೆ’, ಎಂಬುದು ನಮಗೆ ತಿಳಿದಿರುತ್ತದೆ; ಆದರೂ ನಾವು ಮಾನಸಿಕ ಭಾವನೆಗಳ ಪ್ರಭಾವದಿಂದ ಆ ಕಾರ್ಯವನ್ನು ಮಾಡಲು ಮುಂದಾಗುತ್ತೇವೆ ಹಾಗೂ ಕೊನೆಗೆ ಆ ಅಯೋಗ್ಯ ಕೃತ್ಯವನ್ನು ಮಾಡಿ ಬಿಡುತ್ತೇವೆ.

ಜಗತ್ತಿನಲ್ಲಿ ಇತರ ವಿಷಯಗಳು ಉತ್ಪತ್ತಿಯಾದ ಬಳಿಕ ಮಾನವೀ ಬುದ್ಧಿಯ ಉತ್ಪತ್ತಿಯಾಗಿರುವುದರಿಂದ ಸೃಷ್ಟಿಯ ವಿಸ್ತಾರವಾಗುತ್ತಿದ್ದಾಗ ಮಾನವೀ ಬುದ್ಧಿಯು ಮೊದಲ ವಿಷಯವಾಗಿರಲಿಲ್ಲ.

ಸೃಷ್ಟಿಯು ಅವ್ಯಕ್ತ ಪ್ರಕೃತಿಯಿಂದ ಉತ್ಪತ್ತಿಯಾಗಿದೆ. ಸೃಷ್ಟಿಯ ಉತ್ಪತ್ತಿ ಮತ್ತು ಅದರ ವಿಸ್ತಾರದ ಪ್ರಕ್ರಿಯೆಯು ಸೂಕ್ಷ್ಮದಿಂದ ಸ್ಥೂಲದೆಡೆಗೆ ಆಗುತ್ತಾ ಹೋಯಿತು. ಸೃಷ್ಟಿಯಲ್ಲಿ ಭಿನ್ನ-ಭಿನ್ನ ವಿಷಯಗಳು ಉತ್ಪನ್ನವಾಗುವ ಕ್ರಮವನ್ನು ನೋಡಿದರೆ (ಸಾಂಖ್ಯ ದರ್ಶನ, ಸೂತ್ರ ೧/೨೬) ಮುಂದಿನ ವಿಷಯವು ಗಮನಕ್ಕೆ ಬರುತ್ತದೆ, ಕೆಲವು ಇತರ ವಿಷಯಗಳು ಉತ್ಪತ್ತಿಯಾದ ನಂತರ ಮಾನವನ ಬುದ್ಧಿಯು ಉತ್ಪತ್ತಿಯಾಗಿದೆ. ಹಾಗಾಗಿ ಸೃಷ್ಟಿಯ ಪ್ರಕ್ರಿಯೆಯಲ್ಲಿ ಬಂದು ಹೋಗುವಂತಹ ಅನೇಕ ವಿಷಯಗಳ ಹಿಂದಿನ ನಿಜವಾದ ಕಾರಣವನ್ನು ತಿಳಿದುಕೊಳ್ಳುವುದು ಮನುಷ್ಯನ ಬುದ್ಧಿಯ ಆಚೆಗಿನ ವಿಷಯವಾಗಿದೆ.

೪೮. ಪಾರಮಾರ್ಥಿಕ ಸತ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ

ಮೂರೂ ಕಾಲದಲ್ಲಿ (ಭೂತ, ವರ್ತಮಾನ ಮತ್ತು ಭವಿಷ್ಯ) ಯಾವ ವಸ್ತುವನ್ನು ವರ್ಣಿಸಲು ಸಾಧ್ಯವಾಗುವುದಿಲ್ಲವೋ, ಅದನ್ನು ಪಾರಮಾರ್ಥಿಕವೆಂದು ಹೇಳಲಾಗುತ್ತದೆ. ‘ಪಾರಮಾರ್ಥಿಕ’ ಈ ಶಬ್ದದ ಅರ್ಥವೆಂದರೆ ಪರಮಾರ್ಥಕ್ಕೆ ಸಂಬಂಧಿಸಿದ ವಿಷಯ ಎಂದಾಗಿದೆ. ಪರಮದ ಅರ್ಥವೆಂದರೆ ನಾಮ, ರೂಪ ಇತ್ಯಾದಿಗಳ ಆಚೆಗಿನ ಅಂದರೆ ವಿಶ್ವದ ಆಚೆಗಿನದ್ದಾಗಿರುತ್ತದೆ. ಕೆಲವು ಪಾರಮಾರ್ಥಿಕ ಪ್ರಶ್ನೆಗಳು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಮಹತ್ವಪೂರ್ಣವಾಗಿರುತ್ತವೆ; ಆದರೆ ಯಾವುದನ್ನು ತಿಳಿದುಕೊಳ್ಳಲು ಮನುಷ್ಯನ ಬುದ್ಧಿಯು ಅಸಮರ್ಥವಾಗಿದೆಯೋ, ಅಂತಹ ಪ್ರಶ್ನೆಗಳನ್ನು ಮುಂದೆ ಕೊಡಲಾಗಿದೆ.

೪೮ ಅ. ವಿಶ್ವಕ್ಕೆ ಸಂಬಂಧಿಸಿದ ಪಾರಮಾರ್ಥಿಕ ಪ್ರಶ್ನೆ : ವಿಶ್ವ ಏತಕ್ಕಾಗಿ ಇದೆ ? ಅದು ಎಲ್ಲಿಂದ ನಿರ್ಮಾಣವಾಗಿದೆ ? ಅದು ಎಲ್ಲಿಂದ ಬಂದಿದೆ ? ಅದು ಎಲ್ಲಿಗೆ ಹೋಗಲಿದೆ. ಸೃಷ್ಟಿ ಅಂದರೇನು ? ವಿಶ್ವದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಗ್ರಹ ಇತ್ಯಾದಿಗಳನ್ನು ನಡೆಸಲು ಇಷ್ಟು ನಿಪುಣ ಮತ್ತು ಸ್ಥಿರವಾದ ನಿಯಮಗಳನ್ನು ಯಾರು ಮಾಡಿದರು ? ಸಾಂಸಾರಿಕ ಪದಾರ್ಥಗಳಲ್ಲಿ ಗುಣಧರ್ಮವನ್ನು ಹಾಕಿದವರು ಯಾರು ? ಈ ವಿಶ್ವದ ಬುನಾದಿ ಯಾರು ? ಜಗತ್ತಿನಲ್ಲಿ ಇಷ್ಟು ಜ್ಞಾನ-ವಿಜ್ಞಾನಗಳು ಹೊರ ಬರುತ್ತವೆ, ಇವೆಲ್ಲವೂ ಶಿಸ್ತುಬದ್ಧವಾಗಿವೆ, ಇಷ್ಟು ಬುದ್ಧಿ ನಿರ್ಮಾಣ ವಾಗುತ್ತದೆ, ಇವೆಲ್ಲವು ಎಲ್ಲಿಂದ ಉಗಮವಾಗಿವೆ ? ಇತ್ಯಾದಿ

೪೮ ಆ. ಮನುಷ್ಯನಿಗೆ ಸಂಬಂಧಿಸಿದ ಪಾರಮಾರ್ಥಿಕ ಪ್ರಶ್ನೆ : ನಾನು ಯಾರು ? ಎಲ್ಲಿಂದ ಬಂದಿದ್ದೇನೆ ? ಎಲ್ಲಿಗೆ ಹೋಗು ತ್ತಿದ್ದೇನೆ ? ದುಃಖದಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳುವುದು ? ಈ ವಿಶ್ವದೊಂದಿಗೆ ನನಗಿರುವ ಸಂಬಂಧವೇನು ? ವಿಶ್ವಕ್ಕೆ ನನ್ನೊಂದಿಗಿರುವ ಸಂಬಂಧವೇನು ? ನನ್ನ ಜೀವನವು ಎಲ್ಲಿಂದ ಹಾಗೂ ಹೇಗೆ ಸಂಚಲನವಾಗುತ್ತದೆ ? ಈ ಅನಂತ ಜೀವಗಳು ಯಾರ ನಿಯಂತ್ರಣದಲ್ಲಿ ಬಂಧಿಸಲ್ಪಟ್ಟು ಸುಖ-ದುಃಖವನ್ನು ಭೋಗಿಸುತ್ತಿದೆ ? ಇತ್ಯಾದಿ.

೪೮ ಇ. ಈಶ್ವರನಿಗೆ ಸಂಬಂಧಿಸಿದ ಪಾರಮಾರ್ಥಿಕ ಪ್ರಶ್ನೆ : ಈಶ್ವರ ಅಥವಾ ಪರಮಾತ್ಮ ಎಂದರೇನು ? ಪರಮಾತ್ಮನ ಪ್ರಾಪ್ತಿಯಾಗಬಹುದೇ ? ಪರಮಾತ್ಮನಿಗೆ ಈ ವಿಶ್ವದೊಂದಿಗಿರುವ ಸಂಬಂಧವೇನು ? ವಿಶ್ವಕ್ಕೆ ಪರಮಾತ್ಮನೊಂದಿಗೆ ಏನು ಸಂಬಂಧವಿದೆ. ಪರಮಾತ್ಮನಿಗೆ ಮನುಷ್ಯನೊಂದಿಗಿರುವ ಸಂಬಂಧವೇನು ? ಮನುಷ್ಯನಿಗೆ ಪರಮಾತ್ಮನೊಂದಿಗಿರುವ ಸಂಬಂಧವೇನು ? ಇತ್ಯಾದಿ

(ಮುಂದುವರಿಯುವುದು)

– ಪೂ. ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಭ್ಯಾಸಕರು (ಆಧಾರ : ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?)