ಕೋಲಾರದಲ್ಲಿ ಹಿಂದೂ ಸಂಘಟನೆಗಳು ಘೋಷಿಸಿದ `ಬಂದ್’ ಯಶಸ್ವಿ !

ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಾಮಸೇನೆಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಮತ್ತು ಪದಾಧಿಕಾರಿಗಳ ಬಂಧನ ಮತ್ತು ಬಿಡುಗಡೆ

ಕೋಲಾರ (ಕರ್ನಾಟಕ) – ಇಲ್ಲಿ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇಲ್ಲಿನ ಅಂಗಡಿ ಮಾಲೀಕರು ತಾವಾಗಿಯೇ ಅಂಗಡಿಗಳನ್ನು ಮುಚ್ಚಿ ಈ ಬಂದ್ ನಲ್ಲಿ ಸಹಭಾಗಿಯಾದರು. ಮಾರಣಾಂತಿಕ ಹಲ್ಲೆ ಮಾಡಿರುವ ಮತಾಂಧರನ್ನು ಬಂಧಿಸಲು ಕೋಲಾರದ ಜಿಲ್ಲಾಧಿಕಾರಿ ಸೆಲ್ವಿಮಣಿ ಮತ್ತು ಪೊಲೀಸ್ ಅಧೀಕ್ಷಕರಾದ ಡಿ.ಕೆ. ಕಿಶೋರ ಬಾಬುರವರಿಗೆ ಮನವಿ ನೀಡಲಾಯಿತು. ಈ ಸಮಯದಲ್ಲಿ ಶ್ರೀರಾಮ ಸೇನೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ. ಅರುಣ ಪ್ರಕಾಶ, ವಿಭಾಗಿಯ ಅಧ್ಯಕ್ಷರಾದ ಶ್ರೀ. ರಮೇಶ ರಾಜ, ಕಾರ್ಯಕರ್ತರಾದ ಶ್ರೀ. ಸುಪ್ರೀತ, ಹಿಂದೂ ಜಾಗರಣ ವೇದಿಕೆಯ ಶ್ರೀ. ಕಿಶೋರ ರಾಮಮೂರ್ತಿ, ಬಜರಂಗ ದಳದ ಶ್ರೀ. ಬಾಬು, ಶ್ರೀ. ಬಾಲಾಜಿ, ಓಂ ಶಕ್ತಿಯ ಶ್ರೀ. ಚಲಪತಿ ಮುಂತಾದವರು ಆಂದೋಲನದ ನೇತೃತ್ವವನ್ನು ವಹಿಸಿದ್ದರು. ಬಂದ್ ನ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರಾದ ಡಿ.ಕೆ. ಕಿಶೋರ ಬಾಬುರವರ ನಿರೀಕ್ಷಣೆಯಲ್ಲಿ ತೀವ್ರ ಬಂದೋಬಸ್ತು ಇಡಲಾಗಿತ್ತು. ಈ ಸಮಯದಲ್ಲಿ ಕೋಲಾರದ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು. ಆಂದೋಲನಕಾರರು ಘೋಷಣೆ ನೀಡುತ್ತಾ ಮೆರವಣಿಗೆ ಮಾಡಿದರು. ಶ್ರೀರಾಮಸೇನೆಯ ಪ್ರಮುಖರಾದ ಪ್ರಮೋದ ಮುತಾಲಿಕರವರು ಇಲ್ಲಿ ಬರಲಿರುವ ಬಗ್ಗೆ ತಿಳಿದ ನಂತರ ಜಿಲ್ಲಾಧಿಕಾರಿಗಳು ಅವರ ಮೇಲೆ ಪ್ರವೇಶ ನಿರ್ಬಂಧವನ್ನು ಹೇರಿದ್ದರು. ಹೀಗಿರುವಾಗಲೂ ಮುತಾಲಿಕರವರು ಕೋಲಾರದಲ್ಲಿ ಪ್ರವೇಶಿಸಲು ಪ್ರಯತ್ನಿಸುವಾಗಲೇ ಅವರನ್ನು ಪ್ರತಿಬಂಧಾತ್ಮಕವಾಗಿ ಬಂಧಿಸಲಾಯಿತು.

‘ಬಂದ್’ ನ ನಿಮಿತ್ತ ಜಿಲ್ಲಾಧಿಕಾರಿಗಳಿಗೆ ನೀಡಲಾದ ಮನವಿಯಲ್ಲಿನ ಪ್ರಮುಖ ಬೇಡಿಕೆಗಳು ಮುಂದಿನಂತಿವೆ

1. ಕೋಲಾರ ನಗರದ ಕ್ಲಾಕ್ ಟವರ್ ನಲ್ಲಿ ಅತಿ ಹೆಚ್ಚಾಗಿ ಮಟ್ಕಾ ದಂಧೆ ನಡೆಯುತ್ತಿದ್ದು, ಇಂತಹ ಅಕ್ರಮಗಳಿಗೆ ಕೂಡಲೇ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.

2. ಕೋಲಾರ ನಗರದ ಟವರ್ ಬಳಿ ಇರುವ ಇದ್ಗಾ ಮೈದಾನದ ಹತ್ತಿರ ಹಿಂದೂ ಸಾರ್ವಜನಿಕರು ಓಡಾಡಲು ತೊಂದರೆ ಆಗಿದ್ದು, ಸದರಿ ಸ್ಥಳಗಳಲ್ಲಿ ಪೊಲೀಸ್ ಚೌಕ್ ವನ್ನು ನಿರ್ಮಾಣ ಮಾಡಬೇಕು.

3. ನಗರದಲ್ಲಿ ನಿರ್ಮಿಸಿರುವ ಅನಧಿಕೃತ ಗೋಮಾಂಸ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು.

4. ಕೋಲಾರ ನಗರದಲ್ಲಿ ಪರವಾನಗಿ ಇಲ್ಲದೇ ಆಟೋಗಳನ್ನು ಚಲಾಯಿಸುತ್ತಿದ್ದು, ಕೂಡಲೇ ಈ ವಾಹನಗಳನ್ನು ಪರಿಶೀಲಿಸಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.

5. ಕೋಲಾರ ನಗರದ ಮಸೀದಿಗಳಲ್ಲಿ ಮೈಕ್ ಗಳನ್ನು ಅಳವಡಿಸಲಾಗಿದ್ದು ಇದಕ್ಕೆ ಯಾವುದೇ ಪರವಾನಿಗೆ ಹಾಗೂ ಅನುಮತಿ ಇಲ್ಲದ ಕಾರಣ ಮತ್ತು ಮಾನ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಇವುಗಳನ್ನು ಕೂಡಲೇ ತೆರವುಗೊಳಿಸಬೇಕು.

6. ಈದ್ಗಾ ಮೈದಾನ ಹಾಗೂ ರೈಲ್ವೆಯಲ್ಲಿರುವ ಹೋಟೆಲ್, ಟೀಸ್ಟಾಲ್, ಕ್ಯಾಂಟೀನ್ ಮತ್ತು ಅಕ್ರಮ ಚಟುವಟಿಕೆ ನಡೆಯುವಂತಹ ಅಂಗಡಿಗಳು ಮಧ್ಯರಾತ್ರಿ ವೇಳೆಯವರೆಗೆ ಅಂದರೆ ಸುಮಾರು 2-3 ಗಂಟೆಯವರೆಗೂ ತೆರೆದಿರುತ್ತದೆ. ಇಂತಹವರನ್ನು ಕೂಡಲೇ ತೆರವುಗೊಳಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.

7. ಕೋಲಾರ ನಗರದ ಟವರ್ ಬಸ್ಟಾಪ್ ನಲ್ಲಿ ಬಸ್ ಹತ್ತಲು ಬರುವ ಹೆಣ್ಣು ಮಕ್ಕಳ ಮೇಲೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ, ಇಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. (ಇವೆಲ್ಲ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ? ಪೊಲೀಸರು ಮತ್ತು ಸ್ಥಳೀಯ ಆಡಳಿತಕ್ಕೆ ಇದು ಕಾಣಿಸುವುದಿಲ್ಲವೇ ಅಥವಾ ಅವರು ಕುರುಡ ಮತ್ತು ಕಿವುಡರಾಗಿದ್ದಾರೆ ? ಭಾಜಪದ ರಾಜ್ಯದಲ್ಲಿ ಹಿಂದೂಗಳಿಗೆ ಈ ರೀತಿ ಮನವಿ ನೀಡುವ ಪ್ರಸಂಗ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)