ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಟ್ರಿಯಾದಲ್ಲಿ ಪುನಃ ಸಂಚಾರ ನಿಷೇಧ ಜಾರಿ

ಜರ್ಮನಿಯಲ್ಲಿಯೂ ಸಂಚಾರ ನಿಷೇಧದ ಸಿದ್ಧತೆಯಲ್ಲಿ

ನವ ದೆಹಲಿ – ಯುರೋಪ್ ಪುನಃ ಕೊರೋನಾದ ಕೇಂದ್ರಬಿಂದುವಾಗಿದೆ. ಜಗತ್ತಿನ ಒಟ್ಟು ರೋಗಿಗಳ ಸಂಖ್ಯೆಯ ಹೆಚ್ಚುಕಡಿಮೆ ಅರ್ಧದಷ್ಟು ರೋಗಿಗಳ ಸಂಖ್ಯೆ ಹಾಗೂ ಮೃತ್ಯು ಯುರೋಪಿನಲ್ಲಿ ಆಗಿವೆ. ಕೊರೊನಾ ಸಂಕ್ರಮಣದ ನಾಲ್ಕನೆಯ ಅಲೆ ಯುರೋಪಿನ ಎಲ್ಲಕ್ಕಿಂತ ದೊಡ್ದ ಅರ್ಥವ್ಯವಸ್ಥೆಯಾಗಿರುವ ಜರ್ಮನಿಯನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿಯತ್ತ ಕೊಂಡೊಯ್ದಿದೆ. ಆರೋಗ್ಯ ಸಚಿವ ಜೀನ್ಸ್ ಸ್ಪೈನ ಇವರು, ಕೇವಲ ಲಸಿಕೀಕರಣದಿಂದ ಪ್ರಕರಣದ ಸಂಖ್ಯೆ ಕಡಿಮೆಯಾಗಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಕೊರೊನಾ ರೋಗಿಗಳ ಸಂಖ್ಯೆ ಪುನಃ ಹೆಚ್ಚುತ್ತಿರುವುದರಿಂದ ಆಸ್ಟ್ರಿಯಾದಲ್ಲಿ ಸಂಪೂರ್ಣ ಸಂಚಾರ ನಿಷೇಧ ಜಾರಿಗೊಳಿಸಲು ಪ್ರಾರಂಭಿಸಿದೆ ಹಾಗೂ ನೆದರ್‍ಲ್ಯಾಂಡ್‍ನಲ್ಲಿ ಭಾಗಶಃ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ. ಜರ್ಮನಿ, ಝೇಕ ಪ್ರಜಾಪ್ರಭುತ್ವ ಮತ್ತು ಸ್ಲೊವಾಕಿಯಾ ಈ ದೇಶದಲ್ಲಿ ಕೆಲವು ಭಾಗಗಳಲ್ಲಿ ಲಸಿಕೀಕರಣವಾಗದಿರುವ ಜನರನ್ನು ನಿರ್ಬಂಧಿಸಿದೆ.