ಆಧ್ಯಾತ್ಮಿಕ ತೊಂದರೆಗಳೊಂದಿಗೆ ಹೋರಾಡಿ ಮತ್ತು ವಾಕ್ ಹಾಗೂ ಶ್ರವಣದ ಕ್ಷಮತೆಯ ಅಭಾವದ ಮಿತಿಯನ್ನು ದಾಟಿ ಸಂತಪದವಿ ಗಳಿಸಿದ ಫ್ರಾನ್ಸ್‌ನ ೪೧ ವರ್ಷದ ಏಕಮೇವಾದ್ವಿತೀಯ ಪೂ. (ಸೌ.) ಯೋಯಾ ವಾಲೆ !

ಪೂ. (ಸೌ.) ಯೋಯಾ ವಾಲೆ

ಪೂ. ವಾಲೆಯವರಿಗೆ ‘ಕೆಟ್ಟ ಶಕ್ತಿಗಳ ತೀವ್ರ ತೊಂದರೆ, ಹಾಗೆಯೇ ವಾಕ್ ಮತ್ತು ಶ್ರವಣ ಕ್ಷಮತೆ ಕಡಿಮೆಯಿದೆ. ಮಾಡಲಿಂಗ್ ವೃತ್ತಿ ಜೀವನವನ್ನು ತ್ಯಜಿಸಿ ಸಂತರಾದ ಮೂಲತಃ ಯುರೋಪಿನ ಪೂ. ಯೋಯಾ ಸಿರಿಯಾಕ್ ವಾಲೆ ಇವರು ಜಗತ್ತಿನ ಇಂತಹ ಏಕಮೇವಾದ್ವಿತೀಯ ಸಂತರಾಗಿದ್ದಾರೆ. ಅವರಲ್ಲಿ ಸೂಕ್ಷ್ಮವನ್ನು ನೋಡುವ ಮತ್ತು ಸೂಕ್ಷ್ಮದಲ್ಲಿ ಕಂಡ ಚಿತ್ರಗಳನ್ನು ಬಿಡಿಸುವ ಅಪಾರ ಕ್ಷಮತೆಯಿದೆ. ಅವರು ಬಿಡಿಸಿದ ಸೂಕ್ಷ್ಮ ಚಿತ್ರಗಳನ್ನು ನೋಡಿದಾಗ ಸಮಾಜದ ಜನರಿಗೆ ಯಾವುದೇ ವಿಷಯ ಅಥವಾ ಘಟನೆಯ ಸಮಯದಲ್ಲಿ ‘ಸೂಕ್ಷ್ಮದಲ್ಲಿ ನಿರ್ದಿಷ್ಟವಾಗಿ ಯಾವ ಪ್ರಕ್ರಿಯೆ ನಡೆಯುತ್ತದೆ ?’, ಎಂದು ತಿಳಿಯುತ್ತದೆ. ಅವರ ಚಿತ್ರಗಳಿಂದ ಪ್ರಭಾವಿತರಾಗಿ ಅನೇಕ ಜಿಜ್ಞಾಸುಗಳು ಸಾಧನೆಯನ್ನು ಆರಂಭಿಸಿದ್ದಾರೆ. ಸೌ. ಯೋಯಾ ಇವರು ೨೦೧೩ ನೇ ಇಸವಿಯಲ್ಲಿ ಸಂತಪದವಿಯನ್ನು ಪ್ರಾಪ್ತಮಾಡಿಕೊಂಡರು; ಆದರೆ ಮಧ್ಯಂತರದಲ್ಲಿ ಆಧ್ಯಾತ್ಮಿಕ ತೊಂದರೆಯು ತೀವ್ರವಾಗಿ ಹೆಚ್ಚಾದುದರಿಂದ ಅವರ ಆಧ್ಯಾತ್ಮಿಕ ಮಟ್ಟವು ಕಡಿಮೆ ಆಯಿತು. ಈಗ ಅವರು ಮಾಡಿದ ಉಪಾಯಗಳಿಂದ ಕೆಟ್ಟ ಶಕ್ತಿಗಳ ತೊಂದರೆಯು ಕಡಿಮೆಯಾದುದರಿಂದ, ಹಾಗೆಯೇ ಭಾವದ ಸ್ಥಿತಿಯಲ್ಲಿದ್ದು ಸೇವೆ ಮಾಡಿದುದರಿಂದ ಅವರ ಮಟ್ಟವು ಪುನಃ ಶೇ. ೭೧ ರಷ್ಟಾಗಿದೆ. ಜಿಜ್ಞಾಸೆ, ಕಲಿಯುವ ವೃತ್ತಿ, ಪ್ರೀತಿ, ತ್ಯಾಗ, ಅತ್ಯಲ್ಪ ಅಹಂ ಮುಂತಾದ ಗುಣಗಳಿಂದ ತುಂಬಿದ ಸೌ. ಯೋಯಾ ಇವರು ‘ಸಮಷ್ಟಿ ಸಂತ’ರೆಂದು ‘ಎಸ್.ಎಸ್.ಆರ್.ಎಫ್.’ನ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ತೀವ್ರ ತಳಮಳವಿದ್ದರೆ, ಯಾವುದೇ ವ್ಯಕ್ತಿಯು ಎಲ್ಲ ಅಡಚಣೆಗಳನ್ನು ಪಾರು ಮಾಡಿ ಹೇಗೆ ಪ್ರಗತಿಯನ್ನು ಮಾಡಿಕೊಳ್ಳಬಹುದು, ಎಂಬ ಬಗ್ಗೆ ಅವರು ಎಲ್ಲರೆದುರು ಆದರ್ಶವನ್ನಿಟ್ಟಿದ್ದಾರೆ. ಪೂ. (ಸೌ.) ಯೋಯಾ ಇವರ ಸಾಧನೆಯ ಪ್ರವಾಸದಲ್ಲಿ ಅವರಿಗೆ ಪತಿಯೆಂದು ಹಿಂದೆ ಮಾಡೆಲ್ ಆಗಿದ್ದ ಮತ್ತು ಸದ್ಯದ ಎಸ್.ಎಸ್.ಆರ್.ಎಫ್.ನ ಸದ್ಗುರು ಸಿರಿಯಾಕ್ ವಾಲೆಯವರ ಅಮೂಲ್ಯ ಸಾಂಗತ್ಯ ಲಭಿಸಿದೆ. ಅವರು ಸದ್ಯ ಎಸ್.ಎಸ್.ಆರ್.ಎಫ್. ಈ ಆಧ್ಯಾತ್ಮಿಕ ಸಂಘಟನೆಯ ಮಾರ್ಗದರ್ಶಕರೆಂದು ಜರ್ಮನಿಯಲ್ಲಿ ಕಾರ್ಯನಿರತರಾಗಿದ್ದಾರೆ. ೨೦೦೯ ರಲ್ಲಿ ಅವರು, ತಮ್ಮ ಪತಿ ಮತ್ತು ಮಗಳು (ಕು. ಅನಾಸ್ತಾಸಿಯಾ, ಆಗ ೫ ವರ್ಷಗಳು) ಇವರೊಂದಿಗೆ ಗೋವಾದಲ್ಲಿರುವ ರಾಮನಾಥಿ ಆಶ್ರಮಕ್ಕೆ ಬಂದರು. ಅವರ ಮಗಳು ಕು. ಅನಾಸ್ತಾಸಿಯಾ ಇವಳು ಸಹ ದೈವೀ ಬಾಲಕಿಯಾಗಿದ್ದಾಳೆ. ಅವಳ ವ್ಯಷ್ಟಿ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಿದೆ. ಪೂ. ಯೋಯಾ ಇವರ ಸಹೋದರ ಪೂ. ದೇಯಾನ್ ಇವರೂ ಜುಲೈ ೨೦೧೯ ರಿಂದ ಸಾಧನೆಗಾಗಿ ಭಾರತದಲ್ಲಿರಲು ಬಂದಿದ್ದಾರೆ. ಅವರು ಸಹ ೨೦೨೦ ನೇ ಇಸವಿಯಲ್ಲಿ ಸಂತಪದವಿಯನ್ನು ಪ್ರಾಪ್ತಮಾಡಿಕೊಂಡರು.

ಪೂ. (ಸೌ.) ಯೋಯಾ ವಾಲೆ ಇವರ ಪತಿ ಸದ್ಗುರು ಸಿರಿಯಾಕ್ ವಾಲೆ ಮತ್ತು ಮಗಳು ಕು. ಅನಾಸ್ತಾಸಿಯಾ, ಹಾಗೆಯೇ ರಾಮನಾಥಿ ಆಶ್ರಮದಲ್ಲಿರುವ ಸಹೋದರ ಪೂ. ದೇಯಾನ್ ಈ ದೈವೀ ಕುಟುಂಬವು ಶೀಘ್ರದಲ್ಲಿಯೇ ಮುಂದಿನ ಪ್ರಗತಿಯನ್ನು ಶೀಘ್ರ ಗತಿಯಲ್ಲಿ ಮಾಡಿಕೊಳ್ಳುವರು, ಎಂದು ನನಗೆ ಖಾತ್ರಿ ಇದೆ.

– (ಪರಾತ್ಪರ ಗುರು) ಡಾ. ಆಠವಲೆ (೩೦.೧೦.೨೦೨೧)