ತಾವು ಸ್ವತಃ ಭಗವಂತಸ್ವರೂಪರಾಗಿದ್ದರೂ ಕೃತಜ್ಞತಾಭಾವದಿಂದ, ಪರಿಪೂರ್ಣತೆಯಿಂದ ಮತ್ತು ಸಹಜಭಾವದಿಂದ ತಾಯಿ-ತಂದೆಯರ ಸೇವೆಯನ್ನು ಮಾಡಿ ಸಮಾಜದೆದುರು ಉತ್ತಮ ಸೇವೆಯ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !
‘೧೯೯೦ ನೇ ರಲ್ಲಿ ಮುಂಬಯಿಯಲ್ಲಿ ಸನಾತನ ಸಂಸ್ಥೆಯ ಕಾರ್ಯವು ಆರಂಭವಾಯಿತು. ಅಂದಿನಿಂದ ನಾವು ಕೆಲವು ಸಾಧಕರು ಪ.ಪೂ. ಡಾಕ್ಟರರ ಮನೆಗೆ ಹೋಗಿ ಬಂದು ಸೇವೆ ಮಾಡತೊಡಗಿದೆವು. ಆ ಸಮಯದಲ್ಲಿ ಪ.ಪೂ. ಡಾಕ್ಟರರ ತಾಯಿ-ತಂದೆಯವರು ಅವರೊಂದಿಗೆ ವಾಸಿಸುತ್ತಿದ್ದರು. ನಾವೆಲ್ಲ ಸಾಧಕರು ಅವರನ್ನು ಪ.ಪೂ. ಡಾಕ್ಟರರು ಕರೆಯುತ್ತಿದ್ದ ಹಾಗೆ ‘ತಾಯಿ’ ಮತ್ತು ‘ದಾದಾ’ ಎಂದು ಸಂಬೋಧಿಸುತ್ತಿದ್ದೆವು. ಅವರಿಬ್ಬರೂ ಸಾಧಕರಾದ ನಮ್ಮೆಲ್ಲರನ್ನು ಬಹಳ ಪ್ರೀತಿಸುತ್ತಿದ್ದರು. ಅವರು ನಮ್ಮೊಂದಿಗೆ ತಮ್ಮದೇ ಕುಟುಂಬದ ಸದಸ್ಯರಂತೆ ವ್ಯವಹರಿಸುತ್ತಿದ್ದರು. ಸದ್ಯ ಸಮಾಜದಲ್ಲಿ ವಯಸ್ಸಾದ ತಂದೆ-ತಾಯಿಗಳು ಮಕ್ಕಳಿಗೆ ಬೇಡವಾಗುತ್ತಾರೆ. ಕೆಲವು ಜನರು ‘ನಿರುಪಯೋಗಿ ಜನರು ಬೇಡ’ ಎಂದು ಬೇರೆ ಮನೆ ಮಾಡಿ ವಾಸಿಸುತ್ತಾರೆ ಮತ್ತು ಇನ್ನು ಕೆಲವರು ಅವರನ್ನು ವೃದ್ಧಾಶ್ರಮದಲ್ಲಿ ಬಿಟ್ಟುಬರುತ್ತಾರೆ. ಯಾವ ತಾಯಿ-ತಂದೆಯರು ನಮ್ಮಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಮಾಡಿ ಸಮಾಜದಲ್ಲಿ ಕೀರ್ತಿ, ಯಶಸ್ಸು ದೊರಕಿಸಿ ಕೊಟ್ಟರೋ, ಅವರ ಬಗ್ಗೆ ಎಷ್ಟು ಈ ಕೃತಘ್ನತನ ? ‘ಇಂತಹ ಸಮಾಜಕ್ಕೆ ಯೋಗ್ಯ ದೃಷ್ಟಿಕೋನ ಸಿಗಬೇಕು’, ಎಂಬುದಕ್ಕಾಗಿ ಪ್ರತ್ಯಕ್ಷ ಭಗವಂತನು (ಪರಾತ್ಪರ ಗುರು ಡಾ. ಆಠವಲೆಯವರು) ತಮ್ಮ ತಾಯಿ-ತಂದೆಯರ ಸೇವೆಯನ್ನು ಹೇಗೆ ಮಾಡಿದರು ?’, ಎಂಬುದು ಮುಂದಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ ಮತ್ತು ‘ದೇವರ ಪ್ರತಿಯೊಂದು ಕೃತಿಯು ಎಷ್ಟು ಪರಿಪೂರ್ಣವಿರುತ್ತದೆ ?’, ಎಂದು ಸಹ ಕಲಿಯಲು ಸಿಗುತ್ತದೆ.
ಸೇವೆಯನ್ನು ಮಾಡುವಾಗ ಪ್ರತಿಯೊಂದು ಕೃತಿಗೆ ಭಕ್ತಿಮಾರ್ಗಕ್ಕನುಸಾರ ಭಾವದ ಮತ್ತು ಕರ್ಮಯೋಗಕ್ಕನುಸಾರ ಪರಿಪೂರ್ಣತೆಯನ್ನು ಜೋಡಿಸಿದರೆ ನಿಶ್ಚಿತವಾಗಿಯೂ ಆ ಕೃತಿಯು ಆಧ್ಯಾತ್ಮಿಕ ಸ್ತರದಲ್ಲಾಗುತ್ತದೆ; ಹೀಗಿರುವಾಗ ‘ಆ ಕೃತಿಯನ್ನು ಸಂತರಿಗಾಗಿ ಮಾಡಿದ್ದರೂ ಅಥವಾ ತಾಯಿ-ತಂದೆಯರಿಗಾಗಿ ಮಾಡಿದ್ದರೂ ಅದರ ಆಧ್ಯಾತ್ಮಿಕ ಲಾಭ ಸಿಕ್ಕಿಯೇ ಸಿಗುತ್ತದೆ !’ ಪ.ಪೂ. ಡಾಕ್ಟರರ ಕೃತಿಗಳಿಂದ ಇಂತಹ ಸರ್ವವ್ಯಾಪಕ ಸಮಷ್ಟಿಯ ದೃಷ್ಟಿಕೋನವು ಸಿಗುತ್ತದೆ. ಪ.ಪೂ. ಡಾಕ್ಟರರು ಮಾಡಿದ ತಮ್ಮ ತಾಯಿ-ತಂದೆಯ ಸೇವೆಯಿಂದ ಸಮಷ್ಟಿಗೆ ಬಹಳಷ್ಟು ಕಲಿಯಲು ಸಿಗುತ್ತದೆ. ಈ ಲೇಖನದಲ್ಲಿ ಪರಾತ್ಪರ ಗುರು ಡಾಕ್ಟರರ ಕಿರಿಯ ಸಹೋದರ ಡಾ. ವಿಲಾಸ ಆಠವಲೆಯವರು ‘ಪರಾತ್ಪರ ಗುರು ಡಾಕ್ಟರರು ತಾಯಿ-ತಂದೆಯ ಸೇವೆಯನ್ನು ಹೇಗೆ ಮಾಡಿದರು ?’ ಎಂಬ ಬಗ್ಗೆ ಹೇಳಿದ ಅಂಶಗಳನ್ನು ಮತ್ತು ಪರಾತ್ಪರ ಗುರು ಡಾಕ್ಟರರ ತಂದೆ-ತಾಯಿಯ ಸೇವೆಯಲ್ಲಿ ನಾನು ಅನುಭವಿಸಿದ ಅಂಶಗಳನ್ನು ಕೆಳಗೆ ನೀಡಿದ್ದೇನೆ.
– ಶ್ರೀ. ದಿನೇಶ ಶಿಂದೆ (ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ, ಗೋವಾ.
೧. ಉತ್ತಮ ಆರ್ಥಿಕ ಪರಿಸ್ಥಿತಿಯಿಲ್ಲದಿದ್ದರೂ ಪ.ಪೂ. ಬಾಳಾಜಿ ಆಠವಲೆಯವರು ಮತ್ತು ಪೂ. (ಸೌ.) ನಲಿನಿ ಆಠವಲೆ (ಪರಾತ್ಪರ ಗುರು ಡಾ. ಆಠವಲೆಯವರ ತಂದೆ-ತಾಯಿ) ಇವರು ರಜೆಯಲ್ಲಿ ಮಕ್ಕಳನ್ನು ಪರವೂರುಗಳಿಗೆ ಸುತ್ತಾಡಲು ಕರೆದುಕೊಂಡು ಹೋಗುವುದು ಮತ್ತು ಈ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸಿನಲ್ಲಿದ್ದ ನಿರಂತರ ಕೃತಜ್ಞತಾಭಾವ !
‘ವರ್ಷವಿಡಿ ನಾವೆಲ್ಲ ಸಹೋದರರು ಶಾಲೆಯ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದೆವು. ತೀರ್ಥರೂಪ ದಾದಾ (ಪ.ಪೂ. ಬಾಳಾಜಿ ಆಠವಲೆಯವರು, ಪರಾತ್ಪರ ಗುರು ಡಾ. ಆಠವಲೆಯವರ ತಂದೆ) ಶಾಲೆಯಲ್ಲಿ ಶಿಕ್ಷಕರಾದುದರಿಂದ ಅವರಿಗೆ ಪ್ರತಿದಿನ ಶಾಲೆಗೆ ಹೋಗಬೇಕಾಗುತ್ತಿತ್ತು. ಆದ್ದರಿಂದ ನಾವು ಕುಟುಂಬದವರು ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ; ಆದರೆ ಮೇ ತಿಂಗಳಿನಲ್ಲಿ ಶಾಲೆಗೆ ರಜೆ ಸಿಕ್ಕಿದಾಗ ತೀ. ದಾದಾ ಮತ್ತು ಪೂ. ತಾಯಿ (ಪೂ. (ಸೌ.) ನಲಿನಿ ಆಠವಲೆ, ಪರಾತ್ಪರ ಗುರು ಡಾ. ಆಠವಲೆಯವರ ತಾಯಿ) ಸಹೋದರರಾದ ನಮ್ಮೆಲ್ಲರನ್ನು ಪರವೂರುಗಳಿಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದರು. ಹೋಗುವಾಗ ನಾವು ಅಡುಗೆಯ ಎಲ್ಲ ಸಾಮಾನುಗಳನ್ನು ಜೊತೆಗೆ ತೆಗೆದುಕೊಂಡೇ ಹೋಗುತ್ತಿದ್ದೆವು. ‘ನಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರದಿದ್ದರೂ ತೀ. ದಾದಾ ಮತ್ತು ತಾಯಿಯವರು ನಮಗಾಗಿ ಇದೆಲ್ಲವನ್ನು ಮಾಡಿದರು’, ಎಂಬ ಕೃತಜ್ಞತಾ ಭಾವವು ಪ.ಪೂ. ಡಾಕ್ಟರರಲ್ಲಿ ಸತತವಾಗಿರುತ್ತಿತ್ತು.
೧ ಅ. ಪರಾತ್ಪರ ಗುರು ಡಾ. ಆಠವಲೆಯವರು ತಾಯಿತಂದೆಯವರನ್ನು ಇಂಗ್ಲೆಂಡ್‌ಗೆ ಕರೆಸಿಕೊಂಡು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವುದು ಮತ್ತು ಭಾರತಕ್ಕೆ ಹಿಂದಿರುಗಿದ ನಂತರವೂ ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡಿಸುವುದು
ಪ.ಪೂ. ಡಾಕ್ಟರರು ಇಂಗ್ಲೆಂಡ್‌ನಲ್ಲಿ ೭ ವರ್ಷಗಳ ಕಾಲ ವಾಸ್ತವ್ಯವಿದ್ದಾಗ ಅವರು ತೀ. ದಾದಾ ಮತ್ತು ಪೂ. ತಾಯಿಯವರನ್ನು ಕೆಲವು ದಿನಗಳ ಮಟ್ಟಿಗೆ ಅಲ್ಲಿಗೆ ಕರೆಸಿಕೊಂಡರು ಮತ್ತು ಅವರಿಗೆ ಯುರೋಪ್‌ನಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿದರು. ಪ.ಪೂ. ಡಾಕ್ಟರರು ಇಂಗ್ಲೆಂಡ್‌ನಿಂದ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಭಾರತಕ್ಕೆ ಹಿಂದಿರುಗಿ ಬಂದರು ಮತ್ತು ಅವರು ಮುಂಬಯಿಯಲ್ಲಿ ‘ಮಾನಸೋಪಚಾರ ತಜ್ಞ’ರೆಂದು ವ್ಯವಹಾರವನ್ನು ಆರಂಭಿಸಿದರು. ಪ್ರತಿ ಶನಿವಾರ ಮತ್ತು ರವಿವಾರ ಅವರ ಆಸ್ಪತ್ರೆಯ ರಜಾದಿನವಾಗಿರುತ್ತಿತ್ತು. ಆ ಸಮಯದಲ್ಲಿ ಅವರು ತಾಯಿ-ತಂದೆಯರನ್ನು ಚತುಷ್ಚಕ್ರ ವಾಹನದಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಮತ್ತು ದೇವರ ದರ್ಶನಕ್ಕಾಗಿ ಕರೆದುಕೊಂಡು ಹೋಗುತ್ತಿದ್ದರು. ಪ.ಪೂ. ಡಾಕ್ಟರರ ಈ ಕೃತಿಯಿಂದ ಅವರ ಮನಸ್ಸಿನಲ್ಲಿ ತಾಯಿ-ತಂದೆಯ ಬಗ್ಗೆ ಇರುವ ಕೃತಜ್ಞತಾಭಾವವು ಕಂಡು ಬರುತ್ತದೆ. ತಮಗಾಗಿ ಪೂ. ತಾಯಿ ಮತ್ತು ತೀ. ದಾದಾರವರು ಪಟ್ಟ ಕಷ್ಟವನ್ನು ಅವರ ಸ್ವತಃ ಅನುಭವಿಸಿದ್ದರು. ಅವರಿಗೆ ಸತತವಾಗಿ ಅದರ ಅರಿವಿರುತ್ತಿತ್ತು.
೨. ಒಬ್ಬ ಜ್ಯೋತಿಷಿಗಳು ‘ತಂದೆ-ತಾಯಿಯವರು ತಮ್ಮ ಕೊನೆಗಾಲದ ತನಕ ಪ.ಪೂ. ಡಾಕ್ಟರರ ಬಳಿಯೇ ಇರುವರು’ ಎಂದು ಹೇಳುವುದು
‘ನಾವೆಲ್ಲ ಸಹೋದರರು ಚಿಕ್ಕವರಿರುವಾಗ ತಂದೆತಾಯಿಯು ಒಬ್ಬ ಜ್ಯೋತಿಷಿಗಳ ಬಳಿ ಪ.ಪೂ. ಡಾಕ್ಟರರ ಜಾತಕವನ್ನು ತೋರಿಸಿದ್ದರು. ಅದನ್ನು ನೋಡಿ ಜ್ಯೋತಿಷಿಗಳು ‘ತಂದೆ-ತಾಯಿಯವರು ತಮ್ಮ ಕೊನೆಗಾಲದ ತನಕ ಪ.ಪೂ. ಡಾಕ್ಟರರ ಬಳಿಯೇ ಇರುವರು’ ಎಂದು ಹೇಳಿದರು. ಈಶ್ವರೀ ಆಯೋಜನೆಯಂತೆ ಪೂ.ತಾಯಿ ಮತ್ತು ತೀ. ದಾದಾರವರು ಕೊನೆಯ ತನಕ ಪ.ಪೂ. ಡಾಕ್ಟರರ ಬಳಿಯೇ ಇದ್ದರು.
೩. ಪ.ಪೂ. ಡಾಕ್ಟರರು ತಾಯಿ-ತಂದೆಯರನ್ನು ಶಾಶ್ವತವಾಗಿ ತಮ್ಮ ನಿವಾಸದಲ್ಲಿ ಇಟ್ಟುಕೊಳ್ಳುವುದು
೩ ಅ. ಎಲ್ಲ ಹಿರಿಯ ಸಹೋದರರು ಶಿಕ್ಷಣ ಮತ್ತು ವ್ಯವಹಾರದ ನಿಮಿತ್ತ ಬೇರೆ ಬೇರೆ ಸ್ಥಳಗಳಲ್ಲಿ ಇರುವುದು : ಪ.ಪೂ. ಡಾಕ್ಟರರು ಮುಂದಿನ ವೈದ್ಯಕೀಯ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೋದರು. ಅದರಂತೆ ಇತರ ಸಹೋದರರೂ ತಮ್ಮ ವ್ಯವಹಾರಕ್ಕಾಗಿ ಇತರ ಸ್ಥಳಗಳಿಗೆ ಹೋದರು ಮತ್ತು ಅಲ್ಲಿಯೇ ನೆಲೆಸಿ ತಮ್ಮ ವ್ಯವಹಾರದಲ್ಲಿ ನಿರತರಾದರು. ಆ ಕಾಲದಲ್ಲಿ ತೀರ್ಥಸ್ವರೂಪ ತಾಯಿಯವರು ಮತ್ತು ತೀರ್ಥಸ್ವರೂಪ ತಂದೆಯವರು ನಮ್ಮ ಹಳೆಯ ಮನೆ, ಅಂದರೆ ಗಿರಗಾವನಲ್ಲಿಯೇ ಇರುತ್ತಿದ್ದರು. ಅವರಿಗೂ ವಯಸ್ಸಾಗಿತ್ತು. ಆಗ ಕೇವಲ ನಾನೊಬ್ಬನೇ ತಾಯಿ-ತಂದೆಯವರೊಂದಿಗಿದ್ದು ಅವರ ಸೇವೆಯನ್ನು ಮಾಡುತ್ತಿದ್ದೆನು. ಪ.ಪೂ. ಡಾಕ್ಟರರು ಇಂಗ್ಲೆಂಡ್‌ನಿಂದ ಭಾರತಕ್ಕೆ ಹಿಂದಿರುಗಿದಾಗ ಅವರು ಶಿವ ಎಂಬಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸಿದರು ಮತ್ತು ಅವರು ಅಲ್ಲಿಯೇ ಇರತೊಡಗಿದರು.
೩ ಆ. ತಂದೆಯವರಿಗೆ ಎರಡನೇಯ ಬಾರಿ ಹೃದಯಾಘಾತವಾದಾಗ ಪರಾತ್ಪರ ಗುರು ಡಾಕ್ಟರರು ತಾಯಿ-ತಂದೆಯವರನ್ನು ಶಾಶ್ವತವಾಗಿ ತಮ್ಮ ನಿವಾಸಸ್ಥಳಕ್ಕೆ ವಾಸಿಸಲು ಕರೆದುಕೊಂಡು ಹೋಗುವುದು : ತೀರ್ಥಸ್ವರೂಪ ತಂದೆಯವರಿಗೆ ಮೊದಲ ಬಾರಿಗೆ ಹೃದಯಾಘಾತವಾಯಿತು. ಆಗ ಅವರನ್ನು ಶಿವ ಎಂಬಲ್ಲಿ ‘ಲೋಕಮಾನ್ಯ ತಿಲಕ’ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ.ಪೂ. ಡಾಕ್ಟರರು ಅವರ ಊಟ-ತಿಂಡಿ ಮತ್ತು ಇತರ ಎಲ್ಲ ವಿಷಯದ ವ್ಯವಸ್ಥೆಯನ್ನು ಮಾಡಿದರು. ತೀರ್ಥಸ್ವರೂಪ ತಂದೆಯವರು ಗುಣಮುಖರಾದಾಗ ಅವರು ಪುನಃ ಗಿರಗಾವಕ್ಕೆ ಹಿಂದಿರುಗಿದರು. ಕೆಲವು ದಿನಗಳ ನಂತರ ಅವರಿಗೆ ಎರಡನೇಯ ಬಾರಿ ಹೃದಯಾಘಾತವಾಯಿತು. ಆ ಸಮಯದಲ್ಲಿಯೂ ಅವರನ್ನು ಪುನಃ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ತೀರ್ಥಸ್ವರೂಪ ತಂದೆಯವರನ್ನು ವೈದ್ಯಕೀಯ ಪರೀಕ್ಷೆಗಾಗಿ ಪ್ರತಿ ಬಾರಿ ಗಿರಗಾವನಿಂದ ಶಿವಗೆ ಕರೆದುಕೊಂಡು ಬರಬೇಕಾಗುತ್ತಿತ್ತು. ಆದುದರಿಂದ ತಂದೆಯವರಿಗೆ ಬಹಳ ತೊಂದರೆಯಾಗುತ್ತಿತ್ತು. ಆಗ ಪ.ಪೂ. ಡಾಕ್ಟರರು, ‘ಗಿರಗಾವನ ಮನೆಯಲ್ಲಿ ವಿಲಾಸನು ಒಬ್ಬಂಟಿಯಾಗಿರುತ್ತಾನೆ. ಅವನು ಎಲ್ಲಿಯಾದರೂ ಹೊರಗೆ ಹೋದಾಗ ತಾಯಿಯವರಿಗೆ ಅಥವಾ ತೀ. ತಂದೆಯವರಿಗೆ ಏನಾದರೂ ಆದರೆ ಗೊತ್ತಾಗುವುದಿಲ್ಲ. ಅನೇಕ ವರ್ಷಗಳಿಂದ ವಿಲಾಸನು ಅವರ ಸೇವೆಯನ್ನು ಮಾಡುತ್ತಿದ್ದಾನೆ. ಈಗ ಅವನನ್ನು ಆ ಜವಾಬ್ದಾರಿಯಿಂದ ಬಿಡುಗಡೆ ಮಾಡಿ ತಾಯಿ-ತಂದೆಯರನ್ನು ನನ್ನ ಬಳಿಗೆ, ಅಂದರೆ ಶಿವದಲ್ಲಿರುವ ನಮ್ಮ ಮನೆಗೆ ಕರೆದುಕೊಂಡು ಬರಬೇಕು’, ಎಂದು ವಿಚಾರ ಮಾಡಿದರು. ಅನಂತರ ಪ.ಪೂ. ಡಾಕ್ಟರರು ತಾಯಿ-ತಂದೆಯರನ್ನು ಶಾಶ್ವತವಾಗಿ ಶಿವನಲ್ಲಿ ಇರಲು ಕರೆದುಕೊಂಡು ಹೋದರು ಮತ್ತು ಕೊನೆಯವರೆಗೆ ಮನಃಪೂರ್ವಕವಾಗಿ ಅವರ ಸೇವೆಯನ್ನು ಮಾಡಿದರು.
೪. ‘ತಾಯಿ-ತಂದೆಯರ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬ ಆದರ್ಶವನ್ನು ಹಾಕಿಕೊಡುವ ಪ.ಪೂ. ಡಾಕ್ಟರ್ !
೪ ಅ. ಪ.ಪೂ. ಡಾಕ್ಟರರು ತಾಯಿ-ತಂದೆಯರ ಸೇವೆಯನ್ನು ಸಹಜಭಾವದಲ್ಲಿ ಮಾಡುತ್ತಿದ್ದರು. ಅದಕ್ಕಾಗಿ ಅವರಿಗೆ ಯಾರು ಏನೂ ಕಲಿಸುವ ಪ್ರಸಂಗ ಬರಲಿಲ್ಲ.
೪ ಆ. ಅಧ್ಯಾತ್ಮಪ್ರಸಾರಕ್ಕಾಗಿ ಪರವೂರಿಗೆ ಹೋಗತೊಡಗಿದಾಗ ತಮ್ಮ ಅನುಪಸ್ಥಿತಿಯಲ್ಲಿ ತಾಯಿ-ತಂದೆಯರ ಕಾಳಜಿ ತೆಗೆದುಕೊಳ್ಳಲು ಸಾಧಕರನ್ನು ತಯಾರು ಮಾಡುವುದು : ಮುಂದೆ ‘ಅಧ್ಯಾತ್ಮ ಪ್ರಸಾರ ಮಾಡುವುದು’, ಇದು ಪ.ಪೂ. ಡಾಕ್ಟರರ ಧ್ಯೇಯವೇ ಆಗಿತ್ತು. ಆದುದರಿಂದ ಅನೇಕ ಬಾರಿ ಅವರಿಗೆ ಪರವೂರಿಗೆ ಹೋಗಬೇಕಾಗುತ್ತಿತ್ತು. ಆ ಕಾಲಾವಧಿಯಲ್ಲಿ ಪ.ಪೂ. ಡಾಕ್ಟರರು ಮನೆಯಲ್ಲಿಲ್ಲದಿರುವಾಗ ತಾಯಿ ಮತ್ತು ತೀ. ತಂದೆಯವರಿಗೆ ಯಾವುದೇ ಅಡಚಣೆ ಬರಬಾರದೆಂದು, ಪ.ಪೂ. ಡಾಕ್ಟರರು ಸಾಧಕರಿಗೆ ‘ಅವರ ಸೇವೆಯನ್ನು ಹೇಗೆ ಮಾಡಬೇಕು ?’, ಎಂದು ಕಲಿಸಿ ಸಿದ್ಧ ಮಾಡಿದರು. ಸಾಧಕರನ್ನು ಸಿದ್ಧ ಮಾಡಿದ ನಂತರವೂ ‘ಸಾಧಕರು ಅವರ ಸೇವೆಯನ್ನು ವ್ಯವಸ್ಥಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮಾಡುತ್ತಿರುವರಲ್ಲ ?’, ಎಂದು ಅವರು ಸತತವಾಗಿ ನೋಡುತ್ತಿದ್ದರು. ‘ಈಗ ಸಾಧಕರಿಗೆ ಕಲಿಸಿದ್ದೇನೆ. ಈಗ ನನ್ನ ಕರ್ತವ್ಯವು ಮುಗಿಯಿತು’, ಎಂದು ಅವರು ಎಂದಿಗೂ ಮಾಡಲಿಲ್ಲ. ಅವರು ತಾಯಿಯವರ ಮತ್ತು ತೀ. ತಂದೆಯವರ ಅಂತಿಮ ಸಮಯದ ತನಕ ಅವರ ಕಾಳಜಿಯನ್ನು ನಿರ್ವಹಿಸಿದರು.
೪. ಇ. ಪ.ಪೂ. ಡಾಕ್ಟರರು ಎಲ್ಲಿಯೇ ಹೊರಗೆ ಹೋದರೂ, ‘ತಾಯಿ-ತಂದೆಯ ಸೇವೆಯು ವ್ಯವಸ್ಥಿತವಾಗಿ ಆಗುತ್ತಿದೆಯಲ್ಲ ?’, ಎಂದು ಅವರು ವಿಚಾರಿಸಿಕೊಳ್ಳುವುದು : ‘ಅವರೆಲ್ಲಿಯಾದರೂ ಹೊರಗೆ ಹೋದರೆ ಅಥವಾ ಸಂತರು ಅಥವಾ ಪ.ಪೂ. ಭಕ್ತರಾಜ ಮಹಾರಾಜರ ಬಳಿಗೆ ಹೋದರೂ, ಅವರ ಗಮನ ತೀ. ತಂದೆಯವರು ಮತ್ತು ತಾಯಿಯವರ ಕಡೆಗಿರುತ್ತಿತ್ತು. ‘ಅವರದ್ದು ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆಯಲ್ಲ ?’, ಎಂದು ಅವರು ಅಲ್ಲಿಂದಲೇ ದೂರವಾಣಿ ಕರೆ ಮಾಡಿ ಕೇಳುತ್ತಿದ್ದರು.
– ಡಾ. ವಿಲಾಸ ಆಠವಲೆ (ಪರಾತ್ಪರ ಗುರು ಡಾ. ಆಠವಲೆಯವರ ಕಿರಿಯ ಸಹೋದರ) (೨೪.೮.೨೦೨೦)