ಇಡೀ ಜೀವನವು ಕೃಷ್ಣಮಯವಾಗಿರುವ ಮತ್ತು ಸಾಧಕರ ಪ್ರಗತಿ ಆಗಬೇಕೆಂದು ನಿರಂತರ ಪ್ರಯತ್ನಿಸುವ ಕು. ದೀಪಾಲಿ ಮತಕರ ಇವರು ತಮ್ಮ ೩೩ ನೇ ವಯಸ್ಸಿನಲ್ಲಿ ಸನಾತನ ೧೧೨ ನೇ ಸಂತಪದವಿಯಲ್ಲಿ ವಿರಾಜಮಾನ !

ಪೂ. (ಕು.) ದೀಪಾಲಿ ಮತಕರ

ಮೂಲತಃ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಡೊಂಬಿವಲಿಯ ನಿವಾಸಿಯಾದ ಕು. ದೀಪಾಲಿ ರಾಮಚಂದ್ರ ಮತಕರ ಇವರು ೨೦೦೫ ನೇ ಇಸವಿಯಿಂದ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ. ಮೊದಲಿನಿಂದಲೂ ಕು. ದೀಪಾಲಿ ಇವರಿಗೆ ಸಾಧನೆಯ ಒಲವು ಇದ್ದುದರಿಂದ ಮತ್ತು ಭಗವಾನ ಶ್ರೀಕೃಷ್ಣನ ಬಗ್ಗೆ ಅವರ ಅನನ್ಯ ಭಾವವಿರುವುದರಿಂದ ‘ಕೃಷ್ಣ’ನೇ ಅವರ  ಭಾವ ವಿಶ್ವವಾಗಿದ್ದರು. ಈಶ್ವರಪ್ರಾಪ್ತಿಯ ಸೆಳೆತದಿಂದ ಅವರು ತಳಮಳದಿಂದ ಸಾಧನೆಯನ್ನು ಆರಂಭಿಸಿ ದರು. ಆರಂಭದಲ್ಲಿ ‘ಮುಗ್ಧ ಭಾವದಿಂದ ದೇವರಲ್ಲಿ ಮೊರೆಯಿಡುವುದು ಮತ್ತು ಶ್ರೀಕೃಷ್ಣನ ಭಕ್ತಿಯಲ್ಲಿ ರಮಿಸುವುದು’, ಈ ರೀತಿಯ ಅವರ ವ್ಯಷ್ಟಿ ಪ್ರಕೃತಿಯಾಗಿತ್ತು. ಆಧ್ಯಾತ್ಮಿಕ ಪ್ರಗತಿಯಾದ ನಂತರ ಸಾಧಕರ ಪ್ರತಿಭೆಯು ತಾನಾಗಿಯೇ ಜಾಗೃತವಾಗತೊಡಗುತ್ತದೆ. ಸಾಧನೆಯಿಂದ ದೀಪಾಲಿಯವರ ಪ್ರತಿಭೆಯು ಜಾಗೃತವಾಗಿ ಅವರಿಗೆ ಕವಿತೆಗಳ ರೂಪದಲ್ಲಿ ಜ್ಞಾನವು ಹೊಳೆಯತೊಡಗಿತು. ಈ ಕವಿತೆಗಳಲ್ಲಿ ಅವರ ಭಗವಂತನ ಬಗೆಗಿನ ಭಕ್ತಿ ವ್ಯಾಕುಲತೆ ಮುಂತಾದ ಎಲ್ಲ ವಿಷಯಗಳು ಸಹಜಸುಂದರ ಭಾಷೆಯಲ್ಲಿ ವ್ಯಕ್ತವಾಗಿವೆ.

ಕು. ದೀಪಾಲಿ ಇವರ ವೈಶಿಷ್ಟ್ಯವೆಂದರೆ ಆರಂಭದಲ್ಲಿ ವ್ಯಷ್ಟಿ ಪ್ರಕೃತಿಯಿದ್ದ ದೀಪಾಲಿ ಇವರು ‘ಕಲಿಯುವ ವೃತ್ತಿ’, ‘ಆಜ್ಞಾಪಾಲನೆ ಮಾಡುವುದು’ ಮತ್ತು ‘ಸಾಧಕರ ಮೇಲಿನ ನಿರಪೇಕ್ಷ ಪ್ರೀತಿ’ ಈ ಗುಣಗಳ ಮೂಲಕ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸುಸಂಗಮ ಮಾಡಿದರು. ಈ ಗುಣಗಳಿಂದಾಗಿ ರಾಮನಾಥಿ ಆಶ್ರಮದಿಂದ ಸಮಷ್ಟಿಗೆ ಹೋಗಿ ಪ್ರಸಾರ ಮಾಡುವ ಸೇವೆಯನ್ನೂ ಅವರು ಸ್ವೀಕರಿಸಿದರು. ಅವರು ಅನೇಕ ಸಾಧಕರಲ್ಲಿ ಸಾಧನೆಯ ತಳಮಳವನ್ನು ನಿರ್ಮಿಸಿದ್ದಾರೆ. ಅವರ ಪ್ರಯತ್ನಗಳಿಂದ ಆರಂಭದಲ್ಲಿ ರತ್ನಾಗಿರಿ ಮತ್ತು ಈಗ ಸೋಲಾಪುರದ ಬಾಲಸಾಧಕರ, ಹಾಗೆಯೇ ಸಾಧಕರ ಸಾಧನೆಯ ಪ್ರಯತ್ನವು ಹೆಚ್ಚಾಯಿತು. ದೀಪಾಲಿಯವರು ಸಾಧಕರನ್ನು ಸಿದ್ಧ ಮಾಡಿದುದರಿಂದ, ಅವರಲ್ಲಿ ಭಾವದ ಬೀಜವನ್ನು ಬಿತ್ತಿದ್ದರಿಂದ ಅನೇಕ ಸಾಧಕರು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಶೇ. ೬೧ ರಷ್ಟು ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದಾರೆ. ದೀಪಾಲಿಯವರಲ್ಲಿನ ತಳಮಳ, ಭಗವಂತನ ಬಗೆಗಿನ ಭಾವ, ನಿರಪೇಕ್ಷ ಪ್ರೀತಿ ಮುಂತಾದ ಗುಣಗಳಿಂದ ಅವರ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಲ್ಲಾಗುತ್ತಿದೆ. ೨೦೧೩ ನೇ ಇಸವಿಯಲ್ಲಿ ಅವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡಿದ್ದರು ಮತ್ತು ಇಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ‘ಸಮಷ್ಟಿ ಸಂತ’ರೆಂದು ಅವರು ಸನಾತನದ ೧೧೨ ನೇ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಕೇವಲ ೩೩ ನೇ ವಯಸ್ಸಿನಲ್ಲಿ ಅವರು ಸಂತಪದವಿಯನ್ನು ಪ್ರಾಪ್ತಮಾಡಿಕೊಂಡಿದ್ದಾರೆ, ಇದು ಅತ್ಯಂತ ಶ್ಲಾಘನೀಯವಾಗಿದೆ.

 ಪೂ. (ಕು.) ದೀಪಾಲಿ ಮತಕರ ಇವರ ಆಧ್ಯಾತ್ಮಿಕ ಉನ್ನತಿಯು ಮುಂದೆಯೂ ಇದೇ ರೀತಿ ಶೀಘ್ರ ಗತಿಯಲ್ಲಾಗುವುದು, ಎಂದು ನನಗೆ ಖಾತ್ರಿ ಇದೆ.

– ಪರಾತ್ಪರ ಗುರು ಡಾ. ಆಠವಲೆ (೨೮.೧೦.೨೦೨೧)