ಕಾರ್ತಿಕ ಕೃಷ್ಣ ಪಕ್ಷ ನವಮಿಯಂದು (೨೮ ನವೆಂಬರ್ ೨೦೨೧) ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವವಿದೆ. ಆ ದಿನದ ನಿಮಿತ್ತದಲ್ಲಿ…
೧. ಪ.ಪೂ. ಭಕ್ತರಾಜ ಮಹಾರಾಜರು ಶಿಷ್ಯಾವಸ್ಥೆಯಲ್ಲಿ ತಳಮಳದಿಂದ ಮಾಡಿದ ಗುರುಸೇವೆ
ಶಿಷ್ಯಾವಸ್ಥೆಯಲ್ಲಿರುವಾಗ ‘ಗುರು’ ಮತ್ತು ಗುರುವಿನ ಸ್ಥಾನದಲ್ಲಿರುವಾಗ ‘ಭಕ್ತ’, ಇವೆರಡು ಶಬ್ದಗಳಲ್ಲಿಯೇ ಬಾಬಾರವರ ಇಡೀ ಜೀವನವೇ ವ್ಯಾಪಿಸಿದೆ. ಶಿಷ್ಯನಾಗಿರುವಾಗ ಗುರುಗಳು ಪಾದುಕೆ ಧರಿಸದೆ ಹೊರಗೆ ಹೊರಟಾಕ್ಷಣ ಅವರ ಪಾದುಕೆಗಳನ್ನು ಕಂಕುಳದಲ್ಲಿಟ್ಟುಕೊಂಡು ಅವರ ಹಿಂದೆ ಬರಿಗಾಲಿನಲ್ಲಿಯೇ ನಡೆಯುವುದು, ಭಜನೆಯ ಕಾರ್ಯಕ್ರಮದಲ್ಲಿ ‘ಗುರುಗಳು ನಿಲ್ಲಿಸಲು ಹೇಳಲಿಲ್ಲವೆಂದು’ ಸತತ ೮-೧೦ ಗಂಟೆಗಳ ಕಾಲ ಭಜನೆ ಹಾಡುವುದು, ಗುರುಗಳ ಮುಂದೆ ಗಂಟೆಗಟ್ಟಲೆ ಒಂದೇ ಕಾಲಿನಲ್ಲಿ ನಿಂತು ಭಜನೆ ಹಾಡುವುದು, ರಾತ್ರಿ ಗುರುಗಳು ಮಲಗುವ ಸಮಯದಲ್ಲಿ ಅವರು ‘ಸಾಕು’ ಎಂದು ಹೇಳುವ ತನಕ ಅಖಂಡವಾಗಿ ಅವರ ಕಾಲುಗಳನ್ನು ಒತ್ತುತ್ತಿರುವುದು, ಬಾಬಾರವರ ಇಂತಹ ಗುರುಸೇವೆಗೆ ಸರಿಸಾಟಿಯಿಲ್ಲ. ಬಾಬಾರವರು ಇಂತಹ ಗುರುಸೇವೆಯಿಂದ ಶಿಷ್ಯತ್ವದ ದೊಡ್ಡ ಆದರ್ಶವನ್ನೇ ನಮ್ಮೆಲ್ಲರ ಮುಂದಿಟ್ಟಿದ್ದಾರೆ.
೨. ಪ.ಪೂ. ಭಕ್ತರಾಜ ಮಹಾರಾಜರ ಜೀವನದ ತ್ರಿಸೂತ್ರಗಳು : ಭಜನೆ, ಭ್ರಮಣ ಮತ್ತು ಭಂಡಾರ !
೨ ಅ. ಭಜನೆ : ಪ.ಪೂ. ಬಾಬಾ ಹೇಳುತ್ತಿದ್ದರು, ‘ಭಜನೆಯೇ ನನ್ನ ಜೀವನವಾಗಿದೆ’. ಬಾಬಾರವರ ಭಜನೆಗಳ ವೈಶಿಷ್ಟ್ಯವೆಂದರೆ, ಇಂದು ಇಷ್ಟು ವರ್ಷಗಳ ನಂತರವೂ ಪ್ರತಿಯೊಬ್ಬ ಸಾಧಕನಿಗೂ ಪ್ರತಿಯೊಂದು ಪ್ರಸಂಗದಲ್ಲಿ ಆ ಭಜನೆಯಿಂದ ಅವನ ಸಾಧನೆಗಾಗಿ ಆವಶ್ಯಕವಿರುವ ಅರ್ಥದ ಅರಿವಾಗುತ್ತದೆ. ಅದಕ್ಕಾಗಿಯೇ ‘ಬಾಬಾರವರ ಭಜನೆಗಳು’ ಅಮೂಲ್ಯವಾದ ಪ್ರಸಾದದಂತಹ ಕೊಡುಗೆಯೇ ಆಗಿದೆ.
ಬಾಬಾರವರು ಭಜನೆಗಳ ಮೂಲಕ ಕೇವಲ ಭಕ್ತಿಯೋಗದ್ದಷ್ಟೇ ಅಲ್ಲದೇ ನಾಮಸಂಕೀರ್ತನಾಯೋಗ, ಕರ್ಮಯೋಗ, ಜ್ಞಾನಯೋಗ ಇತ್ಯಾದಿ ಸಾಧನಾಮಾರ್ಗಗಳ ಬೋಧನೆಯನ್ನೂ ನೀಡಿದರು. ‘ಪ.ಪೂ. ಬಾಬಾರವರ ಭಜನೆಗಳನ್ನು ಕೇವಲ ಕೇಳುವುದರಿಂದಲೇ ಅವುಗಳಲ್ಲಿನ ಚೈತನ್ಯದಿಂದ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾಗಿ ಅದು ಸಂಪೂರ್ಣ ದೂರವಾಗುತ್ತದೆ’, ಎಂಬುದನ್ನು ಅನೇಕ ಸಾಧಕರು ಅನುಭವಿಸಿದ್ದಾರೆ.
೨ ಆ. ಭ್ರಮಣ : ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಅನಾರೋಗ್ಯವಿದ್ದರೂ ಪ.ಪೂ. ಬಾಬಾ ಅನೇಕ ಕಿಲೋಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು. ಪ.ಪೂ. ಬಾಬಾರವರ ಈ ಚೈತನ್ಯ ದಾಯಕ ಒಡನಾಟವನ್ನು ಸ್ಮರಿಸುವಾಗ ಭಕ್ತರಿಗೆ ಇಂದಿಗೂ ರೋಮಾಂಚನವಾಗುತ್ತದೆ.
೨ ಇ. ಭಂಡಾರಾ (ದಾಸೋಹ) : ಒಮ್ಮೆ ಬಾಬಾರವರ ಗುರುಗಳು ಎಲ್ಲರಿಗೂ ಹೇಳಿದರು, “ನಾಳೆ ಇಲ್ಲಿ ದಿನೂವಿನ ಭಂಡಾರವಿದೆ’ (ಬಾಬಾರವರ ಪೂರ್ವಾಶ್ರಮದ ಹೆಸರು ‘ದಿನಕರ’ ಆದ್ದರಿಂದ ಅನೇಕ ಜನರು ಅವರನ್ನು ‘ದಿನೂ’ ಎಂದು ಕರೆಯುತ್ತಿದ್ದರು.) ಬಾಬಾ ಮನಸ್ಸಿನಲ್ಲಿಯೇ, ನನ್ನಲ್ಲಿ ಹಣವಿಲ್ಲ ಮತ್ತು ಮನೆಯಲ್ಲಿ ಭಂಡಾರಾಗೆ ಬೇಕಾಗುವ ಸಾಹಿತ್ಯಗಳೂ ಇಲ್ಲ. ಹೀಗಿರುವಾಗ ಭಂಡಾರಾ ಹೇಗಾಗುವುದು ?’, ಎಂದು ಹೇಳಿದರು. ಆದರೂ ಬಾಬಾರವರು ‘ಗುರುಗಳು ನೋಡಿಕೊಳ್ಳುವರು’, ಎಂದು ವಿಚಾರ ಮಾಡಿ ಭಂಡಾರಾವನ್ನು ಮಾಡಲು ನಿರ್ಧರಿಸಿದರು. ಗುರುಗಳು ಅನೇಕ ಜನರಿಗೆ ಭಂಡಾರಾದ ಆಮಂತ್ರಣವನ್ನು ನೀಡಿದರು. ನಂತರ ಗುರುಗಳ ಕೃಪೆಯಿಂದ ಭಂಡಾರಾಗೆ ಬೇಕಾಗುವ ಎಲ್ಲ ಸಾಹಿತ್ಯಗಳು ತನ್ನಿಂತಾನೇ ಸಂಗ್ರಹವಾದವು. ಭಂಡಾರಾದಲ್ಲಿ ಯಾವುದಕ್ಕೂ ಕಡಿಮೆಯಾಗಲಿಲ್ಲ. ಗುರುಗಳ ಪರೀಕ್ಷೆಯಲ್ಲಿ ಬಾಬಾ ಉತ್ತೀರ್ಣರಾದರು. ಮುಂದೆ ಬಾಬಾರವರಲ್ಲಿ ಹಣವಿಲ್ಲದಿದ್ದರೂ ಅನೇಕ ಭಂಡಾರಾಗಳನ್ನು ಮಾಡಿದರು ಹಾಗೂ ಭಕ್ತರಿಗೆ ಕಲಿಸಿದರು, ‘ಗುರುಗಳ ಮೇಲೆ ಅಚಲವಾದ ಶ್ರದ್ಧೆಯನ್ನಿಡಿ ಹಾಗೂ ಗುರುಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರಿ. ಆಮೇಲೆ ನೋಡಿರಿ, ಗುರುಗಳು ಕೃಪೆಯನ್ನು ಖಂಡಿತ ತೋರುವರು !’
೩. ಭಕ್ತರೊಂದಿಗೆ ಸಮರಸವಾಗಿರುವ ಪ.ಪೂ. ಭಕ್ತರಾಜ ಮಹಾರಾಜರು !
ಸಾಮಾನ್ಯವಾಗಿ ಹಿರಿಯ ಸಂತ-ಮಹಾತ್ಮರು ಜಪಜಾಪ್ಯ, ಧ್ಯಾನಧಾರಣೆ, ಸಮಾಧಿ ಇತ್ಯಾದಿಗಳಲ್ಲಿ ಮಗ್ನರಾಗಿರುತ್ತಾರೆ ಮತ್ತು ಕೆಲವೊಮ್ಮೆ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾರೆ. ಬಾಬಾರವರಿಗೆ ಮಾತ್ರ ಭಕ್ತರ ಹೊರತು ಸಮಾಧಾನವೆನಿಸುವುದಿಲ್ಲ, ಅಷ್ಟು ಅವರು ಭಕ್ತರೊಂದಿಗೆ ಸಮರಸ ಹೊಂದಿದ್ದರು.
೪. ಭಕ್ತರಿಗೆ ನಾನಾವಿಧಗಳಿಂದ ಕಲಿಸುವ ಪ.ಪೂ.ಭಕ್ತರಾಜ ಮಹಾರಾಜರು !
ಹೆಚ್ಚಿನ ಸಂತರು ಕೇವಲ ಮಾರ್ಗದರ್ಶನದ ಮೂಲಕ ಭಕ್ತರಿಗೆ ಕಲಿಸುತ್ತಾರೆ. ಬಾಬಾರವರು ಭಕ್ತರಿಗೆ ಕಲಿಸುವ ಅನೇಕ ಪದ್ಧತಿಗಳಿದ್ದವು. ಅವರು ಭಕ್ತರಿಗೆ ಮಾರ್ಗದರ್ಶನದ ಮೂಲಕವಂತೂ ಕಲಿಸುತ್ತಾರೆ, ಅದರ ಜೊತೆಯಲ್ಲಿ ಅವರು ಸಹಜವಾದ ನಡೆ-ನುಡಿಗಳಿಂದ, ಹಾಸ್ಯ ಮಾಡಿ, ಕೆಲವೊಮ್ಮೆ ಕೋಪಿಸಿಕೊಂಡು ಕೆಲವೊಮ್ಮೆ ಬೈದು ಕೂಡ ಕಲಿಸುತ್ತಿದ್ದರು. ಇಷ್ಟು ಮಾತ್ರವಲ್ಲ, ಭಕ್ತರು ತಪ್ಪು ಮಾಡಿದರೆ ಅವರ ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದರು. ಆದರೂ ಭಕ್ತರಿಗೆ ಅವರ ಕೋಪದಲ್ಲಿ ಪ್ರೇಮದ ಲೇಪನ ಮತ್ತು ಭಕ್ತರ ಕಲ್ಯಾಣದ ತಳಮಳದ ಅರಿವಾಗುತ್ತದೆ. ಅದಕ್ಕಾಗಿ ಇಂದು ಕೂಡ ಬಾಬಾರನ್ನು ಕೇವಲ ಸ್ಮರಣೆ ಮಾಡಿದರೂ ಭಕ್ತರ ನೇತ್ರ ಭಾವಾಶ್ರುವಿನಿಂದ ತುಂಬಿಕೊಳ್ಳುತ್ತದೆ.
೫. ಶ್ರೀ ಗುರುಚರಣದಲ್ಲಿ ಪ್ರಾರ್ಥನೆ !
‘ಶ್ರೀ ಗುರುಗಳ ಹಿರಿಮೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಆಗಿದೆ. ‘ಪ.ಪೂ. ಬಾಬಾರವರ ಕೃಪೆ ನಮ್ಮೆಲ್ಲರ ಮೇಲೆ ಹೀಗೆಯೇ ಅಖಂಡವಾಗಿರಲಿ ಹಾಗೂ ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಮಾಡಲು ಅವರು ನಮಗೆ ನಿರಂತರ ಶಕ್ತಿಯನ್ನು ನೀಡಲಿ’, ಎಂದು ಅವರ ಚರಣಗಳಲ್ಲಿ ಭಾವಪೂರ್ಣ ಪ್ರಾರ್ಥನೆ ಮಾಡುತ್ತೇನೆ ಮತ್ತು ನನ್ನ ವಾಣಿಗೆ ವಿರಾಮವನ್ನು ನೀಡುತ್ತೇನೆ’.
– ಪ.ಪೂ. ಭಕ್ತರಾಜರ ಶಿಷ್ಯ ಡಾ. ಜಯಂತ ಆಠವಲೆ
ಪ.ಪೂ. ಭಕ್ತರಾಜರ ಕೃಪೆಯ ಪ್ರತ್ಯಕ್ಷ ಸಾಕ್ಷಿಯನ್ನು ನೀಡುವ ವೈಶಿಷ್ಟ್ಯಪೂರ್ಣ ಘಟನೆಗಳುಇಂದು ಬಾಬಾ ದೇಹರೂಪದಲ್ಲಿ ಇಲ್ಲದಿದ್ದರೂ, ನಾವೆಲ್ಲರೂ ಬಾಬಾರವರ ಕೃಪೆಯ ಅನುಭವವನ್ನು ಅನುಭವಿಸುತ್ತಿದ್ದೇವೆ. ೧. ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿ ತನ್ನಷ್ಟಕ್ಕೆ ಆಗಿರುವ ಬದಲಾವಣೆ : ೨೦೦೬ ರಲ್ಲಿ ಸನಾತನದ ರಾಮನಾಥಿ ಆಶ್ರಮದ ನನ್ನ ಕೋಣೆಯಲ್ಲಿರುವ ದೇವರ ಮಂಟಪದಲ್ಲಿ ಬಾಬಾರವರ ಛಾಯಾಚಿತ್ರವನ್ನು ಇಡಲಾಗಿತ್ತು. ಆ ಛಾಯಾಚಿತ್ರದಲ್ಲಿ ಆಗಸ್ಟ್ ೨೦೧೦ ರಲ್ಲಿ ತನ್ನಿಂತಾನೆ ಬದಲಾವಣೆಯಾಯಿತು. ಆ ಛಾಯಾಚಿತ್ರದ ‘ಮುಖ ಬಿಳಿ-ಹಳದಿ ಮತ್ತು ಸ್ವಲ್ಪ ಅಸ್ಪಷ್ಟವಾಗುವುದು’, ಇದು ನಿರ್ಗುಣ ತತ್ತ್ವದ ಕಡೆಗೆ ಆಗುವ ಪ್ರಯಾಣವನ್ನು ತೋರಿಸುತ್ತದೆ, ‘ಪ್ರಭಾವಲಯ ಗಾಢ ಹಾಗೂ ಗುಲಾಬಿಯಾಗುವುದು’, ಇದು ಧರ್ಮಪ್ರಸಾರಕ್ಕಾಗಿ ಆವಶ್ಯಕವಿರುವ ಕಾರ್ಯಕಾರೀ ಶಕ್ತಿ ಪ್ರಕಟವಾಗಿರುವುದನ್ನು ತೋರಿಸುತ್ತದೆ. ೨. ಪ.ಪೂ. ಭಕ್ತರಾಜ ಮಹಾರಾಜರ ಪಾದುಕೆಗಳ ರೂಪದಲ್ಲಿ ರಾಮನಾಥಿ ಆಶ್ರಮಕ್ಕೆ ಆಗಮನ : ಗೋವಾದ ಪಣಜಿಯ ಪ.ಪೂ. ಬಾಬಾರವರ ಭಕ್ತರಾದ ಶ್ರೀಮತಿ ಸ್ಮಿತಾ ರಾವ್ ಇವರು ಏಪ್ರಿಲ್ ೨೦೧೯ ರಲ್ಲಿ ಅವರಲ್ಲಿರುವ ಪ.ಪೂ. ಬಾಬಾರವರ ಪಾದುಕೆಗಳನ್ನು ಅಂತಃಪ್ರೇರಣೆಯಿಂದ ರಾಮನಾಥಿ ಆಶ್ರಮದಲ್ಲಿಡಲು ನೀಡಿದರು. ‘ಪಾದುಕೆಗಳ ರೂಪದಲ್ಲಿ ಬಾಬಾರವರೆ ಬಂದರು’, ಎನ್ನುವ ಭಾವ ನಮ್ಮೆಲ್ಲರಲ್ಲಿದೆ. ಈ ಮೇಲಿನ ಘಟನೆಗಳಿಂದ ಪ.ಪೂ. ಬಾಬಾರವರು ನಮಗೆ ‘ನನ್ನ ಗಮನ ನಿಮ್ಮ ಮೇಲಿದೆ, ಚಿಂತೆ ಮಾಡಬೇಡಿ’, ಎಂದು ಹೇಳುತ್ತಿರುವ ಹಾಗಿದೆ. ೩. ದೇಶ-ವಿದೇಶಗಳಲ್ಲಿನ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ವಿಷಯದಲ್ಲಿ ಬರುವ ಅನುಭೂತಿ : ಭಾರತದಷ್ಟೇ ಅಲ್ಲ, ವಿದೇಶದ ಅನೇಕ ಜಿಜ್ಞಾಸುಗಳು ಮತ್ತು ಸಾಧಕರು ಬಾಬಾರವರನ್ನು ನೋಡಿಯೇ ಇಲ್ಲ, ಆದರೂ ಬಾಬಾರವರ ಛಾಯಾಚಿತ್ರವನ್ನು ನೋಡಿದಾಗ ಅವರ ಭಾವಜಾಗೃತವಾಗುತ್ತದೆ ಹಾಗೂ ಅವರಿಗೆ ಪ.ಪೂ. ಬಾಬಾರವರ ವಿಷಯದಲ್ಲಿ ಅನೇಕ ಅನುಭೂತಿಗಳು ಬರುತ್ತವೆ. |