ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನನ್ನು ಬರ್ಬರವಾಗಿ ಥಳಿಸಿ ಹತ್ಯೆ

ಕೇರಳದಲ್ಲಿ ಹಿಂದೂದ್ವೇಷಿ ಮಾಕ್ರ್ಸವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಇರುವುದರಿಂದ ಹಿಂದೂಗಳ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಭವಿಷ್ಯದಲ್ಲಿ ಈ ರೀತಿಯ ಹತ್ಯೆಯಾಗಬಾರದೆಂದು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಅಲ್ಲಿಯ ಹಿಂದುತ್ವನಿಷ್ಠರ ರಕ್ಷಣೆಗಾಗಿ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಸಂಜಿತ

ತಿರುವನಂತಪುರಂ (ಕೇರಳ) – ಇಲ್ಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ 27 ವರ್ಷದ ಸ್ವಯಂಸೇವಕ ಸಂಜಿತ ಇವರನ್ನು 4 ದುಷ್ಕರ್ಮಿಗಳು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ 15 ನವೆಂಬರ್ 2021 ರಂದು ನಡೆದಿದೆ. ಈ ಹತ್ಯೆಗೆ `ಸೋಶಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ ಈ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ರಾಜಕೀಯ ಪಕ್ಷವೇ ಕಾರಣ ಎಂದು ಭಾಜಪ ಆರೋಪಿಸಿದೆ. ಪೊಲೀಸರು ಈ ಹತ್ಯೆಯ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಗನುಸಾರ, ಸಂಜಿತ ಹೆಂಡತಿಯ ಜೊತೆ ಮೋಟರ್ ಸೈಕಲ್.ನಿಂದ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೊರಟಿದ್ದರು. ದಾರಿಯಲ್ಲಿ ಹೋಗುವಾಗ ದುಷ್ಕರ್ಮಿಗಳು ಚತುಷ್ಚಕ್ರ ವಾಹನದಿಂದ ಅವರನ್ನು `ಓವರ್.ಟೇಕ್’ ಮಾಡಿ ಅವರ ಮೋಟರ್ ಸೈಕಲ್‍ನ ಎದುರು ನಿಲ್ಲಿಸಿದರು. ಅನಂತರ ಚತುಷ್ಚಕ್ರದಲ್ಲಿದ್ದ ನಾಲ್ಕು ಜನರು ಹೊರಗೆ ಬಂದು ಸಂಜಿತ ಅವರನ್ನು ಮೋಟರ ಸೈಕಲ್‍ನಿಂದ ಕೆಳಗೆ ಬೀಳಿಸಿದರು. ಅನಂತರ ಅವರನ್ನು ಬರ್ಬರವಾಗಿ ಥಳಿಸಿದರು. ಆ ಸಮಯದಲ್ಲಿ ಅವರ ಪತ್ನಿ ಸಂಜಿತ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆಕೆ ರಸ್ತೆಯಲ್ಲಿ ಓಡಾಡುವವರ ಕಡೆಗೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದರು. ಆದರೆ ಆಕೆಗೆ ಯಾರೂ ಸಹಾಯ ಮಾಡಲಿಲ್ಲ. ಥಳಿತಕ್ಕೊಳಗಾದ ಸಂಜಿತ ಪ್ರಜ್ಞೆ ತಪ್ಪಿ ಬಿದ್ದ ನಂತರ ಹಂತಕರು ಓಡಿಹೋದರು.